ಗೆಳೆಯನ ಮುಂದೆ ಕೈ ಚಾಚಿದ PAK – ಚೀನಾದ ಬಳಿ 11000 ಕೋಟಿ ಸಾಲ
ಪಾಕ್‌ಗೆ ಕ್ಯಾಕರಿಸಿ ಉಗಿದ ಡ್ರ್ಯಾಗನ್
ಸಾಲ ಮಾಡಿಯಾದ್ರೂ ತುಪ್ಪಾ ತಿನ್ನು ಅನ್ನೋ ಹಾಗೇ ಸಾಲ ಮಾಡಿಯಾದ್ರೂ ದೇಶ ನಡೆಸು ಅನ್ನೋ ಪರಿಸ್ಥಿತಿಗೆ ಪಾಕಿಸ್ತಾನ ಬಂದಿದೆ. ಹೋದಲ್ಲಿ ಬಂದಲ್ಲಿ ಸಾಲ ಮಾಡ್ತಿರೋ ಪಾಕಿಸ್ಕಾನ ಆರ್ಥಿಕವಾದಿ ದಿವಾಳಿಯಾಗಿ ಹೋಗಿದೆ. ಸಾಲ ಅದಕ್ಕೆ ಬಡ್ಡಿ ಅಂತಾ ಹೇಳಿ ಬರುವ ಆದಾಯಕ್ಕಿಂತ ಹೆಚ್ಚು ಸಾಲವನ್ನ ಮಾಡಿರೋ ಪಾಕಿಸ್ತಾನ ಮತ್ತೆ ತನ್ನ ಮಿತ್ರ ದೇಶದ ಜೊತೆ ಸಾಲಕ್ಕಾಗಿ ಕೈ ಒಡ್ಡುತ್ತಿದೆ. ಹಾಗಿದ್ರೆ ಪಾಕಿಸ್ಾನ ಈಗ ಯಾರ ಬಳಿ ಸಾಲ ಕೇಳುತ್ತಿದೆ ಬನ್ನಿ ನೋಡೋಣ.
ಚೀನಾ ಬಳಿ ಮತ್ತೆ ಸಾಲ ಕೇಳಿದ ಪಾಕ್
ಆರ್ಥಿಕವಾಗಿ ದಿವಾಳಿಯಾಗಿರೋ ಪಾಕಿಸ್ತಾನ ಮತ್ತೆ ಚೀನಾ ಬಳಿ ಸಾಲ ಕೇಳಿದೆ. ಹೆಚ್ಚುವರಿ 10,000 ಕೋಟಿ ಯುವಾನ್ ಸಾಲವನ್ನು ಕೋರಿದೆ. 10000 ಕೋಟಿ ಯುವಾನ್ ಅಂದ್ರೆ 11.700 ಕೋಟಿ ಆಗುತ್ತೆ. ಅಮೆರಿಕದಲ್ಲಿ ನಡೆದ ಐಎಮ್‌ಎಫ್ ಹಾಗೂ ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆ ವೇಳೆ ಚೀನಾದ ಹಣಕಾಸು ಸಚಿವರನ್ನ ಭೇಟಿಯಾದ ಪಾಕಿಸ್ತಾನ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್.. ಕರೆನ್ಸಿ ಸ್ವಾಪ್ ಒಪ್ಪಂದದ ಅಡಿಯಲ್ಲಿ ಚೀನಾದಿಂದ ತಮ್ಮ ದೇಶಕ್ಕೆ ಸಿಗಬಹುದಾದ ಒಟ್ಟು ಸಾಲ ಸೌಲಭ್ಯವನ್ನು 40 ಶತಕೋಟಿ ಯುವಾನ್‌ಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಚೀನಾ ₹36,000 ಕೋಟಿ ಸಾಲವನ್ನು ಪಾಕಿಸ್ತಾನಕ್ಕೆ ನೀಡಿದೆ. ಹೀಗಾಗಿ ಈ ಪ್ರಸ್ತಾವಕ್ಕೆ ಚೀನಾ ಒಪ್ಪಿಗೆ ಸೂಚಿಸಿದರೆ ಒಟ್ಟು ಸಾಲದ ನೆರವು ₹47,900 ಕೋಟಿಗೆ ತಲುಪಲಿದೆ.
ಹೆಚ್ಚಿನ ಸಾಲ ನೀಡುವಂತೆ ಚೀನಾ ಬಳಿ ಪಾಕಿಸ್ತಾನ ವಿನಂತಿ ಮಾಡುತ್ತಲೇ ಬಂದಿದೆ. ಆದರೆ ಈ ಹಿಂದಿನ ಪ್ರಸ್ತಾವಗಳನ್ನು ಚೀನಾ ತಿರಸ್ಕರಿಸಿದೆ. ಆದರೂ ಚೀನಾವು ಪಾಕಿಸ್ತಾನವು ಈಗಿರುವ ಸಾಲ ಮರುಪಾವತಿ ಮಾಡಬೇಕಿರುವ ಅವಧಿಯನ್ನು ಮೂರು ವರ್ಷಗಳ ವಿಸ್ತರಿಸಿ 2027ಕ್ಕೆ ಮುಂದೂಡಿದೆ. ಈ ನಡುವೆ ಮತ್ತೆ ಚೀನಾ ಬಳಿ ಪಾಕಿಸ್ತಾನ ಕೇಳಿದ್ದು, ಡ್ರ್ಯಾಗನ್ ದೇಶ ಸಾಲ ಕೊಡುತ್ತಾ? ಕೊಡಲ್ವಾ? ಒಂದು ವೇಳೆ ಕೊಟ್ಟರೆ ಅದನ್ನ ಪಾಕಿಸ್ತಾನ ಹೇಗೆ ತೀರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.