ಮಾನಸಗಿಂತ ಕಡೆಯಾದ್ರಾ ಹಂಸ – ಮಾನಸಗೆ Vote ಹಾಕಿದ್ಯಾರು?
ತುಕಾಲಿ ಪತ್ನಿ ಮತ್ತೆ ಟ್ರೋಲ್
ಈ ವೀಕ್ ಮಾನಸ ಹೋಗೋದು ಫಿಕ್ಸ್ ಅಂತಾ ಬಿಗ್ ಬಾಸ್ ವೀಕ್ಷಕರು ಅಂದ್ಕೊಂಡಿದ್ರು.. ಅಕ್ಕನಿಗೆ ಟಾಟಾ.. ಬೈ ಬೈ.. ಅಂತ ಟ್ರೋಲ್ ಮಾಡಿದ್ದೇ ಮಾಡಿದ್ದು.. ಆದ್ರೆ ವೀಕ್ಷಕರ ಲೆಕ್ಕಾಚಾರ ಫುಲ್ ಉಲ್ಟಾ ಆಗಿದೆ. ಈ ವಾರವೇ ಹೋಗ್ಬೇಕಿದ್ದ ಮಾನಸಗೆ ಓಟ್ ಹಾಕಿದ್ಯಾರು ಅನ್ನೋ ಗೊಂದಲ ಈಗ ವೀಕ್ಷಕರನ್ನ ಕಾಡ್ತಾ ಇದೆ.. ಅಷ್ಟಕ್ಕೂ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ.. ಮಾನಸಳನ್ನ ಉಳಿಸಿಕೊಳ್ಳಲು ಕಾರಣ ಏನು? ಕಲರ್ಸ್ ಕನ್ನಡ ಟಿ ಆರ್ಪಿಗಾಗಿ ಗೇಮ್ ಪ್ಲಾನ್ ಶುರುಮಾಡಿಕೊಂಡಿತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗೆಳೆಯನ ಮುಂದೆ ಕೈ ಚಾಚಿದ PAK – ಚೀನಾದ ಬಳಿ 11000 ಕೋಟಿ ಸಾಲ
ಮಾನಸ.. ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.. ತುಕಾಲಿ ಸಂತು ಪತ್ನಿ ಮಾನಸ ಬಿಗ್ ಬಾಸ್ ಗೆ ಬರಲಿ ಅಂತಾ ವೀಕ್ಷಕರೇ ಕೇಳಿಕೊಂಡಿದ್ರು.. ಹೀಗಾಗೇ ಈ ಸೀಸನ್ ನಲ್ಲಿ ಮಾನಸಗೆ ಚಾನ್ಸ್ ನೀಡಲಾಗಿತ್ತು.. ಮಾನಸ ದೊಡ್ಮನೆಗೆ ಬರ್ತಿದ್ದಂತೆ ಈ ಬಾರಿ ಭರ್ಜರಿ ಮನರಂಜನೆ ಫಿಕ್ಸ್.. ನಕ್ಕು ನಕ್ಕು ಸಾಕಾಗುತ್ತೆ ಅಂತಾ ಎಲ್ಲರೂ ಅಂದ್ಕೊಂಡಿದ್ರು.. ಆದ್ರೆ ವೀಕ್ಷಕರ ಲೆಕ್ಕಾಚಾರ ಅಲ್ಲೂ ಉಲ್ಟಾ ಆಗಿತ್ತು.. ಮಾನಸ ಕಾಮಿಡಿ ಮಾಡೋ ಬದಲು.. ಬರೀ ಅವರನ್ನ.. ಇವರನ್ನ ಬೈಕೊಂಡೇ ಇದ್ರು.. ಒಂದು ವಿಷ್ಯ ಸಿಕ್ಕಿದ್ರೆ ಸಾಕು.. ಕಾಲ್ಕೆರ್ಕೊಂಡು ಜಗಳಕ್ಕೆ ಬರ್ತಿದ್ದಾರೆ.. ಕೆಟ್ಟ ಪದಗಳಿಂದಲೇ ಎಲ್ಲರನ್ನ ನಿಂದಿಸುತ್ತಿದ್ದಾರೆ.. ಇದ್ರಿಂದಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಮಾನಸ.. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮೇಲೆ ಟ್ರೋಲ್ ಆಗ್ತಿದ್ದಾರೆ.. ಬಿಗ್ ಬಾಸ್ ನ ನೋಡೋಕೆ ಆಗ್ತಿಲ್ಲ.. ದಯವಿಟ್ಟು ಮಾನಸಳನ್ನು ದೊಡ್ಮನೆಯಿಂದ ಆಚೆ ಹಾಕಿ ಅಂತಾ ವೀಕ್ಷಕರು ಹೇಳಿದ್ರು.. ವೀಕ್ಷಕರ ಒತ್ತಾಯದಂತೆ ಮಾನಸಳನ್ನ ಎಲಿಮಿನೇಟ್ ಆಗ್ತಾರೆ ಅಂತಾ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಇಲ್ಲೂ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ.. ಈ ವಾರ ಕೂಡ ಮಾನಸ ಬಿಗ್ ಬಾಸ್ ಮನೆಯಿಂದ ಹೊರ ಹೋಗಿಲ್ಲ..
ಹೌದು, ಈ ಬಾರಿ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ತುಕಾಲಿ ಸಂತು ಪತ್ನಿ ಮಾನಸ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲಿ.. ನೋಡೋದಿಕ್ಕೆ ಆಗಲ್ಲ.. ಅಸಹ್ಯವಾಗಿ ಬೈತಾರೆ.. ಸಹ ಸ್ಪರ್ಧಿಗಳನ್ನ ಹೋಗೆಲೇ.. ಬಾರೆಲೇ ಅಂತಾ ನಿಂದಿಸುತ್ತಾರೆ.. ಇದು ವೀಕ್ಷಕರಿಗೆ ಸಿಟ್ಟು ತರಿಸಿದೆ.. ಅಷ್ಟೇ ಅಲ್ಲ ಟ್ರೋಲ್ ಪೇಜ್ ಗಳು ಕೂಡ ಮಾನಸ ವಿರುದ್ದ ಕಿಡಿಕಾರಿದ್ದವು.. ಕೆಟ್ಟದಾಗಿಯೇ ಟ್ರೋಲ್ ಮಾಡಲಾಗುತ್ತಿದೆ.. ಈ ವೀಕೆಂಡ್ ನಲ್ಲಿ ಮಾನಸ ವರ್ತನೆಗೆ ಸರಿಯಾಗೇ ಕ್ಲಾಸ್ ತೆಗೆದುಕೊಳ್ಳಲಾಗಿದೆ.. ಯೋಗರಾಜ್ ಭಟ್ ಹಾಗೂ ಸೃಜನ್ ಲೋಕೇಶ್ ಮಾನಸಗೆ ಮಾತಿನ ಪಾಠ ಮಾಡಿದ್ದಾರೆ.. ಮಾನಸ ಮಾತಿನಿಂದ ಎಷ್ಟು ಹರ್ಟ್ ಆಗುತ್ತೆ.. ಜನರ ಕಣ್ಣಿಗೆ ಹೇಗೆ ಇದು ಕಾಣುತ್ತೆ ಅನ್ನೋದನ್ನ ತಿಳಿ ಹೇಳಿದ್ದಾರೆ.. ಇದ್ರಿಂದಾಗಿ ಮಾನಸ ತಾನು ಇನ್ನು ಬದಲಾಗ್ತೇನೆ.. ಇನ್ನು ಮುಂದೆ ತನ್ನಿಂದ ಯಾರಿಗೂ ನೋವಾಗದಂತೆ ನಡೆದುಕೊಳ್ಳುತ್ತೇನೆ ಅಂತಾ ಹೇಳಿದ್ದಾರೆ.. ಅಷ್ಟೇ ಅಲ್ಲ ಈ ವಾರ ಕೂಡ ಮಾನಸ ಸೇಫ್ ಆಗಿದ್ದಾರೆ.. ಇದೀಗ ವೀಕ್ಷಕರು ಮಾತ್ರ ಬಿಗ್ ಬಾಸ್ ಹಾಗೂ ವಾಹಿನಿ ವಿರುದ್ಧ ಕಿಡಿ ಕಾರಿದ್ದಾರೆ.. ಈ ಬಗ್ಗೆ ಟ್ರೋಲ್ ಕೂಡ ಆಗ್ತಿದೆ..
ಬಿಗ್ ಬಾಸ್ ಮನೆಯಲ್ಲಿ ಮಾನಸ ಸೇವ್ ಆಗಿದ್ದಾರೆ.. ಇಡೀ ಕರ್ನಾಟಕದ ಜನತೆಯೇ ಆಕೆಯ ವಿರುದ್ಧ ಕಿಡಿ ಕಾರುತ್ತಿದೆ.. ಆಕೆಗೆ ವೋಟ್ ಮಾಡಿದವರು ಯಾರು? ಮನೆಯಲ್ಲಿ ಇನ್ನೊಬ್ಬರನ್ನ ನಿಂದಿಸಿ, ಹೀಯಾಳಿಸುವುದು ಒಳ್ಳೆಯದ್ದಾ? ಕೂಗಾಡಿ, ರಂಪಾಟ ಮಾಡ್ತಿದ್ರೆ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಜಾಗನಾ? ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದಾರೆ.. ಇನ್ನು ಕೆಲವರು ಟಿಆರ್ ಪಿಗಾಗಿ ವಾಹಿನಿ ಏನು ಬೇಕಾದ್ರು ಮಾಡುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.. wll played colors kannda.. ನಿಮ್ಮ ಯೋಗ್ಯತೆಯನ್ನು ಕರ್ನಾಟಕದ ಜನತೆಗೆ ತೋರಿಸಿದ್ದಕ್ಕೆ ಧನ್ಯವಾದ.. ನಾಚಿಕೆ ಆಗ್ಬೇಕು ನಿಮಗೆ.. ಮಾನಸಳನ್ನ ಸೇವ್ ಮಾಡಿದ್ದಕ್ಕೆ.. ಪ್ರಾಮಾಣಿಕತೆ ಬಗ್ಗೆ ಮಾತನಾಡೋ ನೀವು ಎಷ್ಟು ಪ್ರಾಮಾಣಿಕರು? Justice for Karnataka people ಅಂತಾ ಪೋಸ್ಟ್ ಮಾಡಿದ್ದಾರೆ.. ಮತ್ತೆ ಕೆಲವರು ಹಂಸ ಮಾನಸಗಿಂತ ಕಡೆಯಾದ್ರಾ? ಅವರು ಮನೆಯಲ್ಲಿ ರಂಪಾಟ ಮಾಡಿಲ್ಲ ಅಂತಾ ಕಳಿಸಿದ್ರಾ ಅಂತಾ ಪ್ರಶ್ನೆ ಮಾಡಿದ್ದಾರೆ.