ಹನುಮಂತ ಮುಗ್ದ ಅಲ್ಲ ಡ್ರಾಮ? – ದೊಡ್ಮನೆಯಲ್ಲಿ ಸಿಂಪತಿ ಪ್ಲೇಕಾರ್ಡ್
ಹಳ್ಳಿಹೈದನ ಮೇಲೆ ಅಪವಾದ ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 11 ಸದಾ ಒಂದಲ್ಲ ಒಂದು ವಿಚಾರವಾಗಿ ಚರ್ಚೆಯಲ್ಲಿದೆ.. ದೊಡ್ಮನೆ ಆಟದ ವೈಖರಿಯೂ ಬದಲಾಗಿ ಹೋಗಿದೆ.. ಅವಾಚ್ಯ ಶಬ್ದಗಳಿಂದ ಬಯ್ಯೋದು.. ನಿಂದಿಸೋದೇ ಮನರಂಜನೆ.. ಹೀಗೆ ಆಡಿದ್ರೆ ಮಾತ್ರ ದೊಡ್ಮನೆಯಲ್ಲಿ ಅಸ್ತಿತ್ವ ಅನ್ನೋ ಮೈಂಡ್ಸೆಟ್ನಲ್ಲಿ ಸ್ಪರ್ಧಿಗಳು ಬಂದಿರೋತರ ಕಾಣ್ತಾ ಇದೆ. ಇವೆಲ್ಲದ್ರ ಮಧ್ಯೆ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಇದೀಗ ದೊಡ್ಮನೆಯಲ್ಲಿ ಹನುಮಂತನ ವರ್ತನೆ ಟೀಕೆಗೆ ಗುರಿಯಾಗಿದೆ.. ಮುಗ್ದನ ಹಾಗೆ ಡ್ರಾಮಾ ಮಾಡಿ ಸಿಂಪತಿ ಗಿಟ್ಟುಸಿಕೊಳ್ತಿದ್ದಾರಾ ಅನ್ನೊ ಚರ್ಚೆ ನಡಿತಾ ಇದೆ.
ಇದನ್ನೂ ಓದಿ: ದರುಶನ ಕರುಣಿಸಿದ ಆಧಿದೇವತೆ ಹಾಸನಾಂಬೆ – ಈ ಬಾರಿ 24 ಗಂಟೆಯೂ ದರ್ಶನಕ್ಕೆ ಅವಕಾಶ
ಬಿಗ್ ಬಾಸ್ ಕನ್ನಡ ಸೀಸನ್ 11 ಸದ್ದು ಮಾಡ್ತಿರೋ ಬರೀ ಕೂಗಾಟ, ರಂಪಾಟದಿಂದಲೇ ಅಂತ ಹೇಳಿದ್ರೆ ತಪ್ಪಾಗಲ್ಲ.. ಲಾಯರ್ ಜಗದೀಶ್ ಹಾಗೂ ರಂಜಿತ್ ದೊಡ್ಮನೆಯಿಂದ ಔಟ್ ಆಗ್ತಿದ್ದಂತೆ ಹನುಮಂತ ಲಮಾಣಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ರು.. ಬಂದ ದಿನವೇ ಕ್ಯಾಪ್ಟನ್ ಆಗಿ ಅಧಿಕಾರವನ್ನೂ ಕೂಡ ಪಡ್ಕೊಂಡಿದ್ರು.. ಆದ್ರೆ ಒಂದೇ ದಿನಕ್ಕೆ ಉಳಿದ ಸ್ಪರ್ಧಿಗಳ ಮಾತಿನಿಂದ ಹನುಮಂತ ಕಂಗೆಟ್ಟು ಹೋಗಿದ್ರು.. ತನಗೆ ಈ ಜವಬ್ದಾರಿ ಬೇಡ್ವೇ ಬೇಡ.. ಅಂತ ಹೇಳಿದ್ರು..
ಇವೆಲ್ಲದರ ನಡುವೆ ಹನುಮಂತ ಮಾಡುತ್ತಿರುವ ಕೆಲವೊಂದು ವಿಷ್ಯಗಳು ವೀಕ್ಷಕರಲ್ಲಿ ಆಕ್ರೋಶದ ಜೊತೆಗೆ, ಸಂಶಯವನ್ನೂ ಮೂಡಿಸಿದೆ. ಕಳೆದ 5- 6 ವರ್ಷಗಳಿಂದ ನಿರಂತರವಾಗಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಹನುಮಂತ ನಿಜವಾಗ್ಲೂ ಮುಗ್ದನೋ ಅಥವಾ ಜಾಣ ಪೆದ್ದ ನಂತೆ ನಟಿಸುತ್ತಿದ್ದಾನೋ ಎನ್ನುವ ಸಂಶಯ ಜನರಲ್ಲಿ ಕಾಡುತ್ತಿದೆ. ಇದನ್ನೇ ಈಗ ಟ್ರೋಲ್ ಪೇಜ್ ಗಳಲ್ಲಿ ಹೈಲೈಟ್ ಮಾಡಲಾಗ್ತಿದೆ..
ಹೌದು, ಕ್ಯಾಪ್ಟನ್ ರೂಮಿನಲ್ಲಿದ್ದ ಹನುಮಂತನಿಗೆ ಧನರಾಜ್ ಬಂದು ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಕೆ ಮಾಡೋದು ಗೊತ್ತಾ ಅಂದಿದ್ದಕ್ಕೆ, ಹನುಮಂತ, ಅದ್ರ ಮೇಲೆ ಕಾಲಿಟ್ಟು ಕೂತ್ಕೊಳ್ತೀನಿ ಅಂದಿದ್ದಾನೆ, ಅಷ್ಟೇ ಅಲ್ಲದೇ ನನಗೇನು ಅರ್ಥ ಆಗಲ್ಲ ಅಂತಾನೂ ಹೇಳಿದ್ದಾರೆ. ಇನ್ನೊಂದು ಕಡೆ ಸ್ವಿಮ್ಮಿಂಗ್ ಪೂಲ್ ಹತ್ರ ಬಂದು ಅಲ್ಲೂ ಮುಗ್ಧತನ ತೊರಿಸಿದ್ದಾರೆ.
ಬರ್ಮುಡಾ ಶಾರ್ಟ್ಸ್ ಧರಿಸಿ ಪೂಲ್ ಹತ್ರ ಬರುವ ಹನುಮಂತ, ಮೋಕ್ಷಿತಾ ಮತ್ತು ಗೌತಮಿಗೆ ನೀವಿಬ್ರು ಒಳಗೆ ಹೋಗಿ ನಾನು ಇಲ್ಲಿ ಜಳಕ ಮಾಡ್ಬೇಕು ಅಂದಿದ್ದಾರೆ. ಅದ್ಕೆ ಮೋಕ್ಷಿತಾ, ನೀವು ಮಾಡಿ ನಾವು ನೋಡಲ್ಲ, ನೀರಿಗೆ ಇಳಿದ್ರೆ ಏನೂ ಕಾಣ್ಸಲ್ಲ ಪರ್ವಾಗಿಲ್ಲ ಎಂದಿದ್ದಾರೆ. ಅದಕ್ಕೆ ಹನುಮಂತ ಸೋಪು, ಶಾಂಪೂ ಹಾಕಿ ಸ್ನಾನ ಮಾಡ್ಬೇಕು ಅಂತಾರೆ. ಇದನ್ನ ಕೇಳಿದ ಮಂಜು ಶಾಕ್ ಆಗಿ, ಇಲ್ಲಿ ಸೋಪು ಶಾಂಪೂ ಹಾಕಿ ಸ್ನಾನ ಮಾಡೋ ಹಾಗಿಲ್ಲ, ಇಲ್ಲಿ ನೀರಲ್ಲಿ ಈಜಿ, ಸ್ವಲ್ಪ ಹೊತ್ತು ಆಡಿ, ಆಮೇಲೆ ಹಾಗೆ ಬಾತ್ ರೂಮ್ ಗೆ ಹೋಗಿ ಸ್ನಾನ ಮಾಡ್ಕೊಂಡು ಬನ್ನಿ ಎಂದಿದ್ರು..
ಮತ್ತೊಂದ್ಕಡೆ ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳನ್ನ ನಾಮಿನೇಟ್ ಮಾಡಬೇಕು ಅಂತಾ ಹೇಳಿದ್ದಾರೆ.. ಆಗ ಹನುಮಂತು ಎಲ್ಲಾ ಚೆನ್ನಾಗೇ ಆಟ ಆಡ್ತಿದ್ದಾರೆ.. ಯಾರನ್ನ ನಾಮಿನೇಟ್ ಮಾಡೋದು ಬೇಡ ಅಂತಾ ಹೇಳಿದ್ದಾರೆ.. ಆಗ ಬಿಗ್ ಬಾಸ್ ನೀವು ಇಬ್ಬರನ್ನ ಆಯ್ಕೆ ಮಾಡಲೇಬೇಕು. ಇದು ಈ ಮನೆಯ ನಿಯಮ ಅಂತಾ ಹೇಳಿದ್ದಾರೆ.. ಆಗ ಹಂಸರನ್ನ ನಾಮಿನೇಟ್ ಮಾಡ್ತಾರೆ.. ಅದಾದ್ಮೇಲೆ ತನ್ನನ್ನೇ ನಾಮೀನೇಟ್ ಮಾಡ್ತಾರೆ ಹನುಮಂತು.. ಇದೀಗ ಹನುಂತ ಈ ರೀತಿ ಆಡ್ತಿರೋದನ್ನ ನೋಡಿ ಜನ ಆಕ್ರೋಶಗೊಂಡಿದ್ದಾರೆ.
ಹನುಮಂತ ಕಳೆದ ಐದು ವರ್ಷಗಳಿಂದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇದೆಲ್ಲಾ ಗೊತ್ತಿಲ್ಲ ಅಂದ್ರೆ, ಅದನ್ನ ನಂಬಬೇಕಾ? ಹನುಮಂತ ಮುಗ್ಧ ಅಲ್ಲ, ಮುಗ್ಧನಂತೆ ವರ್ತಿಸುತ್ತಿದ್ದಾನೆ ಎಂದಿದ್ದಾರೆ. ಹನುಮಂತು ನಿಜವಾಗ್ಲೂ ಮುಗ್ಧನಾ ಎಷ್ಟೊಂದು ರಿಯಾಲಿಟಿ ಶೋ ಅಟೆಂಡ್ ಮಾಡಿದ್ದಾರೆ ಕಾಮನ್ ಸೆನ್ಸ್ ಇರಲ್ವಾ ಅಂತಾನೂ ಕೇಳಿದ್ದಾರೆ.
ಇನ್ನು ಹೆಚ್ಚಿನ ಜನರು ಹನುಮಂತ ಮುಗ್ಧ ಅಂತ ಹೇಳಿದ್ರೆ, ಮತ್ತೆ ಕೆಲವರು ಇಲ್ಲ ಹನುಮಂತ ಸ್ಮಾರ್ಟ್ ಆಗಿ ಆಡ್ತಾ ಇದ್ದಾರೆ ಎಂದಿದ್ದಾರೆ. ಮತ್ತೆ ಕೆಲವರು, ಹನುಮಂತನಿಗೆ ಬಿಗ್ ಬಾಸ್ ಸಹವಾಸ ಬೇಕಿತ್ತಾ? ಅಷ್ಟೊಂದು ಮುಗ್ಧರಿಗೆ ಇದು ಜಾಗ ಅಲ್ಲ ಅಂದಿದ್ದಾರೆ. ಒಟ್ಟಲ್ಲಿ ಹನುಮಂತನ ನಿಜವಾದ ಗುಣ ಹೇಗಿದೆ ನೋಡೋದಕ್ಕೆ ಇನ್ನೊಂದಿಷ್ಟು ದಿನ ಕಾಯಬೇಕು.