ಬಿಗ್​ಬಾಸ್​ನಲ್ಲಿ ಅವಮಾನ ಆಗಿದ್ದು ನಿಜನಾ? – ಮೌನ ಮುರಿದ ಕಿಚ್ಚ ಸುದೀಪ್‌!

ಬಿಗ್​ಬಾಸ್​ನಲ್ಲಿ ಅವಮಾನ ಆಗಿದ್ದು ನಿಜನಾ? – ಮೌನ ಮುರಿದ ಕಿಚ್ಚ ಸುದೀಪ್‌!

ಬಿಗ್ ಬಾಸ್ ಕನ್ನಡ ಸೀಸನ್ 11 ತನ್ನ ಕೊನೆಯ ಸೀಸನ್ ಅಂತ ಕಿಚ್ಚ ಸುದೀಪ್ ಅನೌನ್ಸ್‌ ಮಾಡಿದ್ದಾರೆ. ಶೋಗೆ ಸುದೀಪ್ ವಿದಾಯ ಘೋಷಿಸಿದ ಮೇಲೆ ಕನ್ನಡ ಕಿರುತೆರೆಯಲ್ಲೇ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಇದ್ದಕ್ಕಿದ್ದಂತ ಸುದೀಪ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಅನ್ನೋ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಇದೀಗ ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಟೆಸ್ಟ್ ಸರಣಿಗೆ ಕೌಂಟ್‌ಡೌನ್ – ಮೊದಲ ಪಂದ್ಯ ಮಳೆಗೆ ಆಹುತಿ?

ಸುದೀಪ್‌ ಬಿಗ್‌ ಬಾಸ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಇದಕ್ಕೆ ಕಾರಣವೇನು? ಬಿಗ್​ಬಾಸ್​ನಲ್ಲಿ ಸುದೀಪ್​ಗೆ ಅವಮಾನ ಆಗಿದ್ದು ನಿಜನಾ? ಸುದೀಪ್ ಹಾಗೂ ಬಿಗ್ ಬಾಸ್ ಕನ್ನಡದ ಡೈರೆಕ್ಟರ್ ಪ್ರಕಾಶ್ ನಡುವೆ ಮನಸ್ತಾಪ ಸತ್ಯನಾ? ಹೀಗೆ ಹತ್ತಾರು ಪ್ರಶ್ನೆಗಳು ಅನೇಕರನ್ನ ಕಾಡುತ್ತಿದೆ. ಇದೀಗ ಹರಿದಾಡುತ್ತಿರುವ ವದಂತಿಗಳಿಗೆಲ್ಲಾ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ ಸುದೀಪ್‌, ನನ್ನ ಟ್ವೀಟ್ ನೋಡಿ, ಗೌರವಿಸಿ ಬಂದ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಸ್ಪೂರ್ತಿ ತುಂಬುತ್ತದೆ. ಡೈರೆಕ್ಟರ್ ಪ್ರಕಾಶ್ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಡೈರೆಕ್ಟರ್ ಪ್ರಕಾಶ್ ತುಂಬಾ ಪ್ರತಿಭಾವಂತ & ಶಕ್ತಿಯುತ ವ್ಯಕ್ತಿ. ನನ್ನ ಜೊತೆ ಕೆಲಸ ಮಾಡ್ತಿರೋ ತಂಡ ಆರೋಪ ಎದುರಿಸುತ್ತಿದೆ. ಅನಗತ್ಯ ಆರೋಪ ಎದುರಿಸುತ್ತಿರುವಾಗ ಸುಮ್ಮನೆ ಕುಳಿತುಕೊಳ್ಳಲ್ಲ ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *