ದರ್ಶನ್‌ಗೆ ಯಾಕೆ ಬೇಲ್ ಸಿಕ್ಕಿಲ್ಲ? – ದೀಪಾವಳಿಯೊಳಗೆ D-BOSS ಹೊರಕ್ಕೆ
ಹೈಕೋರ್ಟ್‌ನಲ್ಲಿ ಈ ಕೇಸ್ ಏನಾಗುತ್ತೆ?
ಪವಿತ್ರಾಗೌಡಗೆ ಕೆಟ್ಟದಾಗಿ ಮ್ಯಾಸೇಜ್ ಮಾಡ್ದಾ ಅನ್ನೋ ಕಾರಣಕ್ಕೆ ಕೊಲೆ ಮಾಡಿದ ಆರೋಪದಲ್ಲಿ ಅಂದರ್ ಆಗಿ ಜೈಲು ಸೇರಿರೋ ದರ್ಶನ್‌ಗೆ ಈಗ ಬೇಲ್ ಟೆನ್ಷನ್ ಶುರುವಾಗಿದೆ. ಬೇಲ್ ಯಾವಾಗ ಆಗುತ್ತೆ ಅನ್ನೋ ಭಯ ಹೆಚ್ಚಾಗಿದೆ. ಹೊರಗಿದ್ದಾಗ ನಾನ್ ನಡೆದಿದ್ದೇ ದಾರಿ ಅಂತಾ ಬಿಂದಾಸ್ ಆಗಿದ್ದ ದಾಸ ಈಗ ವಿಲವಿಲ ಒದ್ದಾಡುತ್ತಿದ್ದಾರೆ. ಅದರಲ್ಲೂ ಹಬ್ಬ ಬಂದ್ರೆ ದಾಸ್ ಫುಲ್ ದರ್ಬಾರ್ ಮಾಡುತ್ತಿದ್ದರು.. ಆದ್ರೆ ಈಗ ಹಬ್ಬದ ಟೈಂನಲ್ಲಿ ಡಿ ಬಾಸ್ ಜೈಲಿ ಸೇರಿದ್ದಾರೆ.
ವಿಘ್ನವನ್ನ ದೂರ ಮಾಡೋ ವಿನಾಯಕ ಹಬ್ಬಕ್ಕೂ ಹೊರ ಬಂದಿಲ್ಲ.. ತನ್ನ ಮನೆಯಲ್ಲಿದ್ದ ಐಷರಾಮಿ ಕಾರುಗಳನ್ನ ಪೂಜೆ ಮಾಡಿ ಜಾಲಿ ರೈಡ್ ಮಾಡುತ್ತಿದ್ದ ವಿಜಯದಶಮಿಗೆ ಕೂಡ ಬೇಲ್ ಸಿಕ್ಕಿಲ್ಲ. ಹಾಗಿದ್ರೆ ಬೆಳಕಿನ ಹಬ್ಬ ದೀಪಾವಳಿಯೊಳಗೆ ದರ್ಶನ್‌ಗೆ ಬೇಲ್ ಸಿಗುತ್ತಾ.. ಜೈಲಿನಿಂದ ರಿಲೀಸ್ ಆಗ್ತಾರಾ ಅನ್ನೋದು ಸಾಕಷ್ಟು ಜನರ ಪ್ರಶ್ನೆಯಾಗಿದೆ. ದೀಪಾವಳಿಯೊಳಗೆ ದರ್ಶನ್‌ಗೆ ಬೇಲ್ ಯಾವ ಕಾರಣಕ್ಕೆ ಸಿಗಲ್ಲ.. ಒಂದು ವೇಳೆ ದರ್ಶನ್ ಗೆ ಬೇಲ್ ಸಿಗದಿದ್ರೆ ಅವರ ಮುಂದಿನ ನಡೆ ಅನ್ನೋ ಏನು ಬಗ್ಗೆ ಎಲ್ಲರಿಗೂ ಇದೀಗ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: ಈ ಕ್ಯಾಬ್ ಡ್ರೈವರ್‌ನ ಭಯ್ಯಾ ಅಂತ ಕರೆಯಬಾರದು! – ಶಾಕ್ ಆಗುವಂತಿದೆ ಡ್ರೈವರ್ ರೂಲ್ಸ್?
ಸಾಕಷ್ಟು ಅಭಿಮಾನಿ ಬಳಗವನ್ನ ಹೊಂದಿರೋ ದರ್ಶನ್‌ನನ್ನ ಆಚೆ ತರಲು ವಕೀಲ ಸಿವಿ ನಾಗೇಶ್ ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಹೀಗಾಗಿ ರೇಣುಕಾಸ್ವಾಮಿ ಕೇಸ್ ಕುರಿತು ಪ್ರಬಲ ವಾದ ಮಂಡನೆ ಮಾಡಿದ್ರು. ಹಾಗೇ ಜಾಮೀನು ನೀಡದಂತೆ ಕೂಡ ಪ್ರಬಲವಾದ ವಾದ ಮಂಡನೆಯಾಗಿತ್ತು. ದರ್ಶನ್ ವಿರುದ್ಧ ಸಾಕಷ್ಟು ಅಂಶಗಳು ಕಣ್ಣಿಗೆ ಕಟ್ಟಿಕೊಡುವಂತಿದೆ.. ಹೀಗಾಗಿ ಇದರ ಆಧಾರದಲ್ಲಿ ದರ್ಶನ್‌ಗೆ ಬೇಲ್ ನೀಡದಂತೆ ಸರ್ಕಾರಿ ವಕೀಲರು ವಾದ ಮಂಡಿಸಿದ್ದಾರೆ. ಹೀಗಾಗಿ ದರ್ಶನ್‌ಗೆ ಬೇಲ್ ಸಿಕ್ಕಿಲ್ಲ.
ದರ್ಶನ್‌ಗೆ ಬೇಲ್ ಸಿಗದಿರಲು ಕಾರಣವೇನು..?
ದರ್ಶನ್‌ಗೆ ಯಾಕೆ ಬೇಲ್ ನೀಡಬಾರದು ಅನ್ನೋದನ್ನ ಸರ್ಕಾರದ ಪರ ವಕೀಲರು ಕೋರ್ಟ್‌ಗೆ ಸ್ವಷ್ಟವಾಗಿ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿರುವುದು ಮತ್ತು ಆತನ ಸಾವಿಗೆ ಕಾರಣವಾದ ಉದ್ದೇಶಗಳು ಸ್ಪಷ್ಟವಾಗಿ ನ್ಯಾಯಲಯಕ್ಕೆ ತಿಳಿಸಲಾಗಿದೆ. ಮೃತ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿರುವ ಹೇಳಿಕೆಯನ್ನ ಕೂಡ ನ್ಯಾಯಾಲಯದ ಮುಂದೆ ಇಡಲಾಗಿದೆ. ರೇಣುಕಾಸ್ವಾಮಿ ಕೊಲೆ ಬಳಿಕ, ಪ್ರಕರಣದ ಸಾಕ್ಷಿ ನಾಶಕ್ಕೆ ಯತ್ನಿಸಿರುವುದನ್ನು ಸಹ ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಸಮಾಜದಲ್ಲಿ ಅತ್ಯಂತ ಪ್ರಭಾವಿಯಾಗಿ ಬೆಳೆದಿರುವ ದರ್ಶನ್, ಕೊಲೆ ನಡೆದ ಮರು ಕ್ಷಣವೇ ಭಾರೀ ಪ್ರಮಾಣದ ಹಣ ಹೊಂದಿಸಿ, ಇತರರನ್ನು ಸರೆಂಡರ್ ಮಾಡಿಸಲು ಕಳುಹಿಸಿದ್ದರು. ಆತನ ಹಣದಿಂದ ಏನು ಬೇಕಾದರೂ ಮಾಡಬಲ್ಲ ಎಂದು ಈಗಾಗಲೇ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ರೇಣುಕಾಸ್ವಾಮಿ ಸಾವಿನ ನಂತರ ಕೆಲವು ಪ್ರಭಾವಿ ರಾಜಕಾರಣಗಳಿಗೆ ಕರೆ ಮಾಡಿರುವುದು ಬಗ್ಗೆಯೂ ಮಾಹಿತಿ ನೀಡಲಾಗಿದೆ. ಪೊಲೀಸರಿಗೆ ದರ್ಶನ್ ನನ್ನು ಬಂಧಿಸದಂತೆ ನಿರಂತರ ಒತ್ತಡ ಬಂದಿರುವುದನ್ನೂ ಹೇಳಲಾಗಿದೆ. ಒಂದು ವೇಳೆ ದರ್ಶನ್ ಹೊರ ಬಂದ ನಂತ್ರ ದರ್ಶನ್ ವಿರುದ್ಧ ಹೇಳಿರುವ ಸಾಕ್ಷಿ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸರ್ಕಾರಿ ಪರ ವಕೀಲರು ವಾದ ಮಾಡಿದ್ರು.
ಈ ಮೇಲಿನ ಎಲ್ಲ ಪ್ರಬಲ ಕಾರಣಗಳು ಇದ್ದು ದರ್ಶನ್ ಗೆ ಜಾಮೀನು ನೀಡುವುದು ಸರಿಯಲ್ಲ ಎಂದು ವಾದ ಮಂಡಿಸಲಾಗಿತ್ತು. ಇದನ್ನೇ ಪರಿಗಣನೆ ತೆಗೆದುಕೊಂಡ ಕೋರ್ಟ್ ಜಾಮೀನು ನೀಡಿಲ್ಲ.
ಕಳೆದ 3-4 ತಿಂಗಳಿಂದ ಜೈಲಿನಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಅವರ ಪಾಲಿಗೆ ಈ ಬಾರಿ ಹಬ್ಬಗಳ ಆಚರಣೆಯ ಸಡಗರ, ಸಂಭ್ರಮವಿಲ್ಲದಂತಾಗಿದೆ. ಪ್ರತಿ ವರ್ಷ ನಾಡ ಹಬ್ಬ ದಸರಾದಲ್ಲಿ ಕುಟುಂಬದೊಂದಿಗೆ ವಿಜೃಂಬಣೆಯಿಂದ ತೊಡಗಿಸಿಕೊಳ್ಳುತ್ತಿದ್ದ ದಾಸ ಜೈಲಿನಲ್ಲಿ ಆಚರಿಸಿದ್ದಾರೆ. ಗಣೇಶ ಹಬ್ಬವನ್ನೂ ಅವರು ಜೈಲಿನಲ್ಲೇ ಆಚರಿಸಿದ್ದರು. ಇದೀಗ ಬೇಲ್ ಸಿಗದಿದ್ರೆ ಬೆಳಕಿನ ಹಬ್ಬ ದೀಪಾವಳಿಯನ್ನೂ ಕತ್ತಲಕೋಣೆಯಲ್ಲೇ ಆಚರಿಸಬೇಕಾಗಿದೆ.…
ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕಾರಾಗೃಹ ಸೇರಿರುವ ದರ್ಶನ್, 57ನೇ ಸಿಸಿಹೆಚ್ ಕೋರ್ಟ್ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಈಗ ಮುಂದೆ ಹೈಕೋರ್ಟ್‌ನ ಮೊರೆ ಹೋಗುವ ಸಾಧ್ಯತೆ ಇದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಈಗಾಗಲೇ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಜೈಲಿನಲ್ಲಿ ‘ಡಿ’ ಬಾಸ್‌ಗೆ ಡಬಲ್ ಶಾಕ್
ಬೇಲ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಡಿ ಬಾಸ್‌ಗೆ ಬಿಗ್ ಶಾಕ್ ಸಿಕ್ಕಿದೆ. 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಬೇಲ್ ರಿಜಕ್ಟ್ ಆಗಿದೆ. ಈ ಬೇಸರ ಒಂದ್ಕಡೆಯಾದ್ರೆ ಬೆನ್ನ ನೋವು ವಿಪರೀತವಾಗಿ ಕಾಡುತ್ತಿದೆ. ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿದ್ದು, ಕಾರಾಗೃಹದ ವೈದ್ಯರು ಟೆಸ್ಟ್ ಮಾಡಿ ಮಾತ್ರಗಳನ್ನ ನೀಡಿದ್ದಾರೆ. ಅದಾದ ಬಳಿಕ ಹೊರಗಿನಿಂದ ವೈದ್ಯರನ್ನು ಕರೆಸಿ ತೋರಿಸಲಾಗಿದೆ. ವೈದ್ಯರು ಎಂಆರ್ಐ ಮತ್ತು ಇತರೆ ಕೆಲ ಸ್ಕ್ಯಾನ್ಗೆ ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ಬಳ್ಳಾರಿಯಲ್ಲಿ ಚಿಕಿತ್ಸೆಯಾಗಲಿ ಅಥವಾ ಇನ್ಯಾವುದೇ ಸ್ಕ್ಯಾನ್ ಆಗಲಿ ಮಾಡಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿಸಿದ್ದಾರೆ. ಅಷ್ಟೇ ಅಲ್ಲದೆ, ನಾನು ಚಿಕಿತ್ಸೆ ಪಡೆದುಕೊಂಡರೆ ಅದು ಬೆಂಗಳೂರಿನಲ್ಲೇ ಎಂದು ಪಟ್ಟು ಹಿಡಿದಿದ್ದಾರೆ. ಇದು ಪೊಲೀಸರಿಗೆ ತಲೆ ನೋವಾಗಿದೆ. ಬೇಲ್ ಸಿಕ್ಕಿಲ್ಲ. ಇತ್ತ ಬೆನ್ನು ನೋವು ಕೂಡ ದರ್ಶನ್‌ಗೆ ಕಮ್ಮಿಯಾಗುತ್ತಿಲ್ಲ.