ಸಿನಿಮಾ ಶೂಟಿಂಗ್‌ಗೆ ಹೋಗಬಹುದಾ? – ದರ್ಶನ್‌ಗೆ ಷರತ್ತುಗಳ ರಿಲೀಫ್
D BOSS ಫ್ಯಾನ್ಸ್ ಹವಾ ಹೇಗಿದೆ? 

ಸಿನಿಮಾ ಶೂಟಿಂಗ್‌ಗೆ ಹೋಗಬಹುದಾ? – ದರ್ಶನ್‌ಗೆ ಷರತ್ತುಗಳ ರಿಲೀಫ್D BOSS ಫ್ಯಾನ್ಸ್ ಹವಾ ಹೇಗಿದೆ? 

ದಾಸ. ಡಿ ಬಾಸ್‌.. ಕರಿಯಾ.. ಹೀಗೆ ನಾನಾ ಹೆಸರುಗಳಿಂದ ಅಭಿಮಾನಗಳ ಮನಗೆದ್ದ ದರ್ಶನ್.. ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಅಂದರ್ ಆಗಿ ಜೈಲಿನಲ್ಲಿ ಬಳಲಿ ಬೆಂಡಾಗಿದ್ರು.. ಅವರ ಅಭಿಮಾನಿಗಳು ಇವತ್ತು ಹೊರ ಬರ್ತಾರೆ ಇವತ್ತು ಬರ್ತಾರೆ ಅಂತಾ ಕಾತುರದಿಂದ ಕಾಯುತ್ತಿದ್ದರು..4 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರೋ ದರ್ಶನ್ ಬಿಗ್ ಬ್ರೇಕ್ ಸಿಕ್ಕಿದೆ. ದರ್ಶನ್ ಬೇಲ್ ಭವಿಷ್ಯ ಹೊರ ಬಂದಿದೆ. ಅನಾರೋಗ್ಯ ಹಿನ್ನಲೆಯಲ್ಲಿ ಮಧ್ಯಂತರ ಜಾಮೀನಿಗೆ ದರ್ಶನ್ ಪರ ವಕೀಲರು. ಮನವಿ ಮಾಡಿದ್ದರು. ಜಾಮೀನು ಅರ್ಜಿ ತೀರ್ಪು ಕೊನೆಗೂ ಹೈಕೋರ್ಟ್ ನೀಡಿದೆ. ದೀಪಾವಳಿ ಹಬ್ಬಕ್ಕೆ ನಟ ದರ್ಶನ್‌ಗೆ ಕೋರ್ಟ್‌ ಭರ್ಜರಿ ಗುಡ್‌ನ್ಯೂಸ್ ನೀಡಿದ್ದು, ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರಕಟಿಸಿದೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ದರ್ಶನ್‌ನನ್ನ ವೆಲ್‌ಕಂ ಮಾಡೋಕೆ ಜೈಲಿನ ಬಳಿ ಜನ ಸಾಗರವೇ ಹರಿದು ಬರ್ತಿದೆ.

ಇದನ್ನೂ ಓದಿ: 5 ತಿಂಗಳ ಬಳಿಕ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ 6 ವಾರಗಳ ಜಾಮೀನು ಮಂಜೂರು

ಹೌದು.ದರ್ಶನ್‌ಗೆ ಜೈಲಿನ ವಾಸದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಕೊನೆಗೂ ಬೆನ್ನುನೋವಿನ ಚಿಕಿತ್ಸೆಗೆ ಅವಕಾಶ ಸಿಕ್ಕಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರು ನಟ ದರ್ಶನ್. ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದರು.ಚಿಕಿತ್ಸೆ ಪಡೆಯದೆ ಇದ್ದರೆ, ಮುಂದೆ ಮೂತ್ರಪಿಂಡ ಸಮಸ್ಯೆ ಅಥವಾ ಗಂಭೀರ ಅರೋಗ್ಯ ಸಮಸ್ಯೆಗೆ ಈಡಾಗುವ ಸಾಧ್ಯತೆ ಇದೆ ಎಂದು ವಾದ ಮಾಡಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಮಧ್ಯಂತರ ಜಾಮೀನು ಕೊಡಬೇಕೆಂದು ಸಿವಿ ನಾಗೇಶ್ ಅವರು ಮನವಿ ಮಾಡಿದ್ದರು. ಅದೇ ರೀತಿ ನಟನ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಅವರು ಹೇಳಿದ್ದರು. ಆತನ ಸಮಸ್ಯೆ ಆತನಿಗೆ ಗೊತ್ತು..? ಕೂರೋಕು ಆಗಲ್ಲ, ನಿಲ್ಲೋಕು ಆಗಲ್ಲ, ನಡೆಯೋಕು ಆಗಲ್ಲ ಎಂದು ಸಿವಿ ನಾಗೇಶ್ ಜಡ್ಜ್‌ ಮುಂದೆ ಹೇಳಿದ್ದರು.

ಚಾರ್ಜ್​ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಅವರು ಜಾಮೀನು ಕೋರಿ ಕೆಳ ಹಂತದ ಕೋರ್ಟ್​ನ ಮೊರೆ ಹೋಗಿದ್ದರು. ಆದರೆ, ಅಲ್ಲಿ ಜಾಮೀನು ಸಿಕ್ಕಿರಲಿಲ್ಲ. ಆ ಬಳಿಕ ದರ್ಶನ್ ಹೈಕೋರ್ಟ್ ಮೊರೆ ಹೋದರು. ತಮ್ಮ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಅವರು ಹೈಕೋರ್ಟ್​ನಲ್ಲಿ ಜಾಮೀನಿಗೆ ಮನವಿ ಮಾಡಿದ್ದರು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನರಕಯಾತನೆ ಅನುಭವಿಸುತ್ತಿರುವ ದಾಸನಿಗೆ ಹೈಕೋರ್ಟ್ ರಿಲೀಫ್​ ನೀಡಿದ್ದು. ಸತತ ನಾಲ್ಕು ತಿಂಗಳ ನಂತರ ದರ್ಶನ್​ ಜೈಲಿನಿಂದ ಹೊರಗೆ ಬಂದಿದ್ದಾರೆ.

ನ್ಯಾಯದೀಶ. ವಿಶ್ವಜಿತ್​ ಶೆಟ್ಟಿಯವರ ಪೀಠ ದರ್ಶನ್​ಗೆ ಜಾಮೀನು ನೀಡಿದ್ದು. ಮೆಡಿಕಲ್​ ಗ್ರೌಡ್ಸ್​ ಮೇಲೆ ದರ್ಶನ್​ಗೆ ಜಾಮೀನು ಮಂಜೂರು ಮಾಡಲಾಗಿದ್ದು. ತಾತ್ಕಾಲಿಕವಾಗಿ ಹೈಕೋರ್ಟ್​ ಏಕಸದಸ್ಯ ಪೀಠ ದರ್ಶನ್​ಗೆ ಜಾಮೀನು ನೀಡಿದೆ.

ಕೋರ್ಟ್​ ವಿಧಿಸಿದ ಷರತ್ತುಗಳು

  • ಆರು ವಾರ ಮಾತ್ರ ಷರತ್ತುಬದ್ದ ಜಾಮೀನು ಮಂಜೂರು
  • ಚಿಕಿತ್ಸೆಗಾಗಿ ಮಾತ್ರ ಜಾಮೀನು ಮಂಜೂರು
  • ದರ್ಶನ್ ಆಯ್ಕೆಯ​ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ
  • ಪಾಸ್​ಪೋರ್ಟ್​ನ್ನು ಕೋರ್ಟ್​ ವಶಕ್ಕೆ ನೀಡಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

ಇನ್ನು ದರ್ಶನ್‌ಗೆ ಬೇಲ್ ಸಿಗುತ್ತಿದ್ದಂತೆ ಪವಿತ್ರಗೌಡ ಕೂಡ ಜೈಲಿನಲ್ಲಿ ಖುಷಿ ಪಟ್ಟಿದ್ದಾರಂತೆ. ದರ್ಶನ್‌ ಕೂಡ ಜೈಲಿನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿದ್ದು ಯಾವಾಗ ಹೊರಗೆ ಕಳ್ಸತ್ತಾರೆ ಅಂತಾ ಕಾಯುತ್ತಿದ್ದಾರೆ. ಯಕಂದ್ರೆ ಅವರರನ್ನ ಅಷ್ಟರಮಟ್ಟಿಗೆ ಬೆನ್ನು ನೋವು ಕಾಡುತ್ತಿದೆ.. ಇನ್ನೂ 6 ವಾರಗಳ ನಂತ್ರ ಚಿಕಿತ್ಸೆ ಬೇಕು ಅಂದ್ರೆ  ಇದನ್ನ ವಿಸ್ತರಣೆ ಮಾಡಬಹುದು.. ಅದಕ್ಕೆ ಮತ್ತೆ ಕೋರ್ಟ್ ಮೊರೆ ಹೋಗಬೇಕು.

Shwetha M

Leave a Reply

Your email address will not be published. Required fields are marked *