ಐಶ್ವರ್ಯ ಗೆ ಮಾಂಗಲ್ಯ ದೋಷ? – ಮರವನ್ನ ಮದುವೆಯಾಗಿದ್ರಾ ಐಶ್‌?
ಖ್ಯಾತ ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

ಐಶ್ವರ್ಯ ಗೆ ಮಾಂಗಲ್ಯ ದೋಷ? – ಮರವನ್ನ ಮದುವೆಯಾಗಿದ್ರಾ ಐಶ್‌?ಖ್ಯಾತ ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

ಬಾಲಿವುಡ್ ತುಂಬೆಲ್ಲಾ ಸದ್ಯ ಕೇಳಿಬರುತ್ತಿರುವ ಗಾಸಿಪ್‌ ಎಂದರೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಡಿವೋರ್ಸ್‌.. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ತುಂಬಿವೆ. ಇದೀಗ ಇಬ್ಬರೂ ದೂರಾಗುತ್ತಿದ್ದಾರಾ? ಹೀಗೊಂದು ಅನುಮಾನ ಅಭಿಮಾನಿಗಳಿಗೆ ಕಾಡುತ್ತಿರುವುದು ಸಹಜ. ವಿಚ್ಛೇದನದ ಗಾಸಿಪ್‌ ಬಗ್ಗೆ ಅಭಿಷೇಕ್ ಬಚ್ಚನ್ ಆಗಲಿ, ಐಶ್ವರ್ಯಾ ರೈ ಬಚ್ಚನ್ ಆಗಲಿ ತುಟಿಕ್ ಪಿಟಿಕ್ಎಂದಿಲ್ಲ. ಆದರೆ, ಕೆಲ ದಿನಗಳಿಂದ ನಡೆದ ಕೆಲ ಘಟನೆಗಳು ಡಿವೋರ್ಸ್ ರೂಮರ್ಸ್‌ಗೆ ಪುಷ್ಟಿ ನೀಡಿವೆ. ಇವೆಲ್ಲದ್ರ ಮಧ್ಯೆ ಇದೀಗ ಕೆಲ ಜ್ಯೋತಿಷಿಗಳು ನುಡಿದಿರೋ ಭವಿಷ್ಯ ಮತ್ತೆ ಮುನ್ನೆಲೆಗೆ ಬರ್ತಾ ಇದೆ.  ಈ ಜೋಡಿ ಒಂದಾಗಿ ಬಾಳಲ್ಲ ಅಂತಾ ಖ್ಯಾತ ಜ್ಯೋತಿಷಿಗಳು ಹೇಳಿದ್ದಾರೆ. ಹಾಗಾದ್ರೆ ಐಶ್‌, ಅಭಿ ನಿಜವಾಗ್ಲೂ ದೂರ ಆಗ್ತಾರಾ? ಜ್ಯೋತಿಷಿಗಳು ಈ ದಂಪತಿ ಬಗ್ಗೆ ಏನೇನು ಭವಿಷ್ಯ ನುಡಿದಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್‌ ಚರಣ್‌! – ಆಲಿಯಾ ಮಾಡಿದ್ದೇನು ಗೊತ್ತಾ?

ಬಾಲಿವುಡ್‌ ನ ಸೂಪರ್‌ ಜೋಡಿಗಳಲ್ಲಿ ಐಶ್ವರ್ಯ ರೈ ಕೂಡ ಒಂದು.. ಆದ್ರೆ ಈ ಜೋಡಿಯ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಹೇಳಲಾಗುತ್ತಿದೆ. ವಿಚ್ಚೇದನ ವಿಷಯ ಕಳೆದ ಕೆಲವು ದಿನಗಳಿಂದ ತಣ್ಣಗಾಗಿತ್ತು. ಆದ್ರೀಗ ಮತ್ತೆ ಈ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಐಫಾ ಹಾಗೂ ಸೈಮಾ ಈ ಎರಡು ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿರಲಿಲ್ಲ.. ಐಶ್ವರ್ಯಾ ಮಗಳು ಆರಾಧ್ಯ ಇಬ್ಬರೇ ಈ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿಯೊಂದಿಗೆ ಬಂದಿದ್ದರು. ಇದಕ್ಕೂ ಮೊದಲು ಜುಲೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿಯೂ ಈ ಜೋಡಿ ಬೇರೆ ಬೇರೆಯಾಗಿ ಬಂದಿದ್ದರು. ಇದಾದ ನಂತರ ಇವರ ಡಿವೋರ್ಸ್‌ ಬಗ್ಗೆ ಹತ್ತು ಹಲವು ಊಹಾಪೋಹಗಳು ಹಬ್ಬುತ್ತಿವೆ. ಇವೆಲ್ಲದ್ರ ಮಧ್ಯೆ ಖ್ಯಾತ ಜ್ಯೋತಿಷಿಗಳು ನುಡಿದಿರುವ ಭವಿಷ್ಯ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಈ ಜೋಡಿ ಸಂಬಂಧ ಬಗ್ಗೆ ಮತ್ತೆ ಮಾತನಾಡಲಾಗುತ್ತಿದೆ.

ಹೌದು, ಪ್ರಸಿದ್ಧ ಜ್ಯೋತಿಷಿ ಜಗನ್ನಾಥ್ ಗುರೂಜಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಅವರ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜಗನ್ನಾಥ್ ಗುರೂಜಿ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ನುಡಿದು ಫೇಮಸ್ ಆದವರು. ಜಗನ್ನಾಥ್‌ ಗುರೂಜಿ ಹೇಳಿರೋ ಭವಿಷ್ಯಗಳು ಬಹುತೇಕ ನಿಜವಾಗಿದೆ. ಇತ್ತೀಚೆಗೆ ಅವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆಯ ಬಗ್ಗೆ ಮಾತನಾಡಿದ್ದಾರೆ.. ಐಶ್ವರ್ಯ ರೈ ಹಾಗೂ ಅಭಿಷೇಕ್‌ ದಾಂಪತ್ಯ ಹೆಚ್ಚು ಕಾಲ  ಉಳಿಯುವುದಿಲ್ಲ. ಈ ಜೋಡಿ ತಮ್ಮ ಮಗಳು ಆರಾಧ್ಯಾಳ ಮೇಲಿನ ಪ್ರೀತಿಯಿಂದಾಗಿ ಒಟ್ಟಿಗೆ ಇದ್ದಾರೆ ಎಂದು ಅವರು ಜ್ಯೋತಿಷಿ ಹೇಳಿದ್ದಾರೆ.

ಅಭಿ ಹಾಗೂ ಐಶ್‌ ಜಾತಕದಲ್ಲಿ ಬಹಳ ಹಿಂದೆಯೇ ದೂರಾಗುತ್ತಾರೆ ಎಂದು ಊಹಿಸಲಾಗಿತ್ತು.. ಅವರ ಜನ್ಮ ಕುಂಡಲಿಗಳಲ್ಲಿ ದೋಷಗಳ ಪರಿಣಾಮಗಳ ಹೊರತಾಗಿಯೂ, ದಂಪತಿಗಳು ತಮ್ಮ ಮದುವೆಯನ್ನು ಉಳಿಸಿಕೊಳ್ಳಲು ಶ್ರಮಿಸಿದ್ದಾರೆ. ಆದರೂ ವಿವಿಧ ಸಂದರ್ಭಗಳಿಂದಾಗಿ ಈ ಜೋಡಿ ಶೀಘ್ರದಲ್ಲೇ ಬೇರ್ಪಡುತ್ತದೆ. ಆದ್ರೆ ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ಯಾವಾಗಲೂ ಗೌರವ ಮತ್ತು ಸ್ನೇಹ ಇರುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ..

ಇದಲ್ಲದೆ, ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಾಂಗಲ್ಯ ದೋಷ ಇದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮುನ್ನ  ಮರವನ್ನು ಮದುವೆಯಾಗಿದ್ದರು. ಎನ್ನಲಾಗಿದೆ…

ಇನ್ನು ಐಶ್ವರ್ಯ ರೈ ಹಾಗೂ ಅಭಿಷೇಕ್ ದಾಂಪತ್ಯದ ಬಗ್ಗೆ ಈ ಹಿಂದೆ ಮತ್ತೊಬ್ಬ ಜ್ಯೋತಿಷಿ ಕೂಡ ಭವಿಷ್ಯ ನುಡಿದಿದ್ದಾರೆ. ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು ಐಶ್ವರ್ಯ-ಅಭಿಷೇಕ್ ಬಗ್ಗೆ ಮಾತನಾಡಿದ್ರು..  ಐಶ್ವರ್ಯಾ ಜಾತಕದಲ್ಲಿ ‘ಕುಜ ದೋಷ’ ಮತ್ತು ‘ರಾಜಯೋಗ’ ಎರಡೂ ಇದೆ.. ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ. ಇದೇ ಕಾರಣದಿಂದ ವಿಶ್ವಸುಂದರಿ ಪಟ್ಟಕ್ಕೇರಿದ್ದರಂತೆ ಐಶ್.

ಅಷ್ಟೇ ಅಲ್ಲದೆ, ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇವರೇ ಇವರಿಬ್ಬರನ್ನು ಒಂದು ಮಾಡಿರೋದು. ಹೀಗಾಗಿ ಯಾರೂ ಕೂಡ ಈ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ.

ಅಂದಹಾಗೆ ಚಂದ್ರಶೇಖರ ಸ್ವಾಮಿ ಈಗಾಗಲೇ ಸಾಕಷ್ಟು ಸೆಲೆಬ್ರಿಟಿ, ರಾಜಕೀಯ ನಾಯಕರು, ಉದ್ಯಮಿಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವಿಜಯ್ ಮಲ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಹ ಇವರ ಬಳಿ ಭವಿಷ್ಯ ಕೇಳುತ್ತಾರೆ.

ಒಟ್ಟಿನಲ್ಲಿ ಈಗ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ದಾಂಪತ್ಯ ಜೀವನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಇಷ್ಟೆಲ್ಲಾ ಸದ್ದು ಮಾಡ್ತಾ ಇದ್ರೂ ಈ ದಂಪತಿ ಒಂಚೂರು ತಲೆಕೆಡಿಸಿಕೊಂಡಿಲ್ಲ. ತಾವಾಯ್ತು.. ತಮ್ಮ ಕೆಲ್ಸ ಆಯ್ತು ಅಂತಾ ಇದ್ದಾರೆ.. ಆದ್ರೆ ಫ್ಯಾನ್ಸ್‌ ಮಾತ್ರಾ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.. ಇನ್ನಾದ್ರೂ ಈ ಬಗ್ಗೆ ಸ್ಪಷ್ಟನೆ ಸಿಗುತ್ತಾ ಅಂತಾ ಕಾದುನೋಡ್ಬೇಕು.

Shwetha M