ಪುಟಿನ್ ಸಿಟ್ಟು.. ಉಕ್ರೇನ್ ಗಿಲ್ಲ ಉಳಿಗಾಲ – ಪುಟ್ಟ ರಾಷ್ಟ್ರದ ಮೇಲೆ ಬೀಳುತ್ತಾ ಅಣ್ವಸ್ತ್ರ?
ಝೆಲೆನ್ಸ್ಕಿಗೆ ಉಳಿದಿರೋ ದಾರಿ ಒಂದೇ!

ಪುಟಿನ್ ಸಿಟ್ಟು.. ಉಕ್ರೇನ್ ಗಿಲ್ಲ ಉಳಿಗಾಲ – ಪುಟ್ಟ ರಾಷ್ಟ್ರದ ಮೇಲೆ ಬೀಳುತ್ತಾ ಅಣ್ವಸ್ತ್ರ?ಝೆಲೆನ್ಸ್ಕಿಗೆ ಉಳಿದಿರೋ ದಾರಿ ಒಂದೇ!

ಕೇವಲ ಇಸ್ರೇಲ್ ಮಾತ್ರ ಯುದ್ಧ ನಡೆಸುತ್ತಿಲ್ಲ.. ರಷ್ಯಾ ಮತ್ತು ಉಕ್ರೇನ್ ನಡುವೆ ಕೂಡ ದೊಡ್ಡ ಮಟ್ಟದಲ್ಲಿ ಯುದ್ಧ ನಡೆಯುತ್ತಿದೆ. ಯಾಕಂದ್ರೆ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್ ಇದೀಗ ಹಲವು ರೀತಿಯ ತಪ್ಪುಗಳನ್ನ ಮಾಡುತ್ತಿದ್ದು, ಈ ಕಾರಣಕ್ಕೆ ರೊಚ್ಚಿಗೆದ್ದು ರಷ್ಯಾ ಇದೀಗ ಪರಮಾಣು ಅಸ್ತ್ರ ಬಳಸಬಹುದು ಎಂಬ ಭಯವೂ ಮೂಡಿದೆ. ಹಾಗಾದ್ರೆ ರಷ್ಯಾ ಬಳಿ ಇದೀಗ ಎಷ್ಟು ಪರಮಾಣು ಅಸ್ತ್ರಗಳು ಇವೆ? ಅಕಸ್ಮಾತ್ ರಷ್ಯಾ ತನ್ನ ಬಳಿ ಇರುವ ಅತ್ಯಂತ ಶಕ್ತಿಶಾಲಿ ಪರಮಾಣು ಬಾಂಬ್ ಸ್ಫೋಟಗೊಳಿಸಿದರೆ ಈ ಪರಿಸ್ಥಿತಿ ಹೇಗೆ ಇರಲಿದೆ.

ಇದನ್ನೂ ಓದಿ: ಜಗತ್ತಿನ ಅತ್ಯಂತ ಶಕ್ತಿಶಾಲಿ ಟಾಪ್‌ 10 ರಾಷ್ಟ್ರಗಳು! – ಭಾರತಕ್ಕೆ ಎಷ್ಟನೇ ಸ್ಥಾನ..?

ರಷ್ಯಾ ಎಷ್ಟು ದೊಡ್ಡ ದೇಶವೂ ರಷ್ಯಾ ಸೇನೆ ಕೂಡ ಅಷ್ಟೇ ದೊಡ್ಡದಾಗಿದೆ. ಶಕ್ತಿಶಾಲಿ ಸೈನ್ಯ ಇಟ್ಟುಕೊಂಡಿರುವ ರಷ್ಯಾ ದೇಶ ತನ್ನ ಶಕ್ತಿ ಏನು ಅಂತಾ ಇಡೀ ಜಗತ್ತಿಗೆ ತೋರಿಸಿದೆ, ಅಲ್ಲದೆ ರಷ್ಯಾ ಬಳಿ ಇರುವ ಅಸ್ತ್ರಗಳು ಒಂದಕ್ಕಿಂತ ಒಂದು ಭಾರಿ ಭಯಾನಕ ಎನ್ನಬಹುದು. ಈ ಪೈಕಿ ರಷ್ಯಾ ಬಳಿ ಹೈಡ್ರೋಜನ್ ಬಾಂಬ್ ಇದ್ದು, ಇದನ್ನು ಮತ್ತೊಂದು ರೀತಿಯ ಪರಮಾಣು ಬಾಂಬ್ ಎನ್ನಬಹುದು.

ಜಗತ್ತಿನ ಪರಮಾಣು ಬಾಂಬ್‌ಗಳ ಪೈಕಿ ರಷ್ಯಾ ಬಳಿಯೇ ಸಾಕಷ್ಟು ಅಸ್ತ್ರ

ಜಗತ್ತಿನ ಪರಮಾಣು ಬಾಂಬ್ಗಳ ಪೈಕಿ ರಷ್ಯಾ ಬಳಿಯೇ ಸಾಕಷ್ಟು ಅಸ್ತ್ರಗಳು ಇವೆ. ಹೀಗಾಗಿ ರಷ್ಯಾ ಹೆಸರು ಕೇಳಿದರೆ ಸಾಕು, ಜಗತ್ತಿನ ದೊಡ್ಡ ದೊಡ್ಡ ದೇಶಗಳೇ ಒಂದು ಬಾರಿ ಹೆದರಿ ಕೂರುತ್ತವೆ. ಹೀಗಿದ್ದರೂ ಉಕ್ರೇನ್ ಮಾತ್ರ ತನ್ನ ದಾಳಿಯನ್ನ ಮುಂದುವರಿಸಿ, ರಷ್ಯಾ ಜೊತೆ ಮತ್ತಷ್ಟು ದ್ವೇಷ ಬೆಳೆಸಿಕೊಳ್ಳುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಹಿನ್ನೆಲೆ ಈಗಾಗಲೇ ರಷ್ಯಾ ಕೂಡ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಒಂದು ಕಡೆ ಸಿದ್ಧಮಾಡಿದ್ದು, ಅಗತ್ಯ ಎನಿಸಿದ ತಕ್ಷಣ ದಾಳಿ ಮಾಡಲು ಸಿದ್ಧವಾಗಿದೆ ರಷ್ಯಾ ಮಿಲಿಟರಿ. ರಷ್ಯಾ ಸುಮಾರು 70ವರ್ಷಗಳಿಂದ ಕೂಡ ತನ್ನ ಬಳಿ ದೊಡ್ಡ ದೊಡ್ಡ ಪರಮಾಣು ಬಾಂಬ್ ಇಟ್ಟುಕೊಂಡು ಬದುಕುತ್ತಿದೆ. ಹಾಗೇ ಶತ್ರುಗಳಿಗೆ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸುತ್ತಾ ಯಾವಾಗ ಬೇಕಾದರೂ ನಾನು ದಾಳಿಗೆ ಸಿದ್ಧ ಎಂಬ ಸಂದೇಶ ನೀಡುತ್ತಿದೆ ರಷ್ಯಾ. ಇದನ್ನು ಬಿಡಿ, ಈಗಾಗಲೇ ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಸ್ನೇಹಿತ ರಾಷ್ಟ್ರ ಬೆಲಾರಸ್ ಬಳಿ ಪರಮಾಣು ಬಾಂಬ್ ತುಂಬಿಸಿರುವ ಕ್ಷಿಪಣಿಗಳನ್ನ ಸಾಲಾಗಿ ನಿಲ್ಲಿಸಿದ್ದು, ಯಾವಾಗ ಬೇಕಾದರೂ ಈ ಕ್ಷಿಪಣಿ ರಾಶಿಯನ್ನು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಉಡಾಯಿಸುವ ಭಯವಿದೆ.

ಹಾಗಂತ ಉಕ್ರೇನ್ ಸೇನೆ ಕೂಡ ಸುಮ್ಮನಿಲ್ಲ. ರಷ್ಯಾ ಸೇನೆಯ ವಶದಲ್ಲಿ ಇರುವ ಕ್ರಿಮಿಯಾ ಮೇಲೆ ಇದೀಗ ಉಕ್ರೇನ್ ಸೇನೆ ಡ್ರೋನ್‌ಗಳನ್ನ ಬಳಕೆ ಮಾಡಿಕೊಂಡು ಭೀಕರ ದಾಳಿ ನಡೆಸಿದೆ. ಕ್ರಿಮಿಯಾದಲ್ಲಿ ಇರುವ ರಷ್ಯಾದ ತೈಲ ಸಂಗ್ರಹ ಉಗ್ರಾಣಗಳ ಮೇಲೆ ಉಕ್ರೇನ್ ಈ ರೀತಿಯಾಗಿ ದಾಳಿ ಮಾಡಿ ಕಿಚ್ಚು ಹೊತ್ತಿಸಿದೆ ಎಂದು ಆರೋಪ ಮಾಡಲಾಗಿದೆ. ರಷ್ಯಾ ಸೇನೆ ಕೂಡ ಇದಕ್ಕೆ ತಕ್ಕ ಉತ್ತರ ಕೊಡಲು ಸಿದ್ಧತೆ ಆರಂಭಿಸಿದ್ದು,  ಉಕ್ರೇನ್ ಸೇನೆ ಎಲ್ಲೆಲ್ಲೂ ಈ ಸಮಯದಲ್ಲಿ ಅಲರ್ಟ್ ಘೋಷಿಸಿದೆ.

Shwetha M