ಬೆನ್ನು ನೋವು.. ಡಿ ಬಾಸ್‌ ವಿಲವಿಲ.. – ಬೆಂಗಳೂರಿಗೆ ಹೋಗಲು ಹಠ  
ಸರ್ಜರಿ ಆಗದಿದ್ದರೆ ದಚ್ಚುಗೆ ಡೇಂಜರ್ 

ಬೆನ್ನು ನೋವು.. ಡಿ ಬಾಸ್‌ ವಿಲವಿಲ.. – ಬೆಂಗಳೂರಿಗೆ ಹೋಗಲು ಹಠ  ಸರ್ಜರಿ ಆಗದಿದ್ದರೆ ದಚ್ಚುಗೆ ಡೇಂಜರ್ 

ಮಾಡಬಾರದನ್ನೇ ಮಾಡಿದ್ರೆ ಆಗಬಾರದೇ ಆಗುತ್ತೆ ಅನ್ನೋದಕ್ಕೆ ದರ್ಶನ್ ಸಾಕ್ಷಿ.. ರಾಯಲ್ ಆಗಿ ಬದುಕಿ, ಅಭಿಮಾನಿಗಳ ಪಾಲಿನ ದೇವರಾಗಿದ್ದ ದಾಸ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಗ್ರಹಚಾರ ಕೆಟ್ಟರೇ ಹಗ್ಗ ಕೂಡ ಹಾವಾಗುತ್ತೆ ಅಂತಾರೆ ಅಲ್ವಾ.. ಹಾಗೇ ದರ್ಶನ್ ಪಡಾಗಿದೆ.. ಪವಿತ್ರಗೌಡಗೆ ಅಸಭ್ಯವಾಗಿ ಮ್ಯಾಸೇಜ್ ಮಾಡಿದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರೋ ದರ್ಶನ್ ದಿನ ನಿತ್ಯ ಸಂಕಟ ಪಡುತ್ತಿದ್ದಾರೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸೇರಿರೋ ದರ್ಶನ್‌ ಮತ್ತೆ ಪರಪ್ಪನ ಅಗ್ರಹಾರಕ್ಕೆ ಬತರ್ರಾ..? ಸೊಂಟ ನೋವಿನಿಂದ ಬಳಲುತ್ತಿರೋ ಕರಿಯನ ರಿಪೋರ್ಟ್‌ನಲ್ಲಿ ಏನಿದೆ ಅನ್ನೋದ್ರ ಬಗ್ಗೆ ಕಂಪ್ಲೀಂಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್‌ – ದೊಡ್ಮನೆಗೆ ಬಂದ ಮುಸುಕುಧಾರಿಗಳು ಯಾರು?

ದಾಸ.. ಕರಿಯಾ..ಡಿ ಬಾಸ್‌  ನಾನಾ ಹೆಸರಲ್ಲಿ ಕರೆಸಿಕೊಳ್ಳುವ ದರ್ಶನ್ ಬಳ್ಳಾರಿಜೈಲಿನಲ್ಲಿ ಮುದ್ದೆ ಮುರೆಯುತ್ತಿದ್ದಾರೆ. ಕ್ಲಬ್ಬ್ಲ್‌.. ಪಬ್‌.. ಪಾರ್ಟಿ.. ಶೂಟಿಂಗ್‌ ಅಂತಾ ಬ್ಯುಸಿಯಾಗಿದ್ದ ದಾಸ ಈಗ ಜೈಲಿನಲ್ಲಿ ನಾಲ್ಕು ಗೊಡೆಗಳ ನಡುವೆ ಸೆರೆವಾಸ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ನಾಗನ ಜೊತೆ ಬಿಂದಾಸ್ ಆಗಿದ್ದ ದಾಸನಿಗೆ ಒಂದು ಫೋಟೋ  ಬಳ್ಳಾರಿ ಜೈಲಿಗೆ ಹೋಗುವಂತೆ ಮಾಡಿತ್ತು.. ಬಳ್ಳಾರಿ ಬಿಸಿಲಿಗೆ ಬಳಲಿ ಬೆಂಡಾಗಿರೋ ದರ್ಶನ್‌ಗೆ ಈಗ ಬೆನ್ನು ನೋವು ಕಾಡುತ್ತಿದೆ.  ಈನಡುವೆ ಮತ್ತೆ ದರ್ಶನ್ ಬಳ್ಳಾರಿಯಂದ ಮತ್ತೆ ಬೆಂಗಳೂರಿನ ಪರಪ್ಪನ ಜೈಲಿಗೆ ಶಿಫ್ಟ್ ಆಗೋ ಸಾಧ್ಯತೆಯಿದೆ.

ಬಳ್ಳಾರಿಗೆ ಶಿಫ್ಟ್ ಆದ ಮೇಲೆ ದರ್ಶನ್‌ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿರುವ ಜೈಲಿನ ವೈದ್ಯರು ಎರಡು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ನಡುವೆ ಒಂದು ವಾರದಿಂದ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು,  ಸ್ಕ್ಯಾ‌ನಿಂಗ್‌ ಮಾಡಿಸುವ ಅವಶ್ಯಕತೆಯಿದೆ ಎಂದು ತಜ್ಞ ವೈದ್ಯರು ತಿಳಿಸಿದ್ರು. ಅವತ್ತು ಅಯ್ಯೋ ಬೇಡ.. ಬೇಡ.. ಸ್ಕ್ಯಾ‌ನಿಂಗ್  ಬೇಡ ಅಂತಾ ದರ್ಶನ್ ಹೇಳಿದ್ರು.. ನಾನ್ ಬೆಂಗಳೂರಿಗೆ ಹೋದ ಮೇಲೆ ಸ್ಕ್ಯಾ‌ನ್‌ ಮಾಡಿಸುತ್ತೇನೆ.. ನೀವು ಈಗ ಮಾತ್ರೆ ಕೊಡಿ ಸಾರ್ ಎದು ದರ್ಶನ್ ಹೇಳಿದ್ರು.. ಆದ್ರಂತೆ ಇಷ್ಟು ದಿನ ಡಾಕ್ಟರ್ ಕೊಟ್ಟ ಮಾತ್ರೆಯನ್ನ ದರ್ಶನ್ ತಿನ್ನುತ್ತಿದ್ದರು.. ಆದ್ರೆ ಈಗ ಮತ್ತೆ ದರ್ಶನ್ ಅವರ ಬೆನ್ನು ನೋವು ಹೆಚ್ಚಾದ ಕಾರಣ ಬೆಂಗಳೂರಿಗೆ ಶಿಫ್ಟ್ ಮಾಡೋ ಸಾಧ್ಯತೆಯಿದೆ. ನಟ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಇರುವ ಕಾರಣ ಇತ್ತೀಚೆಗೆ ಸರ್ಜಿಕಲ್ ಚೇರ್‌ಗೆ ಮನವಿ ಮಾಡಿದ್ದು ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ದರ್ಶನ್ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಹೋಗಿದೆ. ಕಳೆದ ವಾರ ಆರ್ಥೋಪೆಡಿಕ್ ಸರ್ಜನ್ ದರ್ಶನ್ ಬೆನ್ನು ನೋವಿನ ಕುರಿತು ತಪಾಸಣೆ ಮಾಡಿದ್ದಾರೆ. ಆದರೆ ವರದಿ ನೀಡಲು ನ್ಯೂರೋ ಸರ್ಜನ್ ಕೂಡ ತಪಾಸಣೆ ಮಾಡಬೇಕಿದೆ. ಹೀಗಾಗಿ ಇದೀಗ ವಿಮ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ದರ್ಶನ್ ತಪಾಸಣೆ ಮಾಡಿ  ವರದಿ ನೀಡಲಿದ್ದಾರೆ. ವರದಿಯಲ್ಲಿ ದರ್ಶನ್‌ಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಾತ್ರ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ವೈದ್ಯರ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರೆ, ಈ ವೈದ್ಯರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿ ನಟ ದರ್ಶನ್‌ನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ವೈದ್ಯರ ಹೆಚ್ಚುವರಿ ಸ್ಕ್ಯಾನಿಂಗ್, ಸರ್ಜರಿ ಹಾಗೂ ಚಿಕಿತ್ಸೆಗೆ ಸೂಚಿಸಿದರೆ ಮಾತ್ರ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತದೆ .

ಸಾಲು ಸಾಲು ರಜೆ.. 3 ದಿನ ಬಳ್ಳಾರಿಯಲ್ಲಿ ಜೈಲಲ್ಲಿ ದಾಸ ಫಿಕ್ಸ್

ಅಕ್ಟೋಬರ್ 10 ರಂದು ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ನೀರಿಕ್ಷೆ ಹೆಚ್ಚಾಗಿತ್ತು.. ಬೇಲ್ ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸ ಹೆಚ್ಚಾಗಿತ್ತು.. ಹೀಗಾಗಿ ಬಳ್ಳಾರಿ ಜೈಲಿನಲ್ಲಿ ಅಭಿಮಾನಿಗಳಿಗೆ ಕೈ ಸೆನ್ನೆ ಮೂಲಕ ಸಂಭ್ರಮ ಸೂಚಿಸಿದ್ರು.. ಆದ್ರೆ ಬೇಲ್ ಅರ್ಜಿ ಕೋರ್ಟ್ ಮುಂದೂಡುತ್ತಿದ್ದಂತೆ ದರ್ಶನ್ ಫುಲ್ ಬೇಜಾರ್ ಆಗಿದ್ರು.. ಇದ್ರ ನಡುವೆ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿದೆ. ಜೊತೆಗೆ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳು ಬಂದಿದ್ದಾವೆ.. ಹೀಗಾಗಿ ಕರಿಯ ರಜಾ ದಿನವಾಗಿರುವ ಕಾರಣ ಕನಿಷ್ಠ ಮೂರು ದಿನ ಬಳ್ಳಾರಿ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಡಾಕ್ಟರ್ ಸ್ಯಾನಿಂಗ್ ಅಗತ್ಯವಿದೆ ಬೆಂಗಳೂರಿಗೆ ಶಿಫ್ಟ್ ಮಾಡಿ ಅಂತಾ ವರದಿ ನೀಡಿದ್ರೆ ಬೆಂಗಳೂರಿಗೆ ಶಿಫ್ಟ್ ಮಾಡಬೇಕಾಗುತ್ತೆ.. ಆದ್ರೆ  ಶಿಫ್ಟ್ ಮಾಡೋಕೆ ಕೋರ್ಟ್ ಅನುಮತಿ ಬೇಕು.  ಹೀಗಾಗಿ ದಾಸ 3 ದಿನ ಬಳ್ಳಾರಿ ಜೈಲಿನಲ್ಲೇ ದಿನ ಕಳೆಯಬೇಕು..

Shwetha M

Leave a Reply

Your email address will not be published. Required fields are marked *