IPL ಮೆಗಾ ಹರಾಜಿಗೆ ಡೇಟ್ ಫಿಕ್ಸ್ – ಆಕ್ಷನ್ ರೂಲ್ಸ್ ಬದಲಿಸಿದ್ದೇಕೆ BCCI?
ಕೊಹ್ಲಿ, ರೋಹಿತ್ ಗೆ ಎಷ್ಟು ಕೋಟಿ?
ಕ್ರಿಕೆಟ್ ವಲಯದಲ್ಲಿ ಸದ್ಯ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿರೋ ವಿಚಾರ ಅಂದ್ರೆ ಅದು ಐಪಿಎಲ್ ಹರಾಜು ಪ್ರಕ್ರಿಯೆ. ಇದೇ ವರ್ಷಾಂತ್ಯದಲ್ಲಿ ನಡೆಯಲಿರೋ ಆಕ್ಷನ್ಗೆ ಈಗಾಗ್ಲೇ ಬಿಸಿಸಿಐ ರೂಲ್ಸ್ ರಿಲೀಸ್ ಮಾಡಿತ್ತು. ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಹಾಗೇ ಹರಾಜಿಗೆ ಬಿಡುವ ಆಟಗಾರರ ಬಗ್ಗೆ ಅನೌನ್ಸ್ ಮಾಡಲು ಅಕ್ಟೋಬರ್ ತಿಂಗಳ ಗಡುವನ್ನ ನೀಡಿದೆ. ಈಗ ಇರೋ ಲೇಟೆಸ್ಟ್ ಅಪ್ಡೇಟ್ ಅಂದ್ರೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಿಸಿಸಿಐ ಡೇಟ್ ಫಿಕ್ಸ್ ಮಾಡಿದೆ. ಅಲ್ದೇ ಸ್ಟಾರ್ ಆಟಗಾರರು ಹರಾಜಿಗೆ ಬರೋದು ಫಿಕ್ಸ್ ಆಗಿದ್ದು ಕೋಟಿಗಳ ಲೆಕ್ಕದಲ್ಲಿ ಬಿಡ್ ಮಾಡೋಕೆ ಫ್ರಾಂಚೈಸಿಗಳೂ ಕೂಡ ರೆಡಿ ಇವೆ. ಅಷ್ಟಕ್ಕೂ ಐಪಿಎಲ್ ಆಕ್ಷನ್ ಪ್ರಕ್ರಿಯೆ ಯಾವಾಗ? ಎಲ್ಲಿ ನಡೆಯುತ್ತೆ? ಯಾರೆಲ್ಲಾ ಹರಾಜಿಗೆ ಬರ್ತಾರೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೆ ದೊಡ್ಡ ಗಲಾಟೆ – ಟಾಸ್ಕ್ ವೇಳೆ ಬಡಿದಾಡಿಕೊಂಡ ಮಂಜು, ಶಿಶಿರ್!
ಐಪಿಎಲ್ 2025ರ ಆವೃತ್ತಿ ತೀವ್ರ ಕ್ಯೂರಿಯಾಸಿಟಿ ಹುಟ್ಟಿಸಿದೆ. ಶೀಘ್ರದಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾಗವಹಿಸುವ ತಂಡಗಳು ರಿಟೆನ್ಷನ್ ಲಿಸ್ಟ್ ಸಿದ್ದಪಡಿಸುತ್ತಿವೆ. ಈಗಾಗಲೇ ಬಿಸಿಸಿಐ ಹರಾಜು ನಡೆಸೋಕೆ ಸ್ಥಳವನ್ನು ಫೈನಲ್ ಮಾಡ್ತಿದೆ. ಸದ್ಯ ಸೌದಿ ಅರೇಬಿಯಾದಲ್ಲಿ ಬಹು ನಿರೀಕ್ಷಿತ ಐಪಿಎಲ್ 2025ರ ಮೆಗಾ ಹರಾಜು ನಡೆಸೋದು ಫಿಕ್ಸ್ ಆಗಿದೆ.
ನವೆಂಬರ್ 24 ಮತ್ತು 25ರಂದು ಮೆಗಾ ಆಕ್ಷನ್!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೆಗಾ ಹರಾಜಿಗಾಗಿ ಡೇಟ್ ಫಿಕ್ಸ್ ಆಗಿದೆ. ಅದ್ರಂತೆ ಮುಂದಿನ ತಿಂಗಳು ನವೆಂಬರ್ 24 ಮತ್ತು 25 ರಂದು ಮೆಗಾ ಆಕ್ಷನ್ ನಡೆಯಲಿದೆ. ಈ ಬಾರಿಯ ಮೆಗಾ ಹರಾಜು ಅರಬ್ಬರ ನಾಡಿನಲ್ಲಿ ಆಯೋಜನೆಯಾಗೋದು ಕನ್ಫರ್ಮ್ ಆಗಿದೆ. ಈಗಿರೋ ಮಾಹಿತಿ ಪ್ರಕಾರ ಐಪಿಎಲ್ ಮೆಗಾ ಹರಾಜು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ನಡೆಯಲಿದೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ 600 ಕ್ಕೂ ಅಧಿಕ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಆಟಗಾರರ ಹೆಸರು ನೋಂದಣಿ ನಡೆಯಲಿದ್ದು, ಇದಾದ ಬಳಿಕ ಆಟಗಾರರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಹೀಗೆ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಆಟಗಾರರ ಹೆಸರು ಮಾತ್ರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
ಪ್ರತೀ ಫ್ರಾಂಚೈಸಿಗೆ 120 ಕೋಟಿ ರೂಪಾಯಿ ನಿಗದಿ!
ಇನ್ನು ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗೆ ಉಳಿಸಿಕೊಂಡ ಆಟಗಾರರಿಗೆ ಒಟ್ಟು ಹರಾಜು ಮೊತ್ತದಿಂದ 79 ಕೋಟಿ ರೂಪಾಯಿ ನೀಡಬಹುದೆಂಬ ಷರತ್ತನ್ನು ನೀಡ್ಲಾಗಿದೆ. ಒಂದು ವೇಳೆ 5 ಆಟಗಾರರನ್ನು ರಿಟೈನ್ ಮಾಡಿಕೊಂಡರೆ 75 ಕೋಟಿ ರೂಪಾಯಿ ಖರ್ಚು ಮಾಡಬಹುದು. ಈ ಬಾರಿಯ ಮೆಗಾ ಹರಾಜಿಗಾಗಿ ಒಟ್ಟು 120 ಕೋಟಿ ರೂ. ನಿಗದಿ ಮಾಡಲಾಗಿದ್ದು, ಪ್ರತಿ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತ ಮಾಡಲಾಗುತ್ತದೆ.
ಆಟಗಾರರ ಸಂಭಾವನೆ ನಿಗದಿ ಅಧಿಕಾರ ಫ್ರಾಂಚೈಸಿಗಳಿಗೆ!
ಕಹಾನಿ ಮೇ ಟ್ವಿಸ್ಟ್ ಅಂದ್ರೆ ಐಪಿಎಲ್ ಮೆಗಾ ಹರಾಜಿನ ನಿಯಮದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈ ಬದಲಾವಣೆಯಿಂದಾಗಿ ಮೆಗಾ ಆಕ್ಷನ್ಗೂ ಮುನ್ನ ಸ್ಟಾರ್ ಆಟಗಾರರು ಕೋಟ್ಯಾಧಿಪತಿಗಳಾಗುವುದು ಪಕ್ಕಾ. ಆಟಗಾರರ ಸಂಭಾವನೆ ಮೊತ್ತವನ್ನು ನಿಗದಿ ಮಾಡುವ ಅಧಿಕಾರ ಫ್ರಾಂಚೈಸಿಗಳಿಗೆ ನೀಡಲಾಗಿದೆ. ಹೀಗಾಗಿ ಆಟಗಾರರು ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯೋದು ಪಕ್ಕಾ ಆಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹೀಗೆ ಸ್ಟಾರ್ ಪ್ಲೇಯರ್ಸ್ ಗೆ ಆಯಾ ಫ್ರಾಂಚೈಸಿಗಳು ಎಷ್ಟು ಹಣವನ್ನಾದರೂ ನೀಡಿ ಉಳಿಸಿಕೊಳ್ಳಬಹುದು.
ಒಟ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಅಕ್ಟೋಬರ್ 31ರಂದು ಸಂಜೆ 5 ಗಂಟೆಯ ಒಳಗೆ ಸಲ್ಲಿಸಬೇಕಾಗುತ್ತದೆ. ಕಳೆದ ತಿಂಗಳು, ಐಪಿಎಲ್ ಆಡಳಿತ ಮಂಡಳಿಯು ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳನ್ನು ಬಹಿರಂಗಪಡಿಸಿತು. ಫ್ರಾಂಚೈಸಿಗಳು ತಮ್ಮ ತಂಡದಿಂದ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ ಬಳಿಕ ಹರಾಜು ಪರ್ಸ್ ಅನ್ನು ರೂ 120 ಕೋಟಿಗೆ ಹೆಚ್ಚಿಸಲಾಗಿದೆ. ಆದ್ರೆ ಅಂತಿಮವಾಗಿ ಹರಾಜಿಗೆ ಬರೋ ಆಟಗಾರರು ಯಾರು ಹಾಗೇ ಯಾವ ತಂಡಕ್ಕೆ ಎಷ್ಟು ಹಣಕ್ಕೆ ಸೇರ್ಪಡೆಯಾಗ್ತಾರೋ ಅನ್ನೋದನ್ನ ಕಾದು ನೋಡ್ಬೇಕು.