ಮೋಕ್ಷಿತಾ ಅಸಲಿ ಮುಖ ರಿವೀಲ್!‌ – ಸೈಲೆಂಟ್‌.. ವೈಲೆಂಟ್‌.. ಗೇಮ್‌ ಪ್ಲ್ಯಾನ್‌!!
ರಂಪಾಟ ಮಾಡಿದ್ರೆ BBKಯಲ್ಲಿ ಜಾಗ?  

ಮೋಕ್ಷಿತಾ ಅಸಲಿ ಮುಖ ರಿವೀಲ್!‌ – ಸೈಲೆಂಟ್‌.. ವೈಲೆಂಟ್‌.. ಗೇಮ್‌ ಪ್ಲ್ಯಾನ್‌!!ರಂಪಾಟ ಮಾಡಿದ್ರೆ BBKಯಲ್ಲಿ ಜಾಗ?  

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಭಾರಿ ಕುತೂಹಲ ಮೂಡಿಸಿದೆ.. ದಿನ ಕಳೆಯುತ್ತಿದ್ದಂತೆ ದೊಡ್ಮನೆಯಲ್ಲಿ ವಿಭಿನ್ನ ವ್ಯಕ್ತಿತ್ವಗಳ ಅನಾವರಣ ಆಗುತ್ತಿದೆ.. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ವೈಲೆಂಟ್‌ ಆಗಿದ್ದವರೆಲ್ಲಾ ಸೈಲೆಂಟ್‌ ಆಗಿದ್ದಾರೆ.. ಪಾಸಿಟಿವಿಟಿ ಅಂತಾ ಹೇಳ್ತಾ ಬಂದಿದ್ದವರೆಲ್ಲಾ ಕಾಳಗಕ್ಕೆ ಇಳಿದ್ದಾರೆ.. ಸದಾ ಸೈಲೆಂಟ್‌ ಆಗಿದ್ದ ಮೋಕ್ಷಿತಾ ಇದ್ದಕ್ಕಿಂದ್ದಂತೆ ವೈಲೆಂಟ್‌ ಆಗಿದ್ದಾರೆ.. ಸಹ ಸ್ಪರ್ಧಿಗೆ ವಾರ್ನ್‌ ಮಾಡಿದ್ದಾರೆ.. ಅಷ್ಟಕ್ಕೂ ಮೋಕ್ಷಿತಾ ಇದ್ದಕ್ಕಿಂದ್ದಂತೆ ರೆಬಲ್‌ ಆಗಿದ್ಯಾಕೆ? ತ್ರಿವಿಕ್ರಮ್‌ ಮೇಲೆ ಇದ್ದಕ್ಕಿದ್ದಂತೆ ಆರೋಪ ಮಾಡಿದ್ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿನಿಮಾ ಶೂಟಿಂಗ್‌ಗೆ ಹೋಗಬಹುದಾ? – ದರ್ಶನ್‌ಗೆ ಷರತ್ತುಗಳ ರಿಲೀಫ್

ದೊಡ್ಮನೆಯ ಆಟ ದಿನೇ ದಿನೇ ಬದಲಾಗ್ತಿದೆ.. ಹಲವು ವ್ಯಕ್ತಿತ್ವಗಳ ಅನಾವರಣ ಆಗ್ತಿದೆ.. ಸ್ಪರ್ಧಿಗಳು ಮೈಂಡ್‌ ಗೇಮ್‌ ಆಡಲು ಶುರು ಮಾಡ್ಕೊಂಡಿದ್ದಾರೆ.. ಇದೀಗ ಸದಾ ಶಾಂತ ಸ್ವಭಾವದಿಂದ ಇರ್ತಿದ್ದ ಮೋಕ್ಷಿತಾ ಪೈ ಸಿಡಿದೆದ್ದಿದ್ದಾರೆ.. ತ್ರಿವಿಕ್ರಮ್‌ ವಿರುದ್ದ ಕೆಂಡಕಾರುತ್ತಿದ್ದಾರೆ.. ಹೌದು, ಕಳೆದ ವಾರ ಹಂಸ ಹಾಗೂ ಮೋಕ್ಷಿತಾ ಡೇಂಜರ್‌ ಝೋನ್‌ ನಲ್ಲಿ ಇದ್ರು.. ಹೀಗಾಗಿ ದೊಡ್ಮನೆಗೆ ಬಂದ ಕಾರು ಇಬ್ಬರು ಸ್ಪರ್ಧಿಗಳನ್ನು ಹೊರಕರೆದುಕೊಂಡು ಹೋಗಿತ್ತು. ಅದರಲ್ಲಿ ಹಂಸಾ ಎಲಿಮಿನೇಟ್‌ ಆಗಿದ್ದು,  ಮೋಕ್ಷಿತಾ ಸೇವ್‌ ಆಗಿ ಮನೆಗೆ ಬಂದಿದ್ರು.. ಈ ವೇಳೆ ಕಾರಿನಿಂದ ಇಳಿದು ಮನೆಗೆ ಕಾಲಿಡುತ್ತಿದ್ದಂತೆ. ಅಸಲಿ ಆಟ ಈಗ ಶುರು ಎಂದು ರೌದ್ರ ರೂಪ ತಾಳಿದ್ದಾರೆ ಮೋಕ್ಷಿತಾ.. ಯಾರು 10 ವಾರ ಮನೆಯಲ್ಲಿ ಇರುತ್ತಾರೆ.. ನಾನು ನೋಡುತ್ತೇನೆ ಎಂದು ಚಾಲೆಂಜ್ ಹಾಕಿದರು. ಅಂದ್ಹಾಗೆ ಮೋಕ್ಷಿತಾ ಈ ಸವಾಲ್‌ ಹಾಕಿದ್ದು ತ್ರಿವಿಕ್ರಮ್‌ ಗೆ.. ದೊಡ್ಮನೆಗೆ ವಾಪಸ್ ಬರ್ತಿದ್ದಂತೆ ತ್ರಿವಿಕ್ರಮ್‌ ವಿರುದ್ದ ರೇಗಾಡಿದ್ದಾರೆ..

ಕೇವಲ 10 ವಾರ ಇರುತ್ತಾರೆ. ಅಂತವರ ಜೊತೆಗೆ ಇರಬೇಡಿ ಎಂದು  ತ್ರಿವಿಕ್ರಮ್ ಉಗ್ರಂ ಮಂಜು ಬಳಿ ಹೇಳಿದ್ದಾರೆ.. ನೀವೊಬ್ಬ ಗೋಮುಖ ವ್ಯಾಘ್ರ, ಮೈಂಡ್‌ ಗೇಮ್ ಆಡಿ ಯಾರನ್ನು ಹೇಗೆ ತೆಗೆಯಬೇಕೆಂದು ಪ್ಲಾನ್ ಮಾಡಿದ್ದೀರಿ.. ಕಳೆದ ಹಲವು ದಿನಗಳಿಂದ ಮನೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಮೋಕ್ಷಿತಾ ರೇಗಿದ್ದಾರೆ. ಇದಕ್ಕೆ ಮಂಜು ಕೂಡ ತ್ರಿವಿಕ್ರಮ್‌ ಹೇಳಿದ್ದಾರೆ ಎಂದು ದನಿಗೂಡಿಸಿದ್ರು..  ಇಷ್ಟು ದಿನ ಸೈಲೆಂಟ್‌ ಆಗಿದ್ದ ಮೋಕ್ಷಿತಾ ಎಲಿಮಿನೇಷನ್​ನಿಂದ ಪಾರಾಗಿ ಬಂದ ಬಳಿಕ ಇದ್ದಕ್ಕಿದ್ದಂತೆ ರೆಬೆಲ್ ಆಗಿದ್ದಾರೆ..

ನಿನ್ನೆಯ ಎಪಿಸೋಡ್‌ ನಲ್ಲೂ ಮೋಕ್ಷಿತಾ ತ್ರಿವಿಕ್ರಮ್‌ ಅವರನ್ನೇ ನಾಮಿನೇಟ್‌ ಮಾಡಿದ್ದಾರೆ.. ತ್ರಿವಿಕ್ರಮ್‌ ಅವರು ಕ್ಯಾಪ್ಟನ್‌ ರೇಸ್‌ ನಲ್ಲಿ ಪಾಲ್ಗೊಳ್ಳಲು ಅರ್ಹರಲ್ಲ.. ಕ್ಯಾಪ್ಟನ್‌ ಆದವರು ಎಲ್ಲರನ್ನು ಒಂದೇ ರೀತಿ ಟ್ರೀಟ್‌ ಮಾಡ್ಬೇಕಾಗುತ್ತೆ.. ಅಂತಾ ಕಾರಣ ಕೊಟ್ಟಿದ್ದಾರೆ..

ಇದೀಗ ಒಂದಂಟು ಬಿಗ್‌ಬಾಸ್‌ ಮೆಯಲ್ಲಿ ಸ್ಪಷ್ಟವಾಗಿದೆ. ತ್ರಿವಿಕ್ರಮ್‌ ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರೆ. ಉಗ್ರಂ ಮಂಜು ತಂದಿಟ್ಟು ತಮಾಷೆ ನೋಡುತ್ತಾರೆ. ಇನ್ನು ಮೋಕ್ಷಿತಾ ಅವರ ಸೈಲೆಂಟ್‌ ಸ್ವಭಾವ ನೋಡಿದ್ದ ಮನೆಮಂದಿ ಆಕೆಯ ರೌದ್ರಾವಾತಾರಕ್ಕೆ ಸೈಲೆಂಟ್ ಆಗಿದ್ರು.. ಇದೀಗ ವೀಕ್ಷಕರು ಮೋಕ್ಷಿತಾ ಅಸಲಿ ಮುಖ ಅನಾವರಣ ಆಗಿದೆ.. ಇನ್ನು ಮೋಕ್ಷಿತಾ ಈಗೀಗ ಹನುಮಂತು ಮೇಲೆ ಕೂಡ ರೇಗಾಡುತ್ತಿದ್ದಾರೆ.. ಹನುಮಂತು ಹತ್ರ ಬಂದ್ರೆ ನಾವು ಮಾತಾಡುತ್ತಿದ್ದೇವೆ.. ಆಮೇಲೆ ಬನ್ನಿ ಅಂತಾ ಹೇಳ್ತಾ ಇದ್ದಾರೆ..  ಇದೀಗ ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಾರೆ.. ಕಿರುಚಾಡಿ, ರಂಪಾಟ ಮಾಡ್ತಾ ಇದ್ರೆ  ಮಾತ್ರ ಬಿಗ್‌ ಬಾಸ್‌ ಮನೆಯಲ್ಲಿ ಜಾಗ ಅನ್ನೋ ಕ್ಲಾರಿಟಿ ಮೋಕ್ಷಿತಾಗೆ ಸಿಕ್ಕಿತಾ ಅಂತಾ.. ಹೀಗಾಗೇ ಮೋಕ್ಷಿತಾ ಪದೇ ಪದೇ ಸಿಟ್ಟು ಮಾಡಿಕೊಳ್ಳುತ್ತಿದ್ದಾರಾ ಅಂತಾ ಅನುಮಾನ ಮೂಡಿದೆ.. ಇನ್ಮುಂದೆ ಮಜಾ ಪಕ್ಕಾ ಅಂತಾ ಬಿಗ್‌ ಬಾಸ್‌ ಫ್ಯಾನ್ಸ್‌ ಅಭಿಪ್ರಾಯಪಟ್ಟಿದ್ದಾರೆ..

Shwetha M

Leave a Reply

Your email address will not be published. Required fields are marked *