ಐಶ್‌ ಸ್ವಾರ್ಥ.. ಮಗಳ ಭವಿಷ್ಯ ಹಾಳು? – ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌?
ಪ್ರಶ್ನೆ ಮಾಡಲ್ವಾ ಅಭಿಷೇಕ್?

ಐಶ್‌ ಸ್ವಾರ್ಥ.. ಮಗಳ ಭವಿಷ್ಯ ಹಾಳು? – ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌?ಪ್ರಶ್ನೆ ಮಾಡಲ್ವಾ ಅಭಿಷೇಕ್?

ಐಶ್ವರ್ಯ ರೈ.. ಎವರ್‌ ಗ್ರೀನ್‌ ಬ್ಯೂಟಿ.. ಇಂದಿಗೂ ಐಶ್ವರ್ಯ ಫ್ಯಾಷನ್‌ ಲೋಕದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಸೆಟ್‌ ಮಾಡಿರೋ ಸುಂದರಿ.. ಆಕೆಯ ಮೈಮಾಟಕ್ಕೆ ಮನಸೋಲದವರೇ ಇಲ್ಲ.. ಆದ್ರೆ ಐಶ್‌ ಕೆಲ ತಿಂಗಳಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.. ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಸದ್ಯದಲ್ಲೇ ಡಿವೋರ್ಸ್‌ ಪಡೆದುಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು.. ಅದಾದ್ಮೇಲೆ ಆಕೆಯ ಆರೋಗ್ಯದ ವಿಚಾರವೂ ಚರ್ಚೆಯ ವಿಷಯವಾಗಿತ್ತು.. ಇದೀಗ ಐಶ್‌ ಮಗಳ ವಿದ್ಯಾಭ್ಯಾಸದ ಬಗ್ಗೆಯೂ ಮತ್ತೊಂದು ಗುಮಾನಿ ಎದ್ದಿದೆ.. ಐಸ್‌ ತನ್ನ ಸ್ವಾರ್ಥಕ್ಕಾಗಿ ಮಗಳ ಭವಿಷ್ಯವನ್ನೇ ಹಾಳು ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಈಗ ಫ್ಯಾನ್ಸ್‌ ಗೆ ಕಾಡ್ತಾ ಇದೆ.. ಅಷ್ಟಕ್ಕೂ ಆರಾಧ್ಯ ವಿಚಾರವಾಗಿ ಐಶ್‌ ಏನ್‌ ಮಾಡಿದ್ರು.. ಐಶ್‌ ಮಗಳ ಸ್ಕೂಲ್‌ ಕತೆ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊಹ್ಲಿ ಬಳಸೋ ಬ್ಯಾಟ್ ರೇಟ್ ಇಷ್ಟೊಂದ? – 11 ಲಕ್ಷ ಬೆಲೆಯ ಬ್ಯಾಟ್ ಬಳಸೋದ್ಯಾರು?

ಐಶ್ವರ್ಯ ಇಂದಿಗೂ ಬೇಡಿಕೆಯಲ್ಲಿರುವ ನಟಿ.. ಸಿನಿಮಾಗಳ ಜೊತೆ ಜೊತೆಗೆ ಫ್ಯಾಷನ್‌ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಇವತ್ತು ಬೆಳಗ್ಗೆ ಮುಂಬೈನಲ್ಲಿದ್ದರೆ, ಮಧ್ಯಾಹ್ನ ಮತ್ತೊಂದು ದೇಶದಲ್ಲಿ, ಸಂಜೆ ಇನ್ನೊಂದು ಕಡೆ. ಹೀಗೆ ಸದಾ ದೇಶ ಪರ್ಯಟನೆ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಅಂದ್ರೆ ಹಾಗೇ ಅಲ್ವಾ.. ಕಾರ್ಯಕ್ರಮ ಇದೆ ಅಂದಾದ ಊರು, ರಾಷ್ಟ್ರ ಅಂತಾ ನೋಡದೇ ಹೋಗ್ಲೇ ಬೇಕಾಗುತ್ತೆ. ಹೀಗಾಗಿ ಐಶ್‌ ಸದಾ ದೇಶ, ವಿದೇಶ ಪರ್ಯಟನೆ ಮಾಡ್ತಿರ್ತಾರೆ.. ಇನ್ನು ಐಶ್ವರ್ಯಗೆ ಮುದ್ದಾದ ಮಗಳಿರುವುದು ಎಲ್ಲರಿಗೂ ತಿಳಿದ ವಿಚಾರ.. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಕ್ಯಾಮರಾ ಕಣ್ಣಿನಿಂದ ಮರೆ ಮಾಚುತ್ತಾರೆ. ಆದರೆ ಐಶ್ವರ್ಯ ರೈ ಮಾತ್ರ ಆ ರೀತಿ ಅಲ್ಲ. ಅವರು ಎಲ್ಲೇ ಹೋಗಲಿ , ಎಲ್ಲೇ ಬರಲಿ ಮಗಳು ಆರಾಧ್ಯ ಜೊತೆ ಇದ್ದೇ ಇರುತ್ತಾಳೆ. ಆರಾಧ್ಯ ಕೂಡಾ ಅಮ್ಮನನ್ನು ಬಿಟ್ಟಿರಲಾಗಂತೆ ಆಕೆಯ ಕೈ ಹಿಡಿದು ಜೊತೆಯಲ್ಲೇ ಹೋಗಿ ಬರುತ್ತಾಳೆ. ಇದೇ ವಿಚಾರಕ್ಕೆ ಐಶ್ವರ್ಯ ಬಹಳ ಟ್ರೋಲ್‌ ಆಗ್ತುದ್ದಾರೆ.. ಮೊದಲಾದರೂ ಆರಾಧ್ಯ ಪುಟ್ಟ ಕಂದ ಹಾಗಾಗಿ ಜೊತೆಯಲ್ಲಿ ಇದ್ದರೆ ಸರಿ. ಆದರೆ ಈಗ ಮಗಳು ಬೆಳೆದಿದ್ದಾಳೆ. ಅವಳಿಗೆ ಈಗ ವಿದ್ಯಾಭ್ಯಾಸ ಬಹಳ ಅಗತ್ಯ. ಮಗುವಿಗೆ ಓದುವುದು, ಬರೆಯುವುದು ಏನೋ ಇರುವುದಿಲ್ಲವೇ. ಆರಾಧ್ಯ ಹೀಗೆ ಸದಾ ಅಮ್ಮನ ಜೊತೆ ವಿದೇಶಗಳಿಗೆ ಹೋಗಿ ಬರುತ್ತಿದ್ದರೆ, ವಿದ್ಯಾಭ್ಯಾಸದ ಕಥೆ ಏನು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಹೌದು, ಇತ್ತೀಚೆಗೆ ನಟಿ ಮಾಳವಿಕಾ ಅವಿನಾಶ್ ಕೂಡ ಕಿಡಿಕಾರಿದ್ದರು.  ಮಕ್ಕಳನ್ನು ಹ್ಯಾಂಡ್ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗೋದೆಂತ ಸಂಸ್ಕೃತಿ? ಅಂತ ಸೋಷಿಯಲ್ ಮೀಡಿಯಾದಲ್ಲಿ ನಟಿ ಮಾಳವಿಕಾ ಪೋಸ್ಟ್ ಮಾಡಿದ್ದರು. ಇದಕ್ಕೆ ಕಾರಣ, ಐಶ್ವರ್ಯ ರೈ ಮಗಳು ಆರಾಧ್ಯಳನ್ನು ಪ್ಯಾರಿಸ್‌ಗೆ ಕರೆದುಕೊಂಡು ಹೋಗಿ ವಾಪಸಾಗಿದ್ದು. ಹಾಗೆ ನೋಡುವುದಾದರೆ ಐಶ್ವರ್ಯಾ ಎಲ್ಲೇ ಹೋದರೂ ಮಗಳು ಆರಾಧ್ಯಾಳನ್ನು ಜೊತೆಗೆ ಕರ್ಕೊಂಡ್ ಹೋಗ್ತಾರೆ.

ಇನ್ನು ಇಷ್ಟೆಲ್ಲಾ ಚರ್ಚೆ ಮಧ್ಯೆ ಐಶ್ವರ್ಯಾ ಮೌನ ಮುರಿದಿದ್ರು, ಆರಾಧ್ಯ ನನ್ನ ಮಗಳು ಎನ್ನುವ ಮೂಲಕ ಹೇಟರ್ಸ್‌ಗೆ ಟಕ್ಕರ್ ಕೊಟ್ಟಿದ್ದಾರೆ. ಹೌದು, ಐಶ್ವರ್ಯಾ ಎಲ್ಲೇ ಹೋದ್ರೂ ಅಲ್ಲಿ ಮಗಳು ಆರಾಧ್ಯ ಜೊತೆಗಿರುತ್ತಾಳೆ. ಹೀಗಾಗಿ ಆರಾಧ್ಯ ಯಾವಾಗಲೂ ಹೀಗೆ ಊರು ಸುತ್ತುತ್ತಾ ಇದ್ರೆ ಸ್ಕೂಲ್‌ಗೆ ಹೋಗೋದು ಯಾವಾಗ? ಆರಾಧ್ಯ ಬಾಲ್ಯ ದಿನಗಳನ್ನು ಐಶ್ವರ್ಯಾ ಹಾಳು ಮಾಡುತ್ತಿದ್ದಾರಾ.. ಅವಳು ಯಾವಾಗ ಶಾಲೆಗೆ ಹೋಗುತ್ತಾಳೆ? ತಾಯಿಯ ಸ್ವಾರ್ಥಕ್ಕೆ ಆರಾಧ್ಯ ಶಾಲೆ ಬಿಟ್ರಾ? ಮಗಳನ್ನ ಹೀಗೆ ಎಲ್ಲೆಂದರಲ್ಲಿ ಕರ್ಕೊಂಡು ಹೋಗುವಾಗ ಅಭಿಷೇಕ್‌ ಪ್ರಶ್ನೆ ಮಾಡಲ್ವಾ? ಯಾಕೆ ಸುಮ್ಮನಿದ್ದಾರೆ ಅನ್ನೋ ಟಾಕ್‌ ಕೂಡ ಶುರುವಾಗಿತ್ತು.. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು.. ಆದ್ರೆ ಈ ಎಲ್ಲಾ ಚರ್ಚೆಗೆ ಐಶ್‌ ಬ್ರೇಕ್‌ ಹಾಕಿದ್ದಾರೆ.. ಅಬುದಾಬಿಯಲ್ಲಿ ನಡೆದ ಐಫಾ ಸಮಾರಂಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಿಯಾಕ್ಟ್ ಮಾಡಿದ ಐಶ್, ಆರಾಧ್ಯ ನನ್ನ ಮಗಳು.. ನನ್ನ ಮಗಳ ಉಸಾಬರಿ ನಿಮಗೇಕೆ ಅಂತ ನಗುತ್ತಲೇ ಐಶ್‌ ಪ್ರಶ್ನಿಸಿದ್ದಾರೆ.

ಇನ್ನು ಐಶ್‌ ಮಗಳು ಹೀಗೆ ದೇಶ ಸುತ್ತಿದ್ರೆ ಸ್ಕೂಲ್‌ ಕತೆ ಏನು? ಸ್ಕೂಲ್‌ ಬಿಡ್ಸಿದ್ದಾರಾ ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡೋದು ಸಹಜ.. ಆದ್ರೆ ಆರಾಧ್ಯ ಸ್ಕೂಲ್‌ ಬಿಟ್ಟಿಲ್ಲ.. ಎಲ್ಲಾ ಮಕ್ಕಳಂತೆ ಸ್ಕೂಲ್‌ ಗೆ ಹೋಗ್ತಾರೆ.. ಐಶ್ವರ್ಯ ಮಗಳನ್ನ ಕರ್ಕೊಂಡು ಹೋಗೋ ಮುನ್ನ ಆಕೆಯ ಕ್ಲಾಸ್‌ ಗೆ ಏನು ತೊಂದರೆ ಆಗದಂತೆ ಪ್ಲ್ಯಾನ್‌ ಮಾಡ್ತಾರೆ.. ಈ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ..  ಎಲ್ಲಾದ್ರೂ ಹೋಗೋ ಮುನ್ನ ನಾನು ಎಲ್ಲಾ ಪ್ಲ್ಯಾನ್‌ ಗಳನ್ನ ಮುಂಚೆಯೇ ಮಾಡಿಕೊಳ್ಳುತ್ತೇನೆ. ಮಗಳ ಶಾಲೆಯನ್ನು ಗಮನದಲ್ಲಿಟ್ಟುಕೊಂಡು ಜೆಟ್‌ ಲ್ಯಾಗ್‌ ಆಗದ ರೀತಿಯಲ್ಲಿ ಟ್ರಾವೆಲ್ ಪ್ಲಾನ್‌ ಮಾಡಿಕೊಳ್ಳುತ್ತೇನೆ ಎಂದು ನಟಿ ಹೇಳಿದ್ದಾರೆ.

ಹೀಗೆ ಐಶ್ವರ್ಯ ರೈ ಮಗಳ ವಿಚಾರವಾಗಿ ಎಲ್ಲರ ಬಾಯಿಗೆ ಆಹಾರ ಆಗಿದ್ದಾರೆ.. ಆದ್ರೆ ಸೆಲೆಬ್ರಿಟಿಗಳು ಅಂದ್ಮೇಲೆ ಇದೆಲ್ಲಾ ಕಾಮನ್..‌ ಕೆಲವೊಂದು ಬಾರಿ ಮಕ್ಕಳನ್ನ ಕರ್ಕೊಂಡು ಹೋಗ್ಬೇಕಾಗುತ್ತೆ.. ಮನೆಯಲ್ಲೇ ಬಿಟ್ಟು ಹೋಗೋ ಪರಿಸ್ಥಿತಿನೂ ಬರುತ್ತೆ.. ಆದ್ರೆ ಐಶ್‌ ಯಾವುದೇ ಕಾರಣಕ್ಕೂ ಮಗಳ ವಿದ್ಯಾಭ್ಯಾಸಕ್ಕೇನೂ ತೊಂದರೆ ಕೊಡ್ತಾ ಇಲ್ಲ..

Shwetha M