ಟೀಂ ಇಂಡಿಯಾಗೆ IPL ಸ್ಟಾರ್ಸ್ – BCCI ರೂಲ್ಸ್ ಫ್ರಾಂಚೈಸಿಗಳಿಗೆ ತಲೆಬಿಸಿ
₹4 ಕೋಟಿ ಬದ್ಲು 14 ಕೋಟಿ ಕೊಡ್ಬೇಕಾ?

ಟೀಂ ಇಂಡಿಯಾಗೆ IPL ಸ್ಟಾರ್ಸ್ – BCCI ರೂಲ್ಸ್ ಫ್ರಾಂಚೈಸಿಗಳಿಗೆ ತಲೆಬಿಸಿ₹4 ಕೋಟಿ ಬದ್ಲು 14 ಕೋಟಿ ಕೊಡ್ಬೇಕಾ?

ಹಿಟ್​ಮ್ಯಾನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಾಂಗ್ಲಾ ಟೆಸ್ಟ್ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದೆ. ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟಿ-20 ಕದನಕ್ಕೆ ರೆಡಿಯಾಗಿದೆ. ವಾರಾಂತ್ಯದಲ್ಲಿ ಶುರುವಾಗಲಿರುವ ಚುಟುಕು ಸಮರಕ್ಕೆ ಟೆಸ್ಟ್ ಸರಣಿಯಲ್ಲಿ ಆಡಿದ ಆಟಗಾರರಿಗೆ ರೆಸ್ಟ್ ನೀಡಲಾಗಿದೆ. ಹಾಗೇ ಐಪಿಎಲ್​ನಲ್ಲಿ ಮಿಂಚಿದ್ದ ಹೊಸ ಪ್ರತಿಭೆಗಳಿಗೆ ಚಾನ್ಸ್ ಕೊಡಲಾಗಿದೆ. ಆದ್ರೆ ಐಪಿಎಲ್​ನ ಆಟಗಾರರು ಟೀಂ ಇಂಡಿಯಾಗೆ ಕಾಲಿಟ್ಟಿರೋದೇ ಫ್ರಾಂಚೈಸಿಗಳ ತಲೆನೋವಿಗೆ ಕಾರಣ ಆಗಿದೆ. ಅರೆ ತಮ್ಮ ತಂಡದ ಆಟಗಾರ ಭಾರತ ತಂಡದಲ್ಲಿ ಆಡಿದ್ರೆ ಇನ್ನೂ ಒಳ್ಳೇದೇ ಅಲ್ವಾ ಅಂತಾ ನಿಮಗೆ ಅನ್ನಿಸ್ಬೋದು. ಬಟ್ ರಿಯಾಲಿಟಿ ಬೇರೆನೇ ಇದೆ. ಜೇಬಿಗೆ ಕತ್ತರಿ ಬೀಳಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ – ಇಬ್ಬರು ಸ್ಪರ್ಧಿಗಳ ಜೊತೆ ಧರ್ಮನ ಪ್ರೀತಿ

ಬಾಂಗ್ಲಾ ವಿರುದ್ಧದ ಟಿ-20 ಸಮರಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಐಪಿಎಲ್ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಸೂರ್ಯಕುಮಾರ್ ಯಾದವ್​ ಈ ತಂಡವನ್ನ ಮುನ್ನಡೆಸುತ್ತಿದ್ದಾರೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6 ರಂದು ಗ್ವಾಲಿಯರ್‌ನಲ್ಲಿ ಆರಂಭ ಆಗಲಿದೆ. ಒಂದ್ಕಡೆ ಭಾರತ-ಬಾಂಗ್ಲಾ ಸರಣಿಗಳ ನಡುವೆಯೇ ಬಿಸಿಸಿಐ ಮುಂದಿನ ಐಪಿಎಲ್​ಗೆ ರಿಟೇನ್​ ನಿಯಮಗಳನ್ನ ಬಿಡುಗಡೆ ಮಾಡಿದೆ. ಕೆಲವು ಹೊಸ ನಿಯಮಗಳನ್ನ ಜಾರಿಗೆ ತಂದಿರೋದ್ರಿಮದ ಕೆಲ ಫ್ರಾಂಚೈಸಿಗಳಿಗೆ ಈ ಸರಣಿ ತಲೆಬಿಸಿ ತಂದಿಟ್ಟಿದೆ. ಟೀಂ ಇಂಡಿಯಾ ಮ್ಯಾಚ್​ಗೂ ಐಪಿಎಲ್​ ಹರಾಜು ಪ್ರಕ್ರಿಯೆಗೂ ಏನು ಸಂಬಂಧ ಅಂತಾ ನಿಮಗೆ ಅನ್ನಿಸ್ಬೋದು. ಬಟ್ ಹರಾಜು ವೇಳೆ ಫ್ರಾಂಚೈಸಿಗಳ ಪರ್ಸ್​ಗೆ ಕತ್ತರಿ ಬೀಳಲಿದೆ.

ಮೂವರ ಮೇಲೆ ಕಣ್ಣು! 

ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡದಲ್ಲಿ 15 ಸದಸ್ಯರನ್ನ ಪ್ರಕಟಿಸಲಾಗಿದೆ. ತಂಡದಲ್ಲಿ ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ಯಾದವ್ ಮತ್ತು ಹರ್ಷಿತ್ ರಾಣಾ ಸ್ಥಾನ ಪಡೆದುಕೊಂಡಿದ್ದಾರೆ. ಬಿಸಿಸಿಐ ರೂಲ್ಸ್ ಪ್ರಕಾರ ಇವರೆಲ್ಲರೂ ಈಗ ಅನ್​ಕ್ಯಾಪ್ಡ್​ ಆಟಗಾರರಾಗಿದ್ದಾರೆ. ಒಂದು ವೇಳೆ ಈ ಮೂವರು ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್​ ಇಲೆವೆನ್​ಗೆ ಚಾನ್ಸ್ ಪಡೆದ್ರೆ ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಜೇಬಿಗೆ ಕತ್ತರಿ ಬೀಳಲಿದೆ. ಅದು ಹೇಗೆ ಅಂದರೆ ನಿತೀಶ್ ಅವರನ್ನು ಎಸ್‌ಆರ್‌ಹೆಚ್, ಮಯಾಂಕ್ ಅವರನ್ನು ಲಕ್ನೋ ಮತ್ತು ಹರ್ಷಿತ್ ಅವರನ್ನು ಕೆಕೆಆರ್ ಅನ್‌ಕ್ಯಾಪ್ಡ್ ಆಟಗಾರರಾಗಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಈ ವೇಳೆ ಮೂವರು ಆಟಗಾರರಿಗೆ ಅವರ ಫ್ರಾಂಚೈಸಿಗಳು ಕೇವಲ 4 ಕೋಟಿ ನೀಡಿದರೆ ಸಾಕು. ಆದರೆ ಈ ಪ್ಲೇಯರ್ಸ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದರೆ ರಿಟೇನ್ ನಿಯಮದ ಪ್ರಕಾರ ಕನಿಷ್ಠ 11 ಕೋಟಿ ರೂಪಾಯಿಯಾದ್ರೂ ಕೊಟ್ಟು ಉಳಿಸಿಕೊಳ್ಬೇಕು. ಇಲ್ಲದಿದ್ರೆ ಹರಾಜಿನಲ್ಲಿ ಆರ್ ಟಿಎಂ ಕಾರ್ಡ್ ಮೂಲಕ ಖರೀದಿ ಮಾಡ್ಬೇಕು. ಈ ಎರಡೂ ಪ್ರಕ್ರಿಯೆಗಳು ಫ್ರಾಂಚೈಸಿಗಳ ಪರ್ಸ್​ ಖಾಲಿ ಮಾಡುತ್ತವೆ. ಫ್ರಾಂಚೈಸಿಗಳು ಐಪಿಎಲ್ ಆಯೋಜಕರಿಗೆ ರಿಟೇನ್​ ಪಟ್ಟಿಯನ್ನು ಸಲ್ಲಿಸಲು ಅಕ್ಟೋಬರ್ 31 ರ ವರೆಗೆ ಅವಕಾಶವಿದೆ. ಆದರೆ ಇದಕ್ಕೂ ಮುನ್ನ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಟಿ20 ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಇನ್ನು ನಿತೀಶ್, ಹರ್ಷಿತ್ ಮತ್ತು ಮಯಾಂಕ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅಸಾಧ್ಯ. ಆದರೆ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಅಂತಿಮ ತಂಡದಲ್ಲಿ ಸ್ಥಾನ ಪಡೆದರೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅಕ್ಟೋಬರ್​ 31ರೊಳಗೆ ಈ ಮೂವರು ಆಟಗಾರರು ಭಾರತ ತಂಡದ ಪರ ಪದಾರ್ಪಣೆ ಮಾಡಿದರೆ ಅವರನ್ನ ಕ್ಯಾಪ್ಡ್ ಪ್ಲೇಯರ್​ಗಳೆಂದು ಪರಿಗಣನೆಗೆ ತೆಗೆದುಕೊಳ್ಳಬೇಕು. ಆಗ 4 ಕೋಟಿಗೆ ಉಳಿಸಿಕೊಳ್ಳುವ ಆಗಿಲ್ಲ. ನೇರವಾಗಿ ಹರಾಜಿಗೆ ಬಿಟ್ಟು ಆರ್​ಟಿಎಂ ಬಳಕೆ ಮಾಡಿಕೊಳ್ಳಬೇಕು. ಮಯಾಂಕ್​ ಯಾದವ್, ಹರ್ಷಿತ್ ರಾಣಾ ಅದ್ಭುತ ಬೌಲರ್​ಗಳಾಗಿದ್ದಾರೆ. ಖಂಡಿತ ಹರಾಜಿಗೆ ಬಿಟ್ಟರೆ ಈ ಫ್ರಾಂಚೈಸಿಗಳು ದುಪ್ಪಟ್ಟು ಹಣವನ್ನು ನೀಡಲೇಬೇಕು.

2024ರ ಐಪಿಎಲ್​ನಲ್ಲಿ ಮಿಂಚಿದ್ದ ಆಟಗಾರರು ಈಗಾಗ್ಲೇ ಟೀಂ ಇಂಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಈಗಾಗಲೇ ರಿಯಾನ್ ಪರಾಗ್ ಹಾಗೂ ಅಭಿಷೇಕ್ ಶರ್ಮಾ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವುದರಿಂದ ಇವರಿಬ್ಬರು ಕನಿಷ್ಠ 11 ಕೋಟಿ ಪಡೆಯಲು ಅರ್ಹರಾಗಿದ್ದಾರೆ. ಪರಾಗ್ ರಾಜಸ್ಥಾನ್ ಪರ, ಅಭಿಷೇಕ್ ಶರ್ಮಾ ಹೈದರಾಬಾದ್ ಪರ ಆಡುತ್ತಿದ್ದು, ಈ ಇಬ್ಬರನ್ನೂ ಆಯಾ ಫ್ರಾಂಚೈಸಿಗಳು ಖಂಡಿತ ರಿಟೇನ್ ಮಾಡಿಕೊಳ್ಳಲಿವೆ.

Shwetha M

Leave a Reply

Your email address will not be published. Required fields are marked *