28 ಮ್ಯಾಚ್.. 483 ರನ್.. ಸಂಜು ಫೇಲ್ – ಸ್ಯಾಮ್ಸನ್ ಗೆ BCCI ಬಾಗಿಲು ಬಂದ್?
ಬಾಂಗ್ಲಾ 3ನೇ ಟಿ-20 ಪಂದ್ಯವೇ ಫೈನಲ್
ಟೀಂ ಇಂಡಿಯಾ ಪರ ಆಡ್ಬೇಕು ಅನ್ನೋದು ನೂರಾರು ಕ್ರಿಕೆಟಿಗರ ಕನಸು. ಐಪಿಎಲ್ನಲ್ಲಿ ಮಿಂಚಿದ್ರೂ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯೋಕೆ ಆಗ್ದೇ ಡೇ ಌಂಡ್ ನೈಟ್ ಒದ್ದಾಡ್ತಿದ್ದಾರೆ. ಆದ್ರೆ ಸಂಜು ಸ್ಯಾಮ್ಸನ್ಗೆ ಮಾತ್ರ ಅದೇನ್ ಆಗಿದ್ಯೋ ಏನೋ. ಬ್ಯಾಕ್ ಟು ಬ್ಯಾಕ್ ಫ್ಲ್ಯಾಪ್ ಶೋ ತೋರಿಸಿದ್ರೂ ಬಿಸಿಸಿಐ ಮ್ಯಾನೇಜ್ಮೆಂಟ್ ಮತ್ತೆ ಮತ್ತೆ ನಂಬಿಕೆ ಇಡ್ತಿದೆ. ಈ ಪಂದ್ಯದಲ್ಲಾದ್ರೂ ಫಾರ್ಮ್ಗೆ ಬರ್ತಾರೆ, ಬ್ಯಾಟ್ ಬೀಸ್ತಾರೆ ಅಂತಾ ಚಾನ್ಸ್ ಮೇಲೆ ಚಾನ್ಸ್ ಕೊಡ್ತಾನೇ ಇದ್ದಾರೆ. ಆದ್ರೆ ಟೀಂ ಇಂಡಿಯಾ ಪರ ಸಂಜು ಬ್ಯಾಟ್ ಸೈಲೆಂಟ್ ಆಗಿದ್ರೆ ಅವ್ರ ಅಭಿಮಾನಿಗಳೇ ಜಾಸ್ತಿ ಬ್ಯಾಟ್ ಬೀಸ್ತಿದ್ದಾರೆ. ಇದೀಗ ಬಾಂಗ್ಲಾ ವಿರುದ್ಧದ ಎರಡು ಟಿ-20 ಪಂದ್ಯಗಳಲ್ಲೂ ಫೇಲ್ಯೂರ್ ಆಗಿರೋ ಸಂಜು ಸ್ಯಾಮ್ಸನ್ ಗೆ ಟೀಂ ಇಂಡಿಯಾದಿಂದಲೇ ಗೇಟ್ಪಾಸ್ ಸಿಗೋ ಹಿಂಟ್ ಸಿಕ್ಕಿದೆ. ಅಷ್ಟಕ್ಕೂ ಯಾರಿಗೂ ಸಿಗದಷ್ಟು ಅವಕಾಶ ಕೊಟ್ರೂ ಸಂಜು ಸ್ಯಾಮ್ಸನ್ ಯಾಕೆ ಸದ್ದು ಮಾಡ್ತಿಲ್ಲ? ಐಪಿಎಲ್ಗಷ್ಟೇ ಸೀಮಿತವಾಗ್ತಾರಾ? ಬೇರೆ ಪ್ರತಿಭೆಗಳಿಗೆ ಅವಕಾಶ ಕೊಡ್ಬೇಕಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ – ದೊಡ್ಮನೆಗೆ ಬಂದ ಮುಸುಕುಧಾರಿಗಳು ಯಾರು?
ಸಂಜು ಸ್ಯಾಮ್ಸನ್. 2024ರ ಐಪಿಎಲ್ನಲ್ಲಿ ಒನ್ ಆಫ್ ದಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದ ಆಟಗಾರ. ರಾಜಸ್ತಾನ ರಾಯಲ್ಸ್ ಕ್ಯಾಪ್ಟನ್ ಆಗಿ ತಂಡವನ್ನ ಉತ್ತಮವಾಗಿ ಲೀಡ್ ಮಾಡಿದ್ರು. ಪ್ಲೇಆಫ್ಗೂ ಎಂಟ್ರಿ ಕೊಟ್ಟಿದ್ರು. ಇದೇ ಪ್ರತಿಭೆಯನ್ನ ಗುರುತಿಸಿಯೇ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ಗೆ ಮತ್ತೆ ಅವಕಾಶ ಸಿಕ್ಕಿತ್ತು. ಆದ್ರೆ ಇದನ್ನ ಉಳಿಸಿಕೊಳ್ಳೋಕೆ ಸಂಜು ಸ್ಯಾಮ್ಸನ್ಗೆ ಸಾಧ್ಯವಾಗ್ತಾನೇ ಇಲ್ಲ. ಸದ್ಯ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೂಡ ಸ್ಥಾನ ಪಡೆದಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಸಂಜು ಮತ್ತದೇ ನಿರಾಸೆ ಮೂಡಿಸಿದ್ದಾರೆ.
ಬಾಂಗ್ಲಾ ವಿರುದ್ಧದ 2 ಟಿ-ಟ್ವೆಂಟಿ ಪಂದ್ಯಗಳಲ್ಲೂ ಫೇಲ್!
ಸದ್ಯ ಭಾರತ ಪ್ರವಾಸದಲ್ಲಿ ಬಾಂಗ್ಲಾದೇಶವನ್ನ ಈಗಾಗ್ಲೇ 2 ಟೆಸ್ಟ್ ಪಂದ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಲಾಗಿದೆ. ಮತ್ತೊಂದೆಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲೂ ಕೂಡ ಈಗಾಗ್ಲೇ 2 ಪಂದ್ಯಗಳು ಮುಗಿದಿದ್ದು ಎರಡರಲ್ಲೂ ಕೂಡ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಆದ್ರೆ ಸಂಜು ಸ್ಯಾಮ್ಸನ್ ಮಾತ್ರ ಎರಡೂ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಗಳಿಸಿದ್ದ ಸಂಜು ಸ್ಲೋ ಎಸೆತಕ್ಕೆ ಬಲಿಯಾದರು. ಎರಡನೇ ಟಿ20 ಪಂದ್ಯದಲ್ಲೂ ಕೂಡ 7 ಎಸೆತಗಳಲ್ಲಿ 2 ಬೌಂಡರಿ ಸಹಿತ 10 ರನ್ ಗಳಿಸಿದ್ದ ಸಂಜು ಮತ್ತೊಮ್ಮೆ ಸ್ಲೋ ಬೌಲಿಂಗ್ನಲ್ಲೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಸಂಜು ಕಳಪೆ ಬ್ಯಾಟಿಂಗ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.
ಬಾಂಗ್ಲಾ ವಿರುದ್ಧದ 3ನೇ ಪಂದ್ಯದಿಂದ ಸಂಜು ಡ್ರಾಪ್?
ಈಗಾಗ್ಲೇ ಎರಡು ಪಂದ್ಯಗಳಲ್ಲಿ ಸಿಕ್ಕಿರೋ ಅವಕಾಶದಲ್ಲಿ ಬ್ಯಾಟ್ ಬೀಸದ ಸಂಜುಗೆ ಬಿಸಿಸಿಐ ಶಾಕ್ ಕೊಡೋಕೆ ಮುಂದಾಗಿದೆ ಎನ್ನಲಾಗಿದೆ. ಬಾಂಗ್ಲಾ ದೇಶ ವಿರುದ್ಧದ 3ನೇ ಟಿ20 ಪಂದ್ಯದಿಂದ ಟೀಂ ಇಂಡಿಯಾದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಬಾಂಗ್ಲಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡುವ ಆಸೆ ಹೊಂದಿರುವ ಗುರಿ ಹೊಂದಿದ್ದು, ಅಂತಿಮ ಪಂದ್ಯ ಅಕ್ಟೋಬರ್ 12 ಶನಿವಾರ ನಡೆಯಲಿದೆ. ಎರಡು ಪಂದ್ಯಗಳಲ್ಲಿ ಸಂಜು ವಿಫಲ ಆಗಿರುವ ಕಾರಣ ಅವರಿಗೆ ಮ್ಯಾನೇಜ್ ಮೆಂಟ್ ಕೊಕ್ ನೀಡುತ್ತಾ ಅನ್ನು ಪ್ರಶ್ನೆ ಮೂಡಿದೆ. ಹಾಗೇನಾದ್ರೂ ಅವಕಾಶ ಸಿಕ್ಕಿಯೂ 3ನೇ ಪಂದ್ಯದಲ್ಲೂ ಸಂಜು ವಿಫಲರಾದರೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ಸ್ಥಾನ ಪಡೆಯೋದು ಕಷ್ಟವಾಗುತ್ತೆ. ಯಾಕಂದ್ರೆ ಟೀಂ ಇಂಡಿಯಾ ಸೇರಲು ಇಶಾನ್ ಕಿಶಾನ್ ಕಾಯ್ತಿದ್ದು, ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ.
ರಣಜಿ ಟ್ರೋಫಿಯಲ್ಲೂ ಸ್ಥಾನ ಪಡೆಯದ ಸಂಜು!
ಇನ್ನು ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಕೇರಳ ತಂಡದಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಕೇರಳ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 11 ರಂದು ಪಂಜಾಬ್ ವಿರುದ್ಧ ಆಡ್ತಿದೆ. ಮೊದಲ ಎರಡು ಪಂದ್ಯಗಳಿಗೆ ಕೇರಳ ತಂಡದ ನಾಯಕರಾಗಿ ಸಚಿನ್ ಬೇಬಿ ಆಯ್ಕೆಯಾಗಿದ್ದಾರೆ. ಕಳಪೆ ಪ್ರದರ್ಶನದ ಕಾರಣದಿಂದಲೇ ಕೈ ಬಿಡಲಾಗಿದೆ ಎಂಬ ಚರ್ಚೆಯೂ ನಡೀತಿದೆ.
28 ಟಿ-20 ಇನ್ನಿಂಗ್ಸ್ ಗಳಿಂದ ಗಳಿಸಿದ್ದು ಬರೀ 483 ರನ್!
ಸಂಜು ಸ್ಯಾಮ್ಸನ್ ಹೀಗೆ ಫೇಲ್ಯೂರ್ ಕಾಣ್ತಿರೋದು ಇದೇ ಮೊದಲೇನು ಅಲ್ಲ. ಅವ್ರ ಟಿ-20ಐ ರನ್ಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್ಸ್. ಇದುವರೆಗೆ 28 ಟಿ20 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನಾಡಿರುವ ಸಂಜು ಕೇವಲ 483 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸ್ಯಾಮ್ಸನ್ ಅವರ ಸರಾಸರಿ ಶೇಕಡಾ 20 ಕ್ಕಿಂತಲೂ ಕಡಿಮೆ ಇದೆ. ಕಳೆದ ಕೆಲ ದಿನಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದ ಸಂಜುಗೆ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆದ ಬಳಿಕ ಟಿ20 ಕ್ರಿಕೆಟ್ನಲ್ಲಿ ಮತ್ತೆ ಮರು ಜೀವ ಸಿಕ್ಕಿದೆ. ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಂಜು ಎಡವುತ್ತಿದ್ದಾರೆ. ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸಂಜು, ಉತ್ತಮ ಆರಂಭ ಪಡೆದುಕೊಂಡ ಹೊರತಾಗಿಯೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಬದಲಿಸುವಲ್ಲಿ ಎಡವುತ್ತಿದ್ದಾರೆ.
ಟೀಮ್ ಇಂಡಿಯಾದ ಖಾಯಂ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಟೆಸ್ಟ್ ತಂಡದಲ್ಲಿದ್ದ ಕಾರಣ ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿದಿದ್ರು. ಆದ್ರೆ ಬ್ಯಾಟಿಂಗ್ನಲ್ಲಿ ಮಾತ್ರ ಸದ್ದು ಮಾಡ್ತಿಲ್ಲ. ಇದೀಗ ಬಾಂಗ್ಲಾ ವಿರುದ್ಧದ ಮೂರನೇ ಟಿ-20 ಮ್ಯಾಚ್ ಇದೇ ಶನಿವಾರ ನಡೆಯಲಿದೆ. ಈಗಾಗ್ಲೇ ಸಂಜುಗೆ ಚಾನ್ಸ್ ಕೊಟ್ಟು ಕೈ ಸುಟ್ಟುಕೊಂಡಿರೋ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತೆ ಮೂರನೇ ಪಂದ್ಯಕ್ಕೆ ಅವಕಾಶ ಕೊಡುತ್ತಾ ಅನ್ನೋ ಪ್ರಶ್ನೆ ಇದೆ. ಹಾಗೇನಾದ್ರೂ ಅವಕಾಶ ಸಿಕ್ರೂ ಕೂಡ ಸಂಜು ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿಸಿ ಟೀಂ ಇಂಡಿಯಾ ಬಾಗಿಲು ಪರ್ಮನೆಂಟ್ ಆಗಿ ಮುಚ್ಚಿದ್ರೂ ಅಚ್ಚರಿ ಪಡ್ಬೇಕಿಲ್ಲ. ಯಾಕಂದ್ರೆ ಟೀಂ ಇಂಡಿಯಾ ಸೇರಲು ಕಾಯ್ತಿರೋ ಹತ್ತಾರು ಪ್ರತಿಭಾವಂತ ಆಟಗಾರರಿದ್ದಾರೆ.