ಸ್ವರ್ಗದಿಂದ ನರಕಕ್ಕೆ ಎಂಟ್ರಿಕೊಟ್ಟ ಐಶ್ವರ್ಯ – ಕುಣಿದು ಕುಪ್ಪಳಿಸಿದ ಲಾಯರ್ ಜಗದೀಶ್!
ಬಿಗ್ ಬಾಸ್ ಕನ್ನಡ ಸೀಸನ್ 11 ಭಾರಿ ಕುತೂಹಲ ಮೂಡಿಸಿದೆ. ಲಾಯರ್ ಜಗದೀಶ್ ಆಟಕ್ಕೆ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ದಿನಕ್ಕೊಬ್ಬರನ್ನ ಟಾರ್ಗೆಟ್ ಮಾಡಿ ಸಖತ್ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಐಶ್ವರ್ಯ ಸ್ವರ್ಗದಿಂದ ನರಕಕ್ಕೆ ಬಂದಿದ್ದು, ಜಗದೀಶ್ ಕುಣಿದು ಕುಪ್ಪಳಿಸುತ್ತಿದ್ದಾರೆ.
ಇದನ್ನೂ ಓದಿ: ರೆಡ್ಡಿ, ರಿಂಕು ಕೇಕೆ.. ಬೆಚ್ಚಿದ ಬಾಂಗ್ಲಾ – ಸೂರ್ಯ 7 ಬೌಲರ್ ಅಸ್ತ್ರ ಸಕ್ಸಸ್
ಬಿಗ್ ಬಾಸ್ ಮನೆಯನ್ನು ಸ್ವರ್ಗ, ನರಕ ಎಂದು ಬೇರ್ಪಡಿಸಲಾಗಿದೆ. ಸ್ವರ್ಗದಲ್ಲಿ ಆರಾಮವಾಗಿ ಇರ್ಬೋದು ಅಂತಾ ಬಂದವರಿಗೆ ಕ್ಷಣ ಕ್ಷಣಕ್ಕೂ ನರಕ ದರ್ಶನವಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ವಾಸಿಗಳಿಗೆ ಟಾಸ್ಕ್‌ಗಳು ತಲೆ ನೋವಾಗುತ್ತಿದೆ. ಇದೀಗ ಸ್ವರ್ಗದಿಂದ ನರಕ್ಕೆ ಕ್ರಮೇಣವಾಗಿ ಅದಲು ಬದಲಾಗುವ ಸಮಯ ಬಂದಾಗಿದೆ. ಇದರ ಪ್ರೋಮೋವನ್ನ ವಾಹಿನಿ ಶೇರ್ ಮಾಡಿದೆ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಆದರೆ ಹಂಸ ಅವರು ಸಾರಿ ಕೇಳಿದ್ದಾರೆ. ಬೇಕಿದ್ದರೆ ನನ್ನನ್ನು ನರಕಕ್ಕೆ ಕಳುಹಿಸಿ. ತಪ್ಪು ಮಾಡಿದ್ದು ನಾನು. ಸ್ವರ್ಗದವರನ್ನು ಶಿಕ್ಷಿಸಬೇಡಿ ಎಂದು ರಿಕ್ವಸ್ಟ್ ಮಾಡಿದ್ದಾರೆ. ಆದರೆ ಐಶ್ವರ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಐಶ್ವರ್ಯಾ ಅವರು ನರಕಕ್ಕೆ ಹೋಗಲು ಅನೌನ್ಸ್ ಮಾಡುತ್ತಿದ್ದಂತೆ ಲಾಯರ್ ಜಗದೀಶ್ ಅವರು ಫುಲ್ ಖುಷಿ ಆಗಿದ್ದಾರೆ. ಬಿದ್ದು ಬಿದ್ದು ನಕ್ಕಿದ್ದಾರೆ. ಅಷ್ಟೇ ಅಲ್ಲ ಮನೆ ತುಂಬಾ ಓಡಾಡಿ ಕುಣಿದು ಕುಪ್ಪಳಿಸಿದ್ದಾರೆ ಜಗದೀಶ್. ಆದರೆ ಐಶ್ವರ್ಯಾ ಮಾತ್ರ ಅನುಷಾ ಅವರನ್ನು ಅಪ್ಪಿಕೊಂಡು ಅತ್ತಿದ್ದಾರೆ.