ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್‌ ಚರಣ್‌! – ಆಲಿಯಾ ಮಾಡಿದ್ದೇನು ಗೊತ್ತಾ?

ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್‌ ಚರಣ್‌! – ಆಲಿಯಾ ಮಾಡಿದ್ದೇನು ಗೊತ್ತಾ?

ಬಾಲಿವುಡ್ ಸ್ಟಾರ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಎಲ್ಲರ ಫೆವರೆಟ್. ರಾಹಾ ಬರ್ತಿದ್ದಂತೆ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ.. ಮುದ್ದಿನ ಮಗಳ ಜೊತೆಗೆ ಈ ದಂಪತಿ ಹೆಚ್ಚು ಸಮಯ ಕಳಿತಾ ಇದ್ದಾರೆ.   ಮಗಳು ಆಲಿಯಾ ಹುಟ್ಟಿದ ಸಂದರ್ಭದಲ್ಲಿ ರಾಮ್‌ ಚರಣ್‌ ಅವರು ಹೇಗೆ ನಡೆದುಕೊಂಡಿದ್ದರು ಅನ್ನೋದರ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಾರ್ಸಿ ಅಂತ್ಯಕ್ರಿಯೆ ಭಯಾನಕ -ಸುಡಲ್ಲ..ಹೂಳಲ್ಲ.. ಪ್ರಕೃತಿಗೆ ದಾನ

ಆಲಿಯಾ ಭಟ್ ಅವರು ‘ಆರ್​​ಆರ್​ಆರ್’ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಜೊತೆ ತೆರೆಹಂಚಿಕೊಂಡಿದ್ದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ರಹಾ ಹೆಸರಲ್ಲಿ ಒಂದು ಆನೆಯನ್ನು ರಾಮ್ ಚರಣ್ ದತ್ತು ಪಡೆದಿದ್ದಾರೆ. ಈ ವಿಚಾರ ಕೇಳಿ ಅನೇಕರು ಖುಷಿಪಟ್ಟಿದ್ದರು. ಈ ವೇಳೆ ನಡೆದ ಫನ್ನಿ ಪ್ರಸಂಗವೊಂದನ್ನ ಆಲಿಯಾ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದೊಂದು ಫನ್​ ಸ್ಟೋರಿ. ರಹಾ ಜನಿಸಿ ತಿಂಗಳಾಗಿತ್ತು. ನಾನು ವಾಕ್ ಮಾಡೋಣ ಎಂದು ಹೋದೆ. ಆಗ ಒಬ್ಬರು ಬಂದು ರಾಮ್ ಚರಣ್ ಆನೆ ಕಳುಹಿಸಿದ್ದಾರೆ ಎಂದರು. ನಾನು ಶಾಕ್ ಆದೆ. ಆನೆ ನಮ್ಮ ಮನೆಯ ಹತ್ತಿರ ಬರುತ್ತಿದೆ. ಅಂದರೆ ಏನು ಬೇಕಾದರೂ ಆಗಬಹುದು ಎಂದು ಯೋಚಿಸಿದೆ ಎಂಬುದಾಗಿ ವಿವರಿಸಿದ್ದಾರೆ ಆಲಿಯಾ ಭಟ್.

ರಾಮ್ ಚರಣ್ ಕಳುಹಿಸಿದ್ದು ನಿಜವಾದ ಆನೆ ಅಲ್ಲ. ರಹಾ ಹೆಸರಲ್ಲಿ ಆನೆಯನ್ನು ಅಡಾಪ್ಟ್ ಮಾಡಿಕೊಂಡ ಬಳಿಕ ಮರದ ಆನೆಯನ್ನು ಆಲಿಯಾ ಭಟ್ ಮನೆಗೆ ಕಳುಹಿಸಿದ್ದರು. ಇದಕ್ಕೆ ಎಲಿ ಎಂದು ಹೆಸರು ಕೊಡಲಾಗಿದೆ. ಈ ಆನೆ ಆಲಿಯಾ ಭಟ್ ಅವರ ಮನೆಯ ಊಟದ ಟೇಬಲ್​ ಹತ್ತಿರವೇ ಇಡಲಾಗಿದೆ. ಈ ಆನೆಯನ್ನು ರಹಾ ಸಾಕಷ್ಟು ಇಟಷ್ಟಪಟ್ಟಿದ್ದಾರಂತೆ.

Shwetha M

Leave a Reply

Your email address will not be published. Required fields are marked *