ಮುಡಾಗೆ ಶಾಕ್ ಕೊಟ್ಟ ED – CM ಸೇರಿ ಯಾರಿಗೆಲ್ಲಾ ಸಂಕಷ್ಟ?
ಮೂಲ ದಾಖಲೆಯಲ್ಲಿ ಏನಿದೆ?

ಮುಡಾಗೆ ಶಾಕ್ ಕೊಟ್ಟ ED – CM ಸೇರಿ ಯಾರಿಗೆಲ್ಲಾ ಸಂಕಷ್ಟ?ಮೂಲ ದಾಖಲೆಯಲ್ಲಿ ಏನಿದೆ?

ಈ ಬಾರಿ ಸಿನಿಮಾ ಹಿರೋಗಳಿಗೆ ಅದ್ರಲ್ಲೂ ರಾಜಕಾರಣಿಗಳಿ ಕೆಟ್ಟ ವರ್ಷ ಅಂತಾನೆ ಹೇಳಬಹುದು.. ಯಾಕಂದ್ರೆ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಪೆನ್‌ಡ್ರೈವ್ ಕೇಸ್‌ನಲ್ಲಿ ಪ್ರಜ್ವಲ್ ಜೈಲಿನೊಳಗೆಯಿದ್ದಾರೆ. ರೇವಣ್ಣ ಕೂಡ ಸಂಕಷ್ಟ ಎದುರಿಸಿದ್ರು. ಮುನಿರತ್ನ ಜೈಲಿಗೆ ಹೋಗಿ ಬಂದ್ರು. ಹಾಗೇ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಕೂಡ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ್ರು. ಇದೆಲ್ಲಾಕ್ಕಿಂತ ಹೆಚ್ಚಾಗಿ ಸಖತ್ ಸದ್ದು ಮಾಡಿದ್ದು ಮುಡಾ ಕೇಸ್‌.. ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲಾ ಅನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಹೆಸರು ಮುಡಾ ಕೇಸ್‌ನಲ್ಲಿ ಹೇಳಿ ಬಂದಿತ್ತು. ಇದೇ ವಿಚಾರವನ್ನಇಟ್ಕೊಂಡು ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅದರಲ್ಲೂ ಈಗ ಮುಡಾ ಕಚೇರಿ ಮೇಲೆಯೇ  ಇಡಿ ದಾಳಿ ಆಗಿದ್ದು, ಸಿಎಂ ಸೇರಿ ಮುಡಾ ಸೈಟ್ ಪಡೆದವರಿಗೆ ಮತ್ತಷ್ಟು ಭಯ ಶುರುವಾಗಿದೆ.

ಇದನ್ನೂ ಓದಿ: ಸಿಎಂಗೆ ತಲೆನೋವಾಯ್ತು ಮುಡಾ ಕೇಸ್‌ – ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಮುಡಾ ಕಚೇರಿ ಮೇಲೆ ಇಡಿ ದಾಳಿ

ಮುಡಾ ಸೈಟ್​​ ಹಂಚಿಕೆ ದಾಖಲೆ, ಅಕ್ರಮ ಹಣ ವರ್ಗಾವಣೆ, ಭೂ ಕಬಳಿಕೆ ಕೇಸ್​ ಅನ್ನು ಇಡಿ ದಾಖಲು ಮಾಡಿದ್ದು, ಇದಕ್ಕಾಗಿ ಮುಡಾ ಕಚೇರಿಯನ್ನು ಜಾಲಾಡಿದೆ. ಸಿಎಂ ಸಿದ್ದರಾಮಯ್ಯ, ಸಿಎಂ ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನ ಮೇಲೆ ಇ.ಡಿ ಕೇಸ್​ ದಾಖಲಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ಬೆನ್ನಲ್ಲೇ ಇ.ಡಿ ರೇಡ್​ ನಡೆದಿದ್ದು, ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ಹಗರಣದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಡಿ ಈಗಾಗಲೇ 3 ನೋಟಿಸ್‌ ಹಾಗೂ 1 ಸಮನ್ಸ್‌ ಜಾರಿ ಮಾಡಿತ್ತು. ಆದರೆ, ಇ.ಡಿ ನೋಟಿಸ್​, ಸಮನ್ಸ್‌ಗೆ ಅಧಿಕಾರಿಗಳು ಯಾವುದೇ ಉತ್ತರ ನೀಡಿರಲಿಲ್ಲ. ದಾಖಲೆ ನೀಡದ ಮುಡಾಗೆ ದಾಳಿ ಮೂಲಕ ಇ.ಡಿ. ಶಾಕ್​ ನೀಡಿದೆ. ಮೈಸೂರು ಬೆನ್ನಲ್ಲೇ ಬೆಂಗಳೂರಿನಲ್ಲೂ ಇ.ಡಿ ದಾಳಿ ನಡೆಸಿದೆ.
ಇ.ಡಿ ಅಧಿಕಾರಿಗಳು ಕೆಂಗೇರಿಯ ದೇವರಾಜು ನಿವಾಸದಲ್ಲಿ ರೇಡ್‌ ಮಾಡಿದ್ದಾರೆ. ಜಮೀನು ಮಾಲೀಕನಾಗಿರುವ ದೇವರಾಜು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ ಮಾಡಿದ್ದಾರೆ. ಮುಡಾ ಕೇಸ್‌ನಲ್ಲಿ ದೇವರಾಜು ಎ4 ಆರೋಪಿಯಾಗಿದ್ದಾರೆ. ಅದಲ್ಲದೆ, ಮೈಸೂರಿನ ತಹಶೀಲ್ದಾರ್‌ ಕಚೇರಿಯ ಮೇಲೂ ಇಡಿ ದಾಳಿ ಮಾಡಿದೆ. ಇಡಿ ಕಚೇರಿಯಲ್ಲಿ ಮೂಲ ದಾಖಲೆಗಾಗಿ ಇಡಿ ಹುಡುಕಾಟ ನಡೆಸುತ್ತಿದ್ದಾರೆ.

ಇಡಿ ಅಧಿಕಾರಿಗಳ ದಾಳಿ ಒಂದು ಬೆದರಿಕೆ ತಂತ್ರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ಒಂದು ಬೆದರಿಕೆ ತಂತ್ರ. ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆದರುವುದಿಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ. ಕೇಂದ್ರ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ ಐಟಿ ಸಿಬಿಐ ಕೇಂದ್ರ ಸರ್ಕಾರದ ರಾಜಕೀಯ ಅಸ್ತ್ರಗಳಾಗಿವೆ ಎಂದು ವಾಗ್ದಾಳಿ ನಡೆಸಿದರು

 ‘ಸೈಟ್ ವಾಪಾಸ್ಸು ಕೊಟ್ಟಾಗಲೇ ಅಕ್ರಮ ನಡೆದಿದೆ’

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮುಡಾ ಪ್ರಕರಣವನ್ನು ಮತ್ತೊಮ್ಮೆ ಕೆದಕಿದರು. ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸರ್ಕಾರಿ ಜಮೀನನ್ನು ಲಪಟಾಯಿಸಿ ಬೇರೆ ಸೈಟುಗಳನ್ನು ವಾಪಸ್ಸು ಕೊಟ್ಟಿದ್ದಾರೆ. ಸೈಟುಗಳನ್ನು ವಾಪಸ್ಸು ಮಾಡುವ ಮೂಲಕ ಅವುಗಳನ್ನು ಅಕ್ರಮವಾಗು ಪಡೆದಿದ್ದು ಅನ್ನೋ ಸಂಗತಿ ಸಾಬೀತಾಗಿದೆ. ಮುಡಾ ಹಗರಣದಲ್ಲಿ ನ್ಯಾಯಯುತ ತನಿಖೆ ಆಗಲಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲಿದ್ದು ಅವರೆಲ್ಲ ಡಿಕೆಶಿ ಸಿದ್ದರಾಮಯ್ಯ ಪರ ಇರುತ್ತಾರೆ, ಅವರಿಂದ ನಿಷ್ಪಕ್ಷವಾದ ತನಿಖೆ ನಿರೀಕ್ಷಿಸುವುದು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Shwetha M

Leave a Reply

Your email address will not be published. Required fields are marked *