ಅಮೃತಧಾರೆಯಿಂದ ಮಹಿಮಾ ನಾಪತ್ತೆ – ಸನ್ಯಾಸಿಯಾದ್ರಾ ಸಾರಾ ಅಣ್ಣಯ್ಯ?
ಬ್ಯೂಟಿಫುಲ್ ನಟಿ ಕಣ್ಮರೆಯಾಗಿದ್ದೇಕೆ?

ಅಮೃತಧಾರೆಯಿಂದ ಮಹಿಮಾ ನಾಪತ್ತೆ – ಸನ್ಯಾಸಿಯಾದ್ರಾ ಸಾರಾ ಅಣ್ಣಯ್ಯ?ಬ್ಯೂಟಿಫುಲ್ ನಟಿ ಕಣ್ಮರೆಯಾಗಿದ್ದೇಕೆ?

ಅಮೃತಧಾರೆ ಧಾರಾವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ನಟಿ ಸಾರಾ ಅಣ್ಣಯ್ಯ ನಾಪತ್ತೆಯಾಗಿದ್ದಾರೆ. ಬ್ಯೂಟಿಫುಲ್ ಮಹಿಮಾ ಬಂದ್ರೆ ಸೀರಿಯಲ್ ನಲ್ಲಿ ಅದೇನೋ ಚಾರ್ಮ್. ಆದ್ರೀಗ ಸಾರಾ ಅಣ್ಣಯ್ಯ ಕೆಲ ದಿನಗಳಿಂದ ಸೀರಿಯಲ್ ನಿಂದ ಕಣ್ಮರೆಯಾಗಿದ್ದಾರೆ. ಹಾಗಾದ್ರೆ, ಸಾರಾ ಅಣ್ಣಯ್ಯ ಹೋಗಿದ್ದೆಲ್ಲಿಗೆ, ಮಹಿಮಾ ಚಾಪ್ಟರ್ ಕ್ಲೋಸ್ ಆಯ್ತಾ?, ಸಂಸಾರ ಜಂಜಾಟವೇ ಮಹಿಮಾಗೆ ಸುಸ್ತಾಯ್ತಾ? ಇದಕ್ಕಾಗಿಯೇ ಒಂದು ಮೇಜರ್ ಡಿಸಿಷನ್ ತಗೊಂಡ್ರಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ನಂದಿನಿ ಹಾಲಿನ ದರ ಏರಿಕೆಯಾಗುತ್ತಾ? – ಸರ್ಕಾರದ ನಿರ್ಧಾರ ಏನು?  

ಹಣೆಯಲ್ಲಿ ಮೂರು ನಾಮ.. ಕೈಯಲ್ಲಿ ಹೂ. ಸೀರೆಯುಟ್ಟು ಮೊಗದಲ್ಲಿ ಚೆಂದದ ನಗುವಿದ್ದರೂ ಅದೇನೋ ಬೇಜಾರು. ಕಿರುತೆರೆಯ ಚೆಂದುಳ್ಳಿ ಚೆಲುವೆ ಸಾರಾ ಅಣ್ಣಯ್ಯ ಹೊಸ ಅವತಾರ ನೋಡಿ ಫ್ಯಾನ್ಸ್ ಅಂತೂ ಶಾಕ್ ಆಗಿದ್ದಾರೆ. ಅಮೃತಧಾರೆ ಸೀರಿಯಲ್ ಚೆಲುವೆ ಮಹಿಮಾ ಸನ್ಯಾಸಿ ಆಗ್ಬಿಟ್ರಾ ಅನ್ನೋ ಆತಂಕದಲ್ಲಿದ್ದಾರೆ ಫ್ಯಾನ್ಸ್. ಅಂದಹಾಗೆ, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ ನಲ್ಲಿ ಕಥೆಗಳು ವೇಗವಾಗಿ ಸಾಗುವ ಮೂಲಕ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಪಾತ್ರಗಳು ಸಹ ಇಲ್ಲಿ ತುಂಬಾನೆ ಪ್ರಾಮುಖ್ಯತೆ ಪಡೆದಿರುವಂತೆ ಮಹಿಮಾ ಪಾತ್ರವೂ ತುಂಬಾನೆ ಮಹತ್ವ ಪಡೆದ ಪಾತ್ರವಾಗಿದೆ.

ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಾರಾ ಅಣ್ಣಯ್ಯ. ಮೊದಲಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ರು. ಯಾವಾಗ ಜೀವಾ ಜೊತೆ ಮದುವೆಯಾಯ್ತೋ ಅಲ್ಲಿಂದ ಮಹಿಮಾ ರೋಲ್ ನಲ್ಲೂ ಪಾಸಿಟಿವ್ ಗುಣಗಳೇ ಜಾಸ್ತಿ ಕಂಡು ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಮಾ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳೋದೆ ಕಡಿಮೆಯಾಗಿದೆ. ಯಾವಾಗ ಜೈದೇವ್ – ಮಲ್ಲಿ ಕಥೆ ಸೀರಿಯಲ್ ನಲ್ಲಿ ಇಂಪಾರ್ಟೆಂಟ್ ಆಯ್ತೋ ಆವಾಗಿನಿಂದ ಸೀರಿಯಲ್ ನಲ್ಲಿ ಹೆಚ್ಚು ಹೈಲೈಟ್ ಆಗ್ತಿರೋದು ಜೈದೇವ್‌, ಮಲ್ಲಿ ಮಾತ್ರ. ಇದನ್ನೆಲ್ಲಾ ನೋಡಿದ ವೀಕ್ಷಕರು ಕೂಡಾ ಮೋಸ್ಟ್ಲಿ ಸಾರಾ ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದು ಅಂತಾ ಗೆಸ್ ಮಾಡ್ತಿದ್ರು. ಆದ್ರೀಗ ಅಲ್ಲೂ ಸಾರಾ ಎಂಟ್ರಿಯಾಗಿಲ್ಲ. ಇದೀಗ ಸಾರಾ ಎಲ್ಲಿ ಹೋದ್ರು ಅಂತಾ ಹುಡುಕಾಡ್ತಿದ್ದ ವೀಕ್ಷಕರಿಗೆ ಕಂಡಿದ್ದು ಇದೇ ಫೋಟೋ. ಸಾರಾ ಸೀರಿಯಲ್ ಬಿಟ್ಟು ಹೊರ ನಡೆದ್ರಾ ಅನ್ನೋದು ಕನ್ ಫರ್ಮ್ ಆಗದೇ ಇದ್ರೂ ಕೂಡಾ, ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಕಿರೋ ಫೋಟೋ ನೋಡಿ ಶಾಕ್ ಅಂತೂ ಆಗಿದೆ.

ಹೌದು ಸಾರಾ ಅಣ್ಣಯ್ಯ ತಮ್ಮ ಇನ್’ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ ಪಿಂಕ್ ಬಣ್ಣದ ಸೀರೆಯುಟ್ಟ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳಲ್ಲಿ ಸಾರಾ ದೇವಸ್ಥಾನವೊಂದರಲ್ಲಿ ಭಕ್ತಿಯಲ್ಲಿ ಕಳೆದು ಹೋಗಿರುವಂತೆ ಕಾಣಿಸ್ತಿದೆ. ಅಲ್ಲದೇ ಸಾರಾ ಹಣೆಯ ಮೇಲೆ ನಾಮವೂ ಇದೆ, ಕೈಯಲ್ಲಿ ಹೂವುಗಳನ್ನು ಹಿಡಿದುಕೊಂಡಿದ್ದಾರೆ. ಇದನ್ನ ನೋಡಿದ್ರೆ ಸಾರಾ ನಟನೆಯಾನ್ನು ಬಿಟ್ಟು ಸನ್ಯಾಸಿ ಆಗ್ಬಿಟ್ರಾ ಎಂದು ಅನಿಸದೇ ಇರದು. ಈ ಫೋಟೊ ಎಲ್ಲಿ  ತೆಗೆಸಿಕೊಂಡಿದ್ದು ಅನ್ನೋದು ಸರಿಯಾಗಿ ತಿಳಿದು ಬಂದಿಲ್ಲ. ಆದರೆ ಸಾರಾ ಸೋಶಿಯಲ್ ಮೀಡಿಯಾ ಅಪ್ ಡೇಟ್ಸ್ ಗಳನ್ನ ನೋಡಿದ್ರೆ, ಸಾರಾ ತಮ್ಮ ಫ್ಯಾಮಿಲಿ ಜೊತೆ ದೇಗುಲ ದರ್ಶನಕ್ಕೆ ಹೋಗಿರುವಾಗ ತೆಗೆದಂತಹ ಫೋಟೊಗಳ ಥರಾ ಇದೆ. ಹೀಗಾಗಿ ನೆಟ್ಟಿಗರಂತೂ ಸಾರಾ ಪರ ಏನೇನೋ ಕಾಮೆಂಟ್ಸ್ ಮಾಡ್ತಿದ್ದಾರೆ. ಅದ್ರಲ್ಲಿ, ಸಾರಾ ನೀವು ಎಲ್ಲೇ ಇರಿ, ಹೇಗೆ ಇರಿ, ಸನ್ಯಾಸ್ವ ಸ್ವೀಕಾರ ಮಾತ್ರ ಮಾಡಬೇಡಿ ಅಂತಾ ರಿಕ್ವೆಸ್ಟ್ ಮಾಡ್ತಿದ್ದಾರೆ. ನಟಿ ಸನ್ಯಾಸತ್ವ ಸ್ವೀಕಾರ ಮಾಡಿಲ್ಲ ಅಂದ್ರೆ, ಸೀರಿಯಲ್ ನಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ತಾರೆ ಅನ್ನೋ ಪ್ರಶ್ನೆಯನ್ನ ವೀಕ್ಷಕರು ಕೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *