ಜನಸಂಖ್ಯೆ ಕಂಟ್ರೋಲ್‌.. ದಕ್ಷಿಣಕ್ಕೆ ಎಫೆಕ್ಟ್  – ಮಕ್ಕಳನ್ನು ಹೆಚ್ಚು ಮಾಡಿ ಸಿಎಂ ಕರೆ
ಜಾಣರಾದ್ರಾ ಉ.ಭಾರತದ ಜನ?

ಜನಸಂಖ್ಯೆ ಕಂಟ್ರೋಲ್‌.. ದಕ್ಷಿಣಕ್ಕೆ ಎಫೆಕ್ಟ್  – ಮಕ್ಕಳನ್ನು ಹೆಚ್ಚು ಮಾಡಿ ಸಿಎಂ ಕರೆಜಾಣರಾದ್ರಾ ಉ.ಭಾರತದ ಜನ?

 

 

 

ಭಾರತದಲ್ಲಿ ಉತ್ತರ ಹಾಗೂ ದಕ್ಷಿಣದ ನಡುವೆ ತಾರತಮ್ಯ ಇದೆ ಎಂಬ ಮಾತುಗಳು ಸಹಜವಾಗಿ ಕೇಳಿಬರುತ್ತಿವೆ. ಜನಸಂಖ್ಯೆಯ ಕಾರಣಕ್ಕಾಗಿ ಕೇಂದ್ರದ ಅನುದಾನ, ಸೌಲಭ್ಯಗಳನ್ನು ದಕ್ಷಿಣ ಭಾರತ ಕಳೆದುಕೊಳ್ಳುತ್ತಾ ಬರ್ತಿದೆ. ಕುಟುಂಬ ಕಲ್ಯಾಣ ಯೋಜನೆಯನ್ನು ಸರಿಯಾಗಿ ಜಾರಿಗೆ ತಂದು  ಜನಸಂಖ್ಯೆಯನ್ನು ನಿಯಂತ್ರಿಸಿದ್ದೇ ದಕ್ಷಿಣ ಭಾರತಕ್ಕೆ ಎಪೆಕ್ಟ್ ಆದಂತೆ ಕಾಣ್ತಿದೆ. ಜನಸಂಖ್ಯೆಯ ಆಧಾರದಲ್ಲೇ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಕೇಂದ್ರ ಮುಂದಾಗಿದೆ ಎನ್ನಲಾಗುತ್ತಿದೆ.  ಒಂದು ವೇಳೆ ಹೀಗಾದ್ರೆ ದಕ್ಷಿಣ ಭಾರತಕ್ಕೆ ಮತ್ತೆ ಅನ್ಯಾಯವಾಗಲಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಕೂಗು ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ಇಬ್ಬರು ಸಿಎಂಗಳು ಜನಸಂಖ್ಯೆ ಹೆಚ್ಚಳಕ್ಕೆ ಕರೆ ನೀಡಿರುವುದು ಈಗ ಭಾರೀ ಕುತೂಹಲ ಕೆರಳಿಸಿದೆ. ಹಾಗಿದ್ರೆ ಏನಿದು ಜನಸಂಖ್ಯೆ ವಿವಾದ? ದಕ್ಷಿಣದಲ್ಲಿ ಈಗ ಜನಸಂಖ್ಯಾ ಹೆಚ್ಚಿಸುವ ಕೂಗು ಏಕೆ? ದಕ್ಷಿಣಕ್ಕೆ ಏಕೆ ಆತಂಕ ಕಾಡುತ್ತಿದೆ? ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:

ಹೌದು, ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಇಳಿಕೆ ಆಗುತ್ತಿದೆ. ಹೀಗಾಗಿ ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳನ್ನು ಹೇರಬೇಕು ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದರು. ಇದರ ಬೆನ್ನಲ್ಲೇ  ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್‌ ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ತಮಿಳರು 16 ಮಕ್ಕಳನ್ನು ಹೇರಬೇಕು ಎಂಬ ನಾಣ್ಣುಡಿಯನ್ನು ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.

ದಕ್ಷಿಣಕ್ಕೆ ತೊಂದ್ರೆ ಯಾಕೆ?

ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿರುವ ಕಾರಣ ಜನ ಸಂಖ್ಯೆ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗಿದೆ. ಆದರೆ ಉತ್ತರ ಭಾರತದ ರಾಜ್ಯಗಳು ದಕ್ಷಿಣಕ್ಕಿಂತ ದೊಡ್ಡವಾಗಿವೆ ಹಾಗೂ ದಕ್ಷಿಣದಷ್ಟು ಜನಸಂಖ್ಯೆ ನಿಯಂತ್ರಣ ಮಾಡಿಲ್ಲ ಎಂಬ ಅಭಿಪ್ರಾಯವಿದೆ. ಹೀಗಾಗಿ ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡಣೆ ಆದರೆ ಕಮ್ಮಿ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಇಳಿಯಲಿದೆ ಹಾಗೂ ಉತ್ತರ ಭಾರತದ ಕ್ಷೇತ್ರಗಳ ಸಂಖ್ಯೆ ಹೆಚ್ಚಲಿದೆ. ಇದರಿಂದ ಲೋಕಸಭೆಯಲ್ಲಿ ದಕ್ಷಿಣದ ಪ್ರಾತಿನಿಧ್ಯ ಕಡಿಮೆ ಆಗಲಿದೆ ಎಂಬುದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಆತಂಕ. ದಕ್ಷಿಣ ಭಾರತದಲ್ಲಿ ಟಿಎಫ್‌ಆ‌ರ್ ಪ್ರಮಾಣ ಭಾರೀ ಇಳಿಕೆ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನ್ವಯ ಕಳೆದ ಕೆಲ ದಶಕಗಳಿಂದ ದಕ್ಷಿಣ ಭಾರತದಲ್ಲಿ ಟಿಎಫ್‌ ಆರ್ ಪ್ರಮಾಣ ಕಡಿಮೆ ಆಗಿದೆ. ಅಂದರೆ ದಕ್ಷಿಣ ಭಾರತೀಯ ಕುಟುಂಬಗಳಲ್ಲಿ ಮಕ್ಕಳ ಜನನ ಪ್ರಮಾಣ ಇಳಿಕೆಯಾಗಿದೆ. ರಾಷ್ಟ್ರೀಯ ಟಿಎಫ್‌ಆರ್ ಸರಾಸರಿ ಶೇ.2.1 ಇದ್ದರೆ, ದಕ್ಷಿಣ ಭಾರತದಲ್ಲಿ ಅದು ಸರಾಸರಿ 1.6ಕ್ಕಿಂತ ಕಡಿಮೆ ಇದೆ. 2026ರಲ್ಲಿ ಕ್ಷೇತ್ರ ಮರುವಿಂಗಡನೆ ಆಗಬಹುದು ಎಂಬ ಲೆಕ್ಕಾಚಾರ ಮತ್ತು ಆಗಿನ ಅಂದಾಜು ಜನಸಂಖ್ಯೆ ಆಧರಿಸಿ ಹೇಳುವುದಾರೆ, ಕ್ಷೇತ್ರ ಮರುವಿಂಗಡನೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡ ದಕ್ಷಿಣದ ರಾಜ್ಯಗಳಿಗೆ ಭಾರೀ ಹೊಡೆತ ಬಿದ್ರೆ, ಜನಸಂಖ್ಯೆ ನಿಯಂತ್ರಿಸದ ಹಿಂದಿ ಭಾಷಿಕ ರಾಜ್ಯಗಳು ಭಾರೀ ಲಾಭ ಪಡೆದುಕೊಳ್ಳಲಿದೆ. ಉದಾಹರಣೆಗೆ ಹಾಲಿ ಲೋಕಸಭೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳ ಪಾಲು ಶೇ.42ರಷ್ಟು ಇದ್ದು, ಅದು ವಿಸ್ತರಿತ ಲೋಕಸಭೆಯಲ್ಲಿ ಶೇ.48ಕ್ಕೆ ಏರಲಿದೆ. ಇನ್ನು ದಕ್ಷಿಣ ಭಾರತದ ರಾಜ್ಯಗಳ ಪಾಲು ಶೇ.24ರಿಂದ ಶೇ.20ಕ್ಕೆ ಕುಸಿಯಲಿದೆ. ಉಳಿದ ರಾಜ್ಯಗಳ ಪಾಲು ಕೂಡಾ ಶೇ.34ರಿಂದ ಶೇ.32ಕ್ಕೆ ಇಳಿಯಲಿದೆ.

ಟಿಎಫ್‌ಆರ್ ಎಂದರೇನು? 

ಟಿಎಫ್‌ಆರ್ ಎಂದರೆ  ಸಂತಾನೋತ್ಪತ್ತಿ ಪ್ರಮಾಣ. ಪ್ರತಿ 100 ಕುಟುಂಬಗಳಲ್ಲಿ ಎಷ್ಟು ಮಕ್ಕಳು ಜನಿಸುತ್ತಾರೆ ಎಂಬುದರ ಆಧಾರದಲ್ಲಿ ಇದನ್ನು ಅಂದಾಜು ಮಾಡಲಾಗುತ್ತದೆ. ದೇಶದ ಸರಾಸರಿ TFR ಸರಾಸರಿ 2.1 ಇದೆ ಎಂದರೆ ಪ್ರತಿ 100 ಕುಟುಂಬದಲ್ಲಿ 201 ಮಕ್ಕಳು ಜನಿಸುತ್ತಿದಾರೆ. ಇನ್ನು ದಕ್ಷಿಣ ಭಾರತದಲ್ಲಿ TFR ಸರಾಸರಿ 1.6 ಇದೆ ಎಂದರೆ ಪ್ರತಿ 100 ಕುಟುಂಬಗಳಲ್ಲಿ 160 ಮಕ್ಕಳು ಮಾತ್ರ ಜನಿಸುತ್ತಿದ್ದಾರೆ ಎಂದರ್ಥ. ಇದು ಇನ್ನಷ್ಟು ಕುಸಿದರೆ 2047ಕ್ಕೆ ದಕ್ಷಿಣದಲ್ಲಿ ಯುವಕರಿಗಿಂತ ವೃದ್ದರೇ ಹೆಚ್ಚಾಗುವ ಆತಂಕ ಇದೆ. ಹೀಗಾಗಿ ದಕ್ಷಿಣದ ಸಿಎಂಗಳು ಬಗ್ಗೆ ಯೋಚನೆ ಮಾಡುತ್ತಿದ್ದು ಹೆಚ್ಚಿನ ಮಕ್ಕಳನ್ನ ಹೊಂದುವಂತೆ ಹೇಳುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *