ಬಿಗ್ ಬಾಸ್ ನಲ್ಲಿ ಕಿಚ್ಚನಿಗೆ ಅವಮಾನ? – ಸುದೀಪ್ ಹೊರ ಬರಲು ಇದೇ ಕಾರಣ
ಅನುಮಾನ ಮೂಡಿಸಿದ ಪೋಸ್ಟ್?
ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ ಜಸ್ಟ್ ಎರಡು ವಾರ ಆಯ್ತು ಅಷ್ಟೇ.. TRP ರೇಸ್‌ನಲ್ಲಿ ರೇಸ್ ನಲ್ಲೂ ಕೂಡ ಮುಂದೆ ಇತ್ತು. ಇದಕ್ಕೆ ಕಾರಣ ಬಾದ್ ಷಾ ಕಿಚ್ಚ ಸುದೀಪ್ ಅಂದ್ರೆ ಹೇಳಿದ್ರೆ ತಪ್ಪಾಗಲ್ಲ.. ಆದ್ರೀಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ರಾತ್ರೋ ರಾತ್ರಿ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.. ಯಾವುದೇ ಸುಳಿವು ನೀಡದೇ ನೇರವಾಗಿ, ಇದೇ ನನ್ನ ಕೊನೇ ಬಿಗ್ ಬಾಸ್ ಆಗಿರಲಿದೆ ಎಂದು ಅನೌನ್ಸ್ ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚ ಶೋನಿಂದ ಹೊರ ಹೋಗಲು ಕಾರಣವೇನು? ಸುದೀಪ್ ಗೆ ಶೋ ನಲ್ಲಿ ಅವಮಾನ ಮಾಡಲಾಯ್ತಾ? ಬಿಗ್ ಬಾಸ್ ಹೇಳಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಯುಐ ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ – ಬುದ್ದಿವಂತನ ಚಿತ್ರ ಯಾವಾಗ ತೆರೆಗೆ?
ಬಿಗ್ ಬಾಸ್ ಕನ್ನಡ ಶೋ ಅಂದ್ರೆನೇ ಥಟ್ ಅಂತ ನೆನಪಾಗುವುದು ಕಿಚ್ಚ ಸುದೀಪ್. ಕಳೆದ ಹತ್ತು ವರ್ಷದಿಂದ ಬಿಗ್ ಬಾಸ್ ಜರ್ನಿಯಲ್ಲಿ ಮುಂದುವರೆದಿದ್ದಾರೆ. ಬಿಗ್ ಬಾಸ್‌ನಲ್ಲಿ ವಾರದ ಕಥೆ ಕಿಚ್ಚನ ಜೊತೆಗೆ ಪಂಚಾಯ್ತಿ ಕೇಳುವುದಕ್ಕೆ ಚೆಂದ. ಅದೆಷ್ಟೋ ಅಭಿಮಾನಿಗಳು ಅವರ ಪಂಚಾಯ್ತಿಗಾಗಿ ಕಾಯ್ತಾ ಇದ್ರು.. ಶನಿವಾರ ಭಾನುವಾರ ಬಂತೆಂದರೆ ಸಾಕು ಮನೆಮಂದಿಯೆಲ್ಲಾ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಾತ್ರಿ 9 ಗಂಟೆಗೆ ಟಿವಿ ಮುಂದೆ ಕಾದು ಕುಳಿತುಕೊಳ್ಳುತ್ತಾರೆ. ಅದು ಬಿಗ್‌ಬಾಸ್ ಮೇಲಿನ ಪ್ರೀತಿಯೂ ಹೌದು.. ಕಿಚ್ಚನ ಮೇಲಿನ ಅಭಿಮಾನವೂ ಹೌದು. ಕಿಚ್ಚ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳಲೆಂದೇ ಸಾವಿರಾರು ಮಂದಿ ಕಾಯುತ್ತಿದ್ದರು. ಇನ್ನು ಕಿಚ್ಚ ಕೂಡ ಶೋ ಮೇಲೆ ತುಂಬಾ ಪ್ರೀತಿ, ಗೌರವ ನೀಡ್ತಾ ಬಂದಿದ್ರು.. ಎಷ್ಟೋ ಬ್ಯೂಸಿ ಇದ್ರು.. ಯಾವ್ದೇ ಊರಲ್ಲಿ ಇದ್ರು.. ಶೋ ನಿರೂಪಣೆಗಾಗಿ ಓಡೋಡಿ ಬರ್ತಾ ಇದ್ರು.. ಆದ್ರೀಗ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.. ಇನ್ಮುಂದೆ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಅಂತಾ ಹೇಳೇ ಬಿಟ್ಟಿದ್ದಾರೆ..
ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕರ್ನಾಟಕದ ಜನತೆಗೆ ಅದರಲ್ಲೂ ಬಿಗ್‌ಬಾಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಅವರು ಇದು ತನ್ನ ನಿರೂಪಣೆಯ ಕೊನೆಯ ಬಿಗ್‌ಬಾಸ್ ಕಾರ್ಯಕ್ರಮ ಎಂದು ಅನೌನ್ಸ್ ಮಾಡಿದ್ದಾರೆ. ತಾನು ನಿರೂಪಕನಾಗಿರುವ ಕೊನೆಯ ಬಿಗ್‌ಬಾಸ್ ಸೀಸನ್ ಇದಾಗಿದ್ದು, ಮುಂದಿನ ವರ್ಷದಿಂದ ತಾನು ಇದರಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ. ಈ ಸೀಸನ್ ಶುರುವಾಗುವ ತನಕ ಬಿಗ್‌ಬಾಸ್‌ನಿಂದ ಹೊರಬರುವ ಬಗ್ಗೆ ಏನೂ ಹೇಳದ ಕಿಚ್ಚ ಇದೀಗ ಕೇವಲ ಎರಡೇ ವಾರಕ್ಕೆ ಈ ನಿರ್ಧಾರ ತಳೆದಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮ ಟಿವಿಆರ್ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. 10+1 ವರ್ಷಗಳ ಪ್ರಯಾಣ ನನ ಪಾಲಿಗೆ ಬೆಸ್ಟ್ ಆಗಿದೆ. ಇದು ಮುಂದೆ ಸಾಗಿ ನಾನು ಏನು ಮಾಡಬೇಕೆಂಬುದನ್ನು ತಿಳಿಯುವ ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಹಾಗೂ ಹಲವು ವರ್ಷಗಳಿಂದ ಬಿಗ್ ಬಾಸ್ ಫಾಲೋ ಮಾಡ್ತಿರುವ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಸುದೀಪ್ ಟ್ವೀಟ್ನಲ್ಲಿ ಬರೆದಿದ್ದಾರೆ.
ಈ ಬಾರಿಯ ಸೀಸನ್ ಆರಂಭಕ್ಕೂ ಮುನ್ನ ಜನರು ಎಲ್ಲಿಯತನಕ ನನ್ನನ್ನು ಟಿವಿಯಲ್ಲಿ ಇರು ಅಂತಾ ಹೇಳ್ತಾರೋ ಅಲ್ಲಿಯತನಕ ನಾನು ಈ ಶೋ ನಡೆಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಅದರರ್ಥ ಸದ್ಯಕ್ಕೆ ಬಿಗ್‌ಬಾಸ್ ಕಾರ್ಯಕ್ರಮದಿಂದ ಹೊರಬರೋದಿಲ್ಲ ಅನ್ನೋ ಸಂದೇಶವಿತ್ತು ಅಂತಾನೇ ಹೇಳಲಾಗ್ತಿತ್ತು. ಆದರೆ ಇದೀಗ BBK 11 ಶುರುವಾದ ಎರಡೇ ವಾರಕ್ಕೆ ಸುದೀಪ್ ಈ ನಿರ್ಧಾರ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ.
ಇವೆಲ್ಲದ್ರ ಮಧ್ಯೆ ಕನ್ನಡಪರ ಹೋರಾಟಗಾರ, ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸುದೀಪ್ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ರೂಪೇಶ್ ರಾಜಣ್ಣ, ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ, ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕರೇ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು, ಅಸಲಿ ವಿಷಯ ನಾಳೆ ಮಾತಾಡ್ತೀನಿ.. ಎಂದು ನಿನ್ನೆ ರಾತ್ರಿಯೇ ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರು ತಾನು ತನ್ನ ಮುಂದಿನ ಯೋಜನೆಗಳಿಗೆ ಸಮಯ ಕೊಡಬೇಕಾದ ಕಾಲ ಎಂದು ಒಂದು ಕಡೆ ಹೇಳಿದರೆ, ಮತ್ತೊಂದು ಕಡೆ ರೂಪೇಶ್ ರಾಜಣ್ಣ ಮಾಡಿರುವ ಟ್ವೀಟ್ ಬೇರೆಯೇ ಕಥೆ ಹೇಳುತ್ತಿದೆ. ಕಿಚ್ಚ ಸುದೀಪ್ ಅವರು ಮನಸಾರೆ ಈ ಕಾರ್ಯಕ್ರಮದಿಂದ ಹೊರ ಬಂದಿದ್ದು ಅಲ್ಲ, ಅಲ್ಲೇನೋ ಆಗಿದೆ ಎಂಬ ಕಥೆಯನ್ನು ರೂಪೇಶ್ ರಾಜಣ್ಣ ಟ್ವೀಟ್ ಹೇಳುತ್ತಿದೆ. ಅಸಲಿಗೆ ಆಗಿದ್ದೇನು ಅನ್ನೋ ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ.
ಇನ್ನು ಇವತ್ತು ಬೆಳ್ಳಂಬೆಳಗ್ಗೆಯೇ ಸ್ಪರ್ಧಿಗಳಿಗೆ ಶಾಕ್ ನೀಡಿದೆ. ಫೋನ್ ಕರೆ ಮಾಡಿ ಮನೆಯ ಕ್ಯಾಪ್ಟನ್ ಜೊತೆ ಮಾತನಾಡಿದ ಬಿಗ್ ಬಾಸ್ ನಾನು ಈ ಮನೆಯಿಂದ ಹೊರಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಬಿಗ್ ಬಾಸ್ ಮಾತು ಕ್ಯಾಪ್ಟನ್ ಸೇರಿ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ. ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿ ಮಚ್ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅದಕ್ಕೆ ಉತ್ತರವಾಗಿ ಶಿಶಿರ್ ಥ್ಯಾಂಕ್ಯೂ ಬಿಗ್ ಬಾಸ್ ಎಂದಿದ್ದಾರೆ. ಶಿಶಿರ್ ಮಾತಿಗೆ ಕೋಪಗೊಂಡ ಬಿಗ್ ಬಾಸ್ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ, ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್ ಬಾಸ್ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಬಿಗ್ ಬಾಸ್ ಮಾತು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂಬ ಹೇಳಿಕೆಯೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಿಚ್ಚನ ಟ್ವೀಟ್ ಮತ್ತು ಇದು ಕೊನೆಯ ನಿರೂಪಣೆ ಎಂಬ ಟ್ವೀಟ್ಗೆ ತಕ್ಕಂತೆ ಬಿಗ್ ಬಾಸ್ನ ಈ ಮಾತು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಇದೀಗ ಕಿಚ್ಚ ಸುದೀಪ್ ನಿರ್ಧಾರ, ರೂಪೇಶ್ ರಾಜಣ್ಣ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ಬಿಗ್ ಬಾಸ್ ವೀಕ್ಷಕರು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ಈ ಶೋಗೆ ಕಿಚ್ಚ ಸುದೀಪ್ ಅವರೇ ಕಳಶ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಈ ನಿಮ್ಮ ನಿರ್ಧಾರ ತುಂಬ ಒಳ್ಳೆಯದು. ಇನ್ಮೇಲಾದ್ರೂ ಸಿನಿಮಾ ಕಡೆಗೆ ಗಮನ ಹರಿಸಿ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ಕಿಚ್ಚ ಸುದೀಪ್ ಈ ನಿರ್ಧಾರಕ್ಕೆ ಕಾರಣ ಏನು? ಮುಂದೆ ಯಾರು ಹೋಸ್ಟ್ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.