ಕೊಹ್ಲಿ ಬಳಸೋ ಬ್ಯಾಟ್ ರೇಟ್ ಇಷ್ಟೊಂದ? – 11 ಲಕ್ಷ ಬೆಲೆಯ ಬ್ಯಾಟ್ ಬಳಸೋದ್ಯಾರು?
ಕ್ರಿಕೆಟರ್ಸ್ ಬಗೆಗಿನ ರೋಚಕ ರಹಸ್ಯ

ಕೊಹ್ಲಿ ಬಳಸೋ ಬ್ಯಾಟ್ ರೇಟ್ ಇಷ್ಟೊಂದ? – 11 ಲಕ್ಷ ಬೆಲೆಯ ಬ್ಯಾಟ್ ಬಳಸೋದ್ಯಾರು?ಕ್ರಿಕೆಟರ್ಸ್ ಬಗೆಗಿನ ರೋಚಕ ರಹಸ್ಯ

ನೂರಾರು ಕ್ರೀಡೆಗಳಿವೆ. ಸಾವಿರಾರು ಬಗೆ ಆಟಗಳಿವೆ. ಬಟ್ ಭಾರತದಲ್ಲಿ ಕ್ರಿಕೆಟ್​ಗೆ ಇರುವಷ್ಟು ಕ್ರೇಜ್ ಮತ್ಯಾವ ಕ್ರೀಡೆಗೂ ಇಲ್ಲ. ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ತಂದುಕೊಟ್ಟ ಅದೆಷ್ಟೋ ಗೇಮ್ಸ್ ಕೂಡ ಸದ್ದು ಮಾಡಲ್ಲ.  ಜಗತ್ತಿನ ಎರಡನೇ ಅತಿ ಜನಪ್ರಿಯ ಆಟವಾಗಿರೋ ಕ್ರಿಕೆಟ್ ನಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವೆ. ಅದ್ರಲ್ಲೂ ಒಬ್ಬ ಆಟಗಾರನಿಗೆ ಜಗದ್ವಿಖ್ಯಾತಿ ತಂದು ಕೊಡುವ ಬ್ಯಾಟ್ ಬಗ್ಗೆ ನಿಮಗೆ ಅಚ್ಚರಿ ಮೂಡಿಸೋ ರಹಸ್ಯಗಳಿವೆ. ಫ್ಯಾನ್ಸ್ ಕೂಡ ತಮ್ಮಿಷ್ಟದ ಪ್ಲೇಯರ್ ಬಳಸೋ ಬ್ಯಾಟ್ ಬಗ್ಗೆ ಜಾಸ್ತಿ ಕ್ಯೂರಿಯಸ್ ಆಗಿರ್ತಾರೆ. ಜಗತ್ಪ್ರಸಿದ್ಧ ಕ್ರೀಡೆಯಲ್ಲಿ ದಾಂಡಿಗರು ಬಳಸುವ ಬ್ಯಾಟ್​ಗಳನ್ನು ಹೇಗೆ ತಯಾರಿಸುತ್ತಾರೆ. ಯಾವ ಮರದ ಕಟ್ಟಿಗೆಯನ್ನು ಬಳಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗನ ಕೈಯಲ್ಲಿರುವ ಬ್ಯಾಟ್​ನ ಬೆಲೆ ಎಷ್ಟು ಹೀಗೆ ಒಂದಷ್ಟು ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಎಂ ಏನು ದೆವ್ವಾನಾ ನಾನು ಹೆದರೋಕೆ – ಸಿದ್ದರಾಮಯ್ಯಗೆ ಹೆಚ್‌ಡಿಕೆ ತಿರುಗೇಟು

ಕ್ರಿಕೆಟ್​ ವಿಶ್ವದ ಮೋಸ್ಟ್ ಪಾಪ್ಯುಲರ್ ಕ್ರೀಡೆಗಳಲ್ಲಿ ಒಂದು. ಇಂಗ್ಲೆಂಡ್​ನಲ್ಲಿ ಹುಟ್ಟಿದ್ರೂ ಕೂಡ ಭಾರತದಲ್ಲಿ ಅತೀ ಹೆಚ್ಚು ಪ್ರಸಿದ್ದಿ ಪಡ್ಕೊಂಡಿದೆ. ಅಷ್ಟೇ ಅಲ್ಲ ಶ್ರೀಮಂತ ಕ್ರೀಡೆ ಆಗಿಯೂ ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿದೆ. ಇಂಥ ಆಟದಲ್ಲಿ ಬಳಸೋ ಬ್ಯಾಟ್ ಬಗ್ಗೆ ಕೂಡ ಕುತೂಹಲಕಾರಿ ಅಂಶಗಳಿವೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಎರಡು ಬಗೆಯ ಬ್ಯಾಟ್​ಗಳನ್ನು ಬಳಕೆ ಮಾಡಲಾಗುತ್ತೆ. ಇವುಗಳನ್ನು ಕಾಶ್ಮೀರಿ ವಿಲೋ ಮತ್ತು ಇಂಗ್ಲಿಷ್ ವಿಲೋ ಎಂದು ಕರೆಯಲಾಗುತ್ತದೆ. ಈ ಎರಡೂ ಬ್ಯಾಟ್​ಗಳಿಗೆ ಬಳಸಲಾಗುವ ಮರ ಮಾತ್ರ ಒಂದೇ. ಅದಕ್ಕೆ ವಿಲೋ ಅಂತಾರೆ. ಈ ಮರದ ಕಟ್ಟಿಗೆಯಿಂದಲೇ ಬ್ಯಾಟ್​​ ತಯಾರಾಗುತ್ತೆ. ವಿಲೋ ಮರಗಳನ್ನು ಭಾರತದ ಕಾಶ್ಮೀರ ಮತ್ತು ಇಂಗ್ಲೆಂಡ್​ನಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತೆದೆ. ವಿಶೇಷ ಅಂದ್ರೆ ಈ ಎರಡು ಪ್ರದೇಶಗಳು ಮಾತ್ರ ವಿಲೋ ಮರ ಬೆಳೆಯಲು ಅತ್ಯುತ್ತಮ ಪ್ರದೇಶಗಳಾಗಿವೆ. ಸೋ ಇಂಥಾ ಮರದಿಂದ ತಯಾರಾಗೋ ಬ್ಯಾಟ್​ಗಳಿಗೆ ಬಂಗಾರದ ಬೆಲೆಯೂ ಇದೆ.

11 ಲಕ್ಷ ರೂಪಾಯಿ ಬೆಲೆಯ ಬ್ಯಾಟ್ ಬಳಸುತ್ತಿದ್ರು ರಿಚರ್ಡ್ಸ್!

ಸರ್ವಶ್ರೇಷ್ಠ ಕ್ರಿಕೆಟ್​ ದಿಗ್ಗಜ ಅಂತಾನೇ ಕರೆಸಿಕೊಳ್ಳೋ ಆಟಗಾರ ವೆಸ್ಟ್​ ಇಂಡಿಸ್​ನ ಸರ್​ ವಿವಿಯನ್​ ರಿಚರ್ಡ್ಸ್​. ಕ್ರಿಕೆಟ್​ ಲೋಕದಲ್ಲಿ ಹಲವಾರು ದಾಖಲೆ​ಗಳನ್ನು ಬರೆದಿರುವ ಶ್ರೇಷ್ಠ ಆಟಗಾರರೂ ಗಹೌದು. ಈ ಲೆಜೆಂಡರಿ ಪ್ಲೇಯರ್ ಕ್ರಿಕೆಟ್​ನಲ್ಲಿ ಗ್ರೇ-ನಿಕೋಲ್ಸ್​ ಲೆಜೆಂಡ್​ ಗೋಲ್ಡ್​ ಹೆಸರಿನ ದುಬಾರಿ ಬ್ಯಾಟ್​ ಬಳಸುತ್ತಿದ್ದರು.  ಇಂಗ್ಲಿಷ್​ ವಿಲ್ಲೊ ಕಟ್ಟಿಗೆಯಿಂದ ತಯಾರಿಸುವ ಈ ಬ್ಯಾಟ್​ನ ಬೆಲೆ 14,000 ಡಾಲರ್​​ ಆಗಿತ್ತು. ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಪ್ರಸ್ತುತ 11,74,339 ರೂಪಾಯಿ. ಕ್ರಿಕೆಟ್​ನಲ್ಲಿ ಇಷ್ಟು ಕಾಸ್ಟ್ಲಿ ಬ್ಯಾಟ್ ಬಳಸಿರೋದು ರಿಚರ್ಸ್ಸ್ ಒಬ್ರೇ. ಹಾಗೇ ಆಸ್ಟ್ರೇಲಿಯಾದ ಟಾಪ್​ ಬ್ಯಾಟರ್​ ಸ್ಟೀವ್​ ಸ್ಮಿತ್​ ಕೂಡ ಕ್ರಿಕೆಟ್​ನಲ್ಲಿ ದುಬಾರಿ ಬೆಲೆಯ ಬ್ಯಾಟ್​ ಬಳಸುತ್ತಾರೆ. ಇವರು NB ಅಂದ್ರೆ ನ್ಯೂ ಬಾಲೆನ್ಸ್ ಹೆಸರಿನ ಬ್ಯಾಟ್​ ಬಳಸುತ್ತಿದ್ದು, ಇದರ ಬೆಲೆ 11 ಲಕ್ಷ ರೂಪಾಯಿಗೂ ಅಧಿಕವಾಗಿದೆ.

ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಬ್ಯಾಟ್ ಬೆಲೆ ಎಷ್ಟು?

ಯುನಿವರ್ಸಲ್ ಬಾಸ್ ಅಂತಾನೇ ಕರೆಸಿಕೊಳ್ಳೋ ದೈತ್ಯ ದಾಂಡಿಗ ಕ್ರಿಸ್ ಗೇಸ್ ಬ್ಯಾಟಿಂಗ್ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇರುತ್ತೆ. ನಿಂತಲ್ಲೇ ಸ್ಟೇಡಿಯಂ ಆಚೆಗೂ ಬಾಲ್ ಅಟ್ಟುವ ಸಾಮರ್ಥ್ಯ ಅವ್ರಲ್ಲಿದೆ. ಸೋ ಇಂತಾ ಗೇಲ್ ಬಳಸೋ ಬ್ಯಾಟ್ ಬಗ್ಗೆಯೂ ಕೆಲವ್ರಿಗೆ ಕುತೂಹಲ ಇದೆ.​ ತಮ್ಮ ಸ್ಪೋಟಕ್​ ಬ್ಯಾಟಿಂಗ್​ನಿಂದಲೇ ಕ್ರಿಕೆಟ್​ನಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಗೇಲ್, ಐಪಿಎಲ್​ನಲ್ಲಿ ಅತೀ ಹೆಚ್ಚು ರನ್ ಅಂದ್ರೆ 175 ರನ್ ಗಳಿಸಿದ್ರು. ಈ ರೆಕಾರ್ಡ್ ಈಗಲೂ ಗೇಲ್ ಹೆಸ್ರಲ್ಲೇ ಇದೆ. ಈ ದೈತ್ಯ ಬ್ಯಾಟರ್​ ಕ್ರಿಕೆಟ್​ನಲ್ಲಿ Spartan ಹೆಸರಿನ ಬ್ಯಾಟ್​ ಬಳಸಿದ್ದು ಇದರ ಬೆಲೆ 1 ಲಕ್ಷ ರೂಪಾಯಿ ಆಗಿದೆ.

ಭಾರತೀಯರ ಪೈಕಿ ಹಾರ್ದಿಕ್ ಪಾಂಡ್ಯ ಬಳಸುವ ಬ್ಯಾಟ್ ದುಬಾರಿ!

ಇನ್ನು ಭಾರತೀಯರ ಪೈಕಿ ಅತೀ ಹೆಚ್ಚು ದುಬಾರಿ ಬೆಲೆಯ ಬ್ಯಾಟ್ ಯಾರು ಬಳಸ್ತಾರೆ ಅನ್ನೋ ಬಗ್ಗೆ ನಿಮ್ಗೆಲ್ಲಾ ಪ್ರಶ್ನೆ ಇರಬಹುದು. ಇದಕ್ಕೆ ಉತ್ತರ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಕಳೆದ ಟಿ-20 ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಾಮಡ್ಯ ಶ್ರೀಮಂತ ಕ್ರಿಕೆಟರ್​ಗಳಲ್ಲಿ ಒಬ್ಬರು. ಹಾರ್ದಿಕ್​ ಪಾಂಡ್ಯ ದುಬಾರಿ ಬೆಲೆಯ ಕಾರು, ಬಂಗ್ಲೆ ಮಾತ್ರವಲ್ಲದೇ ಬ್ಯಾಟ್​ ಕೂಡ ಹೊಂದಿದ್ದಾರೆ. ವರದಿಗಳ ಪ್ರಕಾರ ಹಾರ್ದಿಕ್​ ಪಾಂಡ್ಯ ಕ್ರಿಕೆಟ್​ನಲ್ಲಿ SG ಅಂದ್ರೆ ಸಾನ್ಸ್ಪೇರಿಲ್ ಗ್ರೀನ್ಲ್ಯಾಂಡ್ಸ್ ಹೆಸರಿನ ಬ್ಯಾಟ್​ ಬಳಸುತ್ತಾರೆ. ಇದರ ಬೆಲೆ 1,79,999 ರೂ ಆಗಿದೆ.

ವಿರಾಟ್ ಕೊಹ್ಲಿ, ಸೂರ್ಯ ಬಳಸುವ ಬ್ಯಾಟ್ ಕಾಸ್ಟ್ಲಿ

ಟೀಂ ಇಂಡಿಯಾದ ರನ್​ ಮಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿಯೂ ಕ್ರಿಕೆಟ್​ನಲ್ಲಿ ದುಬಾರಿ ಬೆಲೆಯ ಬ್ಯಾಟ್​ ಬಳಸುವ ಆಟಗಾರರಾಗಿದ್ದಾರೆ. ಇವರು ಬಳಸುವ ಬ್ಯಾಟ್​ MRF ಹೆಸರಿನದಾಗಿದ್ದು ಇದು 77 ಸಾವಿರ ರೂಪಾಯಿದ್ದಾಗಿದೆ.  ಹಾಗೇ ಭಾರತದ ಸ್ಪೋಟಕ ಬ್ಯಾಟರ್​ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಕೂಡ ಹೆಚ್ಚಿನ ಬೆಲೆಯ ಬ್ಯಾಟ್​ ಬಳಸುತ್ತಾರೆ. ಇವರು SS ಹೆಸರಿನ 92 ಸಾವಿರ ಬೆಲೆಯ ಬ್ಯಾಟ್​ ಬಳಕೆ ಮಾಡುತ್ತಾರೆ.

ಇನ್ನು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​​ ಡೆವಿಡ್​ ವಾರ್ನರ್​ ಕೂಡ ದುಬಾರಿ ಬೆಲೆಯ ಬ್ಯಾಟ್​ ಬಳಸುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಇವರು Delux Sports Company ಹೆಸರಿನ 95 ಸಾವಿರ ರೂ ಬೆಲೆಯ ಬ್ಯಾಟ್​ ಬಳಸುತ್ತಾರೆ. ಅಲ್ಲದೇ ಇಂಗ್ಲೆಂಡ್​ನ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಕೂಡ ಇದೆ ಬೆಲೆಯ GM ಹೆಸರಿನ ಬ್ಯಾಟ್​ ಉಪಯೋಗಿಸುತ್ತಾರೆ. ಇಂಗ್ಲೆಂಡ್​ನ ಸ್ಟಾರ್​ ಬ್ಯಾಟರ್​ ಜೋಸ್​ ಬಟ್ಲರ್​ ಕೂಡ ದುಬಾರಿ ಬೆಲೆಯ ಬ್ಯಾಟ್​ ಬಳಸುತ್ತಾರೆ. ಇವರು Kookaburra ಹೆಸರಿನ ಬ್ಯಾಟ್​ ಬಳಸುತ್ತಿದ್ದು ಇದರ ಬೆಲೆ 97 ಸಾವಿರ ರೂ ಆಗಿದೆ.

ಒಟ್ನಲ್ಲಿ ಕ್ರಿಕೆಟ್​ನಲ್ಲಿ ಆಟಗಾರರಂತೆಯೇ ಅವ್ರ ಬ್ಯಾಟ್​ಗಳಿಗೂ ಕೂಡ ತುಂಬಾನೇ ಡಿಮ್ಯಾಂಡ್ ಇದೆ. ಅದ್ರಲ್ಲೂ ಕೆಲ ಪ್ಲೇಯರ್ಸ್ ತಮ್ಮಿಷ್ಟದ ಪ್ಲೇಯರ್​ನಿಂದ ಬ್ಯಾಟ್​ನ್ನು ಗಿಫ್ಟ್ ಆಗಿ ಪಡೆಯುತ್ತಿದ್ದಾರೆ. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿಯಂತೂ ಈ ಲಿಸ್ಟ್​ನಲ್ಲಿ ಟಾಪ್​ನಲ್ಲಿದ್ದಾರೆ. ದೇಶೀಯ ಆಟಗಾರರು ಮತ್ತು ವಿದೇಶಿ ಪ್ಲೇಯರ್ಸ್ ಕೂಡ ವಿರಾಟ್ ಬಳಿ ಬ್ಯಾಟನ್ನು ಉಡುಗೊರೆಯಾಗಿ ಪಡೆಯುತ್ತಾರೆ. ಮೈದಾನದಲ್ಲಿ ಒಬ್ಬ ಆಟಗಾರನ ಸಾಮರ್ಥ್ಯವನ್ನ ಹೊರತರುವ ಬ್ಯಾಟ್ ಕಾಣಿಕೆಯಾಗಿಯೂ ಅವ್ರ ಮನೆ, ಮನಗಳನ್ನ ಸೇರುತ್ತಿರೋದು ವಿಶೇಷ.

Shwetha M

Leave a Reply

Your email address will not be published. Required fields are marked *