ಲೆಬನಾನ್ ಮೇಲೆ ಇಸ್ರೇಲ್ ಸಮರ – ಜಗತ್ತಿನಲ್ಲಿ 3ನೇ ಮಹಾಯುದ್ಧ ಫಿಕ್ಸ್!?
ಬಾಂಬ್ ಗಳ ಸ್ಫೋಟಕ್ಕೆ ದೇಶವೇ ನಾಶ?
ಎಲ್ಲಿ ಅಡಗಿ ಕುಳಿತ್ರೂ ಬಿಡುತ್ತಿಲ್ಲ.. ಅದ್ಯಾವ ಬಿಲದಲ್ಲಿದ್ದರೂ ಟಾರ್ಗೆಟ್ ಮಿಸ್ ಆಗುತ್ತಿಲ್ಲ.. ಇಸ್ರೇಲ್ ಸೇನೆ ತನ್ನ ಶತ್ರುಗಳನ್ನ ಹುಡುಕಿ ಹುಡುಕಿ ಫಿನಿಷ್ ಮಾಡುತ್ತಿದೆ.. ಲೆಬನಾನ್ ಈಗ ಅಕ್ಷರಶಃ ನರಕವಾಗಿ ಬದಲಾಗಿದೆ. ಹಿಜ್ಬುಲ್ಲಾ ಸಂಘಟನೆ ಮುಖಂಡರ ಜಾಗಗಳ ಬಗ್ಗೆ ಪಕ್ಕಾ ಮಾಹಿತಿ ಪಡೆದಿರುವ ಇಸ್ರೇಲ್ ಸೇನೆ ಆ ಜಾಗಗಳ ಮೇಲೆ ಡೆಡ್ಲಿ ಅಟ್ಯಾಕ್ ಮಾಡುತ್ತಿದೆ.. ಬಾಂಬ್ಗ ಳನ್ನ ದೀಪಾವಳಿ ಪಟಾಕಿಗಳಂತೆ ಹೊಡೆಯುತ್ತಿದ್ದಾರೆ. ಹಾಗಾದ್ರೆ ಇಸ್ರೇಲ್ ಈ ರೀತಿ ದಾಳಿ ನಡೆಸುತ್ತಿರೋದ್ಯಾಕೆ..? ಶತ್ರುಗಳನ್ನ ಕೆಣಕುತ್ತಿರುವ ಕಾರಣಕ್ಕೆ 3ನೇ ಮಹಾಯುದ್ಧ ಫಿಕ್ಸ್ ಆಗುತ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜಗತ್ತಿನ ಅತ್ಯಂತ ಶಕ್ತಿಶಾಲಿ ಟಾಪ್ 10 ರಾಷ್ಟ್ರಗಳು! – ಭಾರತಕ್ಕೆ ಎಷ್ಟನೇ ಸ್ಥಾನ..?
ಒಂದು ಚಿಕ್ಕ ದೇಶದ ಆರ್ಭಟಕ್ಕೆ ಇಡೀ ವಿಶ್ವವೇ ಗಡಗಡ ನಡುಗುತ್ತಿದೆ. ಅಷ್ಟೇ ಇಸ್ರೇವ್ ಶತ್ರು ರಾಷ್ಟಗಳಿಗೆ ಏನ್ ಮಾಡಬೇಕು ಅನ್ನೋದು ಗೊತ್ತಾಗದೆ ಕಂಗಲಾಗಿ ಹೋಗಿವೆ.. ಮಳೆಗಳಂತೆ ಬಾಂಬ್ಗಳು ಸುರಿಮಳೆಯನ್ನೇ ಇಸ್ರೇಲ್ ಸೇನೆ ಸುರಿಸುತ್ತಿದೆ.
ಇಸ್ರೇಲ್ & ಹಿಜ್ಬುಲ್ಲಾ ನಡುವೆ ಜೋರಾದ ರಕ್ತ ಕಾಳಗ
ಒಂದು ಚಿಕ್ಕ ದೇಶದ ಆರ್ಭಟಕ್ಕೆ ಇಡೀ ವಿಶ್ವವೇ ಗಡಗಡ ನಡುಗುತ್ತಿದೆ.. ಇಸ್ರೇಲ್ & ಹಿಜ್ಬುಲ್ಲಾ ನಡುವೆ ರಕ್ತ ಕಾಳಗ ಜೋರಾಗಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಅನ್ನೋ ಭಯ ಕಾಡುತ್ತಿದೆ. ಅದರಲ್ಲೂ ದಕ್ಷಿಣ ಲೆಬನಾನ್ ಈಗ ಸ್ಮಶಾನದ ರೂಪ ಪಡೆಯುತ್ತಿದ್ದು, ಜನ ಜೀವ ಉಳಿಸಿಕೊಳ್ಳಲು ದೇಶ ಬಿಟ್ಟು ಹೊರಗೆ ಹೋಗುವಂತಾಗಿದೆ.. ಕೆಲವು ದಿನಗಳ ಹಿಂದಷ್ಟೇ ಹಿಜ್ಬುಲ್ಲಾ ಮುಖ್ಯಸ್ಥನ ಕಥೆ ಮುಗಿಸಿದ್ದ ಇಸ್ರೇಲ್ ಮಿಲಿಟರಿ ಆ ನಂತರ ಹಲವು ಮುಖಂಡರ ಹತ್ಯೆ ಮಾಡಿತ್ತು. ಇದೀಗ ಹಿಜ್ಬುಲ್ಲಾದ ಪ್ರಮುಖ ಕಮಾಂಡರ್ ಕೂಡ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಜೀವ ಬಿಟ್ಟಿರುವುದು ಲೆಬನಾನ್ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಮತ್ತೊಂದು ಕಡೆ ಇನ್ನೊಂದು ಬದಿಯಲ್ಲಿ ಹಿಜ್ಬುಲ್ಲಾ ಮುಖಂಡರ ಪೈಕಿ ಹಲವರು ಈಗಾಗಲೇ ಲೆಬನಾನ್ ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ ತನ್ನ ಕಾರ್ಯಾಚರಣೆಯ ತೀವ್ರತೆ ಹೆಚ್ಚು ಮಾಡಿರುವ ಇಸ್ರೇಲ್ ಮಿಲಿಟರಿ ಅಧಿಕಾರಿಗಳು, ಲೆಬನಾನ್ ಭಾಗದಲ್ಲಿರುವ ಹಿಜ್ಬುಲ್ಲಾ ಪ್ರದೇಶಗಳನ್ನ ಇದೀಗ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಲೆಬನಾನ್ ದೇಶ ಕೂಡಾ ಗಾಜಾ ಪಟ್ಟಿ ರೀತಿ ಧ್ವಂಸ ಆಗಲಿದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಲೆಬನಾನ್ ಧ್ವಂಸ ಆಗುತ್ತೆ ಹುಷಾರ್’
ನೀವು ಹಿಜ್ಬುಲ್ಲಾ ಉಗ್ರ ಸಂಘಟನೆಯ ಫೈಟರ್ಗಳಿಗೆ ಲೆಬನಾನ್ ದೇಶದ ಜನರು ತಮ್ಮ ಮನೆಗಳಲ್ಲಿ ಆಶ್ರಯ ನೀಡೋದನ್ನ ಮುಂದುವರೆಸಿದ್ರೆ ಲೆಬನಾನ್ ಕುಡಾ ಗಾಜಾ ಪಟ್ಟಿಯಂತೆ ಧ್ವಂಸ ಆಗುತ್ತೆ ಎಂದು ಎಚ್ಚರಿಕೆ ಸಂದೇಶ ನೀಡಿದೆ. ಲೆಬನಾನ್ ಜನರನ್ನು ಉದ್ದೇಶಿಸಿ ವಿಡಿಯೋ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಹಿಡಿತದಿಂದ ನಿಮ್ಮ ದೇಶವನ್ನು ಮುಕ್ತಗೊಳಿಸಿ ಎಂದು ಅಲ್ಲಿನ ಜನತೆಗೆ ಕರೆ ನೀಡಿದ್ದಾರೆ. ಇಸ್ರೇಲ್ ಸೇನೆ ಈಗಾಗಲೇ ಲೆಬನಾನ್ನ ದಕ್ಷಿಣ ಕಡಲ ತೀರದಿಂದ ತನ್ನ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಇಸ್ರೇಲ್ ವಾಯು ಪಡೆ ಫೈಟರ್ ಜೆಟ್ಗಳು ಲೆಬನಾನ್ ದೇಶದುದ್ದಕ್ಕೂ ಬಾಂಬ್ ದಾಳಿಗಳನ್ನು ನಡೆಸುತ್ತಿದ್ದು, ನಿರ್ದಿಷ್ಟವಾಗಿ ಲೆಬನಾನ್ ದಕ್ಷಿಣ ಭಾಗದಿಂದ ಜನ ಸಾಮಾನ್ಯರು ತಮ್ಮ ಮನೆಗಳನ್ನು ತೆರವು ಮಾಡುವಂತೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಲೆಬನಾನ್ ಕೂಡಾ ಗಾಜಾ ರೀತಿ ಪರಿವರ್ತನೆ ಆಗಬಹುದು ಎಂದು ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ನೆರವು ನೀಡಿದಷ್ಟೂ ಲೆಬನಾನ್ ದೇಶ ಧ್ವಂಸ ಆಗುತ್ತದೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇಸ್ರೇಲ ಆರ್ಭಟ ಜಗತ್ತಿನಾದ್ಯಂತ ಹೊಸ ಟೆನ್ಷನ್ಗೆ ಕಾರಣವಾಗಿದೆ. ಇದು ಲೆಬನಾನ್ ಕಥೆಯಾಗಿದ್ದರೆ, ಇನ್ನೊಂದು ಕಡೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ಸೈನಿಕರು ಹಮಾಸ್ ಗುರಿಯಾಗಿಸಿ ದಾಳಿ ಮುಂದುವರಿಸಿದ್ದಾರೆ. ಮಧ್ಯಪ್ರಾಚ್ಯದ ಈ ಕಿತ್ತಾಟದ ಕಾರಣಕ್ಕೆ ಇದೀಗ 3ನೇ ಮಹಾಯುದ್ಧದ ಭಯ ಸೃಷ್ಟಿಯಾಗಿದೆ.