ODI ಕ್ರಿಕೆಟ್ ನಲ್ಲಿ ರೋಹಿತ್ BOSS -ಸೆಂಚುರಿ, ಸಿಕ್ಸಸ್ ಹೀರೋ HITಮ್ಯಾನ್
ರೋಹಿತ್ ಶರ್ಮಾ 8 ವಿಶ್ವದಾಖಲೆಗಳು

ODI ಕ್ರಿಕೆಟ್ ನಲ್ಲಿ ರೋಹಿತ್ BOSS -ಸೆಂಚುರಿ, ಸಿಕ್ಸಸ್ ಹೀರೋ HITಮ್ಯಾನ್ರೋಹಿತ್ ಶರ್ಮಾ 8 ವಿಶ್ವದಾಖಲೆಗಳು

ರೋಹಿತ್ ಶರ್ಮಾ. ಟೀಂ ಇಂಡಿಯಾ ಕಂಡ ಗ್ರೇಟೆಸ್ಟ್ ಪ್ಲೇಯರ್ & ಕ್ಯಾಪ್ಟನ್. ಆಟಕ್ಕೂ ಜೈ, ಸಾರಥ್ಯಕ್ಕೂ ಸೈ ಎನ್ನುವಂಥ ಪವರ್​​ಫುಲ್ ಹಿಟ್ಟರ್. ಟೀಮ್​ಮೇಟ್ಸ್ ಜೊತೆ ಕೂಲ್ ಌಂಡ್ ಕಾಮ್ ಆಗಿರೋ ರೋಹಿತ್ ಶರ್ಮಾ ನಾಯಕನಾಗಿ ಭಾರತ ತಂಡವನ್ನ ವಿಶ್ವಕ್ರಿಕೆಟ್​ನ ಉತ್ತುಂಗಕ್ಕೇರಿಸಿದ್ದಾರೆ. ಟಿ-20, ಏಕದಿನ, ಟೆಸ್ಟ್ ಹೀಗೆ ಎಲ್ಲಾ ಮಾದರಿಯಲ್ಲೂ ಟೀಂ ಇಂಡಿಯಾವನ್ನ ಬಲಿಷ್ಠಗೊಳಿಸಿದ ಸೂಪರ್ ಸ್ಟಾರ್. ಐಸಿಸಿ ವರ್ಲ್ಡ್​​ಕಪ್​ಗಳಲ್ಲಿ ಅಜೇಯವಾಗಿ ತಂಡವನ್ನ ಮುನ್ನಡೆಸಿ ಶಹಬ್ಬಾಸ್ ಎನಿಸಿಕೊಂಡವ್ರು. ಇಂಥಾ ರೋಹಿತ್ ಶರ್ಮಾ ಕ್ರಿಕೆಟ್​ ಲೋಕದಲ್ಲಿ ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ. ಅದ್ರಲ್ಲೂ ಈ 8 ರೆಕಾರ್ಡ್ಸ್ ಬ್ರೇಕ್ ಮಾಡೋದು ಕೂಡ ಕಷ್ಟ ಇದೆ. ಅಷ್ಟಕ್ಕೂ ರೋಹಿತ್ ಶರ್ಮಾ ಬರೆದಿರೋ ವರ್ಲ್ಡ್ ರೆಕಾರ್ಡ್ಸ್ ಏನು? ಟೀಂ ಇಂಡಿಯಾದಲ್ಲಿ ರೋಹಿತ್ ಮೂಡಿಸಿದ ಮೈಲುಗಲ್ಲು ಎಂಥಾದ್ದು? ಸ್ಫೋಟಕ ಬ್ಯಾಟಿಂಗ್​ನಿಂದಲೇ ಯಂಗ್​ಸ್ಟರ್ಸ್​ಗೆ ಅದೇಗೆ ಸ್ಪೂರ್ತಿಯಾಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:RCB ಫಾರಿನ್ ಪ್ಲೇಯರ್ಸ್ OUT – ಮ್ಯಾಕ್ಸಿ, ಅಲ್ಜಾರಿ, ಲಾಕಿಗೆ ಗೇಟ್ ಪಾಸ್ 

ಹಿಟ್​ಮ್ಯಾನ್ ಅಂತಾನೇ ಕರೆಸಿಕೊಳ್ಳೋ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ನಿಂದಲೇ ಫೇಮಸ್ ಆದವ್ರು. ಸೀನಿಯರ್ಸ್ ಜೊತೆ ಲಾಯಲ್ ಆಗಿ ಜೂನಿಯರ್ಸ್ ಜೊತೆ ಫ್ರೆಂಡ್ಲಿಯಾಗಿ ಟೀಂ ಮುನ್ನಡೆಸೋ ಪ್ರತಿಭಾವಂತ ಆಟಗಾರ. ದಶಕದ ಬಳಿಕ ಭಾರತಕ್ಕೆ ಟಿ-20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಆ ಬಳಿಕ ಟಿ-20ಐ ಫಾರ್ಮೆಟ್​ಗೆ ಗುಡ್ ಬೈ ಹೇಳಿದ್ರು. ಸದ್ಯ ಟೀಂ ಇಂಡಿಯಾವನ್ನ ಏಕದಿನ ಹಾಗೇ ಟೆಸ್ಟ್ ಮಾದರಿಯಲ್ಲಿ ಮುನ್ನಡೆಸ್ತಿದ್ದಾರೆ. ಸಕ್ಸಸ್​ಫುಲ್ ಪ್ಲೇಯರ್ ಌಂಡ್ ಲೀಡರ್ ರೋಹಿತ್ ಹೆಸರಿನಲ್ಲಿ ಹಲವು ವಿಶ್ವದಾಖಲೆಗಳಿವೆ.

ಏಕದಿನ ಕ್ರಿಕೆಟ್‌ ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್!

2007ರ ಜೂನ್ ತಿಂಗಳಲ್ಲಿ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ ಈವರೆಗೂ ಕೂಡ ಬ್ಯಾಕ್ ಬೋನ್ ಆಗಿದ್ದಾರೆ. ನಾಯಕನಾಗಿ, ಆಟಗಾರನಾಗಿ ಹಲವು ಚರಿತ್ರೆಗಳನ್ನ ಸೃಷ್ಟಿಸಿದ್ದಾರೆ. ಅದ್ರಲ್ಲೂ ರೋಹಿತ್ ಶರ್ಮಾ 2014ರಲ್ಲಿ ಶ್ರೀಲಂಕಾ ವಿರುದ್ದ ಏಕದಿನ ಪಂದ್ಯದಲ್ಲಿ 173 ಎಸೆತಗಳಲ್ಲಿ ಬರೋಬ್ಬರಿ 264 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ.

ಏಕದಿನ ಕ್ರಿಕೆಟ್‌ ನಲ್ಲಿ ಅತಿಹೆಚ್ಚು ಡಬಲ್ ಸೆಂಚುರಿ ಸಿಡಿಸಿದ ಆಟಗಾರ

ಡಬಲ್ ಸೆಂಚುರಿ, ಟೆಸ್ಟ್ ಫಾರ್ಮೆಟ್​ನಲ್ಲೇ ದ್ವಿಶತಕ ಗಳಿಸೋದು ಸಾಮಾನ್ಯದ ಮಾತಲ್ಲ. ಆದ್ರೆ ಏಕದಿನ ಕ್ರಿಕೆಟ್‌ನಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಲೀಲಾಜಾಲವಾಗಿ ಬ್ಯಾಟ್ ಬೀಸ್ತಾರೆ. ಒಂದಲ್ಲ, ಎರಡಲ್ಲಾ ಬರೋಬ್ಬರಿ ಮೂರು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ವಿಶ್ವಕ್ರಿಕೆಟ್​ನಲ್ಲಿ ಒಡಿಐ ಫಾರ್ಮೆಟ್​​ನಲ್ಲಿ ಮೂರು ಸಲ ಡಬಲ್ ಸೆಂಚುರಿ ಸಿಡಿಸಿದ ಲಿಸ್ಟ್​ನಲ್ಲಿ ಫಸ್ಟ್ ಪ್ಲೇಸ್​ನಲ್ಲಿದ್ದಾರೆ.

ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಬಾರಿ 150+ ಸಾಧನೆ

ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಬರೋಬ್ಬರಿ 8 ಬಾರಿ 150+ ರನ್ ಬಾರಿಸುವ ಮೂಲಕ ಅತಿಹೆಚ್ಚು ಬಾರಿ ಈ ಸಾಧನೆ ಮಾಡಿದ ಜಗತ್ತಿನ ಏಕೈಕ ಬ್ಯಾಟರ್ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲಿ ಗರಿಷ್ಠ ರನ್

ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್​ಗೆ ಫಿಕ್ಸ್ ಆದ್ರೆ ಹೇಗೆ ಆಡ್ತಾರೆ ನಿಮ್ಗೆಲ್ಲಾ ಗೊತ್ತೇ ಇದೆ. ಓನ್ಲಿ ಫೋರ್ ಮತ್ತು ಸಿಕ್ಸ್ ಕಡೆ ಮಾತ್ರ ಫೋಕಸ್ ಮಾಡ್ತಾರೆ. ಹೀಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,231 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ಬರೆದಿದ್ದಾರೆ.

ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಆಟಗಾರ!

ರೋಹಿತ್ ಶರ್ಮಾ ಒಟ್ಟಾರೆ 159 ಬಾರಿ ಭಾರತ ಪರ ಟಿ20 ಪಂದ್ಯವನ್ನಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ. 2007 ರಿಂದ 2024ರ ಟಿ-20 ವಿಶ್ವಕಪ್​ವರೆಗೆ ಟಿ-20 ಫಾರ್ಮೆಟ್​​ನಲ್ಲಿ 4231 ರನ್ ಗಳಿಸಿದ್ದಾರೆ. ಇದ್ರಲ್ಲಿ 5 ಶತಕಗಳೂ ಕೂಡ ಸೇರಿವೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲಿ ಅತಿಹೆಚ್ಚು ಶತಕ

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 5 ಶತಕ ಸಿಡಿಸಿದ್ದಾರೆ. ಈ ಮೂಲಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಗ್ಲೆನ್ ಮ್ಯಾಕ್ಸ್‌ವೆಲ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲಿ ಅತಿಹೆಚ್ಚು ಸಿಕ್ಸರ್

ಕ್ರೀಸ್​ನಲ್ಲಿ ಒಂದು ಸಲ ಸೆಟಲ್ ಆದ್ರೆ ಎದುರಾಳಿ ಬ್ಯಾಟರ್​ಗಳ ಬೆವರಿಳಿಸೋ ರೋಹಿತ್ ಶರ್ಮಾ  ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬರೋಬ್ಬರಿ 205 ಸಿಕ್ಸರ್ ಸಿಡಿಸುವ ಮೂಲಕ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಮೀಪವೂ ಬಂದಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೂ 600ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 623 ಸಿಕ್ಸರ್ ಸಿಡಿಸಿದ್ದಾರೆ.

ಒಟ್ನಲ್ಲಿ ರೋಹಿತ್ ಶರ್ಮಾಗೆ ರೋಹಿತ್ ಶರ್ಮಾರೇ ಸರಿ ಸಾಟಿ. ಭಾರತದ ಪಾಲಿಗೆ ಲೆಜೆಂಡರಿ ಪ್ಲೇಯರ್ ಆಗಿರುವ ರೋಹಿತ್ ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ. ಸದ್ಯ ಟೆಸ್ಟ್ ಸರಣಿಯಲ್ಲಿ ಬ್ಯುಸಿ ಇರೋ ರೋಹಿತ್ 2025ರ ಚಾಂಪಿಯನ್ಸ್ ಟ್ರೋಫಿ ಹಾಗೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಮೇಲೆ ಕಣ್ಣಿಟ್ಟಿದ್ದಾರೆ.

Shwetha M

Leave a Reply

Your email address will not be published. Required fields are marked *