IPLನಲ್ಲಿ 24 ಕೋಟಿಯ ಕಾಸ್ಟ್ಲಿ ಪ್ಲೇಯರ್ – 1 to 17 ಸೀಸನ್.. ದುಬಾರಿ ಆದವರೆಷ್ಟು?
RCB ಖರೀದಿಸಿದ ಸ್ಟಾರ್ಸ್ ಯಾರು?

IPLನಲ್ಲಿ 24 ಕೋಟಿಯ ಕಾಸ್ಟ್ಲಿ ಪ್ಲೇಯರ್ – 1 to 17 ಸೀಸನ್.. ದುಬಾರಿ ಆದವರೆಷ್ಟು?RCB ಖರೀದಿಸಿದ ಸ್ಟಾರ್ಸ್ ಯಾರು?

ಜಗತ್ತಿನ ಅತೀ ಶ್ರೀಮಂತ ಲೀಗ್ ಅಂತಾನೇ ಕರೆಸಿಕೊಳ್ಳೋ ಐಪಿಎಲ್​ನಲ್ಲಿ ಈಗ ಕೋಟಿಗಳಿಗೆ ಲೆಕ್ಕವೇ ಇಲ್ಲ. 2024ರ ಟೂರ್ನಿಯಂತೂ ಬಿಸಿಸಿಐಗೆ ಹಣದ ಹೊಳೆಯನ್ನೇ ಹರಿಸಿದೆ. ಆಟಗಾರರೂ ಕೂಡ ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. 17 ಸೀಸನ್​ಗಳನ್ನ ಕಂಡಿರೋ ಐಪಿಎಲ್ ಟೂರ್ನಿ ಡೇ ಒನ್​ನಿಂದಲೂ ಆಟಗಾರರಿಗೆ ದುಬಾರಿ ಹಣವನ್ನೇ ಸುರಿಯುತ್ತಾ ಬಂದಿದೆ. ಸೋ 2008ರಿಂದ ಯಾವೆಲ್ಲಾ ಪ್ಲೇಯರ್ಸ್ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ..? 17 ಆವೃತ್ತಿಗಳಲ್ಲಿ ಆಯಾ ಸೀಸನ್​ನ ದುಬಾರಿ ಆಟಗಾರ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊಹ್ಲಿ ಬಳಸೋ ಬ್ಯಾಟ್ ರೇಟ್ ಇಷ್ಟೊಂದ? – 11 ಲಕ್ಷ ಬೆಲೆಯ ಬ್ಯಾಟ್ ಬಳಸೋದ್ಯಾರು?

2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜಿಗೆ ಕೆಲ ವಾರಗಳಷ್ಟೇ ಬಾಕಿ ಇದೆ. ಮೆಗಾ ಆಕ್ಷನ್ ಇರೋದ್ರಿಂದ ಸ್ಟಾರ್ ಆಟಗಾರರು ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2024 ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 24.75 ಕೋಟಿ ರೂಪಾಯಿ ಖರೀದಿ ಮಾಡಿತ್ತು. ಈ ಮೂಲಕ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ.  ಸೋ ಈ ವರ್ಷ ಹಿಂದಿನ ಎಲ್ಲಾ ರೆಕಾರ್ಡ್ಸ್ ಕೂಡ ಬ್ರೇಕ್ ಆಗೋ ಚಾನ್ಸಸ್ ಇದೆ. ಅಷ್ಟಕ್ಕೂ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಭಾರತದ ಪರ ದುಬಾರಿ ಕ್ರಿಕೆಟಿಗ ಎನಿಸಿದರು ಯಾರು? 2008 ರಿಂದ 2024ರವರೆಗೂ ಪ್ರತಿ ಆವೃತ್ತಿಯಲ್ಲೂ ದುಬಾರಿ ಆಟಗಾರ ಎನಿಸಿಕೊಂಡವರು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಐಪಿಎಲ್ ನ ದುಬಾರಿ ಆಟಗಾರರು !  

2008ರಲ್ಲಿ ಮಹೇಂದ್ರ ಧೋನಿ ಅವ್ರನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 9.5 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಐಪಿಎಲ್ ಆರಂಭವಾದ ಅತೀ ಹೆಚ್ಚು ಬೆಲೆಗೆ ಹರಾಜಾಗಿದ್ದ ಆಟಗಾರ ಧೋನಿಯೇ ಆಗಿದ್ರು. ಇನ್ನು 2009ರಲ್ಲಿ ಇಬ್ಬರು ಪ್ಲೇಯರ್ಸ್ ಅತೀ ಹೆಚ್ಚು ಬೆಲೆಗೆ ಸೇಲ್ ಆಗಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆವಿನ್ ಪೀಟರ್ಸನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಂಡ್ರ್ಯೂ ಫ್ಲಿಂಟಾಫ್​ಗೆ ತಲಾ 9.8 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. 2010ರಲ್ಲೂ ಕೂಡ ಹೀಗೇ ಆಗಿತ್ತು. ಕೆಕೆಆರ್ ತಂಡಕ್ಕೆ ಶೇನ್ ಬಾಂಡ್, ಮುಂಬೈ ಇಂಡಿಯನ್ಸ್​ಗೆ ಕೀರಾನ್ ಪೊಲಾರ್ಡ್ 4.8 ಕೋಟಿ ರೂಪಾಯಿಗೆ ಹರಾಜಾಗಿದ್ರು. ಇನ್ನು 2011 ರಲ್ಲಿ ಗೌತಮ್ ಗಂಭೀರ್ ಅವ್ರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 14.9 ಕೋಟಿ ನೀಡಿದ್ರೆ 2012ರಲ್ಲಿ  ರವೀಂದ್ರ ಜಡೇಜಾರನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡವು 12.8 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.

ಹಾಗೇ 2013ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್​ಗೆ ಮುಂಬೈ ಇಂಡಿಯನ್ಸ್ 6.3 ಕೋಟಿ ನೀಡಿದ್ರೆ 2014ರಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವ್ರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 14 ಕೋಟಿ ನೀಡಿ ಖರೀದಿ ಮಾಡಿತ್ತು. ಬಟ್ 2015ರಲ್ಲಿ ಅದೇ ಯುವರಾಜ್ ಸಿಂಗ್ ಹರಾಜಿಗೆ ಬಂದು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 16 ಕೋಟಿ ಪಡೆದು ಜಾಯ್ನ್ ಆಗಿದ್ರು. 2016ರಲ್ಲಿ ಶೇನ್ ವ್ಯಾಟ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರಲು 9.5 ಕೋಟಿ ರೂಪಾಯಿ ಪಡೆದಿದ್ರು. 2017 ಬೆನ್ ಸ್ಟೋಕ್ಸ್ ರೈಸಿಂಗ್ ಪುಣೆ ಸೂಪರ್ ಜೈಂಟ್ ಗೆ 14.5 ಕೋಟಿ ಪಡೆದು ಅತೀ ದುಬಾರಿ ಆಟಗಾರ ಎನಿಸಿಕೊಂಡಿದ್ರು. ಆದ್ರೆ ಮರುವರ್ಷವೇ ತಂಡದಿಂದ ರಿಲೀಸ್ ಆಗಿ 2018ರಲ್ಲಿ ರಾಜಸ್ಥಾನ್ ರಾಯಲ್ಸ್​ಗೆ 12.5 ಕೋಟಿ ರೂಪಾಯಿಗೆ ಹರಾಜಾಗಿದ್ರು. ಆ ವರ್ಷ ಬೆನ್ ಸ್ಟೋಕ್ಸ್ ಕಾಸ್ಲ್ಪಿ ಪ್ಲೇಯರ್ ಆಗಿದ್ರು. ಇನ್ನು 2019 ಜಯದೇವ್ ಉನದ್ಕತ್​ಗೆ ರಾಜಸ್ಥಾನ ರಾಯಲ್ಸ್ ಹಾಗೇ ವರುಣ್ ಚಕ್ರವರ್ತಿಗೆ ಕಿಂಗ್ಸ್ XI ಪಂಜಾಬ್ ತಲಾ 8.4 ಕೋಟಿ ರೂಪಾಯಿ ನೀಡಿತ್ತು. 2020 ಪ್ಯಾಟ್ ಕಮ್ಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ 15.5 ಕೋಟಿ ಪಡೆದ್ರೆ 2021 ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ ಸೇರಲು 16.25 ಕೋಟಿ ರೂಪಾಯಿ ಜೇಬಿಗಿಳಿಸಿಕೊಂಡಿದ್ರು. 2022 ರಲ್ಲಿ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಅತೀ ದುಬಾರಿ ಆಟಗಾರನಾಗಿದ್ರು. 15.25 ಕೋಟಿಗೆ ಹರಾಜಾಗಿದ್ರು. 2023ರಲ್ಲಿ ಸ್ಯಾಮ್ ಕರನ್​ಗೆ ಪಂಜಾಬ್ ಕಿಂಗ್ಸ್ 18.5 ಕೋಟಿ ನೀಡಿ ಕೊಂಡು ಕೊಂಡಿತ್ತು. ಬಟ್ 2024ರಲ್ಲಂತೂ ಐಪಿಎಲ್​ನ ದಾಖಲೆಗಳೇ ಛಿದ್ರವಾಗಿದ್ವು. ಮಿಚೆಲ್ ಸ್ಟಾರ್ಕ್ ರನ್ನ ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿ ನೀಡುವ ಮೂಲಕ ಐತಿಹಾಸಿಕ ಬೆಲೆಗೆ ಖರೀದಿ ಮಾಡಿತು.

ಹೀಗೆ ಐಪಿಎಲ್ ಆರಂಭವಾದ ವರ್ಷದಿಂದಲೇ ಆಟಗಾರರು ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ. ಕಳೆದ ವರ್ಷವಂತೂ ಹಿಂದಿನ ದಾಖಲೆಗಳೆಲ್ಲಾ ಬ್ರೇಕ್ ಆಗಿರೋದ್ರಿಂದ 2025ರ ಮೆಗಾ ಹರಾಜಿನಲ್ಲಿ 30 ಕೋಟಿಯ ಆಸುಪಾಸಿನಲ್ಲಿ ಆಟಗಾರರ ಮೇಲೆ ಬಿಡ್ಡಿಂಗ್ ನಡೆಯೋ ಚಾನ್ಸಸ್ ಇದೆ.

Shwetha M

Leave a Reply

Your email address will not be published. Required fields are marked *