ನವರಾತ್ರಿ ದಿನವೇ ನಟಿ ಶಿಲ್ಪಾ ಶೆಟ್ಟಿ ದಂಪತಿಗೆ ಬಿಗ್ ರಿಲೀಫ್ – ಇಡಿ ನೋಟಿಸ್ ಗೆ ತಡೆ ನೀಡಿದ ಕೋರ್ಟ್!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾಗೆ ಹಬ್ಬದ ದಿನವೇ ಬಿಗ್ ರಿಲೀಫ್ ಸಿಕ್ಕಿದೆ. ಅಕ್ರಮ ಹಣ ವರ್ಗಾವಣೆ ಕೇಸ್ ಸಂಬಂಧ ಇಡಿ ನೋಟಿಸ್ ಗೆ ಕೋರ್ಟ್ ತಡೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಕ್ಷಣವೇ ಮನೆ ಮತ್ತು ತೋಟದ ಮನೆಯನ್ನು ಖಾಲಿ ಮಾಡುವಂತೆ ಇಡಿ ಕಳುಹಿಸಿದ್ದ ನೋಟಿಸ್ಗಳನ್ನು ಪ್ರಶ್ನಿಸಿ ಶಿಲ್ಪಾ ಶೆಟ್ಟಿ ದಂಪತಿ ಇತ್ತೀಚೆಗೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿ ಇಡಿ ನೋಟಿಸ್ಗೆ ತಡೆ ನೀಡಿದೆ.
ಇದನ್ನೂ ಓದಿ: ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್ ಚರಣ್! – ಆಲಿಯಾ ಮಾಡಿದ್ದೇನು ಗೊತ್ತಾ?
2017ರಲ್ಲಿ ರಾಜ್ ಕುಂದ್ರಾ ಅವರ ಕಂಪನಿಯು ಸುಮಾರು ರೂ. 6.600 ಕೋಟಿ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ. ತಿಂಗಳಿಗೆ ಶೇ.10ರಷ್ಟು ರಿಟರ್ನ್ಸ್ ನೀಡುವುದಾಗಿ ಭರವಸೆ ನೀಡಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣ ದಾಖಲಾಗಿದೆ.
ರಾಜ್ಕುಂದ್ರಾ ಅವರು ಅಮಿತ್ ಭಾರದ್ವಾಜ್ ಎಂಬ ವ್ಯಕ್ತಿಯಿಂದ ಸುಮಾರು 285 ಬಿಟ್ಕಾಯಿನ್ಗಳನ್ನು ತೆಗೆದುಕೊಂಡಿದ್ದಾರೆ. ಅವರೊಂದಿಗೆ ಉಕ್ರೇನ್ನಲ್ಲಿ ಮೈನಿಂಗ್ ಫಾರ್ಮ್ ಅನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರ ಪೊಲೀಸರು ಮತ್ತು ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ಗಳ ಆಧಾರದ ಮೇಲೆ ಇಡಿ ಇಲಾಖೆ ತನಿಖೆ ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ ದಂಪತಿಗೆ ಸೇರಿದ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಮುಂಬೈನಲ್ಲಿರುವ ಶಿಲ್ಪಾ ಶೆಟ್ಟಿ ಹೆಸರಿನ ಬಂಗಲೆ, ಪುಣೆಯಲ್ಲಿ ಫ್ಲಾಟ್ ಮತ್ತು ಕುಂದ್ರಾ ಹೆಸರಿನಲ್ಲಿದ್ದ ಈಕ್ವಿಟಿ ಷೇರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.
ಕಟ್ಟಡಗಳನ್ನು ತೆರವು ಮಾಡುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ವಿರುದ್ಧ ಶಿಲ್ಪಾ ಶೆಟ್ಟಿ ದಂಪತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣಾ ನ್ಯಾಯಾಲಯ ಇಡಿ ನೋಟಿಸ್ಗೆ ತಡೆ ನೀಡಿದೆ.