ಉಪ್ಪು, ಕಾರು, ಬಟ್ಟೆ.. ಟಾಟಾಮಯ! – ಸಿರಿವಂತಿಕೆಯಲ್ಲೂ ಸಂತನಂತಿದ್ರು ರತನ್
ಬಡವರ ಪಾಲಿನ ಬಂಧು ಈ ಭಗ್ನಪ್ರೇಮಿ
ಟಾಟಾ..ಈ ಒಂದು ಪದ ಕೇಳಿದ್ರೆ ಭಾರತೀಯರಿಗೆ ಹೆಮ್ಮ.. ಒಂದು ಖಾಸಗಿ ಸಂಸ್ಥೆಯಾದ್ರೂ ಬಾರತದಲ್ಲಿ ಮಾಡಿದ ಸಾಧನೆ ಸಾಕಷ್ಟು ಯಾವುದೇ ಒಂದು ಹಳ್ಳಿಯ ಮನೆಗೆ ಹೋದ್ರೂ ಅಲ್ಲಿ ಟಾಟಾ ಸಂಸ್ಥೆಯ ಒಂದು ಚಿಕ್ಕ ವಸ್ತು ಆದ್ರೂ ಸಿಗುತ್ತೆ.. ಟಾಟಾ ಉಪ್ಪಿನಿಂದ ಕೋಟಿ ಕೋಟಿ ಬೆಲೆ ಬಾಳುವ ವಿಮಾನದ ತನಕ ಟಾಟಾ ಸಂಸ್ಥೆ ತನ್ನ ಚಾಪು ಮೂಡಿಸಿದೆ.. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ಒಂದು ಸಂಸ್ಥೆ ಭಾರತದಲ್ಲಿ ಸಾಕಷ್ಟು ಕಾಂತ್ರಿಯನ್ನೇ ಉಂಟು ಮಾಡಿದೆ. ಆದ್ರೀಗ ಟಾಟಾ ಸಂಸ್ಥೆಯನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ರತನ್ ಟಾಟಾವರನ್ನ ನಾವು ಕಳೆದುಕೊಂಡಿದ್ದೇವೆ.. ಭಾರತ ದೇಶಕ್ಕೆ ಇವರು ಕೊಟ್ಟ ಕೊಡಿಗೆ ಅಪಾರ.. ಉದ್ಯಮಿ ಒಬ್ಬ ಹೇಗೆಲ್ಲಾ ಸಮಾಜಸೇವೆ ಮಾಡಬಹುದು? ಎಂಬುದಕ್ಕೆ ಟಾಟಾ ಸಂಸ್ಥೆಯೇ ಮಾದರಿ.. ಈಗ ರತನ್ ಟಾಟಾ ಅವರನ್ನ ಕಳೆದುಕೊಂಡು ಈಗ ಭಾರತದ ಉದ್ಯಮ ವಲಯ ಮಾತ್ರವಲ್ಲ, ಇಡೀ ಜಗತ್ತಿನ ಉದ್ಯಮ ವಲಯವೇ ಅನಾಥವಾಗಿದೆ. ಹಾಗಿದ್ರೆ ರತನ್ ಟಾಟಾ ಅವರ ಕಟ್ಟಿ ಬೆಳೆಸಿದ್ದ ಉದ್ಯಮ ಸಾಮ್ರಾಜ್ಯ ಮೊದಲು ಹೇಗಿತ್ತು.. ಇದು ಹುಟ್ಟಿದ್ದು ಹೇಗೆ. ರತನ್ ಟಾಟಾ ಯಾಕೆ ಮುದುವೆ ಆಗಿಲ್ಲ.. ಅವರು ಯಾವ ಉದ್ಯಮ ಫೇಲ್ಯೂರ್ ಆಗಿತ್ತು? ಇದ್ರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಅ. 14 ರಂದು ದರ್ಶನ್, ಪವಿತ್ರಾ ಗೌಡ ಜಾಮೀನು ಭವಿಷ್ಯ ನಿರ್ಧಾರ!
ಟಾಟಾ ಬೆಳೆಸಿದ್ದ ಉದ್ಯಮವನ್ನೇ ಆಧರಿಸಿ ಕೋಟ್ಯಂತರ ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಒಂದು ಉದ್ಯಮವನ್ನು ಬೆಳೆಸುವುದು & ಉದ್ಯೋಗಿಗಳ ಬೆಂಬಲಕ್ಕೆ ನಿಲ್ಲುವುದು ಅಷ್ಟು ಸುಲಭದ ಮಾತು ಅಲ್ಲ.. ಒಂದು ಮನೆ ಕಟ್ಟೋಕೆ ಪೌಂಡೇಷನ್ ಹೇಗೆ ಇಂಪಾರ್ಟೆಂಟ್ ಹಾಗೇ ಟಾಟಾ ಕಂಪನಿ ಬೆಳೆಯೋಕೆ ಅಡಿಪಾಯುವು ಅಷ್ಟೇ ಗಟ್ಟಿಮುಟ್ಟಾಗಿತ್ತು..ಟಾಟಾ ಕಂಪನಿ ನಿನ್ನೆ ಮೊನ್ನೆಯದ್ದಲ್ಲ.. ಸ್ವಾತಂತ್ರ್ಯ ಪೂರ್ವದ್ದು.. 1868 ರಲ್ಲಿ ಹುಟ್ಟಿದ್ದ ಸಂಸ್ಥೆ.. ಅದು ಕೇವಲ ಸರ್ಕಾರಿ ಸ್ವಾಮ್ಯದ ಕಂಪನಿಯಿದ್ದ ಕಾಲದಲ್ಲಿ ಟಾಟಾ ಎಂಬ ಖಾಸಗಿ ಕಂಪನಿ ಹುಟ್ಟಿಕೊಳ್ತು.. 1868 ರಲ್ಲಿ ಸಣ್ಣ ಜವಳಿ ವ್ಯಾಪಾರ ಸಂಸ್ಥೆಯಾಗಿ ಪ್ರಾರಂಭವಾದ ಸಂಸ್ಥೆ ಉಪ್ಪಿನಿಂದ ಉಕ್ಕಿನ ತನಕ.. ಕಾರುಗಳಿಂದ ವಿಮಾನದ ತನಕ.. ವಿದ್ಯುತ್ ಸ್ಥಾವರ ಸೇರಿದಂತೆ 160 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ತನ್ನ ಉದ್ಯಮವನ್ನ ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಜಮ್ಸೆಟ್ಜಿಯಿಂದ ಟಾಟಾ ಸಂಸ್ಥೆ ಪ್ರಾರಂಭ
ಸ್ಕ್ರೀನ್ ಮೇಲೆ ಕಾಣ್ತಾ ಇರೋರೇ ನೋಡಿ ಟಾಟಾ ಸಂಸ್ಥೆಯನ್ನ ಹುಟ್ಟು ಹಾಕಿದವರು.. ಇವರೇ ಟಾಟಾ ಸಂಸ್ಥೆಯ ಸಮೂಹದ ಸಂಸ್ಥಾಪಕ ಜಮ್ಸೆಟ್ಜಿ.ಎನ್. ಟಾಟಾ..
ಜಮ್ಸೆಟ್ಜಿಯ ಸಾಧನೆ
ಇವರ ಕಾಲದಲ್ಲಿ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ ಲಿಮಿಟೆಡ್ , ಟಾಟಾ ಪವರ್, ನಾಲ್ಕು ಜವಳಿ ಗಿರಣಿ ಉದ್ಯೋಮವನ್ನ ಹೊರಹೊಮ್ಮಿತು. ಈ ಯೋಜನೆಗಳು ಭಾರತದ ಆರಂಭಿಕ ಕೈಗಾರಿಕಾ ಅಭಿವೃದ್ಧಿಯ ಪ್ರಮುಖ ಪಾತ್ರವಹಿಸಿದ್ವು. ಇವರು ಕೇವಲ ತಾನಾಯ್ತು ತನ್ನಬ್ಯುಸನೆಸ್ ಆಯ್ತು ಅಂತಾ ಇರಲಿಲ್ಲ.. ದೇಶದ ಬಗ್ಗೆ ಹಾಗೇ ಬಡ ಜನರ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದರು. ಜಮ್ಸೆಟ್ಜಿ ಪರೋಪಕಾರಿಯಾಗಿದ್ರು ಹಾಗೇ ದೇಶಭಕ್ತನಾಗಿದ್ರು. ತನ್ನಸಂಸ್ಥೆಯಲ್ಲಿ ಕೆಲಸ ಮಾಡೋರ ಬಗ್ಗೆ ಹಾಗೂ ಬಡವರ ಬಗ್ಗೆ ಇವರ ಹೃದಯ ಮಿಡಿಯುತಿತ್ತು.. ಕಾರ್ಮಿಕರ ಶೋಷಣೆಗೆ ಹೆಸರುವಾಸಿಯಾಗಿದ್ದ ಕಾಲದಲ್ಲಿ ಇವರು ಕಾರ್ಮಿಕರ ಪರವಾಗಿ ನಿಲ್ಲುತ್ತಿದ್ದರು. ಜಮ್ಸೆಟ್ಜಿ ಉಚಿತ ವೈದ್ಯಕೀಯ ನೆರವು, ವೇತನ ಸಹಿತ ರಜೆ, ಮತ್ತು ಮಹಿಳಾ ಗಿರಣಿ ಕಾರ್ಮಿಕರ ಮಕ್ಕಳಿಗಾಗಿ ಶಿಶುವಿಹಾರಗಳು ಮತ್ತು ಪ್ರಾಥಮಿಕ ತರಗತಿಗಳಂತಹ ಯೋಜನೆಗಳನ್ನು ತಂದಿದ್ರು. ಪಿಂಚಣಿ ನಿಧಿ, ಭವಿಷ್ಯ ನಿಧಿ, ಹೆರಿಗೆ ಭತ್ಯೆ ಮತ್ತು ಎಲ್ಲಾ ಉದ್ಯೋಗಿಗಳಿಗೆ ಅಪಘಾತ ಪರಿಹಾರ ನಿಧಿಯನ್ನು ಪರಿಚಯಿಸಿದರು.
ವಿಜ್ಞಾನ ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿರ್ಧಾರ
ಅಷ್ಟೇ ಅಲ್ಲ ಜಮ್ಸೆಟ್ಜಿ ಅವರು ಭಾರತದಲ್ಲಿ ವಿಶ್ವ ದರ್ಜೆಯ ವಿಜ್ಞಾನ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದರು.. ಇದು ಅಂತಿಮವಾಗಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಾಗಿ ರೂಪುಗೊಂಡಿತು. ಈ ಸಂಸ್ಥೆಯನ್ನ ಕಟ್ಟೋಕೆ ತಮ್ಮ ಆಸ್ತಿ ಅರ್ಧದಷ್ಟು ಹಣವನ್ನ ನೀಡೋಕೆ ನಿರ್ಧಾರ ಮಾಡಿದ್ರು.. ಅಷ್ಟೇ ಅಲ್ಲ ಸ್ವಾಮಿ ವಿವೇಕಾನಂದರಂತಹ ದಿಗ್ಗಜರನ್ನು ಸಹ ಸಂಪರ್ಕಿಸಿದರು. ಒಮ್ಮೆ ಮಿವಿವೇಕನಂದರು ಮತ್ತು ಜಮ್ಸೆಟ್ಜಿ ಅವರು ಆಕಸ್ಮಿಕವಾಗಿ ಹಡಗಿನಲ್ಲಿ ಭೇಟಿಯಾಗಿ ಭಾರತ ಅಭಿವೃದ್ಧಿ ಬಗ್ಗೆ ಇಬ್ಬರು ಸಾಕಷ್ಚು ಚರ್ಚೆ ಮಾಡಿದ್ರು.. ತಂತ್ರಜ್ಞಾನ ಮತ್ತು ಶಿಕ್ಷಣ ಬಗ್ಗೆ ಹೆಚ್ಚು ಗಮನ ನೀಡುವಂತೆ ವಿವೇಕಾನಂದ ಹೇಳಿದ್ರಂತೆ.. ಅಷ್ಟೇ ಅಲ್ಲ ಜಮ್ಸೆಟ್ಜಿಯವರ ದೂರದೃಷ್ಟಿಯಿಂದ ಸ್ವಾಮಿ ವಿವೇಕಾನಂದರೇ ಪ್ರಭಾವಿತಾರಗಿದ್ರು. ಜಮ್ಸೆಟ್ಜಿ ಅವರ ಜೀವಿತಾವಧಿಯಲ್ಲಿ ಈ ಕನಸು ನನಸಾಗದಿದ್ದರೂ, ಅವರ ಮಗ ಸರ್ ದೊರಾಬ್ಜಿ ಟಾಟಾ ಅದನ್ನು ನನಸಾಗಿಸಲು ಪರಿಶ್ರಮಪಟ್ಟರು. 1911 ರಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc) ಭಾರತ ಸರ್ಕಾರ ಮತ್ತು ಮೈಸೂರು ಮಹಾರಾಜರೊಂದಿಗೆ ಟಾಟಾಗಳ ಜಂಟಿ ಉದ್ಯಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ರತನ್ ಟಾಟಾ ಬದುಕಲ್ಲಿದೆ ಲವ್ ಸ್ಟೋರಿ
ಕಲಿಯುಗದ ಕರ್ಣ, ಬಡವರ ಬಂಧು, ಕೈಗಾರಿಕೋದ್ಯಮಿ, ಮಾನವತವಾದಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಅವರು ಯಾಕೆ ಮದುವೆ ಆಗಿಲ್ಲ ಅನ್ನೋ ಪ್ರಶ್ನೆ ಸಾಕಷ್ಟು ಜನರಿಗೆ ಕಾಡುತ್ತೆ. ಆದ್ರೆ ರತನ್ ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂಬ ಕಾರಣಕ್ಕೆ ರತನ್ ಟಾಟಾ ಅವರು ಮದುವೆಯೇ ಆಗದೆ ಬ್ರಹ್ಮಚಾರಿಯಾಗಿ ಉಳಿದ್ರು.. ರತನ್ ಟಾಟಾ ಅವರೇ ಕೆಲ ವರ್ಷಗಳ ಹಿಂದಷ್ಟೇ ತಮ್ಮ ಲವ್ ಸ್ಟೋರಿ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. ರತನ್ ಟಾಟಾ ಅವರು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದರು & ಟಾಟಾ ಅವರು ಕೆಲವು ಸಮಯ ಅಮೆರಿಕದಲ್ಲೇ ಕೆಲಸ ಮಾಡಿ ಅನುಭವ ಪಡೆದರು. ಹೀಗೆ ಅಮೆರಿಕ ದೇಶದ ಲಾಸ್ ಏಂಜಲೀಸ್ನಲ್ಲಿ ಒಬ್ಬ ಯುವತಿ ಜೊತೆಗೆ ಲವ್ ಆಗಿತ್ತಂತೆ.ಆದ್ರೆ ರತನ್ ಟಾಟಾ ಅವರಿಗೆ ಲವ್ ಆಗಿದ್ದ ಸಮಯದಲ್ಲೇ, 1962ರ ಇಂಡೋ-ಚೀನಾ ಯುದ್ಧವು ನಡೆಯುತ್ತಿತ್ತು. ಹೀಗೆ ಭಾರತ & ಚೀನಾ ನಡುವೆ ಯುದ್ಧದ ಹಿನ್ನೆಲೆ, ರತನ್ ಟಾಟಾ ಅವರು ಪ್ರೀತಿ ಮಾಡಿದ್ದ ಹುಡುಗಿಯ ಪೋಷಕರು ಭಾರತಕ್ಕೆ ಬರಲು ಒಪ್ಪಲಿಲ್ಲವಂತೆ. ಇದೇ ಕಾರಣಕ್ಕೆ ರತನ್ ಟಾಟಾ ಅವರ ಪ್ರೀತಿಯು ಮುರಿದು ಬಿತ್ತು. ಕೊನೆಗೆ ಇದೇ ನೋವಲ್ಲಿ ರತನ್ ಟಾಟಾ ಅವರು ಮದುವೆ ಆಗದೆ ಕೊನೆಯವರೆಗೂ ಒಂಟಿಯಾಗಿ ಇದ್ದರಂತೆ. ಈ ಮೂಲಕ, ಲವ್ ಫೆಲ್ಯೂರ್ ಆಗಿ ಸೋತು ಹೋದರೂ, ಜೀವನದಲ್ಲಿ ರತನ್ ಟಾಟಾ ಅವರು ದೊಡ್ಡ ಗೆಲುವು ಸಾಧಿಸಿದ್ದರು.
ಸಿನಿರಂಗದಲ್ಲಿ ಮಾತ್ರ ಸೋತ ರತನ್ ಟಾಟಾ
ರತನ್ ಟಾಟಾ ಸಿನಿಮಾ ಕ್ಷೇತ್ರದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮುಂದಾಗಿದ್ದರು. ಆದರೆ, ಸಿನಿಮಾ ಬಿಟ್ಟು ರತನ್ ಟಾಟಾ ಬೇರೆ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಕಂಡಿದ್ದರು. ರತನ್ ಟಾಟಾ ಒಂದೇ ಒಂದು ಸಿನಿಮಾಗೆ ಬಂಡವಾಳ ಹೂಡಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಅಂದಿನಿಂದ ಮತ್ತೆ ಸಿನಿಮಾ ನಿರ್ಮಾಣದ ಕಡೆಗೆ ಮುಖವೇ ಹಾಕಲಿಲ್ಲ. ಅಮಿತಾಭ್ ಬಚ್ಚನ್, ಬಿಪಾಶಾ ಬಾಸು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಏತ್ಬಾರ್’ ಅನ್ನುವ ಬಾಲಿವುಡ್ ಸಿನಿಮಾವನ್ನು ಸಹ ನಿರ್ಮಾಣ ಮಾಡಿದ್ದರು.
ರತನ್ ಟಾಟಾ ಸಾಕಷ್ಟು ಇಟ್ರೆಸ್ಟಿಂಗ್ ವ್ಯಕ್ತಿ. ಹೊಸ ತಂತ್ರಜ್ಞಾನಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಸಂಸ್ಕೃತಿಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ರು. ಅದರಲ್ಲೂ ವಿಮಾನಯಾದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ಏರ್ ಇಂಡಿಯಾವನ್ನು ಟಾಟಾ ಸಾಮ್ರಾಜ್ಯಕ್ಕೆ ಮರಳಿ ತರುವುದು ಅವರ ಕನಸುಗಳಲ್ಲಿ ಒಂದಾಗಿತ್ತು, ಟಾಟಾ ಗ್ರೂಪ್ ಆರಂಭಿಸಿದ್ದ ವಿಮಾನ ಯಾನ ಕಂಪನಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿತ್ತು. ಅದಾಗಿ 90 ವರ್ಷದ ಬಳಿಕ ಅದೇ ವಿಮಾನ ಕಂಪನಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ತನ್ನ ತೆಕ್ಕೆ ತೆಗೆದುಕೊಂಡದ್ದು ಈಗ ಇತಿಹಾಸ. ಇದು ಏರ್ ಇಂಡಿಯಾ ಲಿಮಿಟೆಡ್ ಅಧೀನದಲ್ಲಿದೆ. ಟಾಟಾ ಗ್ರೂಪ್ನ ಭಾಗವಾಗಿದೆ. ಇದರಲ್ಲಿ ಏರ್ಬಸ್, ಬೋಯಿಂಗ್ ಸೇರಿ 102 ದೇಶೀಯ ಮತ್ತು ಅಂತಾರಾಷ್ಟ್ರೀಯ ಹಾರಾಟದ ವಿಮಾನಗಳಿವೆ. ರತನ್ ಟಾಟಾ ಮತ್ತು ಅವರ ಟಾಟಾ ಸಂಸ್ಥೆ ಭಾರತದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನ ನೀಡಿದ್ದಾರೆ. ರತನ್ ಟಾಟಾ ಅವರು ಯುವ ಉದ್ಯಮಿಗಳಿಗೆ ಮಾತ್ರವಲ್ಲದೆ ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ಪ್ರತಿಯೊಬ್ಬ ನಾಯಕರಿಗೂ ಮಾದರಿ.
ಲಕ್ಷಕ್ಕೆ ಕಾರು ನೀಡಿದ ರತನ್ ಟಾಟಾ
ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ನ್ಯಾನೊ ಕಾರ್ ನೀಡಬೇಕೆಂದು ಟಾಟಾ ಕಂಪನಿ ಒಂದೇ ಒಂದು ಲಕ್ಷ ರೂಪಾಯಿ ಕಾರನ್ನ ರಸ್ತೆಗೆ ಇಳಿಸಿತ್ತು. ಈ ಯೋಚನೆ ಉದ್ಯಮಿ ರತನ್ ಟಾಟಾಗೆ ಹೇಗೆ ಬಂತು ಅನ್ನೋದು ಕುತೂಹಲಕಾರಿಯಾಗಿದೆ. ಒಮ್ಮೆ ಮುಂಬೈನಲ್ಲಿ ಕಾರಿನಲ್ಲಿ ಹೋಗುವಾಗ ಮಳೆಯಲ್ಲಿ ನಿಂತಿದ್ದ ಸ್ಕೂಟರಿನಲ್ಲಿ ಅಪ್ಪ, ಅಮ್ಮ, ಇಬ್ಬರು ಮಕ್ಕಳು ಕುಳಿತಿದದ್ದನ್ನು ನೋಡಿದ್ದರಂತೆ. ಈ ದೃಶ್ಯ ಅವರ ಮನಸ್ಸನ್ನು ಕಲುಕಿತ್ತು. ಈ ನಿಟ್ಟಿನಲ್ಲಿ ಮಧ್ಯಮ ವರ್ಗಕ್ಕೆ 1 ಲಕ್ಷ ರೂ. ಕಾರು ಸಿಗುವಂತೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದರಂತೆ ರತನ್ ಟಾಟಾ. ಇದರ ಭಾಗವಾಗಿಯೇ ರತನ್ ಟಾಟಾ 1 ಲಕ್ಷ ರೂಪಾಯಿ ಮೌಲ್ಯದ ನ್ಯಾನೊ ಕಾರನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದರು.