ನವರಾತ್ರಿ ಮೊದಲ ದಿನವೇ ಗುಡ್​ನ್ಯೂಸ್ ಕೊಟ್ಟ ಭುವನ್ ದಂಪತಿ – ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ

ನವರಾತ್ರಿ ಮೊದಲ ದಿನವೇ ಗುಡ್​ನ್ಯೂಸ್ ಕೊಟ್ಟ ಭುವನ್ ದಂಪತಿ – ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ

ಸ್ಯಾಂಡಲ್‌ ವುಡ್‌ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ನವರಾತ್ರಿಯ ಮೊದಲ ದಿನವೇ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಗುರುವಾರ ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ:  ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಬಿಎಂಆರ್‌ಸಿಎಲ್‌ –  ನಮ್ಮ ಮೆಟ್ರೋ ದರ ಏರಿಕೆ?

ಸೆಪ್ಟೆಂಬರ್ 3 ರಂದು ಬೆಳಗಿನ ಜಾವ 3ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಹರ್ಷಿಕಾ ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಈ ಖುಷಿ ಸುದ್ದಿಯನ್ನು ದಂಪತಿ ರಿವೀಲ್ ಮಾಡಿದ್ದಾರೆ. ದಂಪತಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಹರ್ಷಿಕಾಗೆ ಜನಿಸಿರೋದು ಹೆಣ್ಣುಮಗು. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿದೆ ಅನ್ನೋದು ಕುಟುಂಬದ ಖುಷಿ ಹೆಚ್ಚಿಸಿದೆ. ಮಗುವಿಗೆ ದುರ್ಗೆಯ ಹೆಸರನ್ನೇ ಇಡುತ್ತಾರಾ ಎನ್ನುವ ಕುತೂಹಲ ಇದೆ.

Shwetha M

Leave a Reply

Your email address will not be published. Required fields are marked *