ಪಾರ್ಸಿ ಅಂತ್ಯಕ್ರಿಯೆ ಭಯಾನಕ -ಸುಡಲ್ಲ..ಹೂಳಲ್ಲ.. ಪ್ರಕೃತಿಗೆ ದಾನ
TATA ದೇಹ ಹದ್ದು ಪಾಲಾಯ್ತಾ?
ಭಾರತ ಅತೀ ಉದ್ಯುಮದ ದಿಗ್ಗಜ ರತನ್ ಟಾಟಾರನ್ನ ನಾವು ಕಳೆದುಕೊಂಡಿದ್ದೇವೆ.. ರತನ್ ಟಾಟಾ ದೇಶಕ್ಕೆ ಸಾಕಷ್ಟು ಕ್ಷೇತ್ರದಲ್ಲಿ ಕೊಡುಗೆಯನ್ನ ನೀಡಿದ್ದಾರೆ. ರತನ್ ಟಾಟಾ ಅವರು ಶ್ರೀಮಂತರ ಪಟ್ಟಿಯಲ್ಲಿ ಇಲ್ಲದಿರಬಹುದು. ಆದರೆ ಅವರು ಬಡಜನರಿಗಾಗಿ ಮಾಡಿರುವ ಸಹಾಯ, ನೀಡಿರುವ ಉದ್ಯೋಗಗಳು ಎಂದಿಗೂ ಅಜರಾಮರ. ಅವರು ಶೇಕಡ 66 ಶೇರನ್ನು ಬಡವರಿಗಾಗಿಯೇ ಮೀಸಲಿರಿಸುತ್ತಿದ್ದರು. ಆದ್ದರಿಂದ ಶ್ರೀಮಂತರ ಪಟ್ಟಿಯಲ್ಲಿ ಇಲ್ಲ. ಆದ್ರೆ ಜನರ ಮನಸ್ಸಿನಲ್ಲಿ ರತನ್ ಶ್ರೀಮಂತರೇ.. ಕೇವಲ ಹಣ ಇಟ್ಟುಕೊಂಡವನು ಮಾತ್ರ ಶ್ರೀಮಂತನಲ್ಲ, ಅದನ್ನೂ ಹೇಗೆ ಬಳಸುತ್ತಾರೋ ಅದರ ಮೇಲೇ ಶ್ರೀಮಂತಿಕೆ ನಿರ್ಧಾರವಾಗುತ್ತದೆ ಇಂತಹ ಮಹಾನ್ ವ್ಯಕ್ತಿಯ ಅಂತ್ಯಸಂಸ್ಕಾರ ಹೇಗೆ ನಡೆಯುತ್ತೆ ಅನ್ನೋದು ಸಾಕಷ್ಟು ಜನರ ಪ್ರಶ್ನೆಯಾಗಿತ್ತು.. ಸಾಕಷ್ಟು ಜನ ಪಾರ್ಸಿ ಸಮುದಾಯಂತೆ ನಡೆಯುತ್ತೆ ಅಂದ್ಕೊಂಡಿದ್ರು. ಅದು ಹಾಗೇ ನಡೆದಿದ್ದಲ್ಲ.. ಹಾಗಿದ್ರೆ ಪಾರ್ಸಿ ಧರ್ಮದಂತೆ ಯಾಕೆ ಅಂತ್ಯಕ್ರಿಯೆ ನಡೆದಿಲ್ಲ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ – ದೊಡ್ಮನೆಗೆ ಬಂದ ಮುಸುಕುಧಾರಿಗಳು ಯಾರು?
ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಪಾರ್ಸಿ ಸಮುದಾಯದವರು.. ಹಾಗಾಗಿ ಪಾರ್ಸಿ ಅನುಸರಿಸುವ ವಿಧಿವಿಧಾನಗಳ ಪ್ರಕಾರವೇ ರತನ್ ಟಾಟಾ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗುತಿತ್ತು. ನಿಮ್ಮ ಗೊತ್ತಿರಲಿ ಸ್ನೇಹಿತರರೇ.. ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲಿಮರಂತೆ ಪಾರ್ಸಿಗಳು ಶವವನ್ನು ಸಂಸ್ಕಾರ ಮಾಡೋದಿಲ್ಲ ಅಥವಾ ಹೂಳುವುದಿಲ್ಲ. ಮಾನವನ ದೇಹವನ್ನು ಪ್ರಕೃತಿಯ ಕೊಡುಗೆ ಎಂದು ಪರಿಗಣಿಸುವ ಅವರು, ಮೃತ ದೇಹವನ್ನು ಮರಳಿ ಪ್ರಕೃತಿಗೆ ನೀಡುತ್ತಾರೆ. ಇದನ್ನ ಇವರು ದಖ್ಮಾ ಎಂದು ಪಾರ್ಸಿ ಭಾಷೆಯಲ್ಲಿ ಕರೆಯುತ್ತಾರೆ. ಏಕೆಂದರೆ ಪಾರ್ಸಿ ಸಂಪ್ರದಾಯದಲ್ಲಿ ಭೂಮಿ ಮತ್ತು ಬೆಂಕಿ ದೇವರು. ಮೃತದೇಹ ಸುಟ್ರೆ ಅಗ್ನಿ ಅಪವಿತ್ರ, ಹೂತಿದರೆ ಭೂಮಿ ಅಪವಿತ್ರವಾಗುತ್ತೆ ಅನ್ನೋ ನಂಬಿಕೆ. ಆ ಕಾರಣದಿಂದಾಗಿ ಅವರು ಶವವನ್ನು ಹೂಳುವುದಿಲ್ಲ ಅಥವಾ ಬೆಂಕಿಯಲ್ಲಿ ಬೂದಿ ಮಾಡುವುದಿಲ್ಲ. ಹಾಗಿದ್ರೆ ಏನ್ ಮಾಡ್ತಾರೆ ಅನ್ನೋದನ್ನ ನೀವು ಕೇಳಬಹುದು..
ಪಾರ್ಸಿ ಅಂತ್ಯಕ್ರಿಯೆಗಾಗಿ ವಿನ್ಯಾಸಗೊಳಿಸಲಾಗುತ್ತೆ.. ಅದು ನಿಮಗೆ ಭಾವಿಯ ತರ ರಚನೆ ಮಾಡಲಾಗಿರುತ್ತೆ.. ಇದನ್ನ ಪಾರ್ಸಿ ಭಾಷೆಯಲ್ಲಿ ‘ದಖ್ಮಾ’ ಅಥವಾ ಮೌನ ಗೋಪುರ ಎನ್ನುತ್ತಾರೆ. ಅಲ್ಲಿ ಮೃತ ದೇಹವನ್ನ ಇಡಲಾಗುತ್ತೆ.. ನಂತ್ರ ಮೃತದೇಹವನ್ನು ಹುಳಗಳು ಹಾಗೂ ರಣಹದ್ದುಗಳು ತಿನ್ನುತ್ತವೆ. ಇಲ್ಲಿ ಮೃತದೇಹವನ್ನು ಹುಳಗಳು ಹಾಗೂ ರಣಹದ್ದುಗಳು ತಿನ್ನುತ್ತವೆ. ಮೂಳೆಗಳು ಅಂತಿಮವಾಗಿ ಗೋಪುರದೊಳಗಿನ ಬಾವಿಗೆ ಬೀಳುತ್ತವೆ.. ಹಾಗೇ ಅಲ್ಲೇ ಕೊಳೆತು ಹೋಗುತ್ತೆ. ಆದ್ರೆ ರತನ್ ಟಾಟಾ ಅವರ ಮೃತಹೇಹವನ್ನ ಈ ರೀತಿ ಅಂತ್ಯಕ್ರಿಯೆ ಮಾಡಿಲ್ಲ..
ಉಕ್ಕಿನ ಉದ್ಯಮದಿಂದ ಉಪ್ಪಿನವರೆಗೂ, ಬಡವರಿಗಾಗಿ ಬಂದ 3 ಲಕ್ಷದ ಟಾಟಾ ನ್ಯಾನೋ ಕಾರಿನಿಂದ 6 ಕೋಟಿ ಜಾಗ್ವಾರ್, ರೇಂಜ್ ರೋವರ್‌ವರೆಗೂ ಇತಿಹಾಸ ಬರೆದವರು ರತನ್ ಟಾಟಾ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರಿಗೆ ತತ್ವಾರವಿರುವ ಹಳ್ಳಿಗಳಿಗೂ ನೀರು ಹರಿಸಲು ವಿದೇಶಿ ತಜ್ಞರನ್ನೇ ಕರೆಸಿದ್ದ ಭಗೀರಥ ರತನ್‌ಟಾಟಾ. ಹಾಗಾಗಿನೇ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಪಾರ್ಸಿ ಧರ್ಮಗುರುಗಳು ಬಂದು ಬೀಳ್ಕೊಟ್ಟರು. ಬದುಕಿದ್ದಾಗ ದಾನ ಶೂರ ಕರ್ಣರಾಗಿದ್ದ ರತನ್ ಟಾಟಾ ಸಾವಿನ ಬಳಿಕ ಪಾರ್ಸಿ ಸಂಪ್ರದಾಯದಂತೆ ವಿಧಿ ವಿಧಾನ ನಡೆದರೂ ಅವರ ಮೃತದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ಬೆಂಕಿಗೆ ಅಹುತಿ ಮಾಡಲಾಗಿದೆ. ಇತ್ತೀಚೆಗೆ ರಣಹದ್ದುಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ರತನ್ ಟಾಟಾ ಅವರ ಇಚ್ಛೆಯಂತೆಯೇ ವಿದ್ಯುತ್ ಚಿತಾಚಾರದಲ್ಲಿ ಅಗ್ನಿ ಸ್ಪರ್ಶ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪಾರ್ಸಿಗಳು ಮಂದಿ ವಿದ್ಯುತ್ ಚಿತಾಗಾರಗಳನ್ನೇ ಅಂತಿಮ ವಿಧಿವಿಧಾನಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.