ಗಗನಾ ಫ್ರೆಂಡ್‌ – ಗರ್ಲ್‌ ಫ್ರೆಂಡ್‌?  – Love ಬಗ್ಗೆ ಗಿಲ್ಲಿನಟ ಹೇಳಿದ್ದೇನು?  

ಗಗನಾ ಫ್ರೆಂಡ್‌ – ಗರ್ಲ್‌ ಫ್ರೆಂಡ್‌?  – Love ಬಗ್ಗೆ ಗಿಲ್ಲಿನಟ ಹೇಳಿದ್ದೇನು?  

ಸೋಶಿಯಲ್‌ ಮೀಡಿಯಾದಲ್ಲಿ ಸದ್ಯ ಟ್ರೆಂಡಿಂಗ್‌ ನಲ್ಲಿರೋದು ಅಂದ್ರೆ ಗಿಲ್ಲಿ ನಟ ಹಾಗೂ ಗಗನ.. ಇವರಿಬ್ಬರ ಪಂಚ್ ಡೈಲಾಗ್ಸ್‌ ಗೆ ವೀಕ್ಷಕರು ಫಿದಾ ಆಗಿದ್ದಾರೆ.. ಇನ್ನು ಡಿಕೆಡಿಯಲ್ಲೂ ಗಿಲ್ಲಿನಟ ಗಗನಳನ್ನ ಸರಿಯಾಗೇ ಕಾಲೆಳಿತಿರ್ತಾರೆ. ಗಿಲ್ಲಿ ಬಾಯಿ ತೆರೆದ್ರೆ ಸಾಕು ಲವ್‌ ಮಾಡು, ಮದುವೆ ಆಗೋಣ ಅಂತಾ ಗಗನಾಳನ್ನ ಗೋಳುಹೊಯ್ಕೊಳ್ತಾರೆ.. ಗಿಲ್ಲಿ ಗಗನ ಬಳಿ ಹೀಗೆ ಮಾತಾಡೋದು ನೋಡಿ ಅದೆಷ್ಟೋ ಮಂದಿ  ಇವರಿಬ್ಬರು ನಿಜವಾಗ್ಲೂ ಲವ್‌ ಮಾಡ್ತಿದ್ದಾರೆ.. ಮದುವೇನೂ ಆಗ್ತಿದ್ದಾರೆ ಅಂತಾ ಅಂದ್ಕೊಂಡಿದ್ದಾರೆ. ಇದೀಗ ಗಿಲ್ಲಿ ನಟ ಈ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ. ಗಗನಾ ಫ್ರೆಂಡಾ ಅಥವಾ ಗರ್ಲ್‌ಫ್ರೆಂಡ್‌   ಅನ್ನೋದನ್ನ ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ: ತಲಕಾವೇರಿಯಲ್ಲಿ ತೀರ್ಥರೂಪಿಣಿಯಾದ ಕಾವೇರಿ ಮಾತೆ!

ಗಿಲ್ಲಿ ನಟ ಕನ್ನಡ ಕಿರುತೆರೆಯಲ್ಲಿ ಪ್ರಾಪರ್ಟಿ ಕಾಮಿಡಿಯಿಂದಲೇ ಫೇಮಸ್ ಆಗಿರುವ ನಟ. ತನ್ನ ಪಂಚಿಂಗ್ ಡೈಲಾಗ್‌ಗಳ ಮೂಲಕ ಗಿಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾನೆ. ಸದ್ಯ ಜೀಕನ್ನಡದಲ್ಲಿ ಪ್ರಸಾರವಾಗ್ತಿರುವ  ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಗಿಲ್ಲಿನಟ ಒಳ್ಳೆ ಮನರಂಜನೆ ನೀಡ್ತಾ ಇದ್ದಾರೆ.. ಪಂಚ್‌ ಡೈಲಾಗ್ಸ್‌, ಕಾಮಿಡಿಗೆ ಜನ ಫಿದಾ ಆಗಿದ್ದಾರೆ.. ಶೋ ನಲ್ಲಿ ಯಶಸ್ವಿನಿ ಹಾಗೂ ಗಗನಾಳನ್ನ ಕಾಲೆಳಿತಾ ಇರ್ತಾರೆ.. ಗಗನಾ ಹಾಗೂ ಯಶಸ್ವಿಯನ್ನ ಇಂಪ್ರೆಸ್‌ ಮಾಡೋಕೆ ಏನೇನೋ ಸರ್ಕಸ್‌ ಮಾಡೋದು ಕಾಮನ್‌.. ಪ್ರೀತ್ಸೆ ಪ್ರೀತ್ಸೆ ಅಂತಾ ಗಗನಾ ಹಿಂದೆ ಓಡಾಡೋದು.. ಕಾಲೆಳೆಯೋದು.. ಮಾಡ್ತಾ ಇರ್ತಾರೆ.. ಗಿಲ್ಲಿ ಲವ್‌ ಪ್ರಪೋಸ್‌ ಮಾಡೋದು ನೋಡೋಕೆನೇ ಚೆಂದ.. ಲವ್‌ ಬಗ್ಗೆ ವಿವರಣೆ ನೀಡೋದನ್ನ ಕೆಳೋಕೆ ಇನ್ನು ಚೆಂದ.. ಪ್ರತಿ ಸಂಚಿಕೆಯಲ್ಲೂ ಗಿಲ್ಲಿ ಡಿಫ್ರೆಂಟ್‌ ಡಿಫ್ರೆಂಟ್‌ ಸ್ಟೈಲ್‌ ನಲ್ಲೇ ಪ್ರಪೋಸ್‌ ಮಾಡ್ತಾರೆ.. ಗಗನಾ ಕೂಡ ಗಿಲ್ಲಿ ನಟನ ಡೈಲಾಗ್ಸ್‌ ಗೆ ಕೌಂಟರ್‌ ಕೊಡ್ತಾರೆ. ಈ ಕಾಮಿಡಿ ಹಾಗೂ ರಿಯಾಲಿಟಿ ಶೋಗಳ ತೆರೆಯ ಹಿಂದೆ ನಡೆಯೋ ತರ್ಲೆಗಳ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾನೆ. ಹಾಗೇ ತನ್ನ ಹಾಗೂ ಗಗನಾ ಮಧ್ಯೆ ಇರೋದು ಫ್ರೆಂಡ್‌ಶಿಪ್ ಅಥವಾ ಲವಾ ಅನ್ನೋದನ್ನ ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಗಿಲ್ಲಿ ಮಾತನಾಡಿ, ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಸ್ಟೇಜ್ ಮೇಲೆ ಯಾವಾಗಲೂ ಗಗನ ಬಳಿ ಲವ್‌ ಮಾಡು, ಮದುವೆ ಆಗೋಣ ಅಂತಾ ಕಾಲೆಳೆಯುತ್ತಾರೆ. ಹೀಗಾಗಿ ಗಿಲ್ಲಿಗೆ ನೀವು ಗಗನಾ ಲವ್‌ ಮಾಡ್ತಿದ್ದೀರಾ ಅಂತಾ ಕೇಳಲಾಗಿದೆ. ಗಿಲ್ಲಿ ನಟ ಗಗನಳನ್ನ ಲವ್ ಮಾಡುತ್ತಾರಾ ಅನ್ನೋ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ. ನಾನು ಗಗನ ಅವರನ್ನ ಲವ್ ಮಾಡುತ್ತಿಲ್ಲ. ನನಗೆ ಗಗನ ಫ್ರೆಂಡ್ ಅಷ್ಟೇ. ರಿಯಾಲಿಟಿ ಶೋಗಳಲ್ಲಿ ಸುಮ್ನೆ ರೇಗಿಸುತ್ತೇನೆ. ಇದರ ಬಗ್ಗೆ ಗಗನ ಕೂಡ ಇದುವರೆಗೂ ಏನೂ ಅಂದಿಲ್ಲ. ಏನೂ ಬೈದಿಲ್ಲ. ಗಗನ ಮನೆಯವರು ಕೂಡ ಏನು ಹೇಳಿಲ್ಲ. ತಮಾಷೆಯನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಸೀರಿಯಸ್ ಆಗಿ ಏನು ಹೇಳಿಲ್ಲ. ಅಸಲಿಗೆ ನಾನು ಇದುವರೆಗೂ ಯಾರನ್ನೂ ಲವ್ ಮಾಡಿಲ್ಲ ಎಂದು ಗಿಲ್ಲಿ ನಟ ಸ್ಪಷ್ಟಪಡಿಸಿದ್ದಾರೆ.

ಇನ್ನು ಗಗನ ಸಿಕ್ಕ ಮೇಲೆ ಯಶುನ ಸ್ವಲ್ಪ ಮರೆತು ಬಿಟ್ರಾ ಅನ್ನೋ ಮಾತನ್ನು ಗಿಲ್ಲಿ ನಟ ತಳ್ಳಿ ಹಾಕಿದ್ದಾರೆ. ಪಂಚಿಂಗ್ ಡೈಲಾಗ್ ಮೂಲಕ ಈ ಗಾಸಿಪ್‌ಗೆ ಉತ್ತರಿಸಿರುವ ಗಿಲ್ಲಿ ನಟ…  ಕಾಣಬಾರದು ಅಂತ ಕಣ್ಣು ಮುಚ್ಚಿಕೊಳ್ಳಬಹುದು. ಮರೆಯಬಾರದು ಅಂತ ಮನಸು ಮುಚ್ಚಿಕೊಳ್ಳೋಕೆ ಆಗುತ್ತಾ. ಯಶು ಅವರನ್ನ ನಾನು ಮರೆತಿಲ್ಲ ಎಂದಿದ್ದಾರೆ. ಇದೆಲ್ಲಾ ಶೂಟಿಂಗ್‌ ವೇಳೆ ಮಾತ್ರ.. ಶೂಟಿಂಗ್‌ ಮುಗಿದ ಬಳಿಕ ನಾವೆಲ್ಲ ಫ್ರೆಂಡ್ಸ್‌ ಆಗೇ ಇರ್ತೇವೆ.. ಇದು ತಮಾಷೆಗಾಗಿ ಮಾತ್ರ ಅಂತಾ ಗಿಲ್ಲಿ ನಟ ಗಗನಾ ಯಶು ಬಗ್ಗೆ ಹೇಳಿದ್ದಾರೆ.. ಆದ್ರೆ ವೀಕ್ಷಕರು ಮಾತ್ರ ಗಿಲ್ಲಿ, ಗಗನಾ ಮದುವೆ ಆದ್ರೆ ಚೆನ್ನಾಗಿರುತ್ತೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಹಿಂದೆ ಗಗನಾ ಡಿಕೆಡಿಯಲ್ಲೂ ಈ ಬಗ್ಗೆ ಮಾತನಾಡಿದ್ರು.. ನಾವು ಎಟ್ಟರಮಟ್ಟಿಗೆ ವೈರಲ್‌ ಆಗ್ತಿದ್ದೀವಿ ಅಂದ್ರೆ.. ಸೋಶಿಯಲ್‌ ಮೀಡಿಯಾದಲ್ಲಿ ಸೇಮ್‌ ವಿಡಿಯೋ ಹತ್ತತ್ತು ಸಲ ಬರುತ್ತೆ.. ಸ್ಕ್ರೋಲ್‌ ಮಾಡಿ ಮಾಡಿ ಸಾಕಾಗುತ್ತೆ.. ಹೋದಲ್ಲೆಲ್ಲಾ ಗಿಲ್ಲಿ ಎಲ್ಲಿ ಅಂತಾ ಕೇಳ್ತಾರೆ ಅಂತಾ ಸ್ಟೇಜ್‌ ನಲ್ಲಿ ಹೇಳಿದ್ರು.

ಒಟ್ಟಾರೆ ಗಿಲ್ಲಿ ನಟ ಹಾಗೂ ಗಗನಾ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಎಬ್ಬಿಸಿದ್ದಾರೆ.. ಸೋಶಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಬರೀ ಇಬರಿಬ್ಬರ ವಿಡಿಯೋನೇ ಬರುತ್ತೆ.. ವೀಕ್ಷಕರು ಕೂಡ ಈ ಜೋಡಿಯನ್ನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *