ರಂಗೇರಿದ ಚನ್ನಪಟ್ಟಣ ಉಪ’ಸಮರ – ಜೆಡಿಎಸ್ಗೆ ಯೋಗೇಶ್ವರ್ ಸವಾಲ್
ಹೆಚ್ಡಿಕೆ ತಂತ್ರ..ಡಿಕೆಶಿ ರಣತಂತ್ರ
ರಾಜ್ಯದಲ್ಲಿ ಮತ್ತೆ ಚುನಾವಣಾ ಕಾವು ರಂಗೇರಿದೆ. ಮಿನಿ ಸಮರ ಗೆಲ್ಲೋಕೆ ಕದನ ಕಲಿಗಳು ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದ ಮೂರು ಕ್ಷೇತ್ರಗಳಿಗೆ ನವೆಂಬರ್ 13ಕ್ಕೆ ಉಪ ಚುನಾವಣೆ ಘೋಷಣೆ ಆಗಿದೆ. ಹೀಗಾಗಿ ರಾಜ್ಯ ರಾಜಕೀಯ ರಂಗೇರಿದ್ದು, ಟಿಕೆಟ್ ಪಡೆಯೋಕೆ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಹಾಗಿದ್ರೆ 3 ಕ್ಷೇತ್ರಗಳಲ್ಲಿ ಟಿಕೆಟ್ ಫೈಟ್ ಹೇಗಿದೆ. ಅದ್ರಲ್ಲೂ ಈ ಭಾರಿ ಪ್ರತಿಷ್ಠೆಯ ಕಣವಾಗಿರೋ ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಫಾರಿನ್ ಪ್ಲೇಯರ್ಸ್ OUT – ಮ್ಯಾಕ್ಸಿ, ಅಲ್ಜಾರಿ, ಲಾಕಿಗೆ ಗೇಟ್ ಪಾಸ್
ರಾಜ್ಯದಲ್ಲಿ ಮಿನಿ ಸಮರಕ್ಕೆ ಮೂಹರ್ತ ಫಿಕ್ಸ್ ಆಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿಯ ಶಿಗ್ಗಾಂವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ. 3 ಕ್ಷೇತ್ರಗಳ ಪೈಕಿ ಈಗ ಚನ್ನಪಟ್ಟಣ 3 ಪಕ್ಷಗಳಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಇದಕ್ಕೆ ಕಾರಣನೂ ಇದೆ. ಚನ್ನಪಟ್ಟಣಕ್ಕೆ ಮಗನನ್ನ ಅಭ್ಯರ್ಥಿ ಮಾಡ್ಬೇಕು 2 ಸೋಲಿನ ಕಹಿಯನ್ನ ಮರೆಸೋದಕ್ಕೆ ಕುಮಾರಸ್ವಾಮಿ ಹೋರಾಡ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಡಿಕೆ.ಸುರೇಶ್ಗಾದ ಸೋಲಿನ ಸೇಡು ತೀರಿಸಿಕೊಳ್ಳಲು ಡಿಕೆಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ.. ಚನ್ನಪಟ್ಟಣ ಉಳಿದರೆ ಜೆಡಿಎಸ್ಗೆ ಮತ್ತಷ್ಟು ಶಕ್ತಿ ಬರುತ್ತೆ. ಅದೇ ಚನ್ನಪಟ್ಟಣ ಕಾಂಗ್ರೆಸ್ ಗೆದ್ದು ಅಖಂಡ ರಾಮನಗರ ಜಿಲ್ಲೆ ಕಾಂಗ್ರೆಸ್ ವಶಪಡಿಸಿಕೊಳ್ಳೋದು ಡಿಕೆ ಶಿವಕುಮಾರ್ ಲೆಕ್ಕಾಚಾರ. ಎಲ್ಲಾ ಜಾತಿಯವರನ್ನೂ ಸೆಳೆಯಬೇಕು. ಒಕ್ಕಲಿಗ ನಾಯಕತ್ವವನ್ನ ಹೆಚ್ಚಿಸಿಕೊಳ್ಳಬೇಕು ಅನ್ನೋ ಜೊತೆ ಸ್ವಾಭಿಮಾನ ಕುಮಾರಸ್ವಾಮಿಯವರನ್ನ ಕಾಡ್ತಿದ್ರೆ, ಜೆಡಿಎಸ್ ಅಸ್ತಿತ್ವವನ್ನೇ ಕಿತ್ತು ಹಾಕುವ ಕನಸು ಡಿಕೆ ಶಿವಕುಮಾರ್ ಅವರದ್ದಾಗಿದೆ. ಈ ನಡುವೆ ಬಿಜೆಪಿಯಿಂದ ನಾನೇ ಅಭ್ಯರ್ಥಿ ಅಂತಾ ಸಿಪಿ ಯೋಗೇಶ್ವರ್ ಹೇಳಿಕೊಳ್ಳುತ್ತಿದ್ದಾರೆ.
ಮೈತ್ರಿಗೆ ಕಬ್ಬಿಣದ ಕಡಲೆಯಾದ ಚನ್ನಪಟ್ಟಣ ಟಿಕೆಟ್
ಇದರ ನಡುವೆಯೇ ಚನ್ನಪಟ್ಟಣ ಬೈ ಎಲೆಕ್ಷನ್ ಟಿಕೆಟ್ಗಾಗಿ ಭಾರೀ ಕಸರತ್ತು ನಡೆಯುತ್ತಿದೆ. ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಮೈತ್ರಿ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಸಿ.ಪಿ.ಯೋಗೇಶ್ವರ್ ಇದ್ದಾರೆ. ಈ ಹಿನ್ನೆಲೆ ಯೋಗೇಶ್ವರ್ ಖಾಸಗಿ ರೆಸಾರ್ಟ್ನಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ. ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಮೈತ್ರಿಯಿಂದ ಬಿಜೆಪಿ ಅಭ್ಯರ್ಥಿಗಳು ಕಣ್ಣಕ್ಕೆ ಇಳಿಯಲಿದ್ದಾರೆ. ಆದ್ರೆ ಚನ್ನಪಣ್ಣದಲ್ಲಿ ಮೈತ್ರಿಯಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡೋದು ಬಹುತೇಕ ಕನ್ಫರ್ಮ್ ಅನ್ನೋ ಮಾತು ಕೇಳಿ ಬರ್ತಿತ್ತು.. ಆದ್ರೆ ಈಗ ಸಿಪಿ ಯೋಗೇಶ್ವರ್ ಮಾತು ಸಾಕಷ್ಟು ಹಲ್ಚಲ್ ಎಬ್ಬಿಸಿದೆ. ಈ ಬಾರಿ ಚೆನ್ನಪಟ್ಟಣದ ಮೈತ್ರಿ ನಾನೇ, ಎನ್ಡಿಎಂ ಅಭ್ಯರ್ಥಿ ನಾನೇ ಎಂದು ಯೋಗೇಶ್ವರ್ ಘೋಷಿಸಿಕೊಂಡಿದ್ದಾರೆ. ಇನ್ನೇರಡು ದಿನದಲ್ಲಿ ನನನ್ನೇ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡ್ತಾರೆ. ಈ ಬಗ್ಗೆ ಮುಖಂಡರಲ್ಲಿ ಯಾವ ಗೊಂದಲ ಬೇಡ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಡಿಕೆ ಸುರೇಶ್?
ಡಿಕೆ ಶಿವಕುಮಾರ್ ಚನ್ನಪಟ್ಟಣದ ಅಭ್ಯರ್ಥಿ ನಾನೇ ಅಂತಾ ಹೇಳುತ್ತಿದ್ದರು, ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅನ್ನೋದು ನಿಜಾ.. ಡಿ.ಕೆ.ಸುರೇಶ್ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರೆ ಎಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಮಾಜಿ ಶಾಸಕ ದೇವರ ಮೊರೆ ಹೋಗಿದ್ದಾರೆ. ಹುಣ್ಣಿಮೆ ಪ್ರಯುಕ್ತ ಡಿ.ಕೆ.ಸುರೇಶ್ ಹೆಸರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ ನೆರವೇರಿಸಲಾಗುತ್ತದೆ ಎಂದಿದ್ದಾರೆ. ಚನ್ನಪಟ್ಟಣದಲ್ಲಿ ಸುರೇಶ್ ಸ್ಪರ್ಧೆ ಮಾಡ್ತಾರೆ, ಅಲ್ಲದೇ ಚುನಾವಣೆಯಲ್ಲಿ ಗೆದ್ದು ಮಂತ್ರಿ ಕೂಡ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಹಾಗೂ ಹೆಚ್ಡಿಕೆಗೆ ಸವಾಲ್ ಆದ ಚನ್ನಪಟ್ಟಣ
ಡಿಕೆಶಿ, ಹೆಚ್ಡಿಕೆಗೆ ಲೆಕ್ಕಾಚಾರ ಏನಾದರೂ ಇರಲಿ. ಸವಾಲುಗಳು ಇಬ್ಬರನ್ನೂ ಬೆನ್ನತ್ತಿದ ಬೇತಾಳನ ಥರ ಕಾಡ್ತಿದೆ. ಕುಮಾರಸ್ವಾಮಿಯವರಿಗೆ ಬಿಜೆಪಿಯ ಸಿ.ಪಿಯೋಗೇಶ್ವರ್ ಬಂಡಾಯ ಎದ್ದರೆ ಅನ್ನೋ ಭಯ ಇದೆ. ಡಿ.ಕೆ ಶಿವಕುಮಾರ್ ಅವರಗೆ ಕುಮಾರಣ್ಣನ ವಿರುದ್ಧ ಯೋಗೇಶ್ವರ್ ಬಂಡಾಯವೆದ್ದು ಮೈತ್ರಿಪಡೆಯಿಂದ ಹೊರಬಂದರಷ್ಟೇ ಲಾಭ ಆಗಲಿದೆ. ಇಲ್ಲಾಂದ್ರೆ ಕಷ್ಟ ಅನ್ನೋ ಟೆನ್ಶನ್ ಕೂಡ ಕಾಡ್ತಿದೆ. ಇನ್ನು ಜೆಡಿಎಸ್ಗೆ ಚನ್ನಪಟ್ಟಣದಲ್ಲಿರುವ ಮುಸ್ಲಿಂ, ಎಸ್ಸಿ, ಎಸ್ಟಿ ಮತಗಳನ್ನ ಸೆಳೆಯೋದು ಸವಾಲಾಗಿದ್ದು, ಒಕ್ಕಲಿಗ ಮತಗಳು ಛಿದ್ರವಾದರೆ ಹೇಗಪ್ಪಾ ಅನ್ನೋ ಚಿಂತೆ ಕಾಡ್ತಿದೆ. ಕುಮಾರಸ್ವಾಮಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ಯಲ್ಲ ಅನ್ನೋ ಚಿಂತೆಯಾದರೆ, ಕಾಂಗ್ರೆಸ್ಗೆ ಕುಮಾರಸ್ವಾಮಿ ಸೆಂಟ್ರಲ್ ಮಿನಿಸ್ಟರ್ ಅನ್ನೋ ಭಯ. ಇನ್ನು ಮೈತ್ರಿಕೂಟದಲ್ಲಿರುವ ಬಿಜೆಪಿಯವರ ಮಾತಿಗೂ ಮನ್ನಣೆಕೊಟ್ಟು ಒಗ್ಗಟ್ಟಾಗಿ ಕರ್ಕೊಂಡ್ ಹೋಗೋದು ಕುಮಾರಸ್ವಾಮಿಗೆ ಸವಾಲಾಗಿದ್ದು, ಏಕಾಂಗಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಾಗಿ ಹೋರಾಡೋದು ಡಿಕೆಶಿಗೆ ಇರುವ ದೊಡ್ಡ ಸವಾಲಾಗಿದೆ.