ಪುರುಷರಲ್ಲೇ ಅತೀ ಹೆಚ್ಚು ಅಧಿಕ ರಕ್ತದೊತ್ತಡ
ವರದಿಯಿಂದ ಬಹಿರಂಗವಾಯ್ತು ಶಾಕಿಂಗ್ ಸಂಗತಿ

ಪುರುಷರಲ್ಲೇ ಅತೀ ಹೆಚ್ಚು ಅಧಿಕ ರಕ್ತದೊತ್ತಡವರದಿಯಿಂದ ಬಹಿರಂಗವಾಯ್ತು ಶಾಕಿಂಗ್ ಸಂಗತಿ

ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಶೇ 70 ರಷ್ಟು ಜನರ ರಕ್ತದೊತ್ತಡ ನಿಯಂತ್ರಣದಲ್ಲಿ ಇಲ್ಲ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಜನರಲ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ನವದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಅಮೆರಿಕದ ಬೋಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್  ತಂಡಗಳು ಈ ಅಧ್ಯಯನ ನಡೆಸಿದೆ. ಭಾರತದಲ್ಲಿ 2001 ರ ನಂತರ ಪ್ರಕಟವಾದ ಅಧಿಕ ರಕ್ತದೊತ್ತಡ ನಿಯಂತ್ರಣದ ಪ್ರಮಾಣ ಕುರಿತ 51 ಅಧ್ಯಯನ ವರದಿಗಳನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಿದೆ.

ಇದನ್ನೂ ಓದಿ: 187 ನಾಣ್ಯಗಳನ್ನು ನುಂಗಿದ ದ್ಯಾಮಣ್ಣ – ದಿನಕ್ಕೊಂದು ನಾಣ್ಯ ನುಂಗಿದವನು ಹೇಳಿದ್ದೇನು?

ಮಹಿಳೆಯರಿಗಿಂತ ಪುರುಷರಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣ ಅತೀ ಕಡಿಮೆ ಇದೆ ಎಂದು 21 ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿಯೂ ಅಧಿಕ ರಕ್ತದೊತ್ತಡ ನಿಯಂತ್ರಣ ಅತೀ ಕಡಿಮೆಯಾಗಿದೆ ಎಂದು 6  ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ. ಜೀವನ ಶೈಲಿಯಿಂದಾಗಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತಿಲ್ಲ ಅನ್ನೋ ಸಂಗತಿ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.

suddiyaana