ಹಳಸಿದ ಕೆನಡಾ- ಭಾರತ ಸಂಬಂಧ – ನಿಜ್ಜರ್ ಹತ್ಯೆಗೆ ಅಮಿತ್ ಶಾ ಒಪ್ಪಿಗೆ?
ಮೋದಿ ಕೊಟ್ಟ ವಾರ್ನಿಂಗ್ ಏನು?
ಕೆನಡಾದೊಂದಿಗೆ ಭಾರತ ದೇಶದ ಸಂಬಂಧ ಹದಗೆಟ್ಟು ಹೋಗಿದೆ. ಎರಡು ದೇಶದ ನಡುವೆ ರಾಜತಾಂತ್ರಿಕ ವಿವಾದವು ತಾರಕಕ್ಕೇರಿದೆ. ಹಾಗಿದ್ರೆ ಎರಡು ದೇಶದ ನಡುವೆ ಸಂಬಂದ ಹಳಸಿ ಹೋಗಲು ಕಾರಣವೇನು..?. ಕೆನಡಾ ಆರೋಪಕ್ಕೆ ಭಾರತ ತೆಗೆದುತೊಂಡ ನಿರ್ಧಾರವೇನು..?, ಒಬ್ಬ ಉಗ್ರನ ಹತ್ಯ ಎರಡು ದೇಶಗಳ ಕಲಹಕ್ಕೆ ಕಾರಣವಾಯ್ತಾ? ಭಾರತದ ಕಠಿಣ ನಿರ್ಧಾರವೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ODI ಕ್ರಿಕೆಟ್ ನಲ್ಲಿ ರೋಹಿತ್ BOSS -ಸೆಂಚುರಿ, ಸಿಕ್ಸಸ್ ಹೀರೋ HITಮ್ಯಾನ್
ಕೆನಡಾ ದೇಶದ ರಾಜಕಾರಣಿಗಳಿಗೆ ಇದೀಗ ನೆಮ್ಮದಿ ಬೇಡ ಅಂತಾ ಕಾಣುತ್ತದೆ. ಯಾಕಂದ್ರೆ ಪದೇ ಪದೇ ಕಿರಿಕ್ ಮಾಡುವ ಕೆನಡಾ ಸರ್ಕಾರ, ಇದೀಗ ಭಾರತದ ವಿರುದ್ಧ ಮತ್ತೊಂದು ಗಂಭೀರ ಆರೋಪ ಹೊರಿಸಲು ಮುಂದೆ ಬಂದಿತ್ತು. ಈ ಬೆನ್ನಲ್ಲೇ ಭಾರತ ಕೂಡ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದು ಈಗ ಭಾರತದಲ್ಲಿ ಇರುವ ಒಟ್ಟು 06 ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ಭಾರತ ಬಿಟ್ಟು ತೊಲಗಲು ಸೂಚನೆ ನೀಡಿದೆ. ಕೆನಡಾ ರಾಜತಾಂತ್ರಿಕ ಅಧಿಕಾರಿಗಳಿಗೆ ಅಕ್ಟೋಬರ್ 19ರ ಶನಿವಾರ ರಾತ್ರಿಗೆ ಡೆಡ್ಲೈನ್ ಫಿಕ್ಸ್ ಮಾಡಿದ್ದು, ಅಕ್ಟೋಬರ್ 19ರ ಮದ್ಯ ರಾತ್ರಿಯೊಳಗೆ ಅಥವಾ ಅದಕ್ಕೂ ಮುಂಚಿತವಾಗಿ ಭಾರತ ಬಿಟ್ಟು ಹೋಗಿ ಎಂದು ಖಡಕ್ ಸೂಚನೆ ನೀಡಿದೆ.
ಭಾರತವನ್ನ ಕೆಣಕಿದ ಕೆನಡಾ
ಆದರೆ ಅಲ್ಲದೆ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಕೂಡ ಭಾರತ ಈಗ ವಾಪಸ್ ಕರೆಸಿಕೊಳ್ಳುತ್ತಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನನ್ನು 2023ರ ಜೂ.18ರಂದು ಕೆನಡಾದ ಸರ್ರೆಯಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು. ಬಳಿಕ ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಹೇಳಿತ್ತು. ಇದು ಎರಡೂ ದೇಶಗಳ ರಾಜತಾಂತ್ರಿಕ ಯುದ್ಧಕ್ಕೆ ನಾಂದಿ ಹಾಡಿತ್ತು. ಕೆನಡಾ ಈ ಬಗ್ಗೆ ಈವರೆಗೂ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿಲ್ಲ ಎಂದು ಒತ್ತಿಹೇಳಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಾರ್ವಜನಿಕವಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಭಾರತದ ಕೋಪ ನೆತ್ತಿಗೆರುವಂತೆ ಮಾಡಿದೆ. ಇದೀಗ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಕೇಸ್ನಲ್ಲಿ ಭಾರತದ ಹೈಕಮಿಷನರ್ನ ಕೂಡ ಕೆನಡಾ ತನಿಖೆಗೆ ಗುರಿಪಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಭಾರತವನ್ನು ಕೆರಳಿಸಿದ್ದು, ಕೂಡಲೇ ಕೆನಡಾ ನೆಲದಿಂದ ಭಾರತದ ಹೈಕಮಿಷನರ್ ಅವರನ್ನ ಮರಳಿ ದೇಶಕ್ಕೆ ಕರೆಸಿಕೊಳ್ಳಲು ಈಗ ನಿರ್ಧರಿಸಿದೆ. ಕೆನಡಾ ರಾಜತಾಂತ್ರಿಕ ಅಧಿಕಾರಿಗಳಿಗೆ ಅಕ್ಟೋಬರ್ 19ರ ಶನಿವಾರ ರಾತ್ರಿಗೆ ಡೆಡ್ಲೈನ್ ಫಿಕ್ಸ್ ಮಾಡಿದ್ದು, ಅಕ್ಟೋಬರ್ 19ರ ರಾತ್ರಿ 11:59ರ ಒಳಗೆ ಅಥವಾ ಅದಕ್ಕಿಂತಲೂ ಮುಂಚಿತವಾಗಿ ಭಾರತ ಬಿಟ್ಟು ಹೋಗಿ ಎಂದು ಖಡಕ್ ಸೂಚನೆ ನೀಡಿದೆ.
ಅಮಿತ್ ಶಾ ಪಾತ್ರದ ಬಗ್ಗೆ ಉಲ್ಲೇಖ
ಕೆನಡಾದಲ್ಲಿ ನಡೆಯುತ್ತಿರುವ ಟಾರ್ಗೆಟ್ ಕಿಲ್ಲಿಂಗ್ನಲ್ಲಿ ಭಾರತದ ಸಿಬ್ಬಂದಿ ಬಿಷ್ಣೋಯ್ ಗ್ಯಾಂಗನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನಡಾ ಪೊಲೀಸ್ ಕಮಿಷನರ್, ದಕ್ಷಿಣ ಏಷ್ಯಾದ ಪ್ರಜೆಗಳನ್ನು ಕೆನಡಾದಲ್ಲಿ ಗುರಿ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಖಲಿಸ್ಥಾನಿ ಪರವಾದವರೇ ಗುರಿಯಾಗುತ್ತಿದ್ದಾರೆ ಎಂದಿದ್ದಾರೆ. ಅಲ್ಲದೇ ಕೆನಡಾದಲ್ಲಿ ನಿಗೂಢವಾಗಿ ಹತ್ಯೆಗೀಡಾದ ಉಗ್ರ ನಿಜ್ಜರ್ ಪ್ರಕರಣದಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಅವರ ಹಸ್ತವಿದೆ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಿಜ್ಜರ್ ಹತ್ಯೆ ಕುರಿತ ದಾಖಲೆ ಹಂಚಿಕೊಳ್ಳುವ ಸಲುವಾಗಿ ಕೆನಡಾದ ವಿದೇಶಾಂಗ ಇಲಾಖೆ ಅಧಿಕಾರಿಗಳು ಅಕ್ಟೋಬರ್ 12ರಂದು ಸಿಂಗಾಪುರದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದರು. ಈ ಭೇಟಿ ವೇಳೆ, ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತ ದಾಖಲೆ ಹಸ್ತಾಂತರ ಮಾಡಿದ್ದಾರೆ. ಅದರಲ್ಲಿ ಭಾರತದ ಬಿಷ್ಟೋಯಿ ತಂಡವನ್ನು ಬಳಸಿ ಕಾರ್ಯಾಚರಣೆ ನಡೆಸಿದ ಕುರಿತ ಮಾಹಿತಿ ಇದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ದಾಳಿಗೆ ಭಾರತದ ಹಿರಿಯ ಸಚಿವರು ಮತ್ತು ‘ರಾ’ದ ಹಿರಿಯ ಅಧಿಕಾರಿಗಳು ಅನುಮತಿ ನೀಡಿದ್ದರು ಎಂದು ಹೇಳಿತ್ತು. ಆ ಹಿರಿಯ ಸಚಿವ ಅಮಿತ್ ಶಾ ಎಂದು ಹೆಸರಿಸಿದೆ. ಕೆನಡಾ & ಭಾರತದ ನಡುವೆ ಸಂಬಂಧ ಹಾಳಾಗಿದ್ದು ಮತ್ತಷ್ಟು ಹಳಸುತ್ತಿದೆ.