ನಾಗಚೈತನ್ಯ ಶೋಭಿತಾ BREAK UP? – ಲಿವಿಂಗ್ ರಿಲೇಶನ್ ಶಿಪ್ ಬೇಕಿತ್ತಾ?
ಹಳೇ ಹೆಂಡ್ತಿ ನೆನೆದ ನಾಗಚೈತನ್ಯ

ನಾಗಚೈತನ್ಯ ಶೋಭಿತಾ BREAK UP? – ಲಿವಿಂಗ್ ರಿಲೇಶನ್ ಶಿಪ್ ಬೇಕಿತ್ತಾ?ಹಳೇ ಹೆಂಡ್ತಿ ನೆನೆದ ನಾಗಚೈತನ್ಯ

ನಟ ನಾಗಚೈತನ್ಯ ಸಮಂತಾರಿಂದ ವಿಚ್ಚೇದನ ಪಡೆದಿದ್ದಾರೆ.. ಇದೀಗ ನಾಗಚೈತನ್ಯ ಬಾಳಲ್ಲಿ ಶೋಭಿತಾ ಧೂಳಿಪಾಲ ಎಂಟ್ರಿಯಾಗಿದೆ.. ಈಗಾಗಲೇ ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು.. ಇದೀಗ ಮದುವೆಯ ತಯಾರಿ ಕೂಡ ಶುರುವಾಗಿದೆ ಅಂತಾ ಹೇಳಲಾಗ್ತಿದೆ.. ಆದ್ರೀಗ ಈ ಜೋಡಿ ಮಧ್ಯೆ ಮನಸ್ತಾಪ ಎದ್ದಿದ್ಯಾ ಅನ್ನೋ ಪ್ರಶ್ನೆ ಶುರುವಾಗಿದೆ. ಈ ಜೋಡಿ ಸಮಂತಾ ವಿಚಾರವೇ ಕಿತ್ತಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.. ಅಷ್ಟಕ್ಕೂ ಆಗಿದ್ದೇನು.. ಮದುವೆ ಹತ್ತಿರವಾಗ್ತಿದ್ದಂತೆ ಈ ಚರ್ಚೆ ಶುರುವಾಗಿದ್ದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೋಕ್ಷಿತಾ ಅಸಲಿ ಮುಖ ರಿವೀಲ್!‌ – ಸೈಲೆಂಟ್‌.. ವೈಲೆಂಟ್‌.. ಗೇಮ್‌ ಪ್ಲ್ಯಾನ್‌!!

ಸಮಂತಾ ಬಿಟ್ಟುಹೋದ ಬಳಿಕ ಖಿನ್ನರಾಗಿದ್ದ ನಾಗಚೈತನ್ಯ ಬಾಳಿನಲ್ಲಿ ಹೊಸ ಚೈತನ್ಯ ಮೂಡಿದೆ.. ಇದೀಗ ಶೋಭಿತಾ ಧೂಳಿಪಾಲ ನಾಗಚೈತನ್ಯ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ..  ಶೋಭಿತಾ ಜೊತೆ ಕೆಲ ಕಾಲ ರಿಲೇಷನ್‌ಷಿಪ್‌ನಲ್ಲಿದ್ದ ಈ ಜೋಡಿ ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಅವರ ಮದುವೆ ತಯಾರಿಗಳು ಜೋರಾಗಿ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕೂಡ ಆಗಲಿದೆ ಅಂತಾ ಹೇಳಲಾಗ್ತಿದೆ.. ಇವೆಲ್ಲದ್ರ ಮಧ್ಯೆ ಇವರಿಬ್ಬರ ನಡುವೆ ಸಂಬಂಧ ಹಳಸಿದೆ ಎನ್ನುವ ಸುದ್ದಿ ಜೋರಾಗಿ ಸದ್ದು ಮಾಡ್ತಾ ಇದೆ.. ಇದು  ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ ಶಾಕ್‌ ನೀಡಿದೆ. ಅಷ್ಟಕ್ಕೂ ಹೊಸ ಜೋಡಿಯ ಮನಸ್ಸಿನಲ್ಲಿ ಆಗಿದ್ದು ಏನು ಅನ್ನೋದರ ಬಗ್ಗೆ ಚರ್ಚೆ ಆರಂಭವಾಗಿದೆ.

ಅಂದ್ಹಾಗೆ ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ನಾಗಚೈತನ್ಯ ಅವರ ಸಿನಿಮಾ ಕೆರಿಯರ್‌ ಕೂಡ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ. ಇದೀಗ ನಾಗಚೈತನ್ಯ ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಶೋಭಿತಾ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮದುವೆಯ ಕೆಲ ಶಾಸ್ತ್ರವನ್ನೂ ಮಾಡಿದ್ದಾರೆ. ಆ ಬಳಿಕ ಇವರಿಬ್ಬರ ಮದುವೆ ಅತಿ ಶೀಘ್ರದಲ್ಲಿಯೇ ಇದೆ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೂ ಮುನ್ನ 2025ರಲ್ಲಿ ರಾಜಸ್ಥಾನದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂದು ವರದಿಯಾಗಿದ್ದವು. ಆದರೆ, ಎರಡೂ ಕುಟುಂಬಗಳು ಆದಷ್ಟು ಶೀಘ್ರವಾಗಿ ಮದುವೆ ಕಾರ್ಯ ಮುಗಿಸುವ ಪ್ಲ್ಯಾನ್‌ ಮಾಡಿದೆ. ಅದಕ್ಕೆ ಕಾರಣ, ಇವರಿಬ್ಬರ ನಡುವೆ ನಡೆದಿದ್ದ ಒಂದು ವಿಚಾರದ ಜಗಳ.

ಹೌದು.. ಮದುವೆಯ ಬಳಿಕ ನಾಗಚೈತನ್ಯ ತನ್ನ ಫ್ಲ್ಯಾಟ್‌ನಲ್ಲಿ ಒಟ್ಟಿಗೆ ಬಾಳೋಣ ಎಂದು ಶೋಭಿತಾಗೆ ತಿಳಿಸಿದ್ದರಂತೆ. ಆದರೆ, ಶೋಭಿತಾಗೆ ಇದು ಮಾತ್ರ ಸುತಾರಾಂ ಇಷ್ಟವಾಗಿರಲಿಲ್ಲ. ಇದೇ ವಿಚಾರದಲ್ಲಿ ಅವರಿಬ್ಬರ ನಡುವೆ ಮನಸ್ತಾಪ ನಡೆದಿದೆ ಎಂದು ವರದಿಯಾಗಿದೆ. ಸಮಂತಾ ಜೊತೆ ಮದುವೆಯಾದ ಬಳಿಕ ನಾಗಚೈತನ್ಯ ಬಹಳ ಇಷ್ಟಪಟ್ಟು ಈ ಫ್ಲ್ಯಾಟ್‌ಅನ್ನು ಖರೀದಿ ಮಾಡಿದ್ದರು. ಗಂಡ-ಹೆಂಡತಿ ಸೇರಿ ಮನೆಯ ಇಂಚಿಂಚನ್ನೂ ವಿನ್ಯಾಸ ಮಾಡಿದ್ದರು. ಎಲ್ಲಿಯವರೆಗೂ ಸಮಂತಾ ಹಾಗೂ ನಾಗಚೈತನ್ಯ ಬೇರೆ ಬೇರೆಯಾದರೂ, ಅಲ್ಲಿಯವರೆಗೂ ಇಬ್ಬರೂ ಮನೆಯಲ್ಲಿ ವಾಸವಿದ್ದರು.

ಇದೀಗ ಶೋಭಿತಾ ವಾದ ಏನಪ್ಪಾ ಅಂದ್ರೆ, ಇಡೀ ಮನೆಯೂ ಸಮಂತಾ ಹಾಗೂ ನಾಗಚೈತನ್ಯ ಅವರು ಅಭಿರುಚಿಗೆ ತಕ್ಕಂತೆ ಇದೆ. ಈಗ ಆಕೆ ಅಲ್ಲಿ ಇಲ್ಲದೇ ಇರಬಹುದು. ಆದರೆ, ಮನೆಯೆ ಪ್ರತಿ ಹೆಜ್ಜೆಯಲ್ಲೂ ಆಕೆಯ ನೆನಪುಗಳು ಇರುತ್ತದೆ. ನನ್ನ ಮದುವೆಯಾದ ಬಳಿಕ ನಾಗಚೈತನ್ಯಗೆ ಮತ್ತೆ ಸಮಂತಾ ನೆನಪು ಮರುಕಳಿಸಬಹುದು. ಇದು ನನ್ನ ಸಾಂಸಾರಿಕ ಜೀವನಕ್ಕೆ ಅಡ್ಡಿಯಾಗಬಹುದು. ಇದೇ ಮುನ್ನೆಚ್ಚರಿಕೆಯಿಂದ ಫ್ಲ್ಯಾಟ್‌ನಲ್ಲಿ ಒಟ್ಟಿಗೆ ಬದುಕಲು ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ಮಧ್ಯೆ ಜಗಳ ಆಗಿದೆ.  ಕೊನೆಗೆ ನಾಗಚೈತನ್ಯ ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಇಬ್ಬರನ್ನೂ ಸಮಾಧಾನ ಮಾಡಿದ್ದು ಮಾತ್ರವಲ್ಲದೆ, ಶೀಘ್ರದಲ್ಲಿಯೇ ಮದುವೆ ಕಾರ್ಯ ಮುಗಿಸಿಬಿಡೋಣ ಅನ್ನೋ ತಯಾರಿಯಲ್ಲಿದ್ದಾರಂತೆ ಎಂದು ಹೇಳಲಾಗ್ತಿದೆ.. ಅಂದ್ಹಾಗೆ ಈ ವಿಚಾರವನ್ನ ಅಕ್ಕಿನೇನಿ ಕುಟುಂಬದ ಆಪ್ತರಾಗಲಿ, ಶೋಭಿತಾ ಕುಟುಂಬದ ಆಪ್ತರಾಗಲಿ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಈ ಜೋಡಿ ಬಗ್ಗೆ ಬಿಸಿ ಬಿಸಿ ಚರ್ಚೆಯಾಗ್ತಿದೆ.. ಇದೀಗ ಈ ಬಗ್ಗೆ ಶೋಭಿತಾ ಅಥವಾ ನಾಗಚೈತನ್ಯ ಸ್ಪಷ್ಟಣೆ ನೀಡ್ತಾರಾ ಅಂತಾ ಕಾದುನೋಡ್ಬೇಕಿದೆ.

Shwetha M