ಜಗದೀಶ್, ರಂಜಿತ್ ಮತ್ತೆ ದೊಡ್ಮನೆಗೆ ಎಂಟ್ರಿ? – ಬಿಗ್ ಬಾಸ್ ನಿರ್ಧಾರದ ಬಗ್ಗೆ ಕ್ಲಾಸ್ ತೆಗೆದುಕೊಂಡ್ರಾ ಕಿಚ್ಚ?
ಬಿಗ್ ಬಾಸ್ ಕನ್ನಡ ಸದ್ಯ ರೋಚಕ ಘಟ್ಟ ತಲುಪಿದೆ. ಮನೆಯ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಲಾಯರ್ ಜಗದೀಶ್ ಹಾಗೂ ರಂಜಿತ್ ಅನ್ನ ಬಿಗ್ ಬಾಸ್ ನಿಂದ ಹೊರಗೆ ಕಳುಹಿಸಲಾಗಿದೆ ಎಂದು ತೋರಿಸಲಾಗಿತ್ತು. ಆದ್ರೀಗ ಇವರಿಬ್ಬರು ಮತ್ತೆ ದೊಡ್ಮನೆಗೆ ವಾಪಸ್ ಆಗಲಿದ್ದಾರಾ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಅತ್ತೆ ಕೈಚಳಕ ಭಾಗ್ಯ ಲಕಲಕ! -ಹೆಂಡ್ತಿ ನೋಡಿ ಕಳೆದು ಹೋದ ತಾಂಡವ್
ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿಕೊಂಡು ರೂಲ್ಸ್ ಬ್ರೇಕ್ ಮಾಡಿದ ತಪ್ಪಿಗೆ ಜಗದೀಶ್ ಹಾಗೂ ರಂಜಿತ್ ಬಿಗ್ ಬಾಸ್ ಸೀಸನ್ 11ರಿಂದ ಔಟ್ ಆಗಿದ್ದಾರೆ. ಈ ಬೆನ್ನಲ್ಲೇ ಯಾವುದು ಸರಿ, ಯಾವುದು ತಪ್ಪು ಅನ್ನೋದರ ಚರ್ಚೆ ನಡೆಯುತ್ತಿದೆ. ಇದೀಗ ವಾರದ ಕತೆ ಕಿಚ್ಚನ ಜೊತೆಯಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಜಗದೀಶ್ ಅವರ ವರ್ತನೆ, ರಂಜಿತ್ ನಡವಳಿಕೆಯ ಬಗ್ಗೆ ಏನ್ ಹೇಳುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ಗಾಗಿಯೇ ಇಂದು ಬಿಗ್ ಬಾಸ್ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕಲರ್ಸ್ ಕನ್ನಡ ವಾಹಿನಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಬಿಗ್ ಬಾಸ್ ಮನೆಯಿಂದ ಜಗದೀಶ್, ರಂಜಿತ್ ಇಬ್ಬರನ್ನು ಎಲಿಮಿನೇಟ್ ಮಾಡಿರೋದು ಸರಿ ಅನ್ನೋ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಅವರು ಇಂದು ಕ್ಲಾರಿಟಿಯನ್ನು ಕೊಡಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇಷ್ಟು ವರ್ಷ ಮನೆಯವರು ಮಾಡೋ ತಪ್ಪುಗಳನ್ನು ಮಾತ್ರ ಚರ್ಚೆ ಮಾಡಲಾಗುತ್ತಿತ್ತು. ಆದರೆ ಸೀಸನ್ 11ರ ಹೊಸದೊಂದು ಬದಲಾವಣೆ ಆಗಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಈ ಸಲ ಕಂಪ್ಲೇಂಟ್ ಇರೋದು ಬಿಗ್ ಬಾಸ್ ಮೇಲೆ. ಹೀಗಾಗಿ ಬಿಗ್ ಬಾಸ್ ನಿರ್ಧಾರವನ್ನೇ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಅವಸರದ ನಿರ್ಧಾರ ತೆಗೆದುಕೊಂಡ್ರಾ ಅಥವಾ ತಗೊಂಡಿರೋ ನಿರ್ಧಾರ ತಪ್ಪಾಗಿತ್ತಾ ಅನ್ನೋದಕ್ಕೆ ಸುದೀಪ್ ಅವರು ವಿವರಣೆ ನೀಡಿದ್ದಾರೆ.
ಜಗದೀಶ್ ಅವರ ಮೇಲೆ ಇಡೀ ಮನೆಯ ಎಲ್ಲಾ ಸದಸ್ಯರು ತಿರುಗಿಬಿದ್ದಿದ್ದು ಕೋಲಾಹಲ ಸೃಷ್ಟಿಸಿತ್ತು. ಮಹಿಳಾ ಸ್ಪರ್ಧಿಗಳ ಮೇಲೆ ಕೇಳಿ ಬಂದ ಮಾತುಗಳಿಗೆ ಬಿಗ್ ಬಾಸ್ ಮನೆ ರಣರಂಗವಾಗಿತ್ತು. ಕೊನೆಗೆ ಮಧ್ಯಪ್ರವೇಶಿಸಿದ ಬಿಗ್ ಬಾಸ್ ಯಾರು ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ ಎಂದು ಗದರಿದ್ದಾರೆ. ಈ ಕೂಡಲೇ ಮುಖ್ಯದ್ವಾರದ ಮೂಲಕ ಹೊರಗೆ ಬನ್ನಿ ಎಂದು ಜಗದೀಶ್ ಹಾಗೂ ರಂಜಿತ್ ಅವರಿಗೆ ಸೂಚನೆ ನೀಡಲಾಗಿದೆ. ಸದ್ಯ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಅನ್ನೋ ಮಾಹಿತಿ ಪಕ್ಕಾ ಆಗಿದೆ. ಇಷ್ಟೆಲ್ಲಾ ಆದ ಮೇಲೆ ಬಿಗ್ ಬಾಸ್ ಮನೆಯ ಆಟ ಹೇಗಿರುತ್ತೆ. ಮುಂದಿನ ವಾರದ ಕತೆ ಏನು ಅನ್ನೋದು ಕುತೂಹಲ ಕೆರಳಿಸಿದೆ.