ಕೈ ‘ಚಕ್ರವ್ಯೂಹ’ದಲ್ಲಿ ಅಭಿಮನ್ಯು – ಬಿಎಸ್‌ವೈ ಭವಿಷ್ಯ ನಿಜವಾಗುತ್ತಾ?
ನಿಖಿಲ್ ಗೆಲುವಿನ ಲೆಕ್ಕಾಚಾರ ಹೇಗಿದೆ?

ಕೈ ‘ಚಕ್ರವ್ಯೂಹ’ದಲ್ಲಿ ಅಭಿಮನ್ಯು – ಬಿಎಸ್‌ವೈ ಭವಿಷ್ಯ ನಿಜವಾಗುತ್ತಾ?ನಿಖಿಲ್ ಗೆಲುವಿನ ಲೆಕ್ಕಾಚಾರ ಹೇಗಿದೆ?

ಅಳೆದು ತೂಗಿ 3 ಕ್ಷೇತ್ರಗಳ ಬೈಎಲೆಕ್ಷನ್ ಟಿಕೆಟ್ ಪೈನಲ್ ಆಗಿದೆ. ಎಲ್ಲಾ ಪಕ್ಷಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದ, ಸಂಡೂರು, ಶಿಗ್ಗಾವಿ, ಚನ್ನಪಟ್ಟಣದ ಕಣ ಕಾದು ಕೆಂಡದಂತಾಗಿದೆ.  ಈ 3 ಕ್ಷೇತ್ರಗಳು 3 ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ ಆಡಳಿತದಲ್ಲಿದೆ. ಆಡಳಿತದಲ್ಲಿರೋ ಪಕ್ಷ ಸೋತ್ರೆ ಪಕ್ಷಕ್ಕೆ ಡ್ಯಾಮೇಜ್‌.. ಹಾಗೇ ಬಿಜೆಪಿ ಗೆದ್ದಿಲ್ಲ ಅಂದ್ರೆ ಪ್ರತಿಷ್ಠೆೆಯ ಪ್ರಶ್ನೆ. ಜೆಡಿಎಸ್‌ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಗೆಲ್ಲಲೇ ಬೇಕಾದ ಸಂಕಟದಲ್ಲಿ ಸಿಲುಕಿದೆ. ಯಾಕಂದ್ರೆ ದಿನ ಕಳೆದಂತೆ ತನ್ನ ಕ್ಷೇತ್ರಗಳನ್ನ ಕಳೆದುಕೊಳ್ಳುತ್ತಾ ಬರುತ್ತಿದೆ. ಹೀಗೆ ಆದ್ರೆ ಮುಂದೆ ಎಲ್ಲಾ ಕ್ಷೇತ್ರಗಳನ್ನೂ ಕಳೆದುಕೊಳ್ಳಬೇಕಾಗುತ್ತೆ.  ಹೀಗಾಗಿ 3 ಪಕ್ಷಗಳಿಗೆ ಈ ಬೈ ಎಲೆಕ್ಷನ್ ಪ್ರತಿಷ್ಠೆಯಾಗಿದೆ.  ಹಾಗಿದ್ರೆ ನಾಯಕರ ಗುದ್ದಾಟಕ್ಕೆ ಕಾರಣವಾದ ಚನ್ನಪಟ್ಟಣದಲ್ಲಿ ಗೆಲುವಿನ ಲೆಕ್ಕಚಾರ ಹೇಗಿದೆ..? ಯಾರಿಗೆ ಗೆಲುವು ಯಾರಿಗೆ ಸೋಲು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 156 ರನ್.. ಭಾರತ ಆಲೌಟ್ – ಸೂಪರ್ ಸ್ಟಾರ್ಸ್ ಬ್ಯಾಟಿಂಗ್ ಮರೆತ್ರಾ?

ಸಿಪಿ ಯೋಗೇಶ್ವರ್‌ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಂಪ್ ಆಗುತ್ತಿದ್ದಂತೆ ಮೈತ್ರಿ ನಾಯಕರ ಮೈಯೆಲ್ಲಾ ಉರಿದು ಹೋಗಿದೆ. ಸಿಪಿವೈ ಮುಂದೆ ಯಾರನ್ನ ಕಣಕ್ಕಿಳಿಸೋದು ಅನ್ನೋ ತಲೆನೋವು ಶುರುವಾಗಿತ್ತು. ನಂತ್ರ ಕಾರ್ಯಕರ್ತರ ಅಭಿಪ್ರಾಯ ಬಿಜೆಪಿ ಜೆಡಿಎಸ್‌ ನಾಯಕರ ಅಭಿಪ್ರಾಯ ಸಂಗ್ರಹಿಸಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನ ಆಯ್ಕೆ ಮಾಡಲಾಗಿದೆ. ಆದ್ರೆ ನಿಖಿಲ್‌ ಸತತ ಎರಡು ಸೋಲುಗಳ ಸೇಡನ್ನು ತೀರಿಸಿಕೊಳ್ತಾರಾ ಅಥವಾ ಹ್ಯಾಟ್ರಿಕ್ ಸೋಲು ಅನುಭವಿಸ್ತಾರಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ನಿಖಿಲ್ ನಿಮ್ಮ ಮನೆ ಮಗ, ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆರಿಸಿ ಕಳುಹಿಸಿ ಎಂದು ಭಾವನಾತ್ಮಕವಾಗಿ ದೇವೇಗೌಡ್ರು ಕೇಳಿಕೊಂಡಿದ್ದಾರೆ.  ಚನ್ನಪಟ್ಟಣದಲ್ಲಿ ಒಟ್ಟಾಗಿ ಪ್ರಚಾರ ಮಾಡುತ್ತೇವೆ. ನೂರಕ್ಕೆ ನೂರು ನಿಖಿಲ್ ಗೆಲ್ಲುವ ವಿಶ್ವಾಸ ಇದೆ. ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದವೂ ಇದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇವರು ಏನೇ ಹೇಳಿದ್ರು ಚನ್ನಪಟ್ಟಣ ಜನ ಯಾರ ಪರ ಇದ್ದಾರೆ ಅನ್ನೋದು ರಿಸಲ್ಟ್ ದಿನವೇ ಗೊತ್ತಾಗುವುದು..

ಚನ್ನಪಟ್ಟಣ ಚಕ್ರವ್ಯೂಹದಲ್ಲಿ ಅಭಿಮನ್ಯು

ಸಿ.ಪಿ. ಯೋಗೇಶ್ವರ್‌   ಗೆಲುವಿಗೆ ಇಡೀ ಕೈ ಸರ್ಕಾರ ನಿಲ್ಲಲಿದೆ. ಆದರೆ ನಿಖಿಲ್ ಪರವಾಗಿ ಅಲ್ಲಿ ಯಾವುದೇ ಕಮಾಲ್ ನಡೆಯುವ ಸಾಧ್ಯತೆಗಳು ಕಡಿಮೆ. ಒಕ್ಕಲಿಗರ ಎಲ್ಲಾ ಮತ ಬಿದ್ರೆ ನಿಖಿಲ್‌  ಗೆಲುವು ಕಾಣಬಹುದು. ಒಕ್ಕಲಿಗ ಮತಗಳು ಹಂಚಿಕೆಯಾದರೆ ಕಷ್ಟ ಎನ್ನುವ ಅಭಿಪ್ರಾಯ ಕ್ಷೇತ್ರಾದ್ಯಂತ ಇದೆ.ಹೇಳಿ ಕೇಳಿ ಯೋಗೇಶ್ವರ್‌ ಪ್ರಬಲ ಅಭ್ಯರ್ಥಿ. ಅವರದ್ದೇ ಆದ ಸ್ವಂತ ವರ್ಚಸ್ಸು ಹೆಚ್ಚಿದೆ ಇದೆ. ಜೊತೆಗೆ ಈಗ ಅವರು ಆಡಳಿತಾರೂಢ ಕಾಂಗ್ರೆಸ್‌ ಅಭ್ಯರ್ಥಿ. ಅಧಿಕಾರದಲ್ಲಿರುವ ಪಕ್ಷಕ್ಕೆ ಉಪ ಚುನಾವಣೆ ನಡೆಸುವುದು ಕಷ್ಟವೇನಲ್ಲ. ಬಿಜೆಪಿ ಜತೆ ಮೈತ್ರಿ ಇರುವುದರಿಂದ ಜೆಡಿಎಸ್‌ ಗೆ ಮುಸ್ಲಿಂ ಮತ ಬೀಳುವುದು ಕಷ್ಟ. ಬಿಜೆಪಿಯ ಒಂದು ಬಣ ಸದಾ ಕುಮಾರಸ್ವಾಮಿ ಅವರನ್ನು ವಿರೋಧಿಸುತ್ತಾ ಬಂದಿದೆ. ಸಹೋದರ ಡಿ.ಕೆ. ಸುರೇಶ್‌ ಸೋಲಿಗೆ ಸೇಡು ತೀರಿಸಿಕೊಳ್ಳದೆ ಶಿವಕುಮಾರ್ ಬಿಡಲಾರರು. ಅಲ್ಲದೇ ಸಿಪಿ ಯೋಗೇಶ್ವರ್ ಅವರಿಗೆ ಹಳೆ ಮೈಸೂರು ಭಾಗದಲ್ಲಿ ಒಳ್ಳೆಯ ಹಿಡಿತ ಇರುವುದರಿಂದ ಬಿಜೆಪಿಗೆ ಆ ಭಾಗದಲ್ಲಿ ಒಕ್ಕಲಿಗರ ದೊಡ್ಡ ಲೀಡರ್ ಎನಿಸಿಕೊಂಡಿದ್ದಾರೆ. ಚನ್ನಪಟ್ಟಣ ಭಾಗದಲ್ಲಿ ಅವರಿಗೆ ವ್ಯಕ್ತಿಗತ ಮತಗಳಿವೆ. ಕಾಂಗ್ರೆಸ್ ಸೇರಿದ್ರಿಂದ ದಲಿತ ಹಾಗೂ ಮುಸ್ಮಿಂ ಮತಗಳು  ಸಿ ಪಿ ಯೋಗೇಶ್ವರ್‌ ಅವರು ಗಳಿಸಲಿದ್ದಾರೆ. ಇನ್ನೂ ಡಿ ಕೆ ಬ್ರದರ್ಸ್‌ ಅವರ ವರ್ಚಸ್ಸು ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಕ ಮತಗಳನ್ನೇ ಸೈನಿಕ ಪಡೆಯುತ್ತಾರೆ. ನಿಖಿಲ್ ಗೆಲುವಿಗೆ ಹೆಜ್ಜೆ ಹೆಜ್ಜೆಗೂ ತೊಂದರೆಗಳು ಕಾಣಿಸಿಕೊಳ್ಳುತ್ತವೆಯೇ ಹೊರತು ಪೂರಕವಾದ ಅಂಶಗಳು ಇಲ್ಲವೇ ಇಲ್ಲ ಎನ್ನಬಹುದು. ಈ ಚುನಾವಣೆಯಲ್ಲಿ   ಯಾರೇ ಸೋತರೂ ಅದು ಹ್ಯಾಟ್ರಿಕ್ ಸೋಲಾಗುತ್ತದೆ. ಯೋಗೇಶ್ವರ್ 2018 ಮತ್ತು 2023 ರಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು. ನಿಖಿಲ್ 2019 ರಲ್ಲಿ ಮಂಡ್ಯ ಲೋಕಸಭೆ ಮತ್ತು 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ ಚನ್ನಪಟ್ಟಣ ಕ್ಷೇತ್ರ ದೊಡ್ಡ ಸವಲಾಗಿದೆ.

ಹಣದ ಹೊಳೆಯೇ ಹರಿಯುತ್ತಾ ಚನ್ನಪಟ್ಟಣದಲ್ಲಿ

ನಿಖಿಲ್ ಕುಮಾರ್‌ಸ್ವಾಮಿ ಮತ್ತು ಯೋಗೇಶ್ವರ್‌ ನಡುವೆ ನಡೆಯುತ್ತಿರೋ ಫೈಟ್ ಪ್ರತಿಷ್ಠೆಯಾಗಿದೆ. ಹೀಗಾಗಿ ಯೋಗೇಶ್ವರ್ ಪರ ಡಿಕೆ ಬ್ರದರ್ಸ್ ಹಣದ ಹೊಳೆ ಹರಿಸಿದ್ರೆ, ಮೊಮ್ಮಗನನ್ನ ಹೇಗಾದ್ರೂ ಗೆಲ್ಲಿಸಬೇಕು, ನಿಖಿಲ್ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಷ್ಟು ಬೇಕಾದ್ರೂ ಕರ್ಚು ಮಾಡೋಕೆ ದೇವೇಗೌಡ್ರು, ಕುಮಾರಸ್ವಾಮಿ ರೆಡಿ ಇರ್ತಾರೆ.. ಹೀಗಾಗಿ  ಚನ್ನಪಟ್ಟಣದ ಗೆಲುವು ನಿಖಿಲ್‌ಗೆ ಮಾಡು ಇಲ್ಲವೇ ಮಾಡಿ ಹೋರಾಟವಾಗಿದೆ. ಇದೀಗ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ನಿಖಿಲ್‌ಗೆ ಟಿಕೆಟ್ ನೀಡಲಾಗಿದೆ. ನಿಖಿಲ್ ಗೆಲುವಿಗಾಗಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಶ್ರಮಿಸುವಂತೆ ಎಚ್‌ಡಿ ದೇವೇಗೌಡರು ಸೂಚನೆ ನೀಡಿದ್ದಾರೆ. ಅಲ್ಲದೆ, ತಾನೇ ಸ್ವತಃ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಆದರೂ ಕ್ಷೇತ್ರ ಅಂದುಕೊಂಡಷ್ಟು ಸುಲಭವಿಲ್ಲ. ಎಚ್‌ಡಿಕೆ ವಿರೋಧಿಗಳೆಲ್ಲರೂ ಒಂದಾಗಿದ್ದಾರೆ. ಚನ್ನಪಟ್ಟಣದ ಅಭ್ಯರ್ಥಿಗಳನ್ನ ಆಡಿಸೋನು ಮತದಾರನಾಗಿದ್ದು, ಎಲ್ಲಾ ಅವನ ಕೈಯಲ್ಲಿದೆ.

Shwetha M

Leave a Reply

Your email address will not be published. Required fields are marked *