ದೊಡ್ಮನೆಯಲ್ಲಿ ಎಮರ್ಜೆನ್ಸಿ ಸೈರನ್‌ –  ಆತಂಕದಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು!

ದೊಡ್ಮನೆಯಲ್ಲಿ ಎಮರ್ಜೆನ್ಸಿ ಸೈರನ್‌ –  ಆತಂಕದಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಭಾರಿ ಕುತೂಹಲ ಮೂಡಿಸಿದೆ. ಸ್ವರ್ಗ, ನರಕ ಕಾನ್ಸೆಪ್ಟ್‌ನಲ್ಲಿ ಈ ಸೀಸನ್‌ ಪ್ರಸಾರವಾಗ್ತಿದೆ. ಇದೀಗ ಬಿಗ್‌ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ ಎಮರ್ಜೆನ್ಸಿ ಸೈರನ್‌ ಮೊಳಗಿದೆ. ಇದ್ರಿಂದಾಗಿ ಸ್ಪರ್ಧಿಗಳು ಭಯಗೊಂಡಿದ್ದಾರೆ.

ಇದನ್ನೂ ಓದಿ: ಅರಮನೆ ನಗರಿಯಲ್ಲಿ ಡಬಲ್‌ ಸಂಭ್ರಮ – ಯದುವೀರ್, ತ್ರಿಷಿಕಾ​ ದಂಪತಿಗೆ 2ನೇ ಮಗು ಜನನ

ಹೌದು, ದೊಡ್ಮನೆಯಲ್ಲಿ ಎಮರ್ಜನ್ಸಿ ಸೈರನ್ ಮೊಳಗಿದೆ. ಒಂದು ಕ್ಷಣಕ್ಕೆ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದು, ಮನೆಯಲ್ಲಿ ಏನಾಗ್ತಿದೆ ಅನ್ನೋ ಆತಂಕದಿಂದ ಕಿರುಚಾಡಿದ್ದಾರೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ಬಿಗ್​ಬಾಸ್ ವೀಕ್ಷಕರ ಕುತೂಹಲವನ್ನು ಹೆಚ್ಚಾಗಿದೆ.

ಪ್ರೊಮೋದಲ್ಲಿ ಏನಿದೆ..?

ಬಿಗ್​​ಬಾಸ್​ ಮನೆಯಲ್ಲಿ ಸೈರನ್ ಆಗಿದೆ. ಇದರಿಂದ ಸ್ಪರ್ಧಿಗಳು ಗಾಬರಿಯಾಗಿ ಓಡಿ ಬಂದು ಒಟ್ಟಿಗೆ ನಿಂತಿದ್ದಾರೆ. ‘ಏನೋ ಎಂಟ್ರಿ ಆಗ್ತಿದೆ.., ಕ್ರೇನ್​ನಿಂದ ಏನೋ ತೆಗಿತಾ ಇದ್ದಾರೆ, ಏಯ್ ಯಾರು? ಏನಿದು’ ಅಂತಾ ಆತಂಕದಿಂದ ಮಾತನಾಡಿಕೊಂಡಿದ್ದಾರೆ. ಅಷ್ಟರಲ್ಲೇ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿರುವ ಮುಸುಕುಧಾರಿಗಳು ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಹಾನಿ ಮಾಡಿದ್ದಾರೆ. ನಂತರ ಸ್ವರ್ಗ-ನರಕ ಎಂದು ವಿಭಾಗ ಮಾಡಿದ್ದ ಗೇಟ್​ಗಳನ್ನು ಬೇಧಿಸಿದ್ದಾರೆ. ನಂತರ ಬಿಗ್​ಬಾಸ್​ನ ಧ್ವನಿ ಮೊಳಗಿದೆ. 11ನೇ ವೇದಿಕೆಯಲ್ಲಿ ನೀವೆಲ್ಲರೂ ಎರಡು ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನೂ ಅನುಭವಿಸಿದ್ದೀರಿ ಎಂಬ ಧ್ವನಿ ಬಂದು ಹೋಗಿದೆ.

ಈ ಪ್ರೋಮೋ ನೊಡಿದ ಅಭಿಮಾನಿಗಳು ಸ್ವರ್ಗ-ನರಕ ಇಂದಿಗೆ ಕೊನೆಗೊಂಡಿದೆ ಎಂದು ಮಾತನಾಡಿಕೊಳ್ತಿದ್ದಾರೆ. ಸ್ವರ್ಗ-ನರಕ ಕಾನ್ಸೆಪ್ಟ್​ಗೆ ಏನಾಯ್ತು? ಎರಡೇ ವಾರಕ್ಕೆ ನಿಂತು ಹೋಯ್ತಾ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇಂದು ನಡೆಯುವ ಎಪಿಸೋಡ್ ತುಂಬಾ ಕುತೂಹಲಕಾರಿಯಾಗಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

Shwetha M

Leave a Reply

Your email address will not be published. Required fields are marked *