12 ಹೆಂಡತಿ.. 569 ಮೊಮ್ಮಕ್ಕಳು..! – 102 ಮಕ್ಕಳ ಅಪ್ಪನ ನಿರ್ಧಾರವೇನು?
ಆಹಾರವಿಲ್ಲ.. ಹಣವಿಲ್ಲ.. ಕಷ್ಟಕಷ್ಟ
ಅದೆಷ್ಯೋ ಜನ ಯಾಕ್ ಆದ್ರೂ ಮದ್ವೇ ಅದ್ನೋ.. ಯಾಕಾದ್ರೂ ಮಕ್ಕಳು ಮಾಡಿಕೊಂಡ್ನೋ ಅಂತಾ ಬೇಜರ್ ಮಾಡಿಕೊಳ್ತಿರ್ತಾರೆ.. ಹೆಂಡ್ತಿ, ಇರೋ ಒಂದೇ ಒಂದು ಮಗುವನ್ನ ಸಾಕೋಕೆ ಹೆಣಗಾಡುತ್ತಾರೆ. ಮದುವೆ ಅಂದ್ರೆ ಟಾರ್ಚರ್ ಅನ್ನೋ ರೇಂಜ್‌ಗೆ ಗೋಳೋ ಅಂತಾ ಅಳ್ತಾ ಇರ್ತಾರೆ.. ಆದ್ರೆ ಇಲ್ಲೊಬ್ಬನ ಸ್ಟೋರಿ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಹಾಗಿದ್ರೆ ಒಬ್ಬ ವ್ಯಕ್ತಿ 570 ಜನರ ಹುಟ್ಟಿಗೆ ಕಾರಣ ಆಗಿರೋದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: NZ ಬೇಟೆಗೂ ಸೇಮ್ SQUAD – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?
ಹಿಂದೆಲ್ಲ ಒಂದ್ ಕಾಲ ಇತ್ತು ಮನೆ ತುಂಬ ಮಕ್ಕಳು ಇರ್ಬೇಕು.. ಮನೆ ತುಂಬಾ ಜನ ಇರ್ಬೇಕು ಅಂತಾ.. ಈಗ ಹಾಗಿಲ್ಲ ಜನ ಫುಲ್ ಅಪ್‌ಡೆಟ್ ಆಗಿದ್ದಾರೆ. ಗಂಡ ಹೆಂಡತಿ ಮಗು ಅಷ್ಟೇ ಅನ್ನೋ ಹಾಗ್ ಆಗಿದೆ.. ಕೆಲವರು ಒಂದು ಅಥವಾ ಎರಡು ಮಗು ಇದ್ದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳ ಬಹುದು. ಮಕ್ಕಳಿಗೆ ಉತ್ತಮ ಶಿಕ್ಷಣ ಸೇರಿದಂತೆ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬಹುದು ಅನ್ನೋ ಪ್ಲ್ಯಾನ್ ಮಾಡ್ತಾರೆ.. ಕೆಲವರೇ ರಗಳೆನೇ ಬೇಡ ಅಂತಾ ಮಕ್ಕಳನ್ನ ಮಾಡಿಕೊಳ್ಳಲ್ಲ. ನಾವು ಹೇಳುತ್ತಿರುವ ಕುಟುಂಬದಲ್ಲಿ ಬರೋಬ್ಬರಿ 700ಕ್ಕೂ ಅಧಿಕ ಜನರು ಜೊತೆಯಾಗಿ ವಾಸಿಸುತ್ತಿದ್ದಾರೆ. ನಂಬಲು ಅಸಾಧ್ಯವೆನಿಸಿದ್ರು, ಇದು ನಿಜ..
ಮುದ್ದಿನ ಹೆಂಡತಿಯರ ಜೊತೆ ನಗುತ್ತಾ ನಿಂತಿರೋ ಈ ವ್ಯಕ್ತಿ ಮಾಡಿರೋ ಸಾಧನೆ ಅಂದ್ರೆ ಮಕ್ಕಳು.. ಇವ್ರು ವಿಶ್ವದ ದೊಡ್ಡ ಕುಂಟಬಕ್ಕೆ ಕಾರಣವಾಗಿದ್ದಾರೆ.. 67 ವರ್ಷದ ಈ ವ್ಯಕ್ತಿಯ ಹೆಸರು ಮೂಸಾಹಾಸಿಯಾ ಕೆಸೆರೊಗೆ.. . ಪೂರ್ವ ಉಗಾಂಡಾದ ಬುಟಲೆಜಾ ಜಿಲ್ಲೆಯ ಬುಗಿಸಾ ಗ್ರಾಮದ ರೈತ.. ಈತನಿಗೆ ಒಟ್ಟು 12 ಹೆಂಡತಿಯರಿದ್ದಾರೆ. 102 ಮಕ್ಕಳು, ಮತ್ತು 568 ಮೊಮ್ಮಕ್ಕಳನ್ನು ಹೊಂದಿದ್ದಾನೆ.. ಇವನ ಕುಟುಂಬದಲ್ಲಿ ಒಟ್ಟು 700ಕ್ಕೂ ಹೆಚ್ಚು ಜನರಿದ್ದಾರೆ. ಬಿಬಿಸಿ ವರದಿ ಪ್ರಕಾರ, ಮಿಜೋರಾಂನಲ್ಲಿರುವ ಜಿಯೋನಾ ಚಾನಾ ವಿಶ್ವದ ಅತಿ ದೊಡ್ಡ ಕುಟುಂಬವಾಗಿದೆ. ಜಿಯೋನಾ ಚಾನಾ 2021ರಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನ ಹೊಂದುತ್ತಾರೆ. ಜಿಯೋನಾ ಚಾನಾ ಅವರಿಗೆ 39 ಪತ್ನಿಯರು ಮತ್ತು 94 ಮಕ್ಕಳಿದ್ದರು ಹಾಗೂ ನೂರಾರು ಮೊಮ್ಮಕ್ಕಳಿದ್ದರು. ಆದ್ರೆ ಉಗಾಂಡದ ಮೂಸಾ ಅವರಿಗೆ 102 ಮಕ್ಕಳು, ಮೊಮ್ಮಕ್ಕಳು 570 ಜನರಿದ್ದಾರೆ. ಇದನ್ನ ನೋಡಿದ್ರೆ ಇವನೇ ವಿಶ್ವದ ದೊಡ್ಡ ಕುಟುಂಬದ ಯಜಮಾನ ಆಗಿದ್ದಾನೆ.
ಇನ್ನೂ ನಮ್ಮ ಕುಟುಂಬವು ತುಂಬಾ ದೊಡ್ಡದಾಗಿದೆ ಎಂದು 68 ವರ್ಷದ ಮೂಸಾ ಹೇಳಿದ್ದಾರೆ. ಮನೆ ತುಂಬಾ ಜನರಿದ್ದು, ಕುಟಂಬ ನಡೆಸಲು ಸಾಕಷ್ಟು ಕಷ್ಟವಾಗುತ್ತಿದೆಯಂತೆ. ಆಹಾರಕ್ಕಾಗಿ ಹಣ ಸಂಗ್ರಹಿಸುವುದು ಕೂಡ ಕಷ್ಟಕರವಾಗಿದೆಯಂತೆ. 1972 ರಲ್ಲಿ ಮೊದಲ ಮದುವೆಯಾಗಿ ಮೊದಲ ಮಗು ಆಯ್ತಂತೆ. ನಂತ್ರ ಸಹೋದರ, ಸಂಬಂಧಿಕರು ಮತ್ತು ಸ್ನೇಹಿತರು ಕುಟುಂಬದ ಪರಂಪರೆಯನ್ನು ಮುಂದುವರಿಸಲು ಅನೇಕ ಮಕ್ಕಳನ್ನು ಹೊಂದಲು ಸಲಹೆ ನೀಡಿದ್ರಂತೆ. ತದ ನಂತ್ರ ಒಟ್ಟು 12 ಮದುವೆ ಆಗಿದ್ದಾನೆ ಈ ಬಡ ರೈತ. ಮೂಸಾ ಅವರ ಕಿರಿಯ ಮಗನಿಗೆ 6 ವರ್ಷ ಮತ್ತು ಹಿರಿಯ ಮಗನಿಗೆ 51 ವರ್ಷ. ಅನಾರೋಗ್ಯದ ಕಾರಣ, ಮೂಸಾಗೆ ಈಗ ಕೆಲಸ ಮಾಡುವುದು ಕಷ್ಟಕರವಾಗಿದೆ. ಕುಟುಂಬ ದೊಡ್ಡದಾಗುತ್ತಿದ್ದಂತೆ ಸಮಸ್ಯೆಗಳು ಕೂಡ ದೊಡ್ಡದಾಗುತ್ತಾ ಹೋಯ್ತು ಮಕ್ಕಳನ್ನ ಸಾಕೋಕೆ ಹೆಣಗಾಡುವಂತಾಗಿದೆ..
ಇನ್ನು ಈತನ ಸಹಾಸದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟ ಜನ ಕಮೆಂಟ್ ಮಾಡುತ್ತಿದ್ದಾರೆ. ಈ ಮೂಸಾಗೆ ತನ್ನ ಎಲ್ಲಾ ಮಕ್ಕಳ ಹೆಸರು ಮತ್ತು ಯಾವ ಪತ್ನಿಯ ಮಗ ಅಥವಾ ಮಗಳು ಎಂದು ಕಂಡು ಹಿಡಿಯುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವ್ಯಕ್ತಿ ತನ್ನದೇ ಸಾಮ್ರಾಜ್ಯ ನಿರ್ಮಾಣ ಮಾಡುತ್ತಿರಬೇಕು ಎಂದು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೂಸಾಗೆ ವಯಸ್ಸಾಗಿದೆ. ಮಕ್ಕಳಿಗೆ ಯಾವುದೇ ರೀತಿಯ ಆಸ್ತಿ ಇಲ್ಲ. ಹಾಗೆಯೇ ಹೊಲ, ಗದ್ದೆ, ಎಕರೆಗಳು ಕೂಡ ತುಂಬಾ ಕಡಿಮೆ ಇದೆ. ಈ ವಿಷಯ ಇದೀಗ ಸಖತ್ ಎಲ್ಲಾ ಕಡೆಯೂ ವೈರಲ್ ಆಗ್ತಾ ಇದೆ.