₹500 ಟಿಕೆಟ್.. ₹25ಕೋಟಿ ಲಾಟರಿ! – ಇದಪ್ಪ ಮಂಡ್ಯ ಮೆಕ್ಯಾನಿಕ್ ಅದೃಷ್ಟ
ಅದೆಷ್ಟು ಲಾಟರಿ ಖರೀದಿಸಿದ್ರು ಗೊತ್ತಾ?
ಲಕ್ ಅನ್ನೋದು ಹೇಗೆ ಯಾವಾಗ ಬರುತ್ತೆ ಅನ್ನೋದೇ ಗೊತ್ತಾಗಲ್ಲ. ಒಮ್ಮೆ ಅದೃಷ್ಟ ಕೈ ಹಿಡಿದ್ರೆ ಕೋಟ್ಯಾಧಿಪತಿ ಆಗಬಹುದು. ಪ್ರತಿಯೊಬ್ಬರು ನಮಗೆ ಕೋಟಿ ಕೋಟಿ ಲಾಟರಿಯಾದ್ರೂ ಹೊಡೆಯಬಾರದ ಅನ್ನೋ ಕನಸು ಕಣ್ತಾರೆ.. ಕೋಟಿ ಹಣ ಬಂದ್ರೆ ಜೀವನ ಸೆಟ್ಲು ಆಗುತ್ತೆ ಅಂತಾ ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ.. ಮಂಡ್ಯದ ಒಬ್ಬ ಸಾಮಾನ್ಯ ವ್ಯಕ್ತಿಯ ಅದೃಷ್ಟದ ಬಾಗಿಲು ತೆಗೆದಿದೆ.
ಇದನ್ನೂ ಓದಿ: ಟಾಟಾ ಸಾಮ್ರಾಜ್ಯ ಮುನ್ನಡೆಸೋದ್ಯಾರು? – ನಾಲ್ವರ ನಡುವೆ ಉತ್ತರಾಧಿಕಾರಿ ರೇಸ್
ಸ್ಕ್ರೀನ್ ಮೇಲೆ ಕಣ್ತಾ ಇರೋ ಇವರೇ ನೋಡಿ ಅದೃಷ್ಯವಂತ.. ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿಯಾದ ಇವರ ಹೆಸರು ಅಲ್ಟಾಫ್.. ಸ್ಕೂಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.. ಎಲ್ಲಿ ಕೇರಳ ಎಲ್ಲಿಯ ಮಂಡ್ಯ ಅಲ್ವಾ.. ಅದೃಷ್ಟ ಅನ್ನೋದು ಕೈ ಹಿಡಿದ್ರೆ ಹಣ ಹುಡುಕಿಕೊಂಡು ಬರುತ್ತೆ. ಮಂಡ್ಯದ ಗಂಡು ಅಲ್ತಾಫ್ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಇವರು ಕೇರಳ ರಾಜ್ಯ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, .. ಕರ್ನಾಟಕದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಅಲ್ತಾಫ್ ವಯನಾಡಿನಲ್ಲಿರುವ ಸಂಬಂಧಿಕರ ಮನೆಗೆ ಬಂದಾಗ ಟಿಕೆಟ್ ಖರೀದಿಸಿದ್ದರು.ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ಗೆದ್ದಿದ್ದಾರೆ. 9 ರಂದು ತಿರುವೋಣಂ ಬಂಪರ್ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆಗೆ ಮಲಯಾಳಿಗಳು ಉತ್ತರ ಹುಡುಕುತ್ತಿದ್ದರು. ಕೊನೆಗೆ ಕಾದು ನೋಡುತ್ತಿದ್ದವರಿಗೆ ಕರ್ನಾಟಕದ ಪಾಂಡ್ಯಪುರ ಮೂಲದ ಅಲ್ತಾಫ್‌ಗೆ ಲಾಟರಿ ಹಾರಿದೆ ಅನ್ನೋದು ಗೊತ್ತಾಗಿದೆ.
$25 ಕೋಟಿಯಲ್ಲಿ ಎಷ್ಟು ಸಿಗುತ್ತೆ..?
ಓಣಂ ತಿರುಓಣಂ ಬಂಪರ್ ಬಿಆರ್ 99 ಹೆಸರಿನಲ್ಲಿ ಈ ಲಾಟರಿಯನ್ನು ನಡೆಸಲಾಗುತ್ತದೆ. ಈ ಬಾರಿ 71,35,938 ಟಿಕೆಟ್‌ಗಳು ಮಾರಾಟವಾಗಿದ್ದವು. ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮಾರಟವಾಗಿದ್ದವು. ಕೇರಳ ಲಾಟರಿ ಇತಿಹಾಸದಲ್ಲೇ ಅತಿ ಹೆಚ್ಚು ಬಹುಮಾನ ಮೊತ್ತವನ್ನು ಹೊಂದಿರುವ ಓಣಂ ಬಂಪರ್ ಬಹುಮಾನ ಮೊತ್ತದ ಬಗ್ಗೆ ಜನರಲ್ಲಿ ಹಲವು ಸಂದೇಹಗಳಿವೆ. ಇದೀಗ 25 ಕೋಟಿ ಹೊಡೆದವರಿಗೆ ಅಷ್ಟು ಹಣ ಕೈಗೆ ಸಿಗುತ್ತದೆಯೇ ಎಂಬುದು ಎಲ್ಲರಿಗೂ ಕಾಡಲಿದೆ. ಆದರೆ , ಬಹುಮಾನ ಮೊತ್ತ ಪೂರ್ತಿ ಸಿಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ ಎಂಬುದೇ ಪ್ರಶ್ನೆಯೂ ಇರುತ್ತದೆ. ಇಲ್ಲಿ 25 ಕೋಟಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ಇದು ಓಣಂ ಬಂಪರ್ ಮೊತ್ತವಲ್ಲ, ದಿನನಿತ್ಯದ ಲಾಟರಿಗಳಾಗಿದ್ದರೂ ಬಹುಮಾನ ಮೊತ್ತ ಪೂರ್ತಿ ಅದೃಷ್ಟವಂತರ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಓಣಂ ಬಂಪರ್ ವಿಷಯದಲ್ಲಿ, 25 ಕೋಟಿಯಲ್ಲಿ 17.5 ಕೋಟಿ ರೂ.ಗಳು ಮಾತ್ರ ಲಾಟರಿ ಟಿಕೆಟ್ ಹಾರಿದ ಅದೃಷ್ಟವಂತರಿಗೆ ಸಿಗುತ್ತದೆ.