ಮುಡಾ ಕೇಸ್‌ ನ ಮೊದಲ ಹಂತದ ತನಿಖೆ ಮುಕ್ತಾಯ – ಯಾರ್ಯಾರಿಗೆ ಕಾದಿದೆ ಗ್ರಹಚಾರ?

ಮುಡಾ ಕೇಸ್‌ ನ ಮೊದಲ ಹಂತದ ತನಿಖೆ ಮುಕ್ತಾಯ – ಯಾರ್ಯಾರಿಗೆ ಕಾದಿದೆ ಗ್ರಹಚಾರ?

ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ತೀವ್ರ ಕೋಲಾಹಲ ಎಬ್ಬಿಸಿದೆ. ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಆದೇಶ ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ಮೊದಲ ಹಂತದ ತನಿಖೆ ಮುಕ್ತಾಯಗೊಂಡಿದೆ. ಈ ತನಿಖೆ ವೇಳೆ 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆಗಳನ್ನು ಸೀಜ್‌ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೊಡ್ಮನೆಯಲ್ಲಿ ಎಮರ್ಜೆನ್ಸಿ ಸೈರನ್‌ –  ಆತಂಕದಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು!

ಮುಡಾ ಕೇಸ್‌ ಗೆ ಸಂಬಂಧಿಸಿದಂತೆ ಗುರುವಾರ ಲೋಕಾಯುಕ್ತ ತಂಡ ಇಬ್ಬರು ಆರೋಪಿಗಳನ್ನ ಸುದೀರ್ಘ 10 ತಾಸುಗಳ ವಿಚಾರಣೆಗೆ ಒಳಪಡಿಸಿತ್ತು. ಇಬ್ಬರು ಆರೋಪಿಗಳಿಂದ 1935 ರಿಂದ 2010ರ ವರೆಗಿನ ಎಲ್ಲಾ ವ್ಯವಹಾರದ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಇದೇ ವೇಳೆ ಕೆಸರೆಯಲ್ಲಿ ಸರ್ವೆ ನಂಬರ್‌ 426ರ ಮೂರುಕಾಲು ಎಕರೆ ಭೂಮಿಯ ವಾರಸುದಾರಿಕೆ ಕುರಿತು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಎ4 ಆರೋಪಿ ದೇವರಾಜು ಹಲವು ದಾಖಲೆಗಳನ್ನು ಸಲ್ಲಿಸಿದರು. ನಂತರ ಎ3 ಆರೋಪಿಯಿಂದಲೂ ದಾಖಲೆಗಳನ್ನು ಲೋಕಾಯುಕ್ತ ಟೀಂ ಪಡೆದು ಮಾಹಿತಿ ಕಲೆಹಾಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮೊದಲ ಹಂತದ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ತಂಡ ಅಕ್ಟೋಬರ್‌ 14ರಿಂದ 2ನೇ ಹಂತದ ತನಿಖೆ ನಡೆಸಲಿದೆ. ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಂದಿನ 10 ದಿನಗಳಲ್ಲಿ ನೋಟಿಸ್‌ ಕೊಡುವ ಸಾಧ್ಯತೆಗಳಿವೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಪಾರ್ವತಮ್ಮಗೆ ನೋಟಿಸ್ ನೀಡುವ ಮುನ್ನ ಯಾವ ಯಾವ ಅನುಮಾನದ ಆಧಾರದ ಮೇಲೆ ನೋಟಿಸ್ ನೀಡ್ತಿದ್ದೇವೆ ಎಂಬ ಟಿಪ್ಪಣಿ ಸಿದ್ಧ ಮಾಡಿಕೊಳ್ಳಲಾಗುತ್ತದೆ. 2010 ರಿಂದ ಕೆಸರೆ ಜಾಗದ ವಿಚಾರದಲ್ಲಿ ನಡೆದ ಎಲ್ಲಾ ಪತ್ರ ವ್ಯವಹಾರಗಳ ಕುರಿತು ಪಾರ್ವತಮ್ಮ ಬಳಿಯಿಂದ ಹೇಳಿಕೆ ಪಡೆಯಲು ಪ್ರಶ್ನಾವಳಿ ತಯಾರಿಗೂ ಮುಂದಾಗಿದ್ದಾರೆ. ಪಾರ್ವತಮ್ಮ ವಿಚಾರಣೆ ಬಳಿಕ ಅವರು ನೀಡುವ ಹೇಳಿಕೆಗಳ ಆಧರಿಸಿ ಸಿಎಂಗೆ ನೋಟಿಸ್ ಕೊಡಬೇಕೋ ಬೇಡವೋ ಅನ್ನೋದನ್ನು ತೀರ್ಮಾನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Shwetha M

Leave a Reply

Your email address will not be published. Required fields are marked *