ಧೋನಿ ಜೊತೆ ರೈನಾ, ಕೊಹ್ಲಿ ಸ್ನೇಹ ಬಾಂಧವ್ಯ – ಸಚಿನ್, ಗಂಗೂಲಿ ಸ್ನೇಹಕ್ಕೆ ಕ್ರಿಕೆಟ್ ಜಗತ್ತೇ ಸಾಕ್ಷಿ
ರೋಹಿತ್ - ಕೊಹ್ಲಿ ಕುಚಿಕು ಗೆಳೆಯರು- ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ಬೆಸ್ಟ್ ಫ್ರೆಂಡ್ಸ್!

ಧೋನಿ ಜೊತೆ ರೈನಾ, ಕೊಹ್ಲಿ ಸ್ನೇಹ ಬಾಂಧವ್ಯ – ಸಚಿನ್, ಗಂಗೂಲಿ ಸ್ನೇಹಕ್ಕೆ ಕ್ರಿಕೆಟ್ ಜಗತ್ತೇ ಸಾಕ್ಷಿರೋಹಿತ್ - ಕೊಹ್ಲಿ ಕುಚಿಕು ಗೆಳೆಯರು- ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ಬೆಸ್ಟ್ ಫ್ರೆಂಡ್ಸ್!
xr:d:DAFIh1CSJ0Y:3,j:32298905784,t:22080607

ಎಲ್ಲಿಯ ಕೃಷ್ಣ.. ಎಲ್ಲಿಯ ಕುಚೇಲ. ಅಜಗಜಾಂತರ ವ್ಯತ್ಯಾಸ. ಆದ್ರೆ ಸ್ನೇಹ ಅನ್ನೋ ಎರಡಕ್ಷರದ ಜಾದೂ ಅವರಿಬ್ಬರನ್ನೂ ಒಂದು ಮಾಡಿತ್ತು. ರಕ್ತ ಸಂಬಂಧಗಳ ಮೀರಿದ ಬಂಧ ಅಂದ್ರೆ ಅದುವೇ ಗೆಳೆತನ. ಕಷ್ಟ ಕಾಲದಲ್ಲಿ ಆಗೋದು ಕೂಡ ಸ್ನೇಹಿತರೇ. ಹೀಗೆ ಕ್ರಿಕೆಟ್​ನಲ್ಲೂ ಕೂಡ ಕುಚಿಕುಗಳಿದ್ದಾರೆ. ಕ್ರಿಕೆಟ್​ನಲ್ಲಿ ಒಟ್ಟೊಟ್ಟಿಗೆ ಮೈದಾನಕ್ಕಿಳಿಯೋ ಆಟಗಾರದು ಅದರಿಂದಾಚೆಗೂ ಬೆಸ್ಟ್ ಫ್ರೆಂಡ್ಸ್​​ಗಳಾಗಿರುತ್ತಾರೆ. ಈ ಬ್ರೋಮ್ಯಾನ್ಸ್, ಫ್ರೆಂಡ್​ಶಿಪ್​ನ ನೀವೂ ಕೂಡ ನೋಡೇ ಇರ್ತೀರಾ. ಅಷ್ಟಕ್ಕೂ ಯಾವೆಲ್ಲಾ ಪ್ಲೇಯರ್ಸ್ ನಡುವೆ ಒಂದೊಳ್ಳೆ ದೋಸ್ತಿ ಇದೆ ಎಂಬ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KL ಕ್ಯಾಪ್ಟನ್ಸಿ ಕಸಿದ LSG – ಲಕ್ನೋ ತಂಡಕ್ಕೆ ರಾಹುಲ್ ಬೈ ಬೈ

ಜಗತ್ತೇ ಮೆಚ್ಚಿರೋ ಕ್ರೀಡೆ ಕ್ರಿಕೆಟ್. ಬ್ರಿಟಿಷರ ನಾಡಿನಲ್ಲಿ ಹುಟ್ಟಿದ ಈ ಆಟಕ್ಕೆ ಈಗ ಇಡೀ ವಿಶ್ವವೇ ಫಿದಾ ಆಗಿದೆ. ಮಿಲಿಯನ್​ಗಟ್ಟಲೆ ಅಭಿಮಾನಿಗಳಿದ್ದಾರೆ. ಫುಟ್​ಬಾಲ್ ಹೊರತುಪಡಿಸಿದ್ರೆ ಕ್ರಿಕೆಟ್​ಗೆ ಈಗ ಹೈಯೆಸ್ಟ್ ಫ್ಯಾನ್ಸ್ ಇರೋದು. ಅದ್ರಲ್ಲೂ ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಇನ್ನೂ ಒಂದು ಕೈ ಜಾಸ್ತಿನೇ ಇದೆ. ಹೀಗೆ ಕ್ರಿಕೆಟ್ ಆಡ್ತಾನೇ ಜೀವದ ಗೆಳೆಯರಾಗಿರೋ ಆಟಗಾರರೂ ಇದ್ದಾರೆ. ಅವ್ರ

ಕ್ರಿಕೆಟ್ ಲೋಕ ಕಂಡ ಲೆಜೆಂಡರಿ ಪ್ಲೇಯರ್ ಎಂಎಸ್ ಧೋನಿ. ಇಂಥಾ ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ನಡುವೆ ಅಪರೂಪದ ಬಾಂಧವ್ಯ ಇದೆ. ಒಬ್ಬರಿಗೊಬ್ಬರು ಅತ್ಯಂತ ನಿಷ್ಠಾವಂತ ಬಾಂಧವ್ಯ ಹೊಂದಿರುವ ಇಬ್ಬರು ಭಾರತೀಯ ಕ್ರಿಕೆಟಿಗರು. ಈ ಇಬ್ಬರು ಆರಂಭದಿಂದಲೂ ಐಪಿಎಲ್​ನಲ್ಲೂ ಸಿಎಸ್​ಕೆ ಪರ ಆಡಿದ್ದಾರೆ. ಭಾರತದ ಪರವೂ ಒಟ್ಟಿಗೆ ಆಡಿದ್ದಾರೆ. ಇವರ ಸ್ನೇಹ ಎಂತಹದ್ದು ಎಂಬುದಕ್ಕೆ ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇ ಇದಕ್ಕೆ ನಿದರ್ಶನ. ಮೈದಾನದಲ್ಲಿ ಮಾತ್ರವಲ್ಲ, ಅದರಾಚೆಗೂ ಭಲೇ ಜೋಡಿ. ವೈಯಕ್ತಿಕ ವಿಚಾರಗಳನ್ನೂ ಪರಸ್ಪರ ಹಂಚಿಕೊಳ್ಳುವ ಈ ಜೋಡಿಯು ಕ್ರಿಕೆಟ್​ ಲೋಕದ ಬೆಸ್ಟ್​​ ಫ್ರೆಂಡ್ಸ್​.

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರರು. ಹಾಗೆಯೇ ಪ್ರಾಣ ಸ್ನೇಹಿತರು. ಇವರ ಗೆಳೆತನ ಅಂತಿಥದ್ದಲ್ಲ. ಇಡೀ ಜಗತ್ತಿಗೆ ಗೊತ್ತಿದೆ. ಕೊಹ್ಲಿ ಹಿಂದೊಮ್ಮೆ ಧೋನಿ ಬಗ್ಗೆ ಎರಡೇ ಪದದಲ್ಲಿ ಉತ್ತರಿಸಿದ್ರು. ನಂಬಿಕೆ ಮತ್ತು ಗೌರವ ಎಂದು ಮಾಹಿ ಬಗ್ಗೆ ಹೇಳಿದ್ರು. ಧೋನಿ ನಾಯಕತ್ವದಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಅಂದಿನಿಂದ ಈವರೆಗೂ ಒಂದೊಳ್ಳೆ ಅಟ್ಯಾಚ್​ಮೆಂಟ್ ಹೊಂದಿದ್ದಾರೆ.

ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಕಾಣ್ತಿರೋ ಸ್ಟ್ರಾಂಗೆಸ್ಟ್ ಗೆಳೆತನ ಅಂದ್ರೆ ಅದು ಕಿಂಗ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರದ್ದು. ಇಬ್ಬರೂ ಕೂಡ ರಾಮ ಲಕ್ಷ್ಮಣರಂತಿದ್ದಾರೆ. ಬರೀ ಆಟದಲ್ಲಿ ಮಾತ್ರ ಅಲ್ಲ, ಅದರಾಚೆಗೂ ಒಳ್ಳೆ ರಿಲೇಷನ್​ಶಿಪ್ ಇದೆ. ರೋಹಿತ್ ಕ್ಯಾಪ್ಟನ್ ಆಗಿದ್ರೂ ವಿರಾಟ್ ಕೊಹ್ಲಿ ತಾವೇ ನಾಯಕ ಎನ್ನುವಷ್ಟು ಸಂಭ್ರಮ ಪಡ್ತಾರೆ. ಹಾಗೇ ಕೊಹ್ಲಿ ಏನಾದ್ರೂ ಔಟಾದಾಗ ರೋಹಿತ್ ಅಷ್ಟೇ ಸಂಕಟ ಪಡ್ತಾರೆ. ಇಬ್ಬರ ನಡುವಿನ ಸಂಬಂಧ ಎಷ್ಟರಮಟ್ಟಿಗಿದೆ ಅನ್ನೋದನ್ನ ನೀವೂ ಕೂಡ ಸಾಕಷ್ಟು ಸಲ ಆನ್​ಫೀಲ್ಡ್​ನಲ್ಲೇ ಅಬ್ಸರ್ವ್ ಮಾಡಿರ್ತೀರಾ. ಅದೆಲ್ಲಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಯಾವತ್ತೂ ಕೂಡ ಬಿಟ್ಟುಕೊಡಲ್ಲ. ಅಷ್ಟೇ ಯಾಕೆ ಈ ಇಬ್ಬರು ಸ್ಟಾರ್ ಪ್ಲೇಯರ್ಸ್ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿದ ದಿನವೇ ಒಟ್ಟಿಗೆ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ರು.

ಟೀಂ ಇಂಡಿಯಾ ಕಂಡ ಒನ್ ಆಫ್ ದಿ ಬೆಸ್ಟ್ ಪ್ಲೇಯರ್ ಯುವರಾಜ್ ಸಿಂಗ್. ಒಂದೇ ಓವರ್​ನಲ್ಲಿ 6 ಸಿಕ್ಸರ್ ಸಿಡಿಸಿದ್ದನ್ನ ಕ್ರಿಕೆಟ್ ಲೋಕ ಮರೆಯೋಕೆ ಸಾಧ್ಯನೇ ಇಲ್ಲ. ಇಂಹತ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ನಡುವಿನ ಬಾಂಧವ್ಯಕ್ಕೆ ಸುದೀರ್ಘ ಇತಿಹಾಸವಿದೆ. ಸುಮಧುರ ಬಾಂಧವ್ಯ ಹೊಂದಿರುವ ಈ ಜೋಡಿ, ಅದೆಷ್ಟೋ ಗೆಳೆಯರಿಗೆ ಮಾದರಿ. ಇತ್ತೀಚೆಗೆ ಸಂದರ್ಶನದಲ್ಲಿ ಯುವಿ, ನಾನು ತಂಡಕ್ಕೆ ಕಂಬ್ಯಾಕ್ ಮಾಡಿದ್ದೇ ಕೊಹ್ಲಿಯಿಂದ ಎಂದು ಹೇಳಿದ್ದರು. ಕೊಹ್ಲಿ ಕೂಡ ಅದೆಷ್ಟೋ ಬಾರಿ ಯುವಿಯನ್ನು ಹಾಡಿ ಹೊಗಳಿದ್ದೂ ಇದೆ. ಇವರಿಬ್ಬರ ಆಫ್​ಫೀಲ್ಡ್​ ಕೆಮಿಸ್ಟ್ರಿ ಅದ್ಭುತವಾಗಿದೆ.

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಕೂಡ ಅತ್ಯುತ್ತಮ ಗೆಳೆಯರು. ಪದಗಳಿಗೆ ನಿಲುಕದಂತಹ, ವರ್ಣಿಸಲಾಗದಂತಹ ಸ್ನೇಹ ಇವ್ರದ್ದು. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟಿಗೆ ಆಡಲು ಪ್ರಾರಂಭಿಸಿದ ನಂತರ ಈ ಜೋಡಿಯ ಒಡನಾಟ, ಬಾಂಧವ್ಯ ಮತ್ತಷ್ಟು ಹೆಚ್ಚಾಯಿತು. ಇಬ್ಬರದ್ದು ಬೇರೆ ಬೇರೆ ದೇಶಗಳೇ ಆದರೂ, ಒಂದೇ ತಾಯಿಯ ಮಕ್ಕಳಂತೆ ಇದ್ದಾರೆ. ಕೊಹ್ಲಿ ಎಬಿಡಿಯನ್ನು, ಎಬಿಡಿ ಕೊಹ್ಲಿಯನ್ನೂ ಎಂದೂ ಬಿಟ್ಟುಕೊಟ್ಟವರಲ್ಲ. ಹಾಗೇ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕೂಡ ಇವ್ರ ಜೊತೆ ಉತ್ತಮ ಗೆಳೆತನ ಒಂದಿದ್ದಾರೆ. ಆರ್​ಸಿಬಿ ಅಭಿಮಾನಿಗಳು ಪಾಲಿಗೆ ಒಂಥರಾ ಬ್ರಹ್ಮ, ವಿಷ್ಣು, ಮಹೇಶ್ವರರಂತಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಬೆಸ್ಟ್​ ಫ್ರೆಂಡ್ಸ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗಂಗೂಲಿ ನಾಯಕನಾಗಿದ್ದಾಗ ಹೆಚ್ಚು ಬೆಂಬಲಕ್ಕೆ ನಿಂತಿದ್ದೇ ಸಚಿನ್. ಹೀಗಂತ ಹಲವು ಬಾರಿ ಗಂಗೂಲಿ ಹೇಳಿದ್ದಾರೆ. ಈ ಜೋಡಿ ಮೈದಾನದಲ್ಲಿ ಅದೆಷ್ಟೋ ಸ್ಮರಣೀಯ ಇನ್ನಿಂಗ್ಸ್​​ಗಳನ್ನೂ ಕಟ್ಟಿದ್ದೂ ಇದೆ. ಹಾಗೇ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ರೋಹಿತ್ ಶರ್ಮಾ ಅವರೊಂದಿಗೆ ಗುಡ್ ಫ್ರೆಂಡ್​ಶೆಪ್ ಹೊಂದಿದ್ದಾರೆ. ಎಷ್ಟೋ ಸಲ ರೋಹಿತ್ ನನ್ನ ಬಿಗ್ ಬ್ರದರ್ ಅಂತಾ ಚಹಾಲ್ ಹೇಳಿಕೊಂಡಿದ್ದಾರೆ.  ಇನ್ನು ಇವ್ರಿಷ್ಟೇ ಅಲ್ಲದೆ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್, ಹಾಗೇ ಧೋನಿ-ರವೀಂದ್ರ ಜಡೇಜಾ, ಶುಭ್​ಮನ್ ಗಿಲ್-ಇಶಾನ್ ಕಿಶನ್, ಹೀಗೆ ಅನೇಕ ಸ್ಟಾರ್ಸ್ ಫ್ರೆಂಡ್​ಶಿಪ್​ನಿಂದಲೂ ಸದ್ದು ಮಾಡ್ತಿದ್ದಾರೆ. ಒಟ್ನಲ್ಲಿ ಕ್ರಿಕೆಟ್ ಅನ್ನೋದು ಒಂದು ಟೀಂ ಗೇಮ್.  ತಂಡಕ್ಕಾಗಿ ಆಡುವಾಗ ಒಂದೇ ಮನೆಯವ್ರಂತಿರೋ ಪ್ಲೇಯರ್ಸ್ ಆ ಬಳಿಕವೂ ಒಂದೇ ತಾಯಿಯ ಮಕ್ಕಳಂತೆ ಇರೋದು ನಿಜಕ್ಕೂ ಖುಷಿಯ ವಿಚಾರ.

 

suddiyaana