ಸಹರಾ ಮರುಭೂಮಿ ಮುಳುಗಿದ್ಯಾಕೆ? -ಜಗತ್ತಿಗೆ ವಿನಾಶದ ಮುನ್ಸೂಚನೆ ಸಿಕ್ಕಿತಾ?
50 ವರ್ಷಗಳ ನಂತರ ಮಹಾ ಪವಾಡ
ಮಳೆಯೇ ಕಾಣದ ನೆಲ.. ನೀರೇ ಕಾಣದ ಪ್ರದೇಶದಲ್ಲಿ ಎತ್ತ ನೋಡಿದರತ್ತ ಬರೀ ನೀರು. ವಿಶ್ವದ ಅತಿ ದೊಡ್ಡ ಮರುಭೂಮಿಯಾಗಿರೋ ಸಹರಾ ಮರುಭೂಮಿ ಹೇಳಿ ಕೇಳಿ ಮರಳುಗಾಡು ಪ್ರದೇಶ. ಆದ್ರೆ, ಇಲ್ಲೀಗ ಮಳೆರಾಯ ಸೂರ್ಯನಿಗೆ ಸವಾಲ್ ಹಾಕಿದ್ದಾನೆ. ಮಳೆಯೇ ಕಾಣದ ಪ್ರದೇಶದಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದಾನೆ. ಬರೋಬ್ಬರಿ 50 ವರ್ಷಗಳ ನಂತರ ಮರಳುಗಾಡು ಮುಳುಗಡೆಯಾಗಿದೆ. ದಶಕಗಳ ದಾಖಲೆ ಮಳೆ ಇಲ್ಲಿ ಸೃಷ್ಟಿಯಾಗಿದ್ದು ಹೇಗೆ?, ಜಗತ್ತನ್ನೇ ದಿಗ್ಭ್ರಾಂತಗೊಳಿಸುವ ಈ ಪವಾಡ ನಡೆದಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 39 ಫೋರ್.. 6 ಸಿಕ್ಸ್.. 309 ರನ್ – ಮುಲ್ತಾನ್ ಸುಲ್ತಾನ್ ಮತ್ತೆ ನೆನಪಾಗಿದ್ದೇಕೆ?
ಸ್ಕೂಲ್ ಡೇಸ್ ನಿಂದ ಇಲ್ಲಿಯವರೆಗೂ ಒಂದ್ ಕ್ವಶ್ವನ್ ಗೆ ಆನ್ಸರ್ ಮಾಡ್ಕೊಂಡು ಬಂದಿದ್ದೀರಾ. ಮಳೆಯೇ ಕಾಣದ ವಿಶ್ವದ ಅತಿದೊಡ್ಡ ಪ್ರದೇಶ ಯಾವುದು ಅಂತಾ. ಅದಕ್ಕೆ ಥಟ್ ಅಂತಾ ಉತ್ತರ ಕೂಡಾ ಕೊಟ್ಟಿದ್ದೀರಿ ಬಿಡಿ. ಸಹರಾ ಮರುಭೂಮಿ ನೋ ಡೌಟ್ ಅಂತಾ. ಆದ್ರೆ, ಇದೇ ಸಹರಾ ಮರುಭೂಮಿಯಲ್ಲಿ 50 ವರ್ಷಗಳ ನಂತರ ಪವಾಡವೇ ಸೃಷ್ಟಿಯಾಗಿದೆ. ಸೂರ್ಯನಿಗೆ ಸವಾಲು ಹಾಕಿ ಮರುಭೂಮಿಯನ್ನೇ ವರುಣ ಮುಳುಗಿಸಿದ್ದಾನೆ. ಜಗತ್ತಿನ ಅತಿ ದೊಡ್ಡ ಮರುಭೂಮಿಯಲ್ಲಿ ದಶಕಗಳ ದಾಖಲೆಯ ಮಳೆ ಸುರಿದಿದೆ. ಮರಳುಗಾಡಿನಲ್ಲಿ ನಡೆದ ಈ ವಿಚಿತ್ರ ಬೆಳವಣಿಗೆಯಿಂದ ನಿಸರ್ಗವೇ ಮುನಿಸಿಕೊಂಡಿತಾ ಅನ್ನೋ ಆತಂಕ ಶುರುವಾಗಿದೆ. ಇಲ್ಲಿ ಸ್ವಾಭೀವಿಕವಾಗಿ ಮಳೆ ಬರುವುದಿಲ್ಲ. ಹಾಗಾದ್ರೆ ಅಸ್ವಾಭಾವಿಕ ಮಳೆ ಬಂದಿರೋದಾದ್ರೂ ಯಾಕೆ ಅನ್ನೋದೇ ತರ್ಕಕ್ಕೆ ನಿಲುಕದ ದೊಡ್ಡ ಪ್ರಶ್ನೆಯಾಗಿದೆ.
ವಿಶ್ವದ ಅತಿದೊಡ್ಡ ಮರುಭೂಮಿಯಲ್ಲಿ ಧಾರಾಕಾರ ಮಳೆಯಾಗಿರೋ ಸೆಟಲೈಟ್ ಚಿತ್ರಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮರುಭೂಮಿಯ ತಾಳೆ ಮರಗಳು, ಮರಳು ದಿಬ್ಬಗಳ ನಡುವೆ ಜೀವ ಜಲ ಹರಿದಿದೆ. ಮರಳುಗಾಡಿನಲ್ಲಿ ಅಲ್ಲಲ್ಲಿ ಸರೋವರಗಳು ರಚನೆಯಾಗಿವೆ. ಅನೇಕ ವರ್ಷಗಳಿಂದ ಬರಪೀಡಿತವಾಗಿದ್ದ ಪ್ರದೇಶಗಳು ಮಳೆಯಿಂದ ಕಳೆಗಟ್ಟಿದೆ. ನಾಸಾ ಸೆಟಲೈಟ್ ಮೂಲಕ ಸೆರೆ ಹಿಡಿದ ಚಿತ್ರದಲ್ಲಿ ಝಾಗೋರಾ ಮತ್ತು ಟಾಟಾ ಮರುಭೂಮಿ ಪ್ರದೇಶದಲ್ಲಿನ ಒಣಗಿದ ಕೆರೆ ನೀರಿನಿಂದ ತುಂಬಿಕೊಂಡಿದೆ. ಮೊರಾಕ್ಕೋದಲ್ಲಿ ಭಾರಿ ಮಳೆಯೇ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ. ಸುಮಾರು ಅರ್ಧ ಶತಮಾನದಿಂದಲೂ ಒಣಗಿರುವ ಜಗೋರಾ ಮತ್ತು ಟಾಟಾ ನಡುವಿನ ಲೇಕ್ ಇರಿಕ್ವಿ ಸರೋವರವು ಪ್ರವಾಹದಿಂದ ತುಂಬಿಕೊಂಡಿರುವುದು ನಾಸಾ ಸೆರೆಹಿಡಿದಿರುವ ಉಪಗ್ರಹ ಚಿತ್ರಗಳಲ್ಲಿ ಕಾಣಿಸಿದೆ. ಈ ಬಗ್ಗೆ ಮಾತನಾಡಿರುವ ಮೊರಾಕೊದ ಹವಾಮಾನ ಸಂಸ್ಥೆಯ ಅಧಿಕಾರಿ ಹೂಸಿನ್ ಯೂಬೇಬ್, ಕಳೆದ 50 ವರ್ಷಗಳಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಈ ಪರಿ ಭಾರಿ ಪ್ರಮಾಣದ ಮಳೆಯನ್ನು ನಾವು ನೋಡಿರಲಿಲ್ಲ ಎಂದಿದ್ದಾರೆ.
ಮೊರಾಕ್ಕೋದಲ್ಲಿ ವರ್ಷದಲ್ಲಿ ಕೇವಲ 250 ಮಿಲಿ ಮೀಟರ್ ಮಳೆಯಾದರೆ ಹೆಚ್ಚು. ಆದರೆ ಎರಡು ದಿನಗಳ ಹಿಂದೆ ಸುರಿದ ಒಂದೇ ದಿನದ ಮಳೆಯ ಪ್ರಮಾಣ 100 ಮಿಲಿ ಮೀಟರ್ ಮಳೆ ಬಂದಿದೆ. 50 ವರ್ಷಗಳಿಂದ ಇಷ್ಟು ಪ್ರಮಾಣದ ಮಳೆಯನ್ನೇ ಕಂಡಿರಲಿಲ್ಲ. ಉಷ್ಣವಲಯದ ಚಂಡಮಾರುತದ ಪರಿಣಾಮದಿಂದ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಮೊರಾಕ್ಕೊದ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಹೂಸಿನ್ ಯೂಬೇಬ್ ಹೇಳಿದ್ದಾರೆ.
ಹವಾಮಾನದ ಪರಿಭಾಷೆಯಲ್ಲಿ ಇದನ್ನು ಉಷ್ಣವಲಯದ ಚಂಡಮಾರುತಗಳು ಎನ್ನುತ್ತಾರೆ. ಈಗ ಸುರಿದ ಮಳೆಯಿಂದಾಗಿ ಗಾಳಿಯಲ್ಲಿ ಹೆಚ್ಚು ತೇವಾಂಶವಿರಲಿದ್ದು, ಈ ಪ್ರದೇಶದ ಹವಾಗುಣದಲ್ಲಿ ಮುಂದಿನ ಹಲವು ತಿಂಗಳು ಮತ್ತು ವರ್ಷಗಳಲ್ಲಿ ಬದಲಾವಣೆಯಾಗಲಿದೆ. ಇದರಿಂದಾಗಿ ಹೆಚ್ಚೆಚ್ಚು ಆವಿಯಾಗುವಿಕೆ ಪ್ರಕ್ರಿಯೆ ನಡೆದು ಭವಿಷ್ಯದಲ್ಲೇ ಅಧಿಕ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಅವರು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ, ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾದ ಉದ್ದಕ್ಕೂ 9 ಮಿಲಿಯನ್ ಚದರ ಕಿಮೀ ದೂದವರೆಗೂ ಹರಡಿರುವ ಸಹಾರಾ ಮರುಭೂಮಿಗೆ ಜಾಗತಿಕ ತಾಪಮಾನದ ಕಾರಣದಿಂದ ಅನಾಹುತಕಾರಿ ಹವಾಮಾನದ ಅಪಾಯ ಹೆಚ್ಚುತ್ತಲೇ ಇದೆ. ಭವಿಷ್ಯದಲ್ಲಿ ಈ ಪ್ರಮಾಣದ ಬಿರುಗಾಳಿ ಮಳೆಯು ಪ್ರದೇಶದಲ್ಲಿ ಪದೇ ಪದೇ ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. “ಹೆಚ್ಚುತ್ತಿರುವ ತಾಪಮಾನದ ಫಲಿತಾಂಶವಾಗಿ ಹೈಡ್ರಾಲಾಜಿಕಲ್ ವರ್ತುಲವು ವೇಗಗೊಂಡಿದೆ. ಅದು ಇನ್ನಷ್ಟು ಅನಿಯತ ಹಾಗೂ ಅಂದಾಜಿಸಲಾಗದಂತಾಗಿದೆ. ನಾವು ಅತಿಯಾದ ಅಥವಾ ಅತಿ ಕಡಿಮೆ ನೀರು ಎರಡರಿಂದಲೂ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದೇವೆ. ಬೆಚ್ಚಗಿನ ವಾತಾವರಣವು ಹೆಚ್ಚು ತೇವಾಂಶವನ್ನು ಹಿಡಿದುಕೊಳ್ಳುತ್ತದೆ. ಇದು ಭಾರಿ ಮಳೆಗೆ ಪೂರಕವಾಗಿರುತ್ತದೆ. ಹೆಚ್ಚು ತ್ವರಿತ ಬಾಷ್ಪೀಕರಣ ಮತ್ತು ಮಣ್ಣಿನ ಒಣಗುವಿಕೆಯು ಬರ ಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ” ಎಂದು ಜಾಗತಿಕ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೊ ತಿಳಿಸಿದ್ದಾರೆ. ಹೆಚ್ಚುತ್ತಿರುವ ತಾಪಮಾನದ ಫಲಿತಾಂಶವಾಗಿ ಹೈಡ್ರಾಲಾಜಿಕಲ್ ವರ್ತುಲವು ವೇಗಗೊಂಡಿದೆ. ಬೆಚ್ಚಗಿನ ವಾತಾವರಣವು ಹೆಚ್ಚು ತೇವಾಂಶವನ್ನು ಹಿಡಿದುಕೊಳ್ಳುತ್ತದೆ. ಇದು ಭಾರಿ ಮಳೆಗೆ ಪೂರಕವಾಗಿರುತ್ತದೆ. ಅತಿಯಾದ ನೀರು, ಅತಿ ಕಡಿಮೆ ನೀರು ಎರಡರಿಂದಲೂ ಹೆಚ್ಚಿನ ಸಮಸ್ಯೆ. ಹೆಚ್ಚು ತ್ವರಿತ ಬಾಷ್ಪೀಕರಣ ಮತ್ತು ಮಣ್ಣಿನ ಒಣಗುವಿಕೆಯು ಬರ ಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಜಾಗತಿಕ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೊ ತಿಳಿಸಿದ್ದಾರೆ. ಸಹಾರಾ ಮರುಭೂಮಿಯಲ್ಲಿ ಪ್ರವಾಹ ಮಾತ್ರ. ಹಿಂದೊಮ್ಮೆ ಹಿಮಪಾತದಿಂದಲೂ ಸುದ್ದಿಯಾಗಿತ್ತು. ಆದ್ರೆ, ವಿಷಯ ಏನೆಂದ್ರೆ. ಜಾಗತಿಕ ತಾಪಮಾನ ಏರಿಕೆಯಿಂದ ಪ್ರಕೃತಿಯಲ್ಲಿ ಸಮತೋಲನ ಹೆಚ್ಚಾಗುತ್ತಿರುವುದು ಆತಂಕಾರಿ ವಿಷಯ. ಜಾಗತಿಕ ತಾಪಮಾನ ನಿಯಂತ್ರಿಸುವುದು ಅವಶ್ಯವಾಗಿದೆ.
ಮಳೆ ನೀರು, ಮರಳು ಮತ್ತು ಓಯಸಿಸ್ ಮೂಲಕ ನುಗ್ಗಿದ ಪರಿಣಾಮ ಈ ಪ್ರದೇಶದಲ್ಲಿ ಸಾವು ನೋವು ಕೂಡಾ ಸಂಭವಿಸಿದೆ. ಕಳೆದ ವರ್ಷ ಸಂಭವಿಸಿದ್ದ ಮಾರಕ ಭೂಕಂಪನದಿಂದ ಈ ಪ್ರದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಅದರ ನಡುವೆಯೇ ಪ್ರವಾಹದ ಅನಿರೀಕ್ಷಿತ ಆಘಾತ ಎದುರಾಗಿರೋದು ಅಸ್ವಾಭಾವಿಕವೇ ಸರಿ. ಅದೇನೇ ಇರಲಿ, ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡದಾದ, ಅತಿ ತಾಪಮಾನದ ಮರಳುಗಾಡು ಎನಿಸಿರುವ ಉತ್ತರ ಆಫ್ರಿಕಾದ ಸಹಾರಾ ಮರುಭೂಮಿ ಈ ರೀತಿ ಅಸಹಜ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಇದು, ಮುಂದಿನ ದಿನಗಳಲ್ಲಿ ಜಗತ್ತಿಗೆ ಮಾರಕವಾಗುತ್ತಾ ಅನ್ನೋ ಆತಂಕ ಶುರುವಾಗಿದ್ದಂತೂ ಸುಳ್ಳಲ್ಲ.