KL ಕ್ಯಾಪ್ಟನ್ಸಿ ಕಸಿದ LSG – ಲಕ್ನೋ ತಂಡಕ್ಕೆ ರಾಹುಲ್ ಬೈ ಬೈ
ಹರಾಜಿಗೆ ಕನ್ನಡಿಗ.. ಕಣ್ಣಿಟ್ಟ RCB!

KL ಕ್ಯಾಪ್ಟನ್ಸಿ ಕಸಿದ LSG – ಲಕ್ನೋ ತಂಡಕ್ಕೆ ರಾಹುಲ್ ಬೈ ಬೈಹರಾಜಿಗೆ ಕನ್ನಡಿಗ.. ಕಣ್ಣಿಟ್ಟ RCB!

ಜಸ್ಟ್ 2 ಡೇಸ್. ಇನ್ನು 2 ದಿನ ಕಳೆದ್ರೆ ಐಪಿಲ್ ಮೆಗಾ ಹರಾಜಿನ ಬಗ್ಗೆ ಎಕ್ಸ್​ಕ್ಲ್ಯೂಸಿವ್ ರಿಪೋರ್ಟ್ ಹೊರ ಬೀಳುತ್ತೆ. ಯಾವ್ಯಾವ ಫ್ರಾಂಚೈಸಿಗಳು ಯಾರನ್ನ ಉಳಿಸಿಕೊಳ್ತಿದ್ದಾರೆ ಯಾರನ್ನ ರಿಲೀಸ್ ಮಾಡ್ತಿದ್ದಾರೆ ಅನ್ನೋದು ಫೈನಲ್ ಆಗಲಿದೆ. ಅಕ್ಬೋಬರ್ 31ರ ಸಂಜೆ ಯಾರಿಗೆ ದೀಪಾವಳಿ ಧಮಾಕ ಅನ್ನೋದು ಗೊತ್ತಾಗ್ಲಿದೆ. ಒಂದು ಫ್ರಾಂಚೈಸಿಗೆ ಆರು ಆಟಗಾರರನ್ನ ರಿಟೇನ್ ಮಾಡಿಕೊಳ್ಳೋ ಅವಕಾಶ ನೀಡಿರೋ ಬಿಸಿಸಿಐ ಒಂದು ವೇಳೆ ಐವರನ್ನು ರಿಟೈನ್ ಮಾಡಿಕೊಂಡ್ರೆ ಓರ್ವ ಪ್ಲೇಯರ್​ಗೆ ಆರ್​ಟಿಎಂ ಕಾರ್ಡ್ ಬಳಸಿಕೊಳ್ಳಬಹುದು. ಸದ್ಯದ ಲೇಟೆಸ್ಟ್​​ ಅಪ್​ಡೇಟ್ ಅಂದ್ರೆ ಲಕ್ನೋ ಸೂಪರ್ ಜೇಂಟ್ಸ್ ತಂಡದ ರಿಟೇನ್ ಲಿಸ್ಟ್ ರೆಡಿಯಾಗಿದೆ. ಅದಕ್ಕಿಂತ ಬ್ರೇಕಿಂಗ್ ಸುದ್ದಿ ಅಂದ್ರೆ ಕನ್ನಡಿಗ ಕೆಎಲ್ ರಾಹುಲ್​ರನ್ನ ಫ್ರಾಂಚೈಸಿ ರಿಲೀಸ್ ಮಾಡಿದೆ. ತಂಡದ ಮೂಲಗಳ ಮಾಹಿತಿ ಪ್ರಕಾರವೇ ನ್ಯಾಷನಲ್ ಮೀಡಿಯಾಗಳೂ ಇದನ್ನೇ ವರದಿ ಮಾಡಿದೆ. ಐವರು ಆಟಗಾರರನ್ನ ಉಳಿಸಿಕೊಳ್ಳೋಕೆ ಮುಂದಾಗಿರೋ ಎಲ್​ಎಸ್​ಜಿ ಹೊಸ ನಾಯಕನ ಹುಡುಕಾಟದಲ್ಲಿದೆ. ಅಷ್ಟಕ್ಕೂ ಲಕ್ನೋ ತಂಡ ಯಾರನ್ನೆಲ್ಲಾ ಉಳಿಸಿಕೊಳ್ಳಲಿದೆ. ಮಾಲೀಕರ ಆಫರ್ ನಿರಾಕರಿಸಿದ್ದೇಕೆ ಕೆಎಲ್ ರಾಹುಲ್? ಟೀಂ ಇಂಡಿಯಾದಲ್ಲಿ ಕಳಪೆ ಫಾರ್ಮ್​ನಿಂದ ಬಳಲ್ತಿರೋ ರಾಹುಲ್​ ಹರಾಜಿಗೆ ಬಂದ್ರೆ ಖರೀದಿಯಾಗ್ತಾರಾ? ಬೆಂಗಳೂರು ಫ್ರಾಂಚೈಸಿ ಲೆಕ್ಕಾಚಾರ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : NZ ವಿರುದ್ಧ IND ಕ್ಲೀನ್ ಸ್ವೀಪ್? – ಬುಮ್ರಾ ಔಟ್.. ರಾಹುಲ್ ಎಂಟ್ರಿ?

ಕೆಎಲ್ ರಾಹುಲ್. ಸದ್ಯ ಟೀಂ ಇಂಡಿಯಾ ಮತ್ತು ಐಪಿಎಲ್​ನಲ್ಲೂ ಸದ್ದು ಮಾಡ್ತಿರೋ ಹೆಸ್ರು. ಟೀಂ ಇಂಡಿಯಾದಲ್ಲಿ ಕಳಪೆ ಪ್ರದರ್ಶನದ ಮೂಲಕ ಸುದ್ದಿಯಲ್ಲಿದ್ರೆ ಐಪಿಎಲ್​ನಲ್ಲಿ ಲಕ್ನೋ ತಂಡದಿಂದ ಹೊರಬಿದ್ದಿರೋ ಬಗ್ಗೆ ಟ್ರೆಂಡಿಂಗ್​ನಲ್ಲಿದ್ದಾರೆ. ಎಲ್​​ಎಸ್​ಜಿ ತಂಡದಿಂದ ಕೆಎಲ್ ರಾಹುಲ್ ಹೊರ ಬಂದಿರೋದು ಹೇಗಿದೆ ಅಂದ್ರೆ ಹಾವು ಸಾಯಬಾರದು ಕೋಲೂ ಮುರಿಯಬಾರದು ಅಂತಾರಲ್ಲ ಹಾಗೇ. ಆ ಕಡೆ ಓನರ್​ಗೂ ರಾಹುಲ್​ರನ್ನ ತೆಗೆದು ಹಾಕಿದ್ವಿ ಅನ್ನಿಸಬಾರದು. ಈ ಕಡೆ  ರಾಹುಲ್​ಗೂ ನಾನೇ ಬಿಟ್ಟೆ ಅನ್ನಿಸಬಾರದು. ಹೀಗಿದೆ ಸಿಚುಯೇಷನ್.

ಆಟಗಾರನಾಗಿ ಇರಿ ಎಂದ ಓನರ್.. ಒಪ್ಪದ ರಾಹುಲ್!

ಇಲ್ಲೇ ನೋಡಿ ಇರೋದು ಟ್ವಿಸ್ಟ್. ನಿಜ ಹೇಳ್ಬೇಕಂದ್ರೆ ಕಳೆದ ವರ್ಷದ ಇನ್ಸಿಡೆಂಟ್ ಬಳಿಕ ಕೆಎಲ್ ರಾಹುಲ್ ಮತ್ತು ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ನಡುವೆ ಎಲ್ಲವೂ ಸರಿ ಇಲ್ಲ. ಹೀಗಾಗಿ ರಾಹುಲ್​ರನ್ನ ಕೈ ಬಿಡೋಕೆ ಮುಂದಾಗಿರೋ ಮಾಲೀಕರು ಒಂದು ಆಫರ್ ನೀಡಿದ್ದಾರೆ. ಅದೇನಂದ್ರೆ ಲಕ್ನೋ ತಂಡವನ್ನ ಕಳೆದ ಮೂರು ವರ್ಷಗಳಿಂದ ಕೆಎಲ್ ರಾಹುಲ್ ನಾಯಕನಾಗಿ ಲೀಡ್ ಮಾಡ್ತಿದ್ದಾರೆ. ಆದ್ರೆ 2025ರ ಐಪಿಎಲ್​ಗೆ ರಾಹುಲ್ ಬರೀ ಆಟಗಾರನಾಗಿ ಮುಂದುವರಿಯೋದು, ಬೇರೆ ಆಟಗಾರರನ್ನ ಕ್ಯಾಪ್ಟನ್ ಮಾಡೋದಾಗಿ ಗೋಯೆಂಕಾ ಹೇಳಿದ್ದಾರೆ. ಆದ್​ರೆ ಇದಕ್ಕೆ ರಾಹುಲ್ ಒಪ್ಪಿಲ್ಲ. ಹೀಗಾಗಿ ಫ್ರಾಂಚೈಸಿಯೂ ರಿಲೀಸ್ ಮಾಡೋಕೆ ಮುಂದಾಗಿದೆ. ಇತ್ತ ರಾಹುಲ್ ಕೂಡ ಮೆಗಾ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಾಜಿಗೂ ಮುನ್ನ ರಾಹುಲ್ ಹಲವು ತಂಡಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಹಾಗೇನಾದ್ರೂ ಆಕ್ಷನ್ ಟೇಬಲ್‌ಗೆ ಪ್ರವೇಶಿಸಿದರೆ, ಆರ್​ಸಿಬಿ  ಖರೀದಿ ಮಾಡಿದ್ರೂ ಮಾಹಬಹುದು. 2018 ರಲ್ಲಿ ಪಂಜಾಬ್ ಸೇರುವ ಮೊದಲು, ಅವರು ಆರ್​ಸಿಬಿಗಾಗಿ ಕ್ರಮವಾಗಿ 2013 ಮತ್ತು 2016 ರಲ್ಲಿ ಎರಡು ಸೀಸನ್​ಗಳನ್ನ ಆಡಿದ್ದರು.

ಐವರು ಆಟಗಾರರ ರೀಟೇನ್ ಗೆ ಮುಂದಾದ ಲಕ್ನೋ!

ಸದ್ಯ ಲಕ್ನೋ ಫ್ರಾಂಚೈಸಿ  ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಫ್ರಾಂಚೈಸಿಯು ತನ್ನ ಮೊದಲ ರಿಟೈನ್ ಆಗಿ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಪೂರನ್​ಗೆ 18 ಕೋಟಿ ರೂ. ನೀಡಲು ಎಲ್​ಎಸ್​ಜಿ ಫ್ರಾಂಚೈಸಿ ನಿರ್ಧರಿಸಿದೆ  ತಂಡದ ಎರಡನೇ ರಿಟೈನ್ ಯುವ ವೇಗಿ ಮಯಾಂಕ್ ಯಾದವ್. ಟೀಮ್ ಇಂಡಿಯಾ ಆಟಗಾರನನ್ನು ಎಲ್​ಎಸ್​ಜಿ 14 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಎಲ್​ಎಸ್​ಜಿ ಫ್ರಾಂಚೈಸಿಯ ಮೂರನೇ ರಿಟೈನ್ ಯುವ ಸ್ಪಿನ್ನರ್ ರವಿ ಬಿಷ್ಣೋಯ್. ಕಳೆದ ಮೂರು ಸೀಸನ್​ಗಳಿಂದ ಲಕ್ನೋ ತಂಡದ ಭಾಗವಾಗಿರುವ ಬಿಷ್ಣೋಯ್ ಮುಂಬರುವ ಐಪಿಎಲ್​ನಲ್ಲೂ ಎಲ್​ಎಸ್​ಜಿ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯುವ ಆಟಗಾರ ಆಯುಷ್ ಬದೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ ಯುವ ಆಟಗಾರನಿಗೆ 4 ಕೋಟಿ ರೂ. ನೀಡುವ ಸಾಧ್ಯತೆಯಿದೆ. ಎಲ್​ಎಸ್​ಜಿ ಫ್ರಾಂಚೈಸಿಯು ಎಡಗೈ ವೇಗಿ ಮೊಹ್ಸಿನ್ ಖಾನ್ ಅವರನ್ನು ಸಹ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಟೀಮ್ ಇಂಡಿಯಾ ಪರ ಆಡಿರದ ಕಾರಣ ಮೊಹ್ಸಿನ್ ಖಾನ್ ಕೂಡ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗಲಿದ್ದಾರೆ.

ಆರ್ ಟಿಎಂ ಕಾರ್ಡ್ ಬಳಕೆಯಲ್ಲಿ ಯಾರು ಸೇಫ್?

ಇನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಓರ್ವ ಆಟಗಾರನ ಮೇಲೆ ಆರ್​ಟಿಎಂ ಕಾರ್ಡ್ ಬಳಸುವ ಸಾಧ್ಯತೆಯಿದೆ. ಆದರೆ ಆ ಆಟಗಾರ ಯಾರೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಅತ್ತ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್, ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರಿದ್ದು, ಹೀಗಾಗಿ ಇವರಲ್ಲಿ ಒಬ್ಬರನ್ನು ಆರ್​ಟಿಎಂ ಬಳಸಿ ಹರಾಜಿಗೆ ಬಿಡುಗಡೆ ಮಾಡಬಹುದು.

ಒಟ್ನಲ್ಲಿ ಕ್ರಿಕೆಟ್ ಲೋಕದ ಚಿತ್ತ ಐಪಿಎಲ್​ ಆಕ್ಷನ್​ನತ್ತ ನೆಟ್ಟಿದೆ. ಅದ್ರಲ್ಲೂ ನಮ್ಮ ಕನ್ನಡಿಗರ ಕಣ್ಣು ಕೆಎಲ್ ರಾಹುಲ್ ಮೇಲೆಯೇ ಇದೆ. ನಮ್ಮ ಕನ್ನಡಿಗ ಹರಾಜಿಗೆ ಬರ್ಲಿ ನಮ್ಮ ಬೆಂಗಳೂರು ತಂಡ ಸೇರಲಿ ಅಂತಾ ಬೇಡಿಕೊಳ್ತಿದ್ದಾರೆ. ಇದೀಗ ಲಕ್ನೋ ತಂಡದಿಂದ ರಾಹುಲ್ ರಿಲೀಸ್ ಆಗಿರೋದು ಬಾರೀ ಕುತೂಹಲ ಮೂಡಿಸಿದೆ.

Shwetha M