ಮದುವೆ ಮನೆಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ, ಡಿಜೆ ನೃತ್ಯ ಹಾಕುವಂತಿಲ್ಲ!
ಧನ್ಬಾದ್: ಮುಸ್ಲಿಂ ಸಮುದಾಯದ ಮದುವೆ ಸಮಾರಂಭಗಳಲ್ಲಿ ಇನ್ನು ಮುಂದೆ ನೃತ್ಯ, ಜೋರಾದ ಸಂಗೀತ, ಡಿಜೆ ಮತ್ತು ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಇಮಾಮ್ ಒಬ್ಬರು ಫತ್ವಾ ಹೊರಡಿಸಿದ್ದಾರೆ.
ಧನ್ಬಾದ್ನ ನಿರ್ಸಾ ಬ್ಲಾಕ್ನ ಸಬಿಲಿಬಡಿ ಜಾಮಾ ಮಸೀದಿಯ ಮುಖ್ಯ ಇಮಾಮ್ ಮೌಲಾನ ಮಸೂದ್ ಅಖ್ತರ್ ನೇತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಪಿ.ಟಿ.ಉಷಾ ಆಯ್ಕೆ ಬಹುತೇಕ ಖಚಿತ
ಮುಸ್ಲಿಂ ಸಮುದಾಯದ ಮದುವೆ ಸಮಾರಂಭಗಳಲ್ಲಿ ಇಸ್ಲಾಂಗೆ ವಿರುದ್ಧವಾಗಿ ನೃತ್ಯ, ಡಿಜೆ ಸಂಗೀತ ಮತ್ತು ಪಟಾಕಿ ಹೊಡೆಯುವಂತ್ತಿಲ್ಲ. ಅಲ್ಲದೇ ರಾತ್ರಿ 11 ಗಂಟೆಯ ನಂತರ ಸಮಯ ಶುಭಕರವಾಗಿಲ್ಲ. 11 ಗಂಟೆಯ ನಂತರ ಮದುವೆ ಮಾಡುವಂತಿಲ್ಲ. ಡಿ.2ರಿಂದ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 5,100 ರೂ. ದಂಡ ವಿಧಿಸಲಾಗುವುದು ಎಂದು ಫತ್ವಾ ಹೊರಡಿಸಲಾಗಿದೆ.