ಜಗತ್ತಿನ ಅತ್ಯಂತ ಶಕ್ತಿಶಾಲಿ ಟಾಪ್‌ 10 ರಾಷ್ಟ್ರಗಳು! – ಭಾರತಕ್ಕೆ ಎಷ್ಟನೇ ಸ್ಥಾನ..?

ಜಗತ್ತಿನ ಅತ್ಯಂತ ಶಕ್ತಿಶಾಲಿ ಟಾಪ್‌ 10 ರಾಷ್ಟ್ರಗಳು! – ಭಾರತಕ್ಕೆ ಎಷ್ಟನೇ ಸ್ಥಾನ..?

ಪ್ರತಿಯೊಬ್ಬರಿಗೂ ನಮ್ಮ ದೇಶ ನಂಬರ್-1  ಆಗಿರಬೇಕು ಅನ್ನೋ ಕನಸಿರುತ್ತೆ.. ವಿಶ್ವ ಮಟ್ಟದಲ್ಲಿ ನಮ್ಮ ದೇಶ ಹೆಸರು ಮಾಡಿದ್ರೆ ಪ್ರತಿಯೊಬ್ಬರಿಗೂ ಹೆಮ್ಮೆ.. ಅದರಂತೆ BAV ಗ್ರೂಪ್-ವಾರ್ಟನ್ ಸ್ಕೂಲ್ ಸಂಶೋಧಕರು ಪ್ರಪಂಚದ 195 ದೇಶದಲ್ಲಿ ಅತ್ಯಂತ ಶಕ್ತಿಶಾಲಿ ಟಾಪ್-10 ರಾಷ್ಟ್ರಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಲ್ಲಿ ಯಾವ ದೇಶಕ್ಕೆ ಮೊದಲನೇ ಸ್ಥಾನ್? ಭಾರತ ಈ 10ರ ಪಟ್ಟಿಯಲ್ಲಿ ಇದ್ಯಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಯಾವ್ದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ? – ಜಗದೀಶ್‌ ಆಟಕ್ಕೆ ಮನೆ ಮಂದಿ ಫುಲ್‌ ಸುಸ್ತು!

ದೇಶದ ಶಕ್ತಿ ಎಂದರೆ  ಕೇವಲ  ಮಿಲಿಟರಿ ಶಕ್ತಿ ಮಾತ್ರವಲ್ಲ.. ಇದು ಒಂದು ದೇಶದ ರಾಜಕೀಯ ಪ್ರಭಾವ, ಆರ್ಥಿಕ ಸಂಪನ್ಮೂಲಗಳು, ಇತರ ದೇಶಗಳೊಂದಿಗಿನ ಸಂಬಂಧಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ಇವು ವಿವಿಧ ಸಮಯಗಳಲ್ಲಿ ಹೇಗೆ ಪಾತ್ರವಹಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬಲವಾದ ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಪ್ರಭಾವ, ಅಂತರರಾಷ್ಟ್ರೀಯ ಮೈತ್ರಿಗಳು, ಸೈನಿಕ ಬಲ ಮುಂತಾದ ಪ್ರಮುಖ ಅಂಶಗಳನ್ನು ಆಧರಿಸಿ 2024ರ ಅತ್ಯಂತ ಶಕ್ತಿಶಾಲಿ ಟಾಪ್-10 ರಾಷ್ಟ್ರಗಳ ಪಟ್ಟಿ ಇಲ್ಲಿದೆ.

ಟಾಪ್ 10 ಪಟ್ಟಿಯಲ್ಲಿ ಅಮೆರಿಕ ನಂ-1

ಪ್ರಪಂಚದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಈ ದೇಶದ ಅತ್ಯಂತ ಆಧುನಿಕ ತಂತ್ರಜ್ಞಾನದ ಜೊತೆ ಸುಮಾರು $27.4 ಟ್ರಿಲಿಯನ್ ಜಿಡಿಪಿಯನ್ನು ಹೊಂದಿದೆ. ಇದರಿಂದಾಗಿ ಅಮೆರಿಕವು ಪ್ರಪಂಚದಲ್ಲೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಾಣಿಜ್ಯ, ಹವಾಮಾನ ಬದಲಾವಣೆ, ಭದ್ರತೆಯ ಕುರಿತು ಜಾಗತಿಕ ಮಟ್ಟದಲ್ಲಿ ನೀತಿಗಳನ್ನು ರೂಪಿಸುವಲ್ಲಿ,  ಯುನೈಟೆಡ್ ಸ್ಟೇಟ್ಸ್ ಕೂಡ ಪ್ರಮುಖ ರಾಷ್ಟ್ರವಾಗಿ ಹೆಸರುವಾಸಿಯಾಗಿದೆ. ಇದರ ಜೊತೆಗ ದೇಶವು ಗಣನೀಯ ಸೈನಿಕ ಬಜೆಟ್ ಅನ್ನು ಹೊಂದಿದೆ. ಇಲ್ಲಿನ ಜನ ಸಂಖ್ಯೆ  34.5 ಕೋಟಿಯಿದೆ.

ಟಾಪ್ 10 ಪಟ್ಟಿಯಲ್ಲಿ ಚೀನಾ ನಂ-2

ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ ಇದೆ. 1.4 ಶತಕೋಟಿ ಜನಸಂಖ್ಯೆಯ ಮೂಲಕ ಪ್ರಪಂಚದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಚೀನಾ. ಪ್ರಪಂಚದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಸುಮಾರು $17.8 ಟ್ರಿಲಿಯನ್ ಜಿಡಿಪಿಯನ್ನು ಹೊಂದಿದೆ. ಚೀನಾದ ಕೇಂದ್ರೀಕೃತ ಯೋಜಿತ ಆರ್ಥಿಕತೆಯಿಂದ ಮಾರುಕಟ್ಟೆ ಶಕ್ತಿಗಳು ಪ್ರಾಬಲ್ಯ ಹೊಂದಿದ್ದು, ಇದು ಅದರ ಒಟ್ಟಾರೆ ಶಕ್ತಿಗೆ ಮತ್ತಷ್ಟು ಕೊಡುಗೆ ನೀಡುತ್ತದೆ.

ಟಾಪ್ 10 ಪಟ್ಟಿಯಲ್ಲಿ ರಷ್ಯಾ ನಂ-3

ಪ್ರಪಂಚದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದೆ. ರಷ್ಯಾವು ತನ್ನ ವಿಶಾಲ ಭೂಪ್ರದೇಶಕ್ಕೆ  ಹೆಸರುವಾಸಿಯಾಗಿದ್ದು ಪ್ರಪಂಚದಲ್ಲೇ ಅತಿ ದೊಡ್ಡ ದೇಶವಾಗಿದೆ. ಇದರ ಅಗಾಧ ನೈಸರ್ಗಿಕ ಸಂಪನ್ಮೂಲಗಳು, ವಿಶೇಷವಾಗಿ ಅನಿಲ, ತೈಲ ಹೊಂದಿದ್ದು, ಸುಮಾರು $ 2.24 ಲಕ್ಷ ಟ್ರಿಲಿಯನ್‌ಗಿಂತಲೂ ಹೆಚ್ಚು ಜಿಡಿಪಿ ಹೊಂದಿದೆ.  ಹಾಗೇ ಹೆಚ್ಚಿನ ಮಿಲಿಟರಿ ಶಕ್ತಿಯನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಇಂಧನ ಮಾರುಕಟ್ಟೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಟಾಪ್ 10 ಪಟ್ಟಿಯಲ್ಲಿ ಯುಕೆ -4

ಯುಕೆ ಕೂಡ ಪ್ರಪಂಚದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಯುರೋಪಿಯನ್ ಒಕ್ಕೂಟದಿಂದ   ಹೊರಬಂದ ನಂತರವೂ, ಜಾಗತಿಕವಾಗಿ ಗುರುತಿಸಿಕೊಳ್ಳುವುದನ್ನು ಮುಂದುವರೆಸಿದೆ. ಲಂಡನ್ ಪ್ರಪಂಚದ ಪ್ರಮುಖ ಹಣಕಾಸು ಕೇಂದ್ರಗಳಲ್ಲಿ ಒಂದಾಗಿ ಹೆಸರುವಾಸಿಯಾಗಿದೆ. ಯುಕೆ ಸರ್ಕಾರವು ತನ್ನ ಆರ್ಥಿಕತೆಯನ್ನು ಬಲಪಡಿಸಲು ಹೊಸ ವ್ಯಾಪಾರ ಒಪ್ಪಂದಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಈ ದೇಶದ ಸಾಂಸ್ಕೃತಿಕ ಕೊಡುಗೆಗಳು, ಐತಿಹಾಸಿಕ ಮಹತ್ವ, ಬಲವಾದ ಸಂಸ್ಥೆಗಳು, ಜಾಗತಿಕ ಮಾನದಂಡಗಳು   ಹೆಚ್ಚಿನ ಮನ್ನಣೆಯನ್ನು ಗಳಿಸಿವೆ.

ಟಾಪ್ 10 ಪಟ್ಟಿಯಲ್ಲಿ ಜರ್ಮನಿ ನಂ-5

ಯುರೋಪಿಯನ್ ಒಕ್ಕೂಟದಲ್ಲಿ ಜರ್ಮನಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಪ್ರಪಂಚದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ. $4.46 ಟ್ರಿಲಿಯನ್ ಜಿಡಿಪಿಯನ್ನು ಹೊಂದಿದೆ. ಇದು  ಪ್ರಭಾವಶಾಲಿ ಎಂಜಿನಿಯರಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಉತ್ಪಾದನೆ ಮತ್ತು ವಾಹನ ಉದ್ಯಮಗಳಲ್ಲಿ. ಯುರೋಪಿಯನ್ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಜರ್ಮನಿ ಪ್ರಮುಖ ಪಾತ್ರ ವಹಿಸುತ್ತದೆ.

ಟಾಪ್ 10 ಪಟ್ಟಿಯಲ್ಲಿ  ದಕ್ಷಿಣ ಕೊರಿಯಾ ನಂ-6

ಅಧಿಕೃತವಾಗಿ ಕೊರಿಯಾ ಗಣರಾಜ್ಯ ಎಂದು ಕರೆಯಲ್ಪಡುವ ದಕ್ಷಿಣ ಕೊರಿಯಾ ಸುಮಾರು $1.71 ಟ್ರಿಲಿಯನ್ ಜಿಡಿಪಿಯೊಂದಿಗೆ ಏಷ್ಯಾದ ಅತಿದೊಡ್ಡ ಆರ್ಥಿಕತೆಯಾಗಿ ವೇಗವಾಗಿ ಬೆಳೆಯುತ್ತಿದೆ. ದೊಡ್ಡ ಬ್ರ್ಯಾಂಡ್‌ಗಳು, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ದಕ್ಷಿಣ ಕೊರಿಯಾ ಶಿಕ್ಷಣ ಮತ್ತು ಬಡತನ ನಿರ್ಮೂಲನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಮಿಲಿಟರಿ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಸವಾಲುಗಳಿಂದ ಗುರುತಿಸಲ್ಪಟ್ಟಿರುವ ನೆರೆಯ ಉತ್ತರ ಕೊರಿಯಾದೊಂದಿಗಿನ ಸವಾಲಿನ ಸಂಬಂಧಗಳನ್ನು ನಿರ್ವಹಿಸುತ್ತಲೇ ಅಭಿವೃದ್ಧಿಯತ್ತ ಸಾಗುತ್ತಿದೆ.

ಟಾಪ್ 10 ಪಟ್ಟಿಯಲ್ಲಿ  ಫ್ರಾನ್ಸ್ ನಂ – 7

7ನೇ ಸ್ಥಾನದಲ್ಲಿರುವ ಫ್ರಾನ್ಸ್ ರಾಜಕೀಯ ಪ್ರಭಾವ, ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಸುಮಾರು $3 ಟ್ರಿಲಿಯನ್ GDPಯನ್ನು ಹೊಂದಿದ್ದು, 6.65 ಕೋಟಿ ಜನ ಸಂಖ್ಯೆಯನ್ನ ಹೊಂದಿದೆ. ಯುರೋಪಿಯನ್ ಒಕ್ಕೂಟದ ಪ್ರಮುಖ ಸದಸ್ಯ ರಾಷ್ಟ್ರವಾಗಿ, ಸಾಮಾಜಿಕ ಕಲ್ಯಾಣ ನೀತಿಗಳ ಪ್ರಮುಖ ಪ್ರತಿಪಾದಕವಾಗಿದೆ. ತಂತ್ರಜ್ಞಾನ, ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ತನ್ನ ಬೇರುಗಳೊಂದಿಗೆ, ದೇಶವು ಗಮನಾರ್ಹವಾದ ವೈವಿಧ್ಯಮಯ ಆರ್ಥಿಕತೆಯನ್ನು ಹೊಂದಿದೆ.

8ನೇ ಸ್ಥಾನದಲ್ಲಿ ಜಪಾನ್ ಮ್ಯಾಜೀಕ್

ವಾಹನ ಉದ್ಯಮ, ರೊಬೊಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿನ ನಾವೀನ್ಯತೆಗಳಿಗೆ ಹೆಸರುವಾಸಿಯಾಗಿರುವ, ತಾಂತ್ರಿಕವಾಗಿ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಪಾನ್ ಸಾಧನೆ ಮಾಡುತ್ತಿದೆ.  ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇದು ಸುಮಾರು $4.21 ಟ್ರಿಲಿಯನ್ ಜಿಡಿಪಿಯನ್ನು ಹೊಂದಿದೆ. ಇದು ತನ್ನ ಹಿಂದಿನ ಆರ್ಥಿಕ ಸವಾಲುಗಳಿಂದ ಮರಳಿ ಚೇತರಿಸಿಕೊಂಡಿದೆ ಮತ್ತು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

9ನೇ ಸ್ಥಾನದಲ್ಲಿ ಸೌದಿ ಅರೇಬಿಯಾ

9ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ $1.07 ಟ್ರಿಲಿಯನ್ ಜಿಡಿಪಿಯನ್ನು ಹೊಂದಿದೆ. ಇದು ತನ್ನ ವಿಶಾಲ ತೈಲ ನಿಕ್ಷೇಪಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ಪ್ರಮುಖ ಶಕ್ತಿಯಾಗಿದೆ. ಇದು ಅದರ ಆರ್ಥಿಕತೆಗೆ ಪ್ರಮುಖ ಪಾತ್ರವಹಿಸುತ್ತಿದೆ.

10ನೇ ಸ್ಥಾನದಲ್ಲಿ ಇಸ್ರೇಲ್‌ ಮೋಡಿ

ಇಸ್ರೇಲ್ ಮೇಲಿನ ದೇಶಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ, ಜಾಗತಿಕ ವ್ಯವಹಾರಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನ ಮತ್ತು ಮಿಲಿಟರಿ ಸಾಮರ್ಥ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು $510 ಶತಕೋಟಿ ಜಿಡಿಪಿಯೊಂದಿಗೆ, ಇಸ್ರೇಲ್ ತನ್ನ ಹೈಟೆಕ್ ಉದ್ಯಮಗಳಲ್ಲಿನ ನಾವೀನ್ಯತೆಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಬಲವಾದ ಮಿಲಿಟರಿ ಪ್ರಾಬಲ್ಯವನ್ನು ಹೊಂದಿದೆ. ಇಲ್ಲಿ ಜನ ಸಂಖ್ಯೆ 93. 8 ಲಕ್ಷ ಜಮ ಸಂಖ್ಯೆಯನ್ನ ಹೊಂದಿದೆ.

 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 12 ಸ್ಥಾನ

ಭಾರತವು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದೆ. ಈ ಶ್ರೇಯಾಂಕವು ಆರ್ಥಿಕ ಪರಿಸ್ಥಿತಿಗಳು, ಬಲವಾದ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಮಿಲಿಟರಿ ಶಕ್ತಿ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿದೆ. ಯುಎಸ್, ಚೀನಾ, ಜರ್ಮನಿ ಮತ್ತು ಜಪಾನ್ ನಂತರ ಭಾರತವು ವಿಶ್ವ ಜಿಡಿಪಿ ಶ್ರೇಯಾಂಕದಲ್ಲಿ 5 ನೇ ಸ್ಥಾನದಲ್ಲಿದೆ  ವಿಶ್ವದ ಅತ್ಯಂತ ಶಕ್ತಿ ಶಾಲಿ ದೇಶಗಳ ಟಾಪ್ 10 ಪಟ್ಟಿಗಳ ಹತ್ತಿರವೇ ಭಾರತವಿದೆ.

Shwetha M

Leave a Reply

Your email address will not be published. Required fields are marked *