CSKಗೆ ಬೇಡ್ವಾ ಅನ್ ಕ್ಯಾಪ್ಡ್ ರೂಲ್ಸ್? – 18ನೇ ಸೀಸನ್ IPLಗಿಲ್ವಾ ಧೋನಿ?
ಫ್ರಾಂಚೈಸಿ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್ 

CSKಗೆ ಬೇಡ್ವಾ ಅನ್ ಕ್ಯಾಪ್ಡ್ ರೂಲ್ಸ್? – 18ನೇ ಸೀಸನ್ IPLಗಿಲ್ವಾ ಧೋನಿ?ಫ್ರಾಂಚೈಸಿ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್ 

ಐಪಿಎಲ್​ಗೆ ಬಿಸಿಸಿಐ ಹರಾಜು ನಿಯಮ ಪ್ರಕಟ ಮಾಡಿದ ಮೇಲೆ ಅನ್ ಕ್ಯಾಪ್ಡ್ ಪ್ಲೇಯರ್ ರೂಲ್ಸ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್​ಗೆ ಈ ನಿಮಯ ಪ್ಲಸ್ ಆಗಿದೆ. ರೂಲ್ಸ್ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಭಾರತದ ಪರ ಆಡದ ಯಾವುದೇ ಕ್ರಿಕೆಟಿಗನನ್ನು ಅನ್ ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತೆ. 2020ರ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತರಾಗಿದ್ದ ಧೋನಿ, ಅದಕ್ಕೂ ಮೊದಲು, ಅವರು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಜುಲೈ 2019 ರಲ್ಲಿ ಆಡಿದ್ದರು. ಹೀಗಾಗಿ ಧೋನಿ ಮುಂದಿನ ಸೀಸನ್ ಐಪಿಎಲ್ ಆಡ್ಬೇಕು ಅಂದ್ರೆ ಬಿಸಿಸಿಐ ನಿಯಮದಂತೆ 4 ಕೋಟಿ ಸಂಭಾವನೆ ಪಡೆದು ಅನ್ ಕ್ಯಾಪ್ಡ್ ಪ್ಲೇಯರ್ ಆಗಿ ಕಣಕ್ಕಿಳಿಯಬೇಕು. ಬಟ್ ಕೊಹ್ಲಿ ನೆಕ್ಸ್ಟ್​ ಸೀಸನ್ ಆಡ್ತಾರಾ ಇಲ್ವಾ ಅನ್ನೋ ಬಗ್ಗೆ ಸಿಎಸ್​ಕೆ ಫ್ರಾಂಚೈಸಿ ಮಾಲೀಕ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ – ಇಬ್ಬರು ಸ್ಪರ್ಧಿಗಳ ಜೊತೆ ಧರ್ಮನ ಪ್ರೀತಿ

ಧೋನಿ ಐಪಿಎಲ್ ಆಡಲ್ವಾ?

ಬಿಸಿಸಿಐ ರಿಲೀಸ್ ಮಾಡಿರುವ ಅನ್ ಕ್ಯಾಪ್ಡ್ ಪ್ಲೇಯರ್ ರೂಲ್ಸ್ ನಿಂದ ಧೋನಿ ಹೆಸರು ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ. ಈ ನಿಮಯ ಚೆನ್ನೈ ಸೂಪರ್ ಕಿಂಗ್ಸ್​ ಪಾಲಿಗೆ ವರದಾನ ಎನ್ನಲಾಗಿತ್ತು. 5+1 ರಿಟೈನ್​​ನಿಂದಾಗಿ ಎಮ್​.ಎಸ್.ಧೋನಿ ಮುಂದಿನ ಸೀಸನ್ ಆಡೋದು ಕನ್ಫರ್ಮ್​ ಅನ್ನೋ ಮಾತುಗಳೂ ಕೇಳಿ ಬಂದಿತ್ತು. ಧೋನಿ ಫ್ಯಾನ್ಸ್ ಕೂಡ ಖುಷಿಯಲ್ಲಿದ್ರು. ಬಟ್ ಈಗ ಅಭಿಮಾನಿಗಳೇ ಶಾಕ್ ಆಗುವಂಥ ಸುದ್ದಿ ಹೊರ ಬಿದ್ದಿದೆ. ಚೆನ್ನೈ ಕ್ಯಾಂಪ್​ನಲ್ಲಿ ಧೋನಿಯ ಬಗ್ಗೆ ಫೈನಲ್ ಡಿಸಿಷನ್ ಕೂಡ ತಗೊಂಡಿಲ್ಲ. CSK ಸಿಇಒ ಕಾಸಿ ವಿಶ್ವನಾಥನ್​ಗೇ  ಈ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಧೋನಿ ರಿಟೈನ್​ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದಿರುವ ವಿಶ್ವನಾಥನ್, ನಾವು ಧೋನಿಗೆ ಆ ನಿಯಮ ಬಳಸದೇ ಇರಬಹುದು. ಈ ವಿಚಾರವಾಗಿ ನಾವು ಅವರೊಂದಿಗೆ ಇನ್ನೂ ಚರ್ಚಿಸಿಲ್ಲ. ಧೋನಿ ಅಮೆರಿಕ ಪ್ರವಾಸದಿಂದ ಈಗ ಬಂದಿದ್ದಾರೆ. ಹೀಗಾಗಿ ಮುಂದಿನ ವಾರದಲ್ಲಿ ಈ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದಿದ್ದಾರೆ. ಅಲ್ದೇ ಐಪಿಎಲ್​ನ ಹೊಸ ರೂಲ್ಸ್​ ಜಾರಿಯಾಗಿ ಐದಾರು ದಿನಗಳೇ ಕಳೆದ್ರೂ ಸಿಎಸ್​ಕೆ ಫ್ರಾಂಚೈಸಿ ಧೋನಿ ಜೊತೆ ಈ ಕುರಿತು ಮಾತೇ ಆಡಿಲ್ಲ. ಅನ್​​ಕ್ಯಾಪ್ಡ್​ ರೂಲ್​​ ಬಳಸಲ್ಲ ಎಂದಿರುವ ವಿಶ್ವನಾಥನ್ ನಡೆ ಕುತೂಹಲಕ್ಕೆ ಕಾರಣವಾಗಿದೆ. ಧೋನಿ ಐಪಿಎಲ್‌ನಲ್ಲಿ ಆಡುತ್ತಾರೆ ಎಂದು ನಾವು ಭಾವಿಸುತ್ತೇವೆ. ಧೋನಿ ಅವರೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಧೋನಿ ಐಪಿಎಲ್​ನಲ್ಲಿ ಆಡಬೇಕು ಅನ್ನೋ ಆಸೆ ಚೆನ್ನೈ ಫ್ರಾಂಚೈಸಿಗೆ ಇದೆ. ಎಲ್ಲವೂ ಧೋನಿ ನಿರ್ಧಾರದ ಮೇಲೆಯೇ ಅನ್ನೋದು ಕಾಶಿ ವಿಶ್ವನಾಥನ್ ಮಾತು. ಇದೇ ಮಾತು ಹಲವು ಅನುಮಾನಗಳನ್ನ ಹುಟ್ಟಿಹಾಕಿದೆ.

ಒಟ್ನಲ್ಲಿ ಚೆನ್ನೈನ ಫ್ರಾಂಚೈಸಿಯ ಆಸೆಯಂತೆಯೇ ಹೊಸ ರಿಟೈನ್​ ರೂಲ್ಸ್​​ ಬಂದಿದೆ. ಅನ್​ಕ್ಯಾಪ್ಡ್ ಪ್ಲೇಯರ್​​​ ನಿಮಯದಡಿಯಲ್ಲೇ ಧೋನಿಯನ್ನು ಉಳಿಸಿಕೊಳ್ಳಬಹುದಾಗಿದೆ. ಮುಂದಿನ ಸೀಸನ್​​​​​​​​​​​​ ಆಡುವ ನಿರ್ಧಾರ ಧೋನಿಗೆ ಬಿಟ್ಟಿದ್ದು ಎಂದು ಫ್ರಾಂಚೈಸಿ ಹೇಳಿದೆ. ಕಳೆದೆರಡು ಸೀಸನ್​​ಗಳಿಂದ ಇಂಜುರಿ ಕೂಡ ಧೋನಿಯನ್ನ ಕಾಡ್ತಿದೆ. ಈ ಹಿಂದೆಯೇ ಮಿಸ್ಟರ್ ಕೂಲ್ ಮಾಹಿ, ಅಭಿಮಾನಿಗಳ ಮುಂದೆಯೇ ಕೊನೆ ಪಂದ್ಯವನ್ನಾಡುವ ಬಯಕೆ ವ್ಯಕ್ತಪಡಿಸಿದ್ರು. ಹೀಗಾಗಿ ಫ್ಯಾನ್ಸ್​ಗೆ ಗುಡ್​ ನ್ಯೂಸ್ ನೀಡ್ತಾರೆ ಅನ್ನೋದು ಎಲ್ಲರ ಲೆಕ್ಕಚಾರವಾಗಿದೆ. ಇದು ನಿಜವೇ ಆದ್ರೆ 2025ರ ಐಪಿಎಲ್​ನಲ್ಲಿ ಧೋನಿ ಆಡೋದು ಪಕ್ಕಾ.

Shwetha M

Leave a Reply

Your email address will not be published. Required fields are marked *