ವಾಟ್ಸಪ್ ಬಳಕೆದಾರರಿಗೆ ಬಿಗ್ ಶಾಕ್ – 80 ಲಕ್ಷ ಅಕೌಂಟ್ ಬ್ಯಾನ್‌ ಆಗಿದ್ದೇಕೆ?
ನಿಮ್ಮ ಖಾತೆಯೂ ಕ್ಲೋಸ್ ಆಗುತ್ತಾ? 

ವಾಟ್ಸಪ್ ಬಳಕೆದಾರರಿಗೆ ಬಿಗ್ ಶಾಕ್ – 80 ಲಕ್ಷ ಅಕೌಂಟ್ ಬ್ಯಾನ್‌ ಆಗಿದ್ದೇಕೆ?ನಿಮ್ಮ ಖಾತೆಯೂ ಕ್ಲೋಸ್ ಆಗುತ್ತಾ? 

ಸಾವಿಲ್ಲದ ಮನೆಯಲ್ಲಿ ಹೇಗೆ ಸಾಸಿವೆ ತರೋಕೆ ಆಗಲ್ವೋ.. ಹಾಗೇ ವಾಟ್ಸಪ್ ಬಳಸಿದೇ ಇರೋರನ್ನ ಹುಡುಕೋಕೆ ಆಗಲ್ಲ. 6 ವರ್ಷ ಮಕ್ಕಳಿಂದ ಹಿಡಿದು 60 ವರ್ಷದ ಮುದುಕರ ತಕನ ಕೂಡ ವಾಟ್ಸಪ್‌ ಬಳಸ್ತಾರೆ.. ದಿನಕ್ಕೆ ಒಮ್ಮೆಯಾದ್ರೂ ವಾಟ್ಸಪ್ ಓಪನ್ ಮಾಡ್ತಾರೆ.. ಸ್ಟೇಟಸ್‌ , ಮ್ಯಾಸೇಜ್, ವಿಡಿಯೋ ಕಾಲ್ ಅದು ಇದು ಅಂತಾ ವಾಟ್ಸಪ್‌ನಲ್ಲಿ ಕಾಲ ಕಳೆಯೋದು ಹೆಚ್ಚು. ಆದ್ರೆ ಹೀಗೆ ವಾಟ್ಸಪ್ ಬಳಸೋರಿಗೆ ಮೆಟಾ ಶಾಕಿಂಗ್ ನ್ಯೂಸ್ ನೀಡಿದೆ.

ಇದನ್ನೂ ಓದಿ: ಶಿಗ್ಗಾವಿ ಉಪ ಚುನಾವಣೆಗೆ ಕೌಂಟ್‌ ಡೌನ್‌ – ಬಿಎಸ್‌ ವೈಯನ್ನ ಭೇಟಿಯಾದ ಸಂಸದ ಬೊಮ್ಮಾಯಿ

ಭಾರತದಲ್ಲಿ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಮೆಟಾ ಮಾಲೀಕತ್ವದ ವಾಟ್ಸಪ್, ದೇಶಾದ್ಯಂತ 80 ಲಕ್ಷಕ್ಕೂ ಹೆಚ್ಚು ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡಿದೆ. ಅತ್ಯಂತ ಜನಪ್ರಿಯವಾಗಿರುವ ಈ ಮೆಸೇಜಿಂಗ್ ಆಪ್, ತನಗೆ ನಷ್ಟವಾದರೂ ಕೂಡಾ ದೃಢ ನಿಲುವು ಕೈಗೊಂಡಿದೆ. ಇದಕ್ಕೆ ಕಾರಣ ಸೈಬರ್ ಕ್ರೈಂ.

80 ಲಕ್ಷ ವಾಟ್ಸಪ್ ಖಾತೆ ಬ್ಯಾನ್‌

ವಾಟ್ಸಪ್‌ನಲ್ಲಿ ಖಾತೆ ತೆರೆಯುವ ವಂಚಕರು ಈ ಮೂಲಕ ಆಪ್ ಬಳಕೆದಾರರನ್ನು ವಂಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಇಂತಹ ವಂಚಕ ಖಾತೆಗಳನ್ನು ಗುರ್ತಿಸುತ್ತಿರುವ ವಾಟ್ಸಪ್, ನಿರಂತರವಾಗಿ ಈ ಖಾತೆಗಳನ್ನು ನಿರ್ಬಂಧಿಸುವ ಮೂಲಕ, ವಾಟ್ಸಪ್‌ ಅನ್ನು ಬಳಕೆದಾರರ ಸ್ನೇಹಿಯನ್ನಾಗಿ ಬದಲಿಸಲು ಮುಂದಾಗಿದೆ. ಆನ್‌ಲೈನ್ ವಂಚನೆಗಳು, ಅಕ್ರಮ ಚಟುವಟಿಕೆಗಳು, ಹಣಕಾಸು ವಂಚನೆ ನಡೆಸುವ ಉದ್ದೇಶದಿಂದಲೇ ಕೆಲವರು ವಾಟ್ಸಪ್‌ನಲ್ಲಿ ತಮ್ಮ ಮೊಬೈಲ್ ನಂಬರ್ ಮೂಲಕ ಖಾತೆ ತೆರೆದು ಆ ಮೂಲಕ ಬಳಕೆದಾರರಿಗೆ ಆಮಿಷ ಒಡ್ಡುವ ಸಂದೇಶಗಳನ್ನು ಕಳಿಸಿ ವಂಚನೆ ಎಸಗುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ವರದಿಯಾದ ಕೂಡಲೇ ವಾಟ್ಸಪ್ ಕಠಿಣ ಕ್ರಮ ಕೈಗೊಳ್ಳುತ್ತಿದೆ. ವಾಟ್ಸಪ್‌ನಲ್ಲಿ ಖಾತೆ ತೆಗೆದು ಅಕ್ರಮ ಚಟುವಟಿಕೆ ಎಸಗುವವರ ಮೇಲೆ ಮೆಟಾ ಸಂಸ್ಥೆ ನಿಗಾ ಇರಿಸಿದೆ.

ಯಾವೆಲ್ಲಾ ಚಟುವಟಿಕೆಗೆ ಬ್ರೇಕ್

ಸ್ಥಳೀಯ ಕಾನೂನುಗಳನ್ನು ಉಲ್ಲಂಘನೆ ಮಾಡುವ ವಾಟ್ಸಪ್ ಖಾತೆಗಳನ್ನು ಗುರ್ತಿಸಿ ಈ ಬಗ್ಗೆ ತನ್ನ ಬಳಕೆದಾರರಿಗೆ ಮಾಹಿತಿ ನೀಡುವ ವಾಟ್ಸಪ್, ಆ ಬಳಿಕ ಸದರಿ ಖಾತೆಯನ್ನು ಸ್ಥಗಿತ ಮಾಡುತ್ತಿದೆ. ಜೊತೆಯಲ್ಲೇ ವಾಟ್ಸಪ್ ಬಳಕೆದಾರರೂ ಕೂಡಾ ಅಕ್ರಮ ಚಟುವಟಿಕೆ ಎಸಗುವ ಖಾತೆಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಕಿರುಕುಳ, ಬೈಗುಳ ಅಥವಾ ಅನುಚಿತ ವರ್ತನೆ ಪ್ರದರ್ಶಿಸುವ ಖಾತೆಗಳ ಕುರಿತಾಗಿ ಮಾಹಿತಿ ನೀಡಬಹುದಾಗಿದೆ. ಈ ರೀತಿಯ ಮಾಹಿತಿ ಸಿಕ್ಕ ಕೂಡಲೇ ಮೆಟಾ ಸಂಸ್ಥೆ ಸಮಗ್ರವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ.

ಸಾಕಷ್ಚ ಜನ ವಾಟ್ಸಪ್  ಬಳಸಿಕೊಂಡು ಗ್ರೂಪ್ ಮ್ಯಾಸೇಜ್ ಕಳಿಸಿ ವಂಚನೆ ಎಸಗುತ್ತಿದ್ದಾರೆ. ಜೊತೆಯಲ್ಲೇ ಕೆಲವರು ಸುಳ್ಳು ಸುದ್ದಿ ಹರಡುವ ಉದ್ದೇಶದಿಂದಲೂ ವಾಟ್ಸಪ್ ಖಾತೆ ಸೃಷ್ಟಿಸಿಕೊಂಡಿದ್ದಾರೆ. ಈ ರೀತಿಯ ಚಟುವಟಿಕೆಗಳ ಮೇಲೆ ವಾಟ್ಸಪ್ ನಿರಂತರ ಹದ್ದಿನ ಕಣ್ಣಿಟ್ಟಿದೆ. ಹೀಗೆ ಭಾರತದಲ್ಲಿ ಒಟ್ಟು 84,58,000 ಖಾತೆಗಳಿಗೆ ನಿರ್ಬಂಧ ಹೇರಿರುವುದಾಗಿ ಮಾಹಿತಿ ನೀಡಿದೆ.  ವಾಟ್ಸಪ್ ಮೂಲಕ ವಂಚನೆ ಎಸಗುತ್ತಿರುವ ಸಂಬಂಧ ಮೆಟಾ ಸಂಸ್ಥೆಗೆ ಪ್ರತಿ ದಿನವೂ ದೂರುಗಳು ಬರ್ತಿವೆ. ಈ ಎಲ್ಲಾ ದೂರುಗಳ ಬಗ್ಗೆ  ಪರಿಶೀಲನೆ ನಡೆಸಿ ಖಾತೆಗಳನ್ನು ಸ್ಥಗಿತಗೊಳಿಸುವ ಹಾಗೂ ನಿರ್ಬಂಧ ಹೇರುವ ಕಾರ್ಯದಲ್ಲಿ ವಾಟ್ಸಪ್ ನಿರಂತರವಾಗಿ ತೊಡಗಿಕೊಂಡಿದೆ. ಈ  ಮೂಲಕ ಮತ್ತಷ್ಟು ಬಳಕೆದಾರ ಸ್ನೇಹಿಯಾಗಲು ಮುಂದಾಗಿದೆ.

Shwetha M

Leave a Reply

Your email address will not be published. Required fields are marked *