ENGನಲ್ಲಿ ಜನ್ಮ.. PAKನಲ್ಲಿ ಸತ್ತ ಟೆಸ್ಟ್ – ಡಬಲ್, ತ್ರಿಬಲ್ ಸೆಂಚುರಿ.. 823 ರನ್ !
ಮುಲ್ತಾನ್ ಹೈವೇನಲ್ಲಿ PAK ಮಾನ ಹರಾಜು

ENGನಲ್ಲಿ ಜನ್ಮ.. PAKನಲ್ಲಿ ಸತ್ತ ಟೆಸ್ಟ್ – ಡಬಲ್, ತ್ರಿಬಲ್ ಸೆಂಚುರಿ.. 823 ರನ್ !ಮುಲ್ತಾನ್ ಹೈವೇನಲ್ಲಿ PAK ಮಾನ ಹರಾಜು

ಇಂಗ್ಲೆಂಡ್​ನಲ್ಲಿ ಹುಟ್ಟಿ ಆಸ್ಟ್ರೇಲಿಯಾದಲ್ಲಿ ಪೀಕ್​ಗೆ ಹೋಗಿದ್ದ ಟೆಸ್ಟ್ ಮ್ಯಾಚ್ ಈಗ ಪಾಕಿಸ್ತಾನದಲ್ಲಿ ಸಾಯುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಟ್ರೋಲ್ ಇದು. ಯಾಕಂದ್ರೆ ಪಾಕಿಸ್ತಾನದ ಮುಲ್ತಾನ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಪಾಕ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಕ್ರಿಕೆಟ್​ನ ಕಗ್ಗೊಲೆಯಾಗ್ತಿದೆ. ಅದೇನು ಸ್ಟೇಡಿಯಮ್ಮೋ ಅಥವಾ ಹೈವೇನೋ ಅಂತಾ ಕ್ರೀಡಾಭಿಮಾನಿಗಳು ಕಿಡಿ ಕಾರ್ತಿದ್ದಾರೆ. ಸೆಂಚುರಿ, ಡಬಲ್ ಸೆಂಚುರಿ, ತ್ರಿಬಲ್ ಸೆಂಚುರಿ ಅಂತಾ ಬ್ಯಾಟರ್ಸ್ ಬ್ಯಾಟ್ ಬೀಸ್ತಿದ್ರೆ ಬೌಲರ್ಸ್ ಪಾಡು ಅಯ್ಯೋ ಪಾಪ ಅನ್ನುವಂತಿದೆ. ಇಂಗ್ಲೆಂಡ್ ಮತ್ತು ಪಾಕ್ ನಡುವಿನ ಟೆಸ್ಟ್ ಮ್ಯಾಚ್​ ದಶಕಗಳ ದಾಖಲೆಗಳನ್ನ ಬ್ರೇಕ್ ಮಾಡಿದೆ. ಅಷ್ಟಕ್ಕೂ ಟೆಸ್ಟ್ ಮ್ಯಾಚ್ ಮಾದರಿಯಲ್ಲೇ ಅಣಕಿಸುವಂತಿರೋ ಪಾಕ್ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮುಡಾ ಕೇಸ್‌ ನ ಮೊದಲ ಹಂತದ ತನಿಖೆ ಮುಕ್ತಾಯ – ಯಾರ್ಯಾರಿಗೆ ಕಾದಿದೆ ಗ್ರಹಚಾರ?

ಪಾಕಿಸ್ತಾನದ ವಿರುದ್ಧದ ಮೊಲ ಟೆಸ್ಟ್​ನಲ್ಲಿ ಇಂಗ್ಲೆಂಡ್ ತಂಡ ಚರಿತ್ರೆ ಸೃಷ್ಟಿಸಿದೆ. ಅದ್ರಲ್ಲೂ ಇಲ್ಲಿ ಪಂದ್ಯ ನಡೆಯುತ್ತಿರೋ ಮುಲ್ತಾನ್ ಸ್ಟೇಡಿಯಂ ಬಾರೀ ಟೀಕೆಗೆ ಗುರಿಯಾಗಿದೆ. ಹೈವೇ ಎಂದೇ ಟ್ರೋಲ್ ಆಗ್ತಿರೋ ಮುಲ್ತಾನ್ ಮೈದಾನದಲ್ಲಿ ಇಂಗ್ಲೆಂಡ್​ ಬರೋಬ್ಬರಿ 823ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಎರಡನೇ ಮಹಾಯುದ್ಧದ ನಂತರ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದೆ.

87 ವರ್ಷಗಳಲ್ಲೇ ಗರಿಷ್ಠ ಸ್ಕೋರ್ ದಾಖಲಿಸಿದ ಇಂಗ್ಲೆಂಡ್!

ಯೆಸ್. ನೂರಲ್ಲ ಇನ್ನೂರಲ್ಲ. ಪಾಕಿಸ್ತಾನ ಮೊದಲ ಇನ್ನಿಂಗ್ಸ್​ನಲ್ಲಿ ಸಿಡಿಸಿದ್ದ 556 ರನ್​ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡದ ಆಟಗಾರರು ರನ್ ಮಳೆಯನ್ನೇ ಸುರಿಸಿದ್ದಾರೆ. ಅದ್ರಲ್ಲೂ ಜೋ ರೂಟ್ ಮತ್ತು ಹ್ಯಾರಿ ಬ್ಯೂಕ್ ಅಬ್ಬರವಂತೂ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದೆ.  ಜೋ ರೂಟ್​ರ ಡಬಲ್ ಸೆಂಚುರಿ ಸಿಡಿಸಿದ್ರೆ ಹಾಗೂ ಹ್ಯಾರಿ ಬ್ರೂಕ್ ತ್ರಿಶತಕ ಬಾರಿಸಿದ್ದಾರೆ. ಬರೋಬ್ಬರಿ 87 ವರ್ಷಗಳಲ್ಲೇ ಗರಿಷ್ಠ ಮೊತ್ತ ದಾಖಲಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಇಂಗ್ಲಿಷ್ ಬ್ಯಾಟರ್‌ಗಳ ಆಕ್ರಮಣಕಾರಿ ಆಟಕ್ಕೆ ಅದೆಷ್ಟೋ ರೆಕಾರ್ಡ್ಸ್ ಉಡೀಸ್ ಆಗಿವೆ. ತಂಡದ ಮೊತ್ತ 7 ವಿಕೆಟ್​ಗೆ 823 ರನ್ ಇದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಲಕ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದ 4ನೇ ಗರಿಷ್ಠ ಮೊತ್ತ ಕಲೆಯಾಕಿತು. ಪರಿಣಾಮ 2ನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 220 ರನ್ ಗಳಿಸಲಷ್ಟೇ ಶಕ್ತವಾಯ್ತು. ಈ ಮೂಲಕ ಇಂಗ್ಲೆಂಡ್ ತಂಡ 47 ರನ್​ಗಳ ಅಂತರದಲ್ಲಿ ಗೆಲುವು ದಾಖಲಿಸಿತು.

454 ರನ್ ಗಳ ಜೊತೆಯಾಟವಾಡಿದ ರೂಟ್ & ಬ್ರೂಕ್!

ಇಂಗ್ಲೆಂಡ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳ್ದಿದ್ದ ಜೋ ರೂಟ್ 375 ಬಾಲ್​ಗಳನ್ನ ಎದುರಿಸಿ 17 ಬೌಂಡರಿಗಳೊಂದಿಗೆ 262 ರನ್ ಬಾರಿಸಿದ್ರು. ಹಾಗೇ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಹ್ಯಾರಿ ಬ್ರೂಕ್ 322 ಬಾಲ್​ಗಳಲ್ಲಿ 29 ಫೋರ್, 3 ಸಿಕ್ಸರ್ ಸಮೇತ 317 ರನ್ ಕಲೆ ಹಾಕಿದ್ರು. ಈ ಮೂಲಕ 4ನೇ ವಿಕೆಟ್​ಗೆ 454 ರನ್​ಗಳ ಜೊತೆಯಾಟ ನಡೆಸುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ರನ್​ಗಳ ಜೊತೆಯಾಟವಾಗಿದ್ರು. ಅಲ್ಲದೆ ಇದು ಟೆಸ್ಟ್​ ಕ್ರಿಕೆಟ್​ನ 4ನೇ ಗರಿಷ್ಠ ಜೊತೆಯಾಟವಾಗಿದೆ. ಈ ಜೊತೆಯಾಟ ಪಾಕಿಸ್ತಾನದ ವಿರುದ್ಧ ಯಾವುದೇ ವಿಕೆಟ್​ಗೆ ದಾಖಲಾದ ವಿಶ್ವದಾಖಲೆಯಾಗಿದೆ. ಅಲ್ಲದೆ ಇದು ಇಬ್ಬರದು ಗರಿಷ್ಠ ರನ್​ಗಳ ಜೊತೆಯಾಟವೂ ಆಗಿದೆ.

1997ರಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಗರಿಷ್ಠ ಸ್ಕೋರ್

ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸ್ಕೋರ್ ದಾಖಲು ಮಾಡಿರೋದು ಶ್ರೀಲಂಕಾ ತಂಡ. ಅದೂ ಕೂಡ ನಮ್ಮ ಭಾರತ ತಂಡದ ವಿರುದ್ಧ. 1997ರಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 952/6 ಸ್ಕೋರ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಆ ನಂತರ ಗರಿಷ್ಠ ರನ್​ ಪಟ್ಟಿಯಲ್ಲಿ ಮುಂದಿನ ಮೂರು ಸ್ಕೋರ್‌ಗಳು ಇಂಗ್ಲೆಂಡ್‌ ತಂಡದಿಂದಲೇ ಬಂದಿವೆ. ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಮಹಾಯುದ್ಧಕ್ಕೂ ಮುನ್ನ 1938 ರಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 2 ಬಾರಿ 700 ಕ್ಕೂ ಹೆಚ್ಚು ರನ್ ಗಳಿಸಿತು. ಆಸ್ಟ್ರೇಲಿಯಾ ವಿರುದ್ಧ ದಿ ಓವಲ್‌ನಲ್ಲಿ 903/7 ರಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 1930ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 849ರನ್​ಗಳಿಸಿತ್ತು. ಇದೀಗ 3ನೇ ಬಾರಿ 800ಕ್ಕಿಂತ ಹೆಚ್ಚು ರನ್​ಗಳಿಸಿದೆ.

ಪಾಕಿಸ್ತಾನ ನೆಲದಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿದ ಇಂಗ್ಲಿಷರು!

ಇನ್ನು ಬರೋಬ್ಬರಿ 823ರನ್​ಗಳಿಸುವ ಮೂಲಕ ಇಂಗ್ಲೆಂಡ್ ತಂಡ ಪಾಕಿಸ್ತಾನ ನೆಲದಲ್ಲಿ 800ಕ್ಕೂ ಹೆಚ್ಚು ರನ್​ಗಳಿಸಿದ ಮೊದಲ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಯಿತು. 2009ರಲ್ಲಿ ಕರಾಚಿಯಲ್ಲಿ ಪಾಕ್ ತಂಡ ಶ್ರೀಲಂಕಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 765 ರನ್ ಡಿಕ್ಲೇರ್ ಘೋಷಿಸಿದ್ದು, ಇಲ್ಲಿಯವರೆಗೆ ವಿಶ್ವದಾಖಲೆಯಾಗಿತ್ತು.

ಪಾಕ್ ನ ಅತಿದೊಡ್ಡ ಮುಲ್ತಾನ್ ಸ್ಟೇಡಿಯಂ ಫುಲ್ ಟ್ರೋಲ್!

ಹೌದು. ಪಾಕ್​ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಬಳಿಕ ಪಾಕಿಸ್ತಾನದ ಮುಲ್ತಾನ್ ಸ್ಟೇಡಿಯಂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಪಾಕಿಸ್ತಾನದ ದೊಡ್ಡ ಮೈದಾನಗಳಲ್ಲಿ ಒಂದಾಗಿರುವ ಈ ಮೈದಾನದ ಪಿಚ್​ ಬಗ್ಗೆ ಟೀಕೆಗಳು ಜೋರಾಗಿವೆ. ಇದೇನೋ ಮೈದಾನವೂ ಅಥವಾ ಹೈವೆಯೋ ಎಂದು ಲೇವಡಿ ಮಾಡ್ತಿದ್ದಾರೆ. 2001 ರಲ್ಲಿ ತೆರೆಯಲಾದ ಈ ಸ್ಟೇಡಿಯಮ್​ನಲ್ಲಿ ಒನ್ ಟೈಮ್​ಗೆ 30 ಸಾವಿರ ಪ್ರೇಕ್ಷಕರು ಕೂರಬಹುದು.  ಈ ಮೈದಾನವು ಮುಲ್ತಾನ್ ನಗರದ ಹೃದಯಭಾಗದಲ್ಲಿರುವ ಹಳೆಯ ಖಾಸಿಮ್ ಬಾಗ್ ಕ್ರೀಡಾಂಗಣಕ್ಕೆ ಬದಲಿಯಾಗಿದೆ. 2001 ರಲ್ಲಿ ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶವನ್ನು 264 ರನ್‌ಗಳಿಂದ ಸೋಲಿಸಿತು. ಅದಾದ ಬಳಿಕ ಇದೇ ಸ್ಟೇಡಿಯಮ್​ನಲ್ಲಿ ಪಾಕಿಸ್ತಾನ ಟೆಸ್ಟ್‌ ಸರಣಿಗಳನ್ನ ಆಯೋಜಿಸುತ್ತಿದೆ. ಬ್ಯಾಟರ್​ಗಳ ಪಾಲಿಗೆ ಸ್ವರ್ಗವಾಗಿರೋ ಈ ಮೈದಾನದಲ್ಲಿ ರನ್​ಗಳಿಗೆ ಕಡಿವಾಣನೇ ಇರೋದಿಲ್ಲ. ಇದೇ ಪಿಚ್​ನ ಅವಸ್ಥೆ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Shwetha M

Leave a Reply

Your email address will not be published. Required fields are marked *