ಗಿಲ್ಲಿ ಕಿತ್ತೋಗಿರೋ ನಟ – Dolo 650 ಶಶಿರೇಖಾ ಎಡವಟ್ಟು
ವೈರಲ್ ಸ್ಟಾರ್ ಗೆ ಗಿಲ್ಲಿ ಕೌಂಟರ್
ಜೀ ಕನ್ನಡ ವಾಹಿನಿ ಮನರಂಜನೆ ಕೊಡೋದ್ರಲ್ಲಿ ಎತ್ತಿದ ಕೈ.. ಆದ್ರೀಗ ಬರು ಬರುತ್ತಾ ರಾಯರ ಕುದುರೆ ಕತ್ತೆ ಆಗ್ತಿದ್ಯಾ? ಟಿಆರ್‌ಪಿ ಗಾಗಿ ನಿಜವಾದ ಪ್ರತಿಭೆಗಳನ್ನು ಕಡೆಗಣಿಸ್ತಿದ್ಯಾ ಅಂತಾ ವೀಕ್ಷಕರಲ್ಲಿ ಪ್ರಶ್ನೆ ಮೂಡಿದೆ.. ಯಾಕಂದ್ರೆ ಕಾಮಿಡಿ ಪ್ರಿಮಿಯರ್ ಲೀಗ್ ದಸರಾ ಸಂಭ್ರಮದಲ್ಲಿ ವೈರಲ್ ಸ್ಟಾರ್ ಗಳನ್ನ ಕರೆಸಿ, ಸ್ಕಿಟ್ ಮಾಡಿಸಲಾಗಿದೆ.. ಅಷ್ಟೇ ಅಲ್ಲ ಡೋಲೋ 650 ಮಾತ್ರೆ ಖ್ಯಾತಿಯ ಶಶಿ ರೇಖಾ ಗಿಲ್ಲಿನಟನಿಗೆ ಕೌಂಟರ್ ಕೊಡಲು ಹೋಗಿ ಇನ್ನೇನೋ ಆಗಿದೆ.. ಅಷ್ಟಕ್ಕೂ ಗಿಲ್ಲಿ ನಟನಿಗೆ ಶಶಿರೇಖಾ ಹೇಳಿದ್ದೇನು? ಗಿಲ್ಲಿ ರಿಯಾಕ್ಷನ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೆನ್ನು ನೋವು.. ಡಿ ಬಾಸ್ ವಿಲವಿಲ.. – ಬೆಂಗಳೂರಿಗೆ ಹೋಗಲು ಹಠ
ಜೀಕನ್ನಡ ವಾಹಿನಿಯಲ್ಲಿ ಬರುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಸೆಪರೇಟ್ ಫ್ಯಾನ್ ಬೇಸ್ ಇದೆ.. ಪ್ರತಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಂಡು ಬಂದಿದೆ.. ಟಿ ಆರ್‌ಪಿ ರೇಸ್ ನಲ್ಲೂ ಮುಂದಿದೆ. ಆದ್ರೀಗ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಶೋ ಪ್ರಸಾರವಾಗ್ತಿದೆ.. ಇದೀಗ ವೀವರ್ಸನ್ನ ತನ್ನಲ್ಲೇ ಉಳಿಸಿಕೊಳ್ಳಲು ವಾಹಿನಿ ಹೊಸ ಪ್ರಯತ್ನ ಮಾಡ್ತಾ ಇದೆ.. ಅದೇನಂದ್ರೆ ಸೋಶಿಯಲ್ ಮೀಡಿಯಾ ಸ್ಟಾರ್ಸ್ ಅನ್ನ ಒಂದೇ ವೇದಿಕೆಗೆ ಕರೆತರೋದು.. ಈ ವಾರ ಕಾಮಿಡಿ ಪ್ರಿಮಿಯರ್ ಲೀಗ್ ದಸರಾ ಸಂಭ್ರಮದಲ್ಲಿ ವೈರಲ್ ಸ್ಟಾರ್‌ಗಳನ್ನ ಒಂದೇ ವೇದಿಕೆಗೆ ಕರೆಸಿ ಸ್ಕಿಟ್ ಮಾಡಿಸಲಾಗಿದೆ.
ಹೌದು, ಕಾಮಿಡಿ ಪ್ರಿಮಿಯರ್ ಲೀಗ್ ದಸರಾ ಸಂಭ್ರಮದಲ್ಲಿ ಹಾಯ್ ಜನರೇ ಖ್ಯಾತಿಯ ಕಿಪಿ ಕೀರ್ತಿ, ಕಾಫಿ ನಾಡು ಚಂದ್ರು, ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ ಖ್ಯಾತಿಯ ಶಶಿರೇಖಾ, ರೀಲ್ಸ್ ಮಂಜಣ್ಣ ಮುಂತಾದವರನ್ನ ಕರೆಸಲಾಗಿದೆ. ಅವರಲ್ಲಿ ಸ್ಕಿಟ್ ಮಾಡಿಸಲಾಗಿದೆ.. ಕೊಟ್ಟ ಅವಕಾಶವನ್ನ ಸೋಶಿಯಲ್ ಮೀಡಿಯಾ ಸ್ಟಾರ್ಸ್ ಕೂಡ ಚೆನ್ನಾಗೇ ಬಳಸಿಕೊಂಡಿದ್ದಾರೆ.. ಇದ್ರ ಪ್ರೋಮೋಗಳನ್ನು ಜೀಕನ್ನಡ ವಾಹಿನಿ ರಿಲೀಸ್ ಮಾಡಿದೆ.. ಆದ್ರೀಗ ವೀಕ್ಷಕರು ವಾಹಿನಿ ಮೇಲೆ ಅಸಮಧಾನಗೊಂಡಿದ್ದಾರೆ..
ಸೋಶಿಯಲ್ ಮೀಡಿಯಾ ಸ್ಟಾರ್ಸ್‌ಗಳನ್ನ ಕರೆಸಿದ್ದು ಎಷ್ಟು ಸರಿ? ನಿಜವಾದ ಪ್ರತಿಭೆಗಳಿಗೆ ಅವಕಾಶ ಸಿಗ್ತಾ ಇಲ್ಲ.. ಒಂದೇ ಒಂದು ಚಾನ್ಸ್‌ಗಾಗಿ ಅದೆಷ್ಟೋ ಜನ ಕಾಯ್ತಾ ಇದ್ದಾರೆ. ಅಂತವರನ್ನ ಕರೆಸಿ ಅವರಿಗೆ ಚಾನ್ಸ್ ಕೊಡಿ.. ಅಂತಾ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು,, ಅಲ್ಲ ಗುರು.. ಈ ಸಮಾಜ ಯಾವ ಕಡೆ ಸಾಗುತಿದೆ ಅನ್ನೋದೇ ಅನುಮಾನ… ಹುಚ್ಚು ಹುಚ್ಚು ತರ ಅಡೋರೆಲ್ಲ ಸೆಲೆಬ್ರಿಟಿ ಆಗ್ತಾರೆ ಅಂದ್ರೆ ..ಕಲಿಗಾಲ ಅಲ್ಟ್ರಾ promax ಆಗಿದೆ ಅನ್ಸುತ್ತೆ.. ಒಂದು ಒಳ್ಳೆಯ ಸಾಧಕರಿಗೆ ಸಿಗದ ಸ್ಟೇಜ್, ಕೋತಿ ತರ ಬಿಹೇವ್ ಮಾಡೋರಿಗೆಲ್ಲ ಸಿಗ್ತಾ ಇದೆ. ಇದು ವಿಪರ್ಯಾಸ. T R P ಗೋಸ್ಕರ ಯಾವ ಮಟ್ಟಕ್ಕು ಇಳಿತಾರೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವೀಕೆಂಡ್ ವಿತ್ ರಮೇಶ್ ಗೆ ಡಾ. ಬ್ರೋ ಅವರನ್ನ ಕರೆಸಿ ಅಂದಾಗ, ನಿಮ್ಮ ಅಜ್ಜಿಗೆ ಗೊತ್ತಾ ಅಂತಾ ರಾಘವೇಂದ್ರ ಹುಣಸೂರು ಪ್ರಶ್ನಿಸಿದ್ರು.. ಈಗ ಇದೇ ವಿಚಾರನ್ನ ಪ್ರಸ್ತಾಪಿಸಿ, ಇವರೆಲ್ಲಾ ರಾಘವೇಂದ್ರ ಹುಣಸೂರು ಅಜ್ಜಿಗೆ ಗೊತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.
ಇನ್ನು ಡೋಲೋ 650 ಮಾತ್ರೆ ಶಶಿರೇಖಾ ಸ್ಕಿಟ್ ನಲ್ಲಿ ಪಂಚ್ ಡೈಲಾಗ್ ಹೊಡೆಯಲು ಹೋಗಿ ಇನ್ನೇನೋ ಆಗಿದೆ.. ಗಿಲ್ಲಿ ನಟನ ಬಳಿ ಬಂದು ಮೈಕ್ ಎತ್ತಿಕೊಂಡ ಶಶಿರೇಖಾ, ಅಣ್ಣಾ.. ಇವನೊಬ್ಬ ನಟ.. ಅಣ್ಣಾ.. ಇವನ್ನೊಬ್ಬ ಕಿತ್ತೋಗಿರೋ ನಟ.. ನಾನಿವನ್ನ ಗಿಲ್ದೇ.. ಈಗ ಗಿಲ್ಲಿ ನಟ.. ನಟ ಅಂತಾ ಡೈಲಾಗ್ ಹೊಡೆದಿದ್ದಾರೆ. ಈ ವೇಳೆ ಆಂಕರ್ ಅನುಶ್ರೀ, ಗಿಲ್ಲಿನಟ ಶಾಕ್ ಆಗಿದ್ದಾರೆ.. ಬಳಿಕ ಶಶಿರೇಖಾ ಗೆ ಗಿಲ್ಲಿನಟ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.. ನಮ್ಮೂರಲ್ಲಿ ನಡಿತಿದೆ ಜಾತ್ರೆ.. ಈ ಸ್ಟೇಜ್ ಗೆ ಬಂದಿದೆ ಡೋಲೋ 650 ಮಾತ್ರೆ ಅಂತಾ ಹೇಳಿದ್ದಾರೆ. ಒಟ್ಟಿನಲ್ಲಿ ಶಶಿರೇಖಾ ಗಿಲ್ಲಿನಟನಿಗೆ ಟಕ್ಕರ್ ಕೊಡಲು ಹೋಗಿ ಮತ್ತಿನ್ನೇನೋ ಆಗಿದೆ. ಇದಕ್ಕೂ ಕೆಲ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.. ಗಿಲ್ಲಿ ನಟನಿಗೆ ಹೀಗೆ ಅಂದಿದ್ದು ಸರಿಯಲ್ಲ.. ಆತನ ಟ್ಯಾಲೆಂಟ್‌ಗೆ ಸಿಕ್ಕಿದ ಬೆಲೆ ಇದೆನಾ ಅಂತಾ ಕೆಲವರು ಪ್ರಶ್ನೆ ಮಾಡಿದ್ದಾರೆ.. ಒಟ್ಟಾರೆ ಕಾಮಿಡಿ ಪ್ರಿಮಿಯರ್ ಲೀಗ್ ದಸರಾ ಸಂಭ್ರಮದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ಸ್ ಅನ್ನ ಕರೆಸಿದ್ದು ಸರಿಯಾ? ತಪ್ಪಾ ಅನ್ನೋದ್ರ ಬಗ್ಗೆ ಜೋರಾಗೆ ಚರ್ಚೆ ನಡಿತಾ ಇದೆ..