ಕೊಹ್ಲಿ & ರಾಹುಲ್ ಬ್ರೋಮ್ಯಾನ್ಸ್ – KING ಬಗ್ಗೆ KLಗೆ ಯಾಕಷ್ಟು ಪ್ರೀತಿ?
RCB ಬಾಂಡಿಂಗ್ ಮತ್ತೆ ಶುರುವಾಗುತ್ತಾ?

ಕೊಹ್ಲಿ & ರಾಹುಲ್ ಬ್ರೋಮ್ಯಾನ್ಸ್ – KING ಬಗ್ಗೆ KLಗೆ ಯಾಕಷ್ಟು ಪ್ರೀತಿ?RCB ಬಾಂಡಿಂಗ್ ಮತ್ತೆ ಶುರುವಾಗುತ್ತಾ?

ಟೀಂ ಇಂಡಿಯಾದಲ್ಲಿ ಒನ್ ಆಫ್ ದಿ ಬೆಸ್ಟ್ ಬಾಂಡಿಂಗ್ ಸ್ಟಾರ್ಸ್ ಅಂದ್ರೆ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್.. ಇವರಿಬ್ಬರೂ ಭಾರತೀಯ ಕ್ರಿಕೆಟ್ ತಂಡದ ಬಲಾಢ್ಯ ಕಂಬಗಳು. ವಿರಾಟ್ ಕೊಹ್ಲಿ ಜೊತೆಗೆ ಕೆ.ಎಲ್ ರಾಹುಲ್ ಕೂಡಾ ಟೀಮ್ ಇಂಡಿಯಾದಲ್ಲಿ ತಮ್ಮ ರೋಲ್‌ ನ್ನ ಸಮರ್ಥವಾಗಿಯೇ ನಿಭಾಯಿಸ್ತಾ ಇದ್ದಾರೆ. ಅದರಲ್ಲೂ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆ.ಎಲ್ ಮತ್ತು ಕೊಹ್ಲಿ ಕಾಂಬಿನೇಷನ್ ಫ್ಯಾನ್ಸ್ ಗಂತೂ ಪೈಸಾ ವಸೂಲ್ ಎಂಟರ್‌ಟೈನ್ ಮೆಂಟ್ ರೀತಿ ಇದ್ದಿದ್ದು ನೀವು ಗಮನಿಸಿರ್ತಿರಾ. ಇವತ್ತಿನ ಈ ಎಪಿಸೋಡ್ನಲ್ಲಿ ಕೊಹ್ಲಿ ಮತ್ತು ಕೆ.ಎಲ್ ಜೋಡಿಯ ಸ್ನೇಹ.. ಬ್ಯೂಟಿಫುಲ್ ಬಾಂಡಿಂಗ್.. ಜೊತೆಗೆ ಬ್ರೋಮ್ಯಾನ್ಸ್ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊಹ್ಲಿ ಬಳಸೋ ಬ್ಯಾಟ್ ರೇಟ್ ಇಷ್ಟೊಂದ? – 11 ಲಕ್ಷ ಬೆಲೆಯ ಬ್ಯಾಟ್ ಬಳಸೋದ್ಯಾರು?

ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ನಡುವೆ ಬ್ರೋಮ್ಯಾನ್ಸ್ ನಡೀತಿದೆ. ಇದು ಈ ಇಬ್ಬರೂ ಸ್ಟಾರ್ ಕ್ರಿಕೆಟರ್ಸ್ ಜೊತೆಯಲ್ಲಿದ್ದಾಗ ಫ್ಯಾನ್ಸ್ ಕೂಡಾ ಅಬ್ಸರ್ವ್ ಮಾಡಿರ್ತಾರೆ. ಕೊಹ್ಲಿ ಮತ್ತು ಕೆ.ಎಲ್ ನಡುವೆ ಇರೋ ಲವ್ಲಿ ಬಾಂಡಿಂಗ್ ಅನೇಕರಿಗೆ ಗೊತ್ತೇ ಇದೆ. ಅಷ್ಚೇ ಅಲ್ಲ ಇಬ್ರಲ್ಲೂ ಸ್ಟ್ರಾಂಗ್ ಫ್ರೆಂಡ್ ಶಿಪ್ ಇರೋದನ್ನ ಅನೇಕ ಬಾರಿ ಗ್ರೌಂಡ್‌ನಲ್ಲೇ  ಅವರ ಬಾಡಿ ಲಾಂಗ್ವೇಜ್​ನಲ್ಲೇ ಫ್ಯಾನ್ಸ್ ಗುರುತಿಸಿದ್ದಾರೆ. ಇದೀಗ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮತ್ತೊಮ್ಮೆ ಇಬ್ಬರ ನಡುವಿನ ಬ್ರೋಮ್ಯಾನ್ಸ್ ಫ್ಯಾನ್ಸ್ ಖುಷಿಗೆ ಕಾರಣವಾಗಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆ.ಎಲ್ ರಾಹುಲ್ ಸೆಲೆಕ್ಟ್ ಆದಾಗಲೇ ಕೋಟಿ ಕೋಟಿ ಕನ್ನಡಿಗರು ಥ್ರಿಲ್ ಆಗಿದ್ರು. ಇವರ ನಿರೀಕ್ಷೆಯನ್ನ ಕೂಡಾ ಕನ್ನಡಿಗ ಕ್ರಿಕೆಟರ್ ಉಳಿಸಿಕೊಂಡಿದ್ರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಬ್ಯಾಟಿಂಗ್ ಸ್ಟೈಲ್ ನೋಡೋದೇ ಮಜಾ ಕೊಡ್ತಿತ್ತು. ಅದ್ರಲ್ಲೂ ಕೆ.ಎಲ್ ಜೊತೆ ರನ್ ಮೆಷಿನ್ ವಿರಾಟ್ ಕೊಹ್ಲಿ ಇದ್ರಂತೂ ಕೇಳ್ಬೇಕಾ. ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಜೋಶ್‌ನಲ್ಲೇ ಟೆಸ್ಟ್ ಮ್ಯಾಚ್ ನೋಡ್ತಿದ್ರು. ಸ್ಪೋಟಕ ಇನಿಂಗ್ಸ್​ಗೆ ಒತ್ತು ನೀಡಿದ ಕೆಎಲ್ ರಾಹುಲ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಅಲ್ಲದೆ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅತ್ತ ಕೆಎಲ್ ರಾಹುಲ್ ಹಾಫ್ ಸೆಂಚುರಿ ಪೂರೈಸುತ್ತಿದ್ದಂತೆ ವಿರಾಟ್ ಕೊಹ್ಲಿ ಫುಲ್ ಖುಷಿಯಾದರು. ಅಲ್ಲದೆ ರಾಹುಲ್ ಅವರನ್ನು ಅಪ್ಪುಗೆಯೊಂದಿಗೆ ಅಭಿನಂದಿಸಿದ್ರು. ನಂತರ ಕೊಹ್ಲಿ ಕೆ.ಎಲ್ ರಾಹುಲ್ ಎದೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡರು. ವಿರಾಟ್ ಕೊಹ್ಲಿಯ ಈ ಸಿಹಿ ಅಪ್ಪುಗೆ.. ಪ್ರೀತಿಯ ಮುತ್ತಿನ ಹಿಂದೆ ಬ್ರೋಮ್ಯಾನ್ಸ್ ಇರೋದು ನೋಡಿ ಪ್ರೇಕ್ಷಕರಂತೂ ಫಿದಾ ಆಗಿದ್ರು.

ಇಲ್ಲೊಂದು ವಿಚಾರವನ್ನ ನೆನಪು ಮಾಡಿಕೊಳ್ಳಲೇಬೇಕು. ಎಲ್ಲರ ಕೆರಿಯರ್​​ನಲ್ಲೂ ಏಳು ಬೀಳು ಇದ್ದೇ ಇರುತ್ತೆ. ಈ ವಿಚಾರಕ್ಕೆ ಬಂದ್ರೆ ಕೊಹ್ಲಿಯಷ್ಟೂ ಸ್ಪೂರ್ತಿ ಕೊಡೋ ಕ್ರಿಕೆಟರ್ ಯಾರೂ ಇಲ್ಲ. ಆದ್ರೆ, ಕೆಲವೊಮ್ಮೆ ಕೊಹ್ಲಿಗೂ ಬ್ಯಾಡ್ ಟೈಮ್ ಬಂದಿದ್ದೂ ಇದೆ. ಇದೇ ಟೈಮ್‌ಲ್ಲಿ ಗೆಳೆಯನಿಗೆ ಸಾಥ್ ಕೊಟ್ಟವರೇ ಕೆ.ಎಲ್. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಎದುರು ಭಾರತ ಪಂದ್ಯ ಗೆಲ್ಲಲು 19 ರನ್‌ ಬೇಕಿತ್ತು. ಆಗ ಕೊಹ್ಲಿಯ ಶತಕಕ್ಕೂ 19 ರನ್ ಬೇಕಿತ್ತು. ಆ ಬಳಿಕ ಸತತವಾಗಿ ಸ್ಟ್ರೈಕ್‌ ತಮ್ಮಲ್ಲೇ ಉಳಿಸಿಕೊಂಡ ವಿರಾಟ್‌, ಸಿಕ್ಸರ್‌ ಮೂಲಕ ಶತಕ ಪೂರೈಸಿದರು. ಕೊನೆಯಲ್ಲಿ ವಿರಾಟ್ ಕೊಹ್ಲಿ ಸ್ಟ್ತೈಕ್ ಉಳಿಸಿಕೊಂಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಶತಕ ಗಳಿಸಿ ದಾಖಲೆ ಬರೆಯುವ ಉದ್ದೇಶದಿಂದಲೇ ಕೊಹ್ಲಿ ಸಿಂಗಲ್ಸ್ ನಿರಾಕರಿಸಿದರು ಎನ್ನುವ ಟೀಕೆ ಕೂಡಾ ವ್ಯಕ್ತವಾಗಿದೆ. ಕೊಹ್ಲಿಗೆ ಸ್ವಾರ್ಥಿ ಎಂಬ ಪಟ್ಟ ಅದಾಗಲೇ ಕಟ್ಟಿಯೂ ಆಗಿತ್ತು. ಆಗ ಕೊಹ್ಲಿಗೆ ನೆರವಿಗೆ ಬಂದಿದ್ದು ಇದೇ ನಮ್ಮ ಕೆ,ಎಲ್ ರಾಹುಲ್. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೆ ಎಲ್ ರಾಹುಲ್, ತಾವೇ ವಿರಾಟ್ ಕೊಹ್ಲಿ ಶತಕ ಸಿಡಿಸಲು ಮನವೊಲಿಸಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಿಂಗಲ್ಸ್‌ ಪಡೆಯುವುದನ್ನು ತಾವೇ ನಿರಾಕರಿಸಿದ್ದಾಗಿಯೂ ಹೇಳಿದ್ದರು. ವಿರಾಟ್ ಈ ಸಮಯದಲ್ಲಿ ಸ್ವಲ್ಪ ಕನ್ಫೂಸ್ ಆಗಿದ್ದರು. ಸಿಂಗಲ್ಸ್‌ ಪಡೆಯದೇ ಇರುವುದನ್ನು ನೋಡುವುದಕ್ಕೆ ಸರಿ ಕಾಣುವುದಿಲ್ಲ. ಇದು ವಿಶ್ವಕಪ್ ಗೇಮ್, ನಾನು ದಾಖಲೆಗಾಗಿ ಆಡಲು ಬಯಸುವುದಿಲ್ಲ ಎಂದೆಲ್ಲಾ ವಿರಾಟ್ ಕೊಹ್ಲಿ ನನ್ನ ಬಳಿ ಹೇಳಿದರು. ನಾನಾಗ, ನಾವು ಹೇಗೂ ಸುಲಭವಾಗಿ ಮ್ಯಾಚ್ ಗೆಲ್ಲುತ್ತೇವೆ. ನಿಮಗೆ ಮೈಲಿಗಲ್ಲು ನಿರ್ಮಿಸಲು ಸಾಧ್ಯವಾಗುವುದಾದರೇ ಯಾಕೆ ಪ್ರಯತ್ನಿಸಬಾರದು. ನೀವು ಶತಕ ಸಿಡಿಸಲು ಪ್ರಯತ್ನ ಪಡಿ ಎಂದು ಹೇಳಿದೆ. ಹಾಗೂ ಸಿಂಗಲ್ಸ್ ಪಡೆಯುವುದು ಬೇಡ ಎಂದು ನಾನೇ ನಿರಾಕರಿಸಿದೆ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ. ಈ ಮಾತಲ್ಲಿ ಒಂದಂತೂ ಸ್ಪಷ್ಟ. ಇಲ್ಲಿ ಕೆ.ಎಲ್‌ಗೆ ತನ್ನ ಗೆಳೆಯ ಸೆಂಚೂರಿಸಿ ಸಿಡಿಸಬೇಕು. ಕ್ರಿಕೆಟ್ ಲೋಕದ ದಾಖಲೆಗಳು ಕೊಹ್ಲಿ ಪಾಲಾಗಬೇಕು ಅನ್ನೋದು. ಇಲ್ಲಿ ಕೊಹ್ಲಿ ಸ್ವಾರ್ಥಿಯಾಗಲಿಲ್ಲ.. ಕೆ.ಎಲ್ ರಾಹುಲ್ ತನ್ನ ವೈಯಕ್ತಿಕ ರನ್ ಗಳಿಕೆ ಬಗ್ಗೆ ಯೋಚಿಸಲೂ ಇಲ್ಲ. ಇಲ್ಲಿದ್ದಿದ್ದು ಕೊಹ್ಲಿ ಶತಕ ಬಾರಿಸಬೇಕು ಅನ್ನೋ ಉದ್ದೇಶ. ಈ ಮನಸ್ಥಿತಿ ಬರೋದು ಕೇವಲ ಒಬ್ಬ ಗೆಳೆಯನಿಗೆ ಮಾತ್ರ.

ಕೆ.ಎಲ್ ಗೆ ಕೊಹ್ಲಿ ಬಗ್ಗೆ ಅದೆಷ್ಟು ಪ್ರೀತಿಯೆಂದರೆ, ಪ್ರತಿ ಹಂತದಲ್ಲೂ ತನ್ನನ್ನ ಸಪೋರ್ಟ್ ಮಾಡಿದ್ದು, ತನ್ನ ಸ್ಪೂರ್ತಿಯೇ ಕೊಹ್ಲಿ ಅಂತಾ ಅದೆಷ್ಟೋ ಸಲ ಹೇಳಿಕೊಂಡಿದ್ದಾರೆ. ನಾನು ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಾಗ ನಾನು ಆಟಗಳಲ್ಲಿ ಅಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ತೋರುತ್ತಿರಲಿಲ್ಲ, ಆಗ ನನ್ನ ಸಹಾಯಕ್ಕೆ ಬಂದಿದ್ದು ವಿರಾಟ್ ಕೊಹ್ಲಿ. ಪ್ರತಿ ಹಂತದಲ್ಲೂ ನನ್ನ ತಿದ್ದಿದರು, ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದರು ಕೊಹ್ಲಿಯೇ ಎಂದು ಸಂದರ್ಶನವೊಂದರಲ್ಲೂ ರಾಹುಲ್ ಹೇಳಿಕೊಂಡಿದ್ದಾರೆ.  ಆರ್‌ಸಿಬಿ ಟೀಮ್ ಅಂದ್ರೆ ಕೆ.ಎಲ್ ರಾಹುಲ್‌ಗೆ ಈಗಲೂ ವಿಶೇಷ ಪ್ರೀತಿ. ಕೆ.ಎಲ್ ಯಾವ ಟೀಮ್‌ನಲ್ಲಿಯೇ ಇರಲಿ, ಆರ್‌ಬಿಸಿ ಅಂದ್ರೆ, ಕೆ.ಎಲ್ ಎದೆಯಲ್ಲಿರೋದು ಸ್ಪೆಷಲ್ ಲವ್.. ಅದನ್ನ ಅದೆಷ್ಟೋ ಬಾರಿ ಸಂದರ್ಶನಗಳಲ್ಲೂ ಕೆ.ಎಲ್ ಹೇಳಿದ್ದೂ ಇದೆ. ಆರ್.ಅಶ್ವಿನ್ ಅವರ ಜೊತೆ ಮಾತಾಡ್ತಾ ತಾನು ಹೇಗೆ 2013ರಲ್ಲಿ ಆರ್‌ಸಿಬಿ ಟೀಮ್ ಗೆ ಸೇರಿಕೊಂಡೆ ಎಂಬ ವಿಚಾರವನ್ನ ಕೆ.ಎಲ್ ರಿವೀಲ್ ಮಾಡಿದ್ದರು. ವಿರಾಟ್ ಕೊಹ್ಲಿಯೇ ನನ್ನ ಬಳಿ ನೀವು ಆರ್‌ಸಿಬಿಗೆ ಆಡಲು ಬಯಸುವಿರಾ ಅಂತಾ ಕೇಳಿದ್ದರು. ಅದಕ್ಕೆ ನಾನು ತಮಾಷೆ ಮಾಡುತ್ತಿದ್ದೀರಾ, ಇದು ಯಾವಾಗಲೂ ನನ್ನ ಕನಸಾಗಿತ್ತು ಅಂದೆ. ನಾನು ತಮಾಷೆ ಮಾಡುತ್ತಿದ್ದೇನೆ. ನಿಮ್ಮಲ್ಲಿ ಬೇರೆ ಆಯ್ಕೆಗಳಿಲ್ಲ. ಈ ಒಪ್ಪಂದಕ್ಕೆ ಸಹಿ ಮಾಡಿ ಅಂತಾ ಕೊಹ್ಲಿ ಹೇಳಿದ್ರು. ನಾನು ಸಹಿ ಮಾಡಿದೆ. ನಾನು 7-8 ಸೀಸನ್‌ಗಳಲ್ಲಿ ರಣಜಿ ಸೀಸನ್ ಆಡಿದ್ದರೂ ಗಳಿಸಲಾಗದ ಅನುಭವ ನಾನು ವಿರಾಟ್ ಜೊತೆ ಆ ಎರಡು ತಿಂಗಳಲ್ಲಿ ಕಲಿತೆ ಅಂತಾ ಕ್ಲಾಸ್ ಕ್ರಿಕೆಟ್ ಹೀರೋ ಕೆ.ಎಲ್ ರಾಹುಲ್ ಹೇಳಿಕೊಂಡಿದ್ದಾರೆ. ನಾನು ಬೆಂಗಳೂರು ತಂಡದಲ್ಲಿ ಆಡಬೇಕು. ನಾನು ಅಲ್ಲಿಂದಲೇ ಪಯಣ ಆರಂಭಿಸಿದ್ದು, ಅಲ್ಲಿಯೇ ಅದನ್ನ ಅಂತ್ಯಗೊಳಿಸಲು ಬಯಸುತ್ತೇನೆ ಅಂತಾ ಹೇಳಿರೋ ಕೆ.ಎಲ್ ಕೊನೇ ಸೀಸನ್ ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಕಳೆಯೋ ಆಸೆ ವ್ಯಕ್ತಪಡಿಸಿದ್ದಾರೆ. ಹೀಗೆ ನೋಡ್ತಾ ಹೋದರೆ, ಕೊಹ್ಲಿ ಮತ್ತು ಕೆ.ಎಲ್ ಫ್ರೆಂಡ್‌ಶಿಪ್ ಬಗ್ಗೆ ಸಾಕಷ್ಟು ಎಕ್ಸಾಂಪಲ್ ಸಿಗುತ್ತೆ. ಅದೇನೇ ಇದ್ರೂ ಇವರಿಬ್ಬರ ನಡುವೆ ನಡೆಯೋ ಬ್ರೋಮ್ಯಾನ್ಸ್ ನೋಡೋದೇ ಫ್ಯಾನ್ಸ್ ಗೆ ಖುಷಿ.

Shwetha M

Leave a Reply

Your email address will not be published. Required fields are marked *