ಕಿರಾಣಿ ಅಂಗಡಿಯಲ್ಲೇ ವೃದ್ಧರ ಕಲ್ಯಾಣ – 70ರ ಜೋಡಿಯ ಸ್ವಾರಸ್ಯಕರ ಮದುವೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ರಮಣೀಯ ಸ್ಥಳಗಳಲ್ಲಿ ಮದುವೆಯಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ದುಂದುವೆಚ್ಚ ಮಾಡಿ ಸುಂದರವಾದ ಸ್ಥಳಗಳನ್ನು ಆಯ್ಕೆ ಮಾಡಿ ಮದುವೆ ಸಿದ್ಧತೆ ಮಾಡುತ್ತಾರೆ. ಆದರೆ ಇಲ್ಲೊಂದು ಹಿರಿಯ ಜೋಡಿ ತಾವು ಮೊದಲ ಬಾರಿಗೆ ಭೇಟಿಯಾದ ಕಿರಾಣಿ ಅಂಗಡಿಯಲ್ಲಿಯೇ ವಿವಾಹವಾಗಿದ್ದಾರೆ.
ಅಮೆರಿಕಾ ಅರಿಜೋನಾ ಮೂಲದ 72 ವರ್ಷದ ವೃದ್ಧೆ ಬ್ರೆಂಡಾ ವಿಲಿಯಮ್ಸ್, 78 ವರ್ಷದ ವೃದ್ಧ ಡೆನ್ನಿಸ್ ಡೆಲ್ಗಾಡೋ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಇವರಿಬ್ಬರ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: ಹುಟ್ಟುವಾಗಲೇ ಹೆಣ್ಣು ಮಗುವಿಗೆ ಇದ್ದಿತ್ತು 2 ಇಂಚಿನ ಉದ್ದದ ಬಾಲ..! – ಅಚ್ಚರಿಯಾದರೂ ಇದು ಸತ್ಯ..!
ಆ. 3, 2021ರಂದು ಕಾಸಾ ಗ್ರಾಂಡೆ ಪ್ರದೇಶದಲ್ಲಿನ ಕಿರಾಣಿ ಅಂಗಡಿಯೊಂದರಲ್ಲಿ ಬ್ರೆಂಡಾ ಹಾಗೂ ಡೆನ್ನಿಸ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ಇವರಿಬ್ಬರ ನಡುವೆ ಮಾತು ಪ್ರಾರಂಭವಾಗಿತ್ತು. ಬಳಿಕ ತಮ್ಮ ನಂಬರ್ ಬದಲಾಯಿಸಿಕೊಂಡಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಡೇಟಿಂಗ್ ಮಾಡಿಕೊಂಡಿದ್ದರು.
ಬ್ರೆಂಡಾ ಹಾಗೂ ಡೆನ್ನಿಸ್ ಇಬ್ಬರ ಸಂಗಾತಿಗಳು ಈ ಹಿಂದೆಯೇ ನಿಧನರಾಗಿದ್ದರು. ಹಲವು ವರ್ಷ ಇಬ್ಬರೂ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರು. ಹಲವು ವರ್ಷಗಳ ಬಳಿಕ ಬ್ರೆಂಡಾ ಹಾಗೂ ಡೆನ್ನಿಸ್ ನಡುವೆ ಪ್ರೇಮಾಂಕುರವಾಗಿದೆ. 2022 ರ ಎಪ್ರಿಲ್ ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಳಿಕ ತಾವು ಮೊದಲ ಬಾರಿ ಭೇಟಿಯಾದ ಗ್ರೋಸರಿ ಸ್ಟೋರ್ ನಲ್ಲಿಯೇ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ನಂತರ ಅಂಗಡಿ ಮಾಲೀಕ ಬಳಿ ಹೋಗಿ ಪ್ರೀತಿ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ತಾವು ಅಂಗಡಿಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇವೆ ಎಂದಿದ್ದಾರೆ. ಇದಕ್ಕೆ ಅಂಗಡಿ ಮಾಲೀಕ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಬ್ರೆಂಡಾ ಹಾಗೂ ಡೆನ್ನಿಸ್ ಮದುವೆಯಾಗಿದ್ದಾರೆ.